ತಿರುವನಂತಪುರಂ: ನಕಲಿ ಫೇಸ್‌ಬುಕ್ ಐಡಿ ಮೂಲಕ ಸಿಪಿಐ(ಎಂ) ನಾಯಕರ ಪತ್ನಿಯರ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಆರೋಪದ ಮೇಲೆ ಸ್ಥಳೀಯ ಕಾಂಗ್ರೆಸ್ ನಾಯಕ, ಪ್ರಸ್ತುತ ಕಾಂಗ್ರೆಸ್ ಕೊಡಂಕರ ವಾರ್ಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಚೆಂಕಲ್ ಮೂಲದ ಅಬಿನ್ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ. ಡಿವೈಎಫ್‌ಐನ ಅಖಿಲ ಭಾರತ ಅಧ್ಯಕ್ಷ, ರಾಜ್ಯ ಸಭಾ ಸಂಸದ ಎ.ಎ. ರಹೀಮ್ ಅವರ ಪತ್ನಿ ಅಮೃತಾ ಮತ್ತು ದಿವಂಗತ ಸಿಪಿಐ(ಎಂ) ನಾಯಕ ಪಿ ಬಿಜು ಅವರ ಪತ್ನಿ ಹರ್ಷಾ ಬಿಜು ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಸಿಪಿಐ(ಎಂ) ನಾಯಕರ ಪತ್ನಿಯರ ಮಾರ್ಫ್ ಮಾಡಿರುವ ಮತ್ತು ನಿಂದನೀಯ ಚಿತ್ರಗಳನ್ನು ‘ಕೊಟ್ಟಾಯಂ ಕುಂಜಾಚನ್’ ಎಂಬ ನಕಲಿ ಪ್ರೊಫೈಲ್ ಮೂಲಕ ಹಂಚಿಕೊಳ್ಳಲಾಗುತ್ತು. ಈ ಬಗ್ಗೆ ಅಮೃತಾ ಅವರು ತಿರುವನಂತಪುರಂ ನಗರ ಪೊಲೀಸ್ ಕಮಿಷನರ್ ಮತ್ತು ಗ್ರಾಮಾಂತರ ಎಸ್‌ಪಿಗೆ ದೂರು ನೀಡಿದ್ದರು. ಅದೇ ವೇಳೆ ಹರ್ಷಾ ಬಿಜು ಅವರು ಡಿಜಿಪಿಗೆ ದೂರು ಸಲ್ಲಿಸಿದ್ದರು.
ಇದನ್ನೂ ಓದಿ: Explainer | ಭಾರತ-ಕೆನಡಾ ನಡುವೆ ನಡೆದಿದ್ದೇನು? ಉದ್ಯೋಗ, ಶಿಕ್ಷಣ, ವ್ಯಾಪಾರದ ಮೇಲೆ ಪರಿಣಾಮ ಬೀರಲಿದೆಯೆ?
ಡಿಸಿಪಿ ನಿತಿನ್ ರಾಜ್ ಮತ್ತು ತಂಡ ನಡೆಸಿದ ತನಿಖೆಯಲ್ಲಿ ನಕಲಿ ಐಡಿ ಹಿಂದೆ ಅಬಿನ್ ಕೈವಾಡ ಇರುವುದು ಪತ್ತೆಯಾಗಿತ್ತು. “ಅಬಿನ್ ಸಿಪಿಐ(ಎಂ) ಮಹಿಳಾ ಮುಖಂಡರು ಮತ್ತು ಸಿಪಿಐ(ಎಂ) ನಾಯಕರ ಪತ್ನಿಯರ ವಿರುದ್ಧ ಅಸಭ್ಯ ಮತ್ತು ನಿಂದನೀಯ ಪೋಸ್ಟ್‌ಗಳನ್ನು ಸೃಷ್ಟಿಸಿದ್ದಾರೆ” ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವಾರ ನಕಲಿ ಐಡಿಯಲ್ಲಿ ನಿಂದನೀಯ ಪೋಸ್ಟ್‌ಗಳು ಕಾಣಿಸಿಕೊಂಡಿದ್ದವು. ದೂರಿನ ನಂತರ ಪೊಲೀಸರು ಎಫ್‌ಬಿ ಪ್ರೊಫೈಲ್ ಅನ್ನು ಮುಚ್ಚಿದ್ದರು. ಅಬಿನ್‌ನನ್ನು ಪರಸ್ಸಾಲದಲ್ಲಿ ಬಂಧಿಸಲಾಗಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ.
ಅಬಿನ್ ಬಂಧನದ ವರದಿಯನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡ ಅಮೃತಾ ಅವರು, ನಿಮಗೆ ಮಾತನಾಡಲು ಮತ್ತು ರಾಜಕೀಯ ಮಾಡಲು ಗೊತ್ತಿಲ್ಲದಿದ್ದರೆ, ಅದನ್ನು ಬಿಟ್ಟು ದೂರ ಹೋಗಿಬಿಡಿ ಎಂದು ಕಾಂಗ್ರೆಸ್ ನಾಯಕರಿಗೆ ಹೇಳಿದ್ದು, “ತನಿಖೆಯನ್ನು ಪರಿಣಾಮಕಾರಿಯಾಗಿ ನಡೆಸಿ ಆರೋಪಿಗಳನ್ನು ಸಮಯಕ್ಕೆ ಸರಿಯಾಗಿ ಬಂಧಿಸಿದ ಕೇರಳದ ಸೈಬರ್ ಪೊಲೀಸರು ಮತ್ತು ಇತರ ಪೊಲೀಸ್ ಅಧಿಕಾರಿಗಳಿಗೆ ಹಾಗೂ ಈ ಕ್ಷಣದವರೆಗೂ ನಮ್ಮೊಂದಿಗೆ ಇದ್ದವರಿಗೆ ಪ್ರಾಮಾಣಿಕ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.
ವಿಡಿಯೊ ನೋಡಿ: ಬಳ್ಳಿ ಮಾತ್ರವಲ್ಲ ಬೇರುಗಳನ್ನು ಕೂಡಾ ನಾಶ ಪಡಿಸಬೇಕು: ಚೈತ್ರ ಕುಂದಾಪುರ ವಂಚನೆ ಹಗರಣದ ಬಗ್ಗೆ ಹೋರಾಟಗಾರರ ಆಗ್ರಹ