ಲಕ್ಷದ್ವೀಪದಲ್ಲಿ ದಂಡ ವಿಧಿಸುವ ಕ್ರಮದ ವಿರುದ್ಧ ವಿನೂತನ ಪ್ರತಿಭಟನೆ

ಕೊಚ್ಚಿ: ‘ಲಕ್ಷದ್ವೀಪದಲ್ಲಿ ಮನೆಯ ಆವರಣದಲ್ಲಿ ಅಥವಾ ವ್ಯಕ್ತಿಗೆ ಸೇರಿದ ಜಾಗದಲ್ಲಿ ತೆಂಗಿನ ಗರಿಗಳು, ಎಳನೀರು ಚಿಪ್ಪುಗಳ ತ್ಯಾಜ್ಯ ಕಂಡು ಬಂದರೆ, ಸಂಬಂಧಪಟ್ಟ ಜಾಗದ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ‘ ಎಂದು ಇತ್ತೀಚಿಗೆ ಹೊಸದಾದ ನಿಯಮ ಜಾರಿಗೆ ತರಲು ಹೊರಟ ಆಡಳಿತ ಕ್ರಮವನ್ನು ಖಂಡಿಸಿ ದ್ವೀಪದ ನಾಗರಿಕರು ವಿನೂತನವಾಗಿ ಪ್ರತಿಭಟನೆ ನಡೆಸಿದರು.

‘ಸೇವ್‌ ಲಕ್ಷದ್ವೀಪ ಫೋರಂ‘(ಎಸ್‌ಎಲ್‌ಎಫ್‌) ಬ್ಯಾನರ್‌ ಅಡಿಯಲ್ಲಿ, ‘ಹಸಿಗೊಬ್ಬರ ಮಾಡುವ ಪದ್ಧತಿ ಪರಿಚಯಿಸಿ‘ ಮತ್ತು ‘ದಂಡ ಹಾಕುವುದನ್ನು ನಿಲ್ಲಿಸಿ‘ ಎಂಬ ಘೋಷಣೆಗಳು ಇರುವ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ಇದನ್ನು ಓದಿ: ಲಕ್ಷದ್ವೀಪದಲ್ಲಿ ಸರ್ವಾಧಿಕಾರಶಾಹೀ ಆಳ್ವಿಕೆ: ಹೆಚ್ಚುತ್ತಿರುವ ಪ್ರತಿರೋಧ ಆಡಳಿತಗಾರನನ್ನು ಹಿಂದಕ್ಕೆ ಕರೆಸಿಕೊಳ್ಳಲು ಆಗ್ರಹ

‘ತೆಂಗಿನ ಗರಿ, ತಾಳೆ ಗರಿ‘ ಹಿಡಿದ ನಾಗಕರಿಕರು ಒಂದು ಗಂಟೆ ಕಾಲ ನಡೆದ ಪ್ರತಿಭಟನೆಯಲ್ಲಿ, ‘ದಂಡ ಹಾಕುವ ಪದ್ಧತಿಯನ್ನು ಹಿಂದಕ್ಕೆ ಪಡೆಯಬೇಕು. ಸಾವಯವ ವಸ್ತುಗಳನ್ನು ಮಣ್ಣಿನ ಫಲವತ್ತತೆ ಹೆಚ್ಚಿಸುವ ಗೊಬ್ಬರವಾಗಿ ಪರಿವರ್ತಿಸುವಂತಹ ತಂತ್ರಜ್ಞಾನವನ್ನು ಅನುಷ್ಠಾನಗೊಳಿಸಿ‘ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ಕುರಿತು ಮಾತನಾಡಿದ ಸ್ಥಳೀಯ ಮುಖಂಡ ಎಐ ಮುತ್ತುಕೋಯ, “ಆಡಳಿತವು ಕೈಗೊಂಡಿರುವ ನೂತನ ಕ್ರಮವು ವಿಚಿತ್ರವಾಗಿದೆ. ತೆಂಗಿನ ಗರಿಗಳು ಅಥವಾ ಇತರ ತ್ಯಾಜ್ಯಗಳು ನಮ್ಮ ಸ್ಥಳಗಳಲ್ಲಿ ಬಿದ್ದಿದ್ದರೆ ದಂಡ ವಿಧಿಸುತ್ತಿದ್ದಾರೆ. ಲಕ್ಷದ್ವೀಪವು ತೆಂಗಿನ ಮರಗಳ ಭೂಮಿ ಎನ್ನುವುದು ಎಲ್ಲರಿಗೂ ತಿಳಿದಿದೆ. ತ್ಯಾಜ್ಯಗಳನ್ನು ಸುಡಲೂ ನಮಗೆ ಅವಕಾಶ ನೀಡುತ್ತಿಲ್ಲ. ತ್ಯಾಜ್ಯಗಳನ್ನು ಸುಡುವುದಕ್ಕೆಂದು ಪ್ರತ್ಯೇಕ ಸ್ಥಳ ಗೊತ್ತುಪಡಿಸಲಾಗಿದೆ” ಎಂದು ಅವರು ಹೇಳಿದ್ದಾರೆ.

ಇದನ್ನು ಓದಿ: ಲಕ್ಷದ್ವೀಪಕ್ಕೆ ಅನಗತ್ಯವಾದ ಸುಧಾರಣಾ ಅಲೆಗಳು

ಇದೇ ಸಂದರ್ಭದಲ್ಲಿ ಲಕ್ಷದ್ವೀಪ ಸಂಸದ ಮೊಹಮ್ಮದ್ ಫೈಜಲ್ ಅವರು ‘ತ್ಯಾಜ್ಯವನ್ನು ಸಮರ್ಪಕವಾಗಿ ನಿರ್ವಹಣಾ ವ್ಯವಸ್ಥೆ ಜಾರಿಗೆ ತರಬೇಕೆಂಬುದು ನಮ್ಮ ಬೇಡಿಕೆಯೂ ಆಗಿದೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆ ಜಾರಿಗೆ ತರದಿದ್ದರೆ, ಜನರಿಗೆ ಸೇರಿದ ಜಾಗದಲ್ಲಿ ಬಿದ್ದಿರುವ ತ್ಯಾಜ್ಯಗಳಿಗೆ ದಂಡ ವಿಧಿಸಲು ಆಡಳಿತಕ್ಕೆ ಹಕ್ಕು ಇಲ್ಲ ‘ ಎಂದು ಸಂಸ್ಥೆಗೆ ತಿಳಿಸಿದರು.

ತೆಂಗಿನ ಗರಿಗಳು ಅಥವಾ ಇತರ ತ್ಯಾಜ್ಯಗಳು ನಮ್ಮ ಸ್ಥಳದಲ್ಲಿ ಬಿದ್ದಿದ್ದರೆ ಅವರು 1000 ದಿಂದ 2000ರೂ. ವರೆಗೆ ದಂಡ ಕಟ್ಟಬೇಕೆಂದು ಆಡಳಿತವು ಹೊಸ ನೀತಿಯನ್ನು ರೂಪಿಸಿದೆ.

Donate Janashakthi Media

Leave a Reply

Your email address will not be published. Required fields are marked *