ಮಣಿಪುರದಲ್ಲಿನ ಹಿಂಸಾಚಾರ ಕುರಿತು ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಪತ್ರ: ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ ಮಲ್ಲಿಕಾರ್ಜನ ಖರ್ಗೆ

ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಮಣಿಪುರದಲ್ಲಿನ ಹಿಂಸಾಚಾರ ಪರಿಸ್ಥಿತಿ ಕುರಿತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜನ ಖರ್ಗೆ ಪತ್ರ ಬರೆದಿದ್ದು, ರಾಜ್ಯದ ಜನರು ಶಾಂತಿಯುತ ಹಾಗೂ ಗೌರವಯುತವಾಗಿ ತಮ್ಮ ಮನೆಗಳಲ್ಲಿ ವಾಸಿಸಲು ಖಾತ್ರಿಪಡಿಸಲು ಕೂಡಲೇ ಮಧ್ಯ ಪ್ರವೇಶಿಸುವಂತೆ ಒತ್ತಾಯಿಸಿದ್ದಾರೆ. ದ್ರೌಪದಿ

ಕಳೆದ 10 ತಿಂಗಳಲ್ಲಿ ಮಣಿಪುರದಲ್ಲಿ ಜನರ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಮಣಿಪುರ ಮತ್ತು ಕೇಂದ್ರ ಸರ್ಕಾರದ ವಿಫಲತೆಯನ್ನು ಎರಡು ಪುಟಗಳ ಪತ್ರದಲ್ಲಿ ಅವರು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ : ಮಣಿಪುರದಲ್ಲಿ ಗಂಭೀರ ಪರಿಸ್ಥಿತಿ-ಕೇಂದ್ರಸರಕಾರ ಬಲವಾಗಿ ಮಧ್ಯಪ್ರವೇಶಿಸಬೇಕು: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಮಣಿಪುರದಲ್ಲಿನ ಹಿಂಸಾಚಾರದಿಂದಾಗಿ ಮಹಿಳೆಯರು, ಮಕ್ಕಳು ಮತ್ತು ಸಣ್ಣ ಮಕ್ಕಳು ಸೇರಿದಂತೆ ಸುಮಾರು 300 ಜನರು ಸಾವನ್ನಪ್ಪಿದ್ದಾರೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಲಕ್ಷಾಂತರ ಜನರು ಮನೆ ಕಳೆದುಕೊಂಡಿದ್ದು, ವಿವಿಧ ಕಡೆಗಳಲ್ಲಿ ಪರಿಹಾರ ಕೇಂದ್ರಗಳಲ್ಲಿ ವಾಸಿಸುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ. ಭಾರತದ ಅಧ್ಯಕ್ಷರಾಗಿ ಮತ್ತು ಸಂವಿಧಾನದ ರಕ್ಷಕರವಾಗಿ ಸಂವಿಧಾನ ಆಶೋತ್ತರಗಳನ್ನು ಎತ್ತಿಹಿಡಿಯಲು ಮತ್ತು ಮಣಿಪುರ ಜನರು ಮತ್ತು ಆಸ್ತಿಪಾಸ್ತಿ ಸುರಕ್ಷತೆ ಖಾತ್ರಿಪಡಿಸಲು ಕೂಡಲೇ ಮಧ್ಯಪ್ರವೇಶಿಸಬೇಕು ಎಂದು ಖರ್ಗೆ ಅವರು ಒತ್ತಾಯಿಸಿದ್ದಾರೆ.

ರಾಷ್ಟ್ರಪತಿಗಳ ಮಧ್ಯಪ್ರವೇಶದೊಂದಿಗೆ ಮಣಿಪುರ ರಾಜ್ಯದ ಜನರು ಮತ್ತೆ ಶಾಂತಿಯುತ ಹಾಗೂ ಗೌರವಯುತವಾಗಿ ತಮ್ಮ ಮನೆಗಳಲ್ಲಿ ವಾಸಿಸಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಖರ್ಗೆ ಪತ್ರದಲ್ಲಿ ತಿಳಿಸಿದ್ದಾರೆ.

ಇದನ್ನೂ ನೋಡಿ : ಮಣಿಪುರ ಹೊತ್ತಿ ಉರಿಯುತ್ತಿದೆ : ಕೇಂದ್ರ ಸರ್ಕಾರ ಏನ್‌ ಮಾಡುತ್ತಿದೆ. Janashakthi Media

Donate Janashakthi Media

Leave a Reply

Your email address will not be published. Required fields are marked *