ಹಾವೇರಿ: ವಿ.ವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದು ಕಸಾಪ ಹಾವೇರಿ ಜಿಲ್ಲಾಧ್ಯಕ್ಷ ಲಿಂಗಯ್ಯ ಬಿ. ಹಿರೇಮಠ ಹೇಳಿದರು.
ಇದನ್ನು ಓದಿ :-ವಿಟ್ಲ ದಲಿತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ: ಏಪ್ರೀಲ್ 3ರಂದು ಪ್ರತಿಭಟನೆ
ಸರಕಾರ ಹಾವೇರಿ ವಿವಿಯನ್ನು ವಿಲೀನಗೊಳಿಸಲು ಬೇರೆ ಬೇರೆ ಕಾರಣಗಳನ್ನು ಹೇಳುತ್ತಿದೆ. ಈ ವಿವಿಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ಮಕ್ಕಳು ಕಲಿಯುತ್ತಿದ್ದಾರೆ. ಸರಕಾರದ ಈ ನಡೆಯಿಂದ ಈ ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರನ್ನಾಗಿ ಮಾಡಲು ಹೊರಟಿದೆ. ಸರಕಾರದ ಈ ನಡೆ ಶಿಕ್ಷಣದ ಪ್ರಗತಿಗೆ ಹಿನ್ನಡೆಯನ್ನುಂಟು ಮಾಡುತ್ತದೆ. ಹಾಗಾಗಿ ಸರಕಾರ ನಿಧಾನವಾಗಿಯಾದರೂ ಅನುದಾನ ನೀಡಲಿ. ಆದರೆ ಹಾವೇರಿ ವಿವಿಯನ್ನು ವಿಲೀನಗೊಳಿಸುವ ನಿರ್ಧಾರ ಹಿಂತೆಗೆದುಕೊಳ್ಳಬೇಕು. ಈ ವಿ.ವಿ ಉಳಿವಿಗಾಗಿ ಎಲ್ಲರೂ ಒಗ್ಗಟ್ಟಿನಿಂದ ಹೋರಾಡೋಣ ಎಂದು ಹೇಳಿದರು.
ಇದನ್ನು ಓದಿ :-ಸಿದ್ದಾಪುರ| ಆರೋಗ್ಯ ಕೇಂದ್ರಕ್ಕೆ ಖಾಯಂ ವೈದ್ಯರ ನೇಮಕಕ್ಕೆ ಆಗ್ರಹಿಸಿ ಸಿಪಿಎಂ ಮನವಿ
ಮಾನ್ಯ ಜಿಲ್ಲಾಧಿಕಾರಿಗಳಾದ ಡಾ. ವಿಜಯ ಮಹಾಂತೇಶ ದಾನಮ್ಮನವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯ್ತು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸದರಿ ಮನವಿಯನ್ನು ಸರಕಾರಕ್ಕೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಹಾವೇರಿ ಬಣ್ಣದ ಮಠದ ಶ್ರೀ ಅಭಿನರುದ್ರ ಚನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು, ಮೌಲ್ವಿಗಳಾದ ಜನಾಬ್ ಮುಕ್ತಿಯಾರ್ ಅಹಮದ್ ಭಾವಿಕಟ್ಟಿ, ವಿಶ್ವ ವಿದ್ಯಾಲಯ ಉಳಿಸಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘಟನೆಗಳ ಮುಖಂಡರಾದ ಸತೀಶ ಕುಲಕರ್ಣಿ, ಬಸವರಾಜ ಪೂಜಾರ, ಎಂ. ಆಂಜನೇಯ, ಏಳುಕೋಟೆಪ್ಪ ಪಾಟೀಲ, ಹನುಮಂತ ಹಲಗೇರಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಎಐಟಿಯುಸಿ ಜಿಲ್ಲಾಧ್ಯಕ್ಷ ಹೊನ್ನಪ್ಪ ಮರೆಮ್ಮನವರ, ಹಿರಿಯ ನಾಗರೀಕರ ವೇದಿಕೆ ಮುಖಂಡರಾದ ಎಸ್.ಎನ್ ತಿಪ್ಪನಗೌಡ್ರ, ಕರವೇ ಜಿಲ್ಲಾಧ್ಯಕ್ಷರಾದ ಗಿರೀಶ ಬಾರ್ಕಿ, ಡಿ.ಎಸ್.ಎಸ್ ರಾಜ್ಯ ಮುಖಂಡರಾದ ಉಡಚಪ್ಪ ಮಾಳಗಿ, ವಕೀಲರ ಸಂಘಟನೆಯ ಮುಖಂಡರಾದ ನಾರಾಯಣ ಕಾಳೆ, ಅಲೆಮಾರಿ ಸಮುದಾಯ ಸಂಘಟನೆ ಜಿಲ್ಲಾಧ್ಯಕ್ಷರಾದ ಶೆಟ್ಟಿ ವಿಭೂತಿ ನಾಯಕ, ಜಯ ಕರ್ನಾಟಕ ಸಂಘಟನೆಯ ರಮೇಶ ಆನವಟ್ಟಿ, ಡಿವೈಎಫ್ಐ ಜಿಲ್ಲಾ ಮುಖಂಡ ನೀಲಪ್ಪ ಹರಿಜನ, ಅಂಜುಮನ್ ಸಂಸ್ಥೆಯ ರಫಿಕ್ ಸಾಬ್ ಅತ್ತಾರ, ಸಾಹಿತಿ ಕಲಾವಿದರ ಬಳಗದ ಸಿ.ಆರ್ ಮಾಳಗಿ, ಪರಿಮಳ ಜೈನ, ಸಿ.ಎಸ್ ಮರಳಿಹಳ್ಳಿ, ಜುಬೇದಾ ನಾಯ್ಕ್, ರಾಜೇಂದ್ರ ಹೆಗಡೆ, ಪೃಥ್ವಿರಾಜ ಬೆಟಗೇರಿ, ಸತೀಶ ಎಂ.ಬಿ, ವಿರೂಪಾಕ್ಷ ಹಾವನೂರ, ಅನಿತಾ ಮಂಜುನಾಥ, ನೇತ್ರಾ ಅಂಗಡಿ, ಕರ್ನಾಟಕ ರಾಜ್ಯ ರೈತ ಸಂಘಟನೆ ಜಿಲ್ಲಾ ಮುಖಂಡರಾದ ಆನಂದ ಕೆಳಗಿನಮನಿ, ಮಂಜಪ್ಪ ಕಂಕನವಾಡ, ಎಸ್.ಆರ್ ಹಿರೇಮಠ, ಈರಣ್ಣ ಬೆಳವಡಿ, ಮಂಜುನಾಥ ಸಣ್ಣಿಂಗಣ್ಣನವರ ಸೇರಿದಂತೆ ಇನ್ನಿತರರು ಇದ್ದರು.