– ಪಾರ್ವತಿ ತಿರುವೋಟು, ಕನ್ನಡಕ್ಕೆ- ಇದು ಅರುಣ್ ಜೋಳದ ಕೂಡ್ಲಿಗಿ
ಹೆಣ್ಣು ಮಕ್ಕಳು ಚಿತ್ರರಂಗದಲ್ಲಿ ಕೆಲಸ ಮಾಡಲು ಬಂದರೆ, ಅವರು ಹಣ ಮಾಡಲು ಅಥವಾ ಹೆಸರು ಮಾಡಲು ಬಂದಿದ್ದಾರೆ ಎನ್ನುವ ನಂಬಿಕೆ ಬಹಳಷ್ಟು ಮಂದಿಯಲ್ಲಿದೆ. ಮಲೆಯಾಳಂ
ಹೆಣ್ಣು ಕಲಾವಿದಳಾಗಳು, ತಂತ್ರಜ್ಞಳಾಗಲು ಅಥವಾ ನಾನಾ ಕ್ಷಮತೆಯುಳ್ಳವಳಾಗಿ ಕೆಲಸ ಮಾಡಲು ಬಂದಾಗ ಅವಳು ಆ ಕೆಲಸದಲ್ಲಿರುವ ಪ್ರಾವೀಣ್ಯತೆದಿಂದಲೇ ಬರುತ್ತಾಳೆ. ಆಕೆ ಕಲೆಗಾಗಿ, ಸೃಜನಶೀಲತೆಗಾಗಿ ಬರುತ್ತಾಳೆ. ಮಲೆಯಾಳಂ
ಈ ವಿಷಯ ಅರಿತುಕೊಳ್ಳಲು ಜನರಿಗೆ ಆಗದು. ಕಲೆ, ಚಿತ್ರರಂಗವನ್ನೇ ತನ್ನ ಬದುಕಿನ ವೃತ್ತಿಯಾಗಿ ಆಕೆ ಆಯ್ಕೆ ಮಾಡಿಕೊಂಡು ಬಂದಿದ್ದಾಳೆ ಎಂಬುದನ್ನೇ ಅರಗಿಸಿಕೊಳ್ಳಲಾಗುವುದಿಲ್ಲ. ಮಲೆಯಾಳಂ
ಇದನ್ನೂ ಓದಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ರಾಜ್ಯಪಾಲರ ಅನುಮತಿ ವಿರೋಧಿಸಿ ಕಾಂಗ್ರೆಸ್ ನಾಯಕರಿಂದ ರಾಜಭವನ ಚಲೋ
ಇಂತಹಾ ಸರಳ ವಿಷಯವನ್ನು ಅರಗಿಸಿಕೊಳ್ಳಲಾಗದ ಜನರಿಗೆ, ಕೆಲಸ ಮಾಡುವ ಸ್ಥಳದಲ್ಲಿ ಸಮ್ಮತಿ ಬೇಕು, ಸರಿಯಾದ ನಡುವಳಿಕೆ ಇರಬೇಕು ಅಂತಾನೇ ಅನ್ನಿಸುವುದಿಲ್ಲ. ಅದರಿಂದಲೇ ಕೆಲಸದಲ್ಲಿ ಹೆಣ್ಣು ಮಕ್ಕಳು ಸುತ್ತ ಮುತ್ತ ಇರುವಾಗ ಅನುಚಿತವಾಗಿ ನಡೆದುಕೊಳ್ಳುವುದು, ಲಘುವಾಗಿ ಮಾತನಾಡುವುದು ಒಪ್ಪಿತ ಎಂಬಂತಾಗಿದೆ.
ಇಲ್ಲಿಂದ ಮುಂದುವರೆದು ಹೆಣ್ಣು ಮಕ್ಕಳಿಗೆ ವಾತಾವರಣ ಇನ್ನಷ್ಟು ವಿಷಮಗೊಳ್ಳುತ್ತಾ ಸಾಗುತ್ತದೆ. ಕಲೆಯ ಮೇಲಿನ ಉತ್ಕಟ ಬಯಕೆಯಿಂದ ಕೆಲಸಕ್ಕಾಗಿ ಬಂದ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಕಿರುಕುಳಗಳಾದಾಗ “ನೀನೇಕೆ ಆಗಲೇ ನಿರಾಕರಿಸಲಿಲ್ಲ, ನೀನೇಕೆ ಬೇಡವೆನ್ನಲಿಲ್ಲವೆಂದು” ಮತ್ತೆ ಹೆಣ್ಣು ಮಕ್ಕಳನ್ನೇ ಹೊಣೆಯಾಗಿಸಲಾಗುತ್ತದೆ.
ನಾವು ದಿನನಿತ್ಯ “woman raped” ಎಂಬ ಸುದ್ದಿಯನ್ನು ಓದುತ್ತಲೇ ಇರುತ್ತೇವೆ. ಸ್ವಲ್ಪ ನಿಲ್ಲಿ… ಯೋಚಿಸಿ… ಹೆಣ್ಣಿನ ಮೇಲೆ ಅತ್ಯಾಚಾರ ನಡೆಸಿದವರಾರು? ಯಾರೋ ಈ ಹೇಯ ಕೃತ್ಯ ನಡೆಸಿರಬೇಕಲ್ಲವೆ? Man raped a woman ಎಂದೇಕೆ ನಾವು ಸುದ್ದಿ ಪ್ರಕಟಿಸುವುದಿಲ್ಲ? ಸದಾ ಹೊಣೆಗಾರಿಕೆ ಹೆಣ್ಣಿನದ್ದೇ ಯಾಕೆ?
ಒಂದು ಮಾತು ಸ್ಪಷ್ಟ ಪಡಿಸುತ್ತೇನೆ. ಮಲಯಾಳಿ ಚಿತ್ರರಂಗದ ಒಳಗಿನಿಂದ ಕೊಳೆತು ನಾರುತ್ತಿದೆ ಎಂಬ ಮಾತುಗಳು ದೇಶದಲ್ಲೆಲ್ಲಾ ಕೇಳಿಬರುತ್ತಿದೆ. ಇಲ್ಲ. ನಮ್ಮ ಚಿತ್ರರಂಗ ಅಂತರಾಳದಲ್ಲಿ ನಿರ್ಮಲವಾಗಿದೆ ಅದಕ್ಕಾಗಿಯೇ ನಾವು ಸುಮ್ಮನೆ ಕುಳಿತು ಸಹಿಸಿಕೊಳ್ಳದೆ, ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತಿದ್ದೇವೆ. ಮೌನಕ್ಕೆ ಜಾರಿರುವ ಚಿತ್ರರಂಗಗಳ, ಕ್ಷೇತ್ರಗಳ ಕುರಿತು ಜನ ಆಲೋಚಿಸಬೇಕಿದೆ. (ಎಲ್ಲವೂ ಕೊಳೆತು ಹೋಗಿರುವುದು ಮೌನ ಇರುವೆಡೆ ಮಾತ್ರ)
ಇದನ್ನೂ ನೋಡಿ: ಬಾಹ್ಯಾಕಾಶದಲ್ಲಿ ಭಾರತದ ಸಾಧನೆಗಳುJanashakthi Media