ಬೆಳಗಾವಿ: ಹಿಟ್ ಆಯಂಡ್ ರನ್ನಿಂದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರು ಅಪಘಾತಕ್ಕೆ ಒಳಗಾಗಿದ್ದು ಎಂದು ಬೆಳಗಾವಿಯಲ್ಲಿ ಎಸ್ಪಿ ಡಾ. ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ. ಸರ್ಕಾರಿ ವಾಹನ ಅಪಘಾತ ಸಂಬಂಧ ಕಿತ್ತೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿತ್ತೂರ ಠಾಣೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲಕ ಶಿವಪ್ರಸಾದ್ ಗಂಗಾಧರಯ್ಯ ದೂರು ಈ ಬಗ್ಗೆ ದೂರು ದಾಖಲಿಸಿದ್ದರು. ಅಂಬಡಗಟ್ಟಿ ಕ್ರಾಸ್ ಬಳಿ ಕಂಟೇನರ್ ಎಡಗಡೆಯಿಂದ ಬಲಗಡೆ ಬಂದಿದೆ,ಆಗ ಕಂಟೇನರ್ ಹೆಬ್ಬಾಳ್ಕರ್ ಪ್ರಯಾಣಿಸುತ್ತಿದ್ದ ವಾಹನಕ್ಕೆ ತಾಗಿದೆ.ಅಪಘಾತ ತಪ್ಪಿಸಲು ಹೋಗಿ ಹೆಬ್ಬಾಳ್ಕರ್ ವಾಹನ ಮರಕ್ಕೆ ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದಾರೆ.
ಈ ಘಟನೆ ಬಳಿಕ ವಾಹನ ಟೊಯೋಟಾ ಶೂರೂಂಗೆ ಸಾಗಿಸಲಾಗಿತ್ತು. ವಾಹನ ಪರಿಶೀಲನೆ ನಡೆಸಿದಾಗ ಕ್ಯಾಂಟರ್ ಡಿಕ್ಕಿ ಹೊಡೆದಿರುವುದು ಗೊತ್ತಾಗಿದೆ. ಸಚಿವರ ಕಡೆಯವರೇ ಟೋವಿಂಗ್ ವಾಹನಕ್ಕೆ ಫೋನ್ ಮಾಡಿ ಅಪಘಾತಕ್ಕಿಡಾದ ವಾಹನ ಶಿಫ್ಟ್ ಮಾಡಿದ್ದಾರೆ.
ಇದನ್ನೂ ಓದಿ: ಆರ್ಎಸ್ಎಸ್ ಮುಖ್ಯಸ್ಥರು ದೇಶದ್ರೋಹ ಎಸಗಿದ್ದಾರೆ: ರಾಹುಲ್ ಗಾಂಧಿ ಆಕ್ರೋಶ
ಇದಾದ ಬಳಿಕ ಕಂಟೇನರ್ ಚಾಲಕ ಅಪಘಾತ ಬಳಿಕ ಗಾಡಿ ನಿಲ್ಲಿಸದೇ ಓಡಿ ಹೋಗಿ ತಪ್ಪು ಮಾಡಿದ್ದಾರೆ. ಹಿಟ್ ಆಯಂಡ್ ರನ್ ಆದಾಗ ತಕ್ಷಣವೇ ನೆರವು ಒದಗಿಸಬೇಕು ಎಂದು ಕಾನೂನು ಇದೆ. ಅಪಘಾತ ಎಸಗಿದ ತಕ್ಷಣವೇ ಓಡಿ ಹೋಗದೇ ಅಪಘಾತಕ್ಕೆ ಒಳಗಾದವರ ನೆರವಿಗೆ ನಿಲ್ಲಬೇಕು ಎಂದು ಹೇಳಿದ್ದಾರೆ.
ಹೀಗಾಗಿ ಹೆಬ್ಬಾಳ್ಕರ್ ವಾಹನ ಅಪಘಾತ ಪ್ರಕರಣ ಹಿಟ್ ಆಯಂಡ್ ರನ್ ಆಗಿದೆ. ಗನ್ ಮ್ಯಾನ್ ನೀಡಿದ ಅರ್ಜಿಯಲ್ಲಿ ಕ್ಲಾರಿಟಿ ಇರಲಿಲ್ಲ.ಈ ಕಾರಣಕ್ಕೆ ಚಾಲಕನಿಂದ ಅರ್ಜಿ ಪಡೆದು ದೂರು ದಾಖಲಿಸಿಕೊಳ್ಳಲಾಗಿದೆ. ಅಪಘಾತದ ಅವಧಿಯ ನಂತರ ಟೋಲ್ ದಾಟಿ 42 ವಾಹನ ಹೋಗಿವೆ. ಎರಡು ತಂಡ ರಚನೆ ಮಾಡಿ 42 ವಾಹನಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ಎಸ್ಪಿ ಡಾ. ಭೀಮಾಶಂಕರ ಗುಳೇದ್ ಮಾಹಿತಿ ನೀಡಿದ್ದಾರೆ.ಈ ಘಟನೆಯನ್ನು ನೋಡಿದರೆ ಇದೇನೂ ಪೂರ್ವ ನಿಯೋಜಿತ ಕೃತ್ಯ ಎನಿಸುವುದಿಲ್ಲ ಎಂದು ಕೂಡ ಹೇಳಿದ್ದಾರೆ.
ಇದನ್ನೂ ನೋಡಿ: ಸವಿತಕ್ಕ ಜೊತೆ ಸಂಕ್ರಾಂತಿ ಸುಗ್ಗಿ ಹಾಡು, ಒಂದಿಷ್ಟು ಮಾತುJanashakthi Media