ಬೆಂಗಳೂರು: ಜೂನ್ 3ರಂದು ನಡೆಯಲಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಯ ಮತಕ್ಷೇತ್ರಗಳಲ್ಲಿ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡುವಂತೆ ರಾಜ್ಯ ಬಿಜೆಪಿ ಕಾನೂನು ಪ್ರಕೋಷ್ಠದ ನಿಯೋಗವು ರಾಜ್ಯ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿದೆ. ಮತದಾನ
ಕನಕಪುರ, ಹೊಸಕೋಟೆ, ಆನೇಕಲ್, ದೇವನಹಳ್ಳಿ, ಬಿ.ಟಿಎಂ. ವಿಧಾನಸಭಾ ಕ್ಷೇತ್ರಗಳಲ್ಲಿನ ವೋಟಿಂಗ್ ನ ಲೈವ್ ವೆಬ್‌ಕಾಸ್ಟಿಂಗ್‌ಗೆ ಬಿಜೆಪಿ ಅನುಮತಿ ಕೇಳಿ ಮನವಿ ಸಲ್ಲಿಸಿದೆ.
ಇದನ್ನು ಓದಿ : ಕೊನೆಗೂ ಚುನಾವಣಾ ಆಯೋಗ ಮತದಾರರ ವಿವರಗಳನ್ನು ಪ್ರಕಟಿಸಿದೆ! ಏಕೆ?
ಮನವಿಯಲ್ಲಿ ತಿಳಿಸಿದ ವಿಧಾನಸಭಾ ಕ್ಷೇತ್ರಗಳು ಅತಿ ಸೂಕ್ಷ್ಮ ಮತಗಟ್ಟೆಗಳನ್ನು ಒಳಗೊಂಡಿವೆ. ವೋಟಿಂಗ್ ಸುಗಮವಾಗಿ ಮತ್ತು ಶಾಂತಿಯುತವಾಗಿ ನಡೆಯುವ ದೃಷ್ಟಿಯಿಂದ ಮೇಲಿನ ಕ್ಷೇತ್ರಗಳಲ್ಲಿ ವೋಟಿಂಗ್ ದಿನದಂದು ಲೈವ್ ವೆಬ್‍ಕಾಸ್ಟಿಂಗ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಲಾಗಿದೆ.
ಬಿಜೆಪಿ ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತಕುಮಾರ್, ಹಿರಿಯ ಮುಖಂಡರಾದ ದತ್ತಗುರು ಹೆಗ್ಡೆ, ಪ್ರಕೋಷ್ಠದ ಸದಸ್ಯ ಯಶವಂತ್, ವೀಣಾ ಅರುಣ್, ಕೆ.ಪಿ.ವಿಶ್ವನಾಥ, ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕ ಶಿವಾನಂದ ಅವರು ಈ ಮನವಿಗೆ ಸಹಿ ಹಾಕಿದ್ದಾರೆ.
ಇದನ್ನು ನೋಡಿ : ಐದು ಹಂತದ ಮತದಾನ ಮುಗಿದರೂ ವಿವರ ನೀಡದ ಚುನಾವಣಾ ಆಯೋಗ : ಆಯೋಗದ ಸುತ್ತ ಅನುಮಾನದ ಹುತ್ತJanashakthi Media