ಕಾರ್ಮಿಕ ಸಂಹಿತೆ ವಿರೋದ್ಧ ಪ್ರತಿಭಟನೆ ವೇಳೆ ಕಾರ್ಮಿಕ ನಾಯಕರ ಬಂಧನ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕಾರ್ಮಿಕ ವಿರೋಧಿ ಕಾರ್ಮಿಕ ಸಂಹಿತೆಗಳ ವಿರುದ್ಧ ದೇಶದ ಕೇಂದ್ರ ಕಾರ್ಮಿಕ ಸಂಘಗಳಾದ ಐಎನ್‌ಟಿಯುಸಿ, ಎಐಟಿಯುಸಿ, ಎಚ್‌ಎಂಎಸ್, ಸಿಐಟಿಯು, ಎಐಯುಟಿಯುಸಿ, ಎಐಸಿಸಿಟಿಯು, ಟಿಯುಸಿಸಿ, ಎಚ್‌ಎಂಕೆಪಿ.ಕೆ ಡಬ್ಲ್ಯೂಯು, ಕೆಐಇಇಎಫ್, ಎನ್ ಸಿಎಲ್ ಸೇರಿದಂತೆ ದೇಶದ ಕೇಂದ್ರ ಕಾರ್ಮಿಕ ಸಂಘಗಳನ್ನು ಒಳಗೊಂಡ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ಫೆಬ್ರವರಿ 12, 2026 ರಂದು ರಾಷ್ಟ್ರೀಯ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದೆ. ಸಂಹಿತೆ 

ಕರ್ನಾಟಕದ ಎಲ್ಲಾ ಕಾರ್ಖಾನೆಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸದಿಂದ ಹೊರಬಂದು ಮುಷ್ಕರ ಮಾಡುವ ಮೂಲಕ ಬೇಡಿಕೆಗಳಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ. ಜಿಗಣಿ, ಬೊಮ್ಮಸಂದ್ರ, ಹೊಸಕೋಟೆ, ದೊಡ್ಡಬಳ್ಳಾಪುರ, ವೈಟ್‌ಫೀಲ್ಡ್, ನೆಲಮಂಗಲ, ದಾಬಸ್‌ಪೇಟೆ ಮುಂತಾದ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಸಾವಿರಾರು ಕಾರ್ಮಿಕರು ಜಮಾಯಿಸಿ ಮೆರವಣಿಗೆ ನಡೆಸಿದರು. ಬೆಂಗಳೂರಿನ ಎಲ್ಲಾ ಕಾರ್ಖಾನೆಗಳು ಸಂಪೂರ್ಣ ಸ್ಥಗಿತಗೊಂಡವು.

ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಎಲ್ಲಾ ಕೇಂದ್ರ ಕಾರ್ಮಿಕ ಸಂಘಗಳ ನಾಯಕರ ದೊಡ್ಡ ಸಭೆ ನಡೆಸಲು ಮುಂದಾದಾಗ ಪೊಲೀಸರು ಸಾವಿರಾರು ಸಂಖ್ಯೆಯ ಪ್ರತಿಭಟನಾಕಾರರು ಮತ್ತು ನಾಯಕರನ್ನು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಟೌನ್ ಹಾಲ್‌ನಲ್ಲಿ ನಡೆದ ಬೃಹತ್ ಪ್ರತಿಭಟನಾ ಸಭೆಯನ್ನು ಪೊಲೀಸರು ಚದುರಿಸಿದ್ದಾರೆ. ಹಲವಾರು ಕಾರ್ಮಿಕರನ್ನು ಮತ್ತು ನಾಯಕರನ್ನು ಬಂದಿಸಿದರು. ಸಂಹಿತೆ 

ಇದನ್ನೂ ಓದಿ: ಜಲಾಶಯ ಮಟ್ಟ ಎತ್ತರಿಸಿ, ನೀರಾವರಿ ಕ್ಷೇತ್ರ ವಿಸ್ತರಿಸಲು ಆಗ್ರಹ; ರೈತರು ಪ್ರತಿಭಟನೆ

ಬಂದಿತರಲ್ಲಿ ಪ್ರಮುಖರು ಲಕ್ಷ್ಮಿ ವೆಂಕಟೇಶ್. ಶಾಮಣ್ಣ ರೆಡ್ಡಿ (INTUC ) ವಿಜಯ ಭಾಸ್ಕರ್ ಅತ್ಯಾನಂದ ಜಯಮ್ಮ ಅಮ್ಜದ್ (AITUC ) ವರಲಕ್ಷ್ಮಿ ಮೀನಾಕ್ಷಿ ಸುಂದರಂ ಗೋಪಾಲಗೌಡ (CITU ) ಆರ್ ವಿ ಹರೀಶ್ ನಾಗನಾಥ್ (HMS ) ಕೆ ಸೋಮಶೇಖರ್ ನಾಗಲಕ್ಷ್ಮಿ ಕೆ ವಿ ಭಟ್( AIUTUC ) ಜಿ ಆರ್ ಶಿವಶಂಕರ್( TUCC ) ಕ್ಲಿಪ್ಪನ್ ರೋಜಾರಿಯೋ ಅಪ್ಪಣ್ಣ ( AICCTU ) ಕಾಳಪ್ಪ ( HMKP )ಈ ಕೆ ಎನ್ ರಾಜನ್ ಮಿಲ್ಕಿಯೋರ್ ( KWU ) ಗಂಗಣ್ಣ ರವಿ (KIEEF ) ಲೀಲಾವತಿ ರಫೀಕ್ (NCL)

ಇವರೆಲ್ಲದೆ ರೈತ ಸಂಘಟನೆಯ ಮುಖಂಡರಾದ ಬಡಗಲಪುರ ನಾಗೇಂದ್ರ ಜನಶಕ್ತಿ ಮುಖಂಡರಾದ ನೂರ್ ಶ್ರೀಧರ್ ರೈತ ಮುಖಂಡರಾದ ಯಶವಂತ್.
ಸಂಯುಕ್ತ ಹೋರಾಟ ಕರ್ನಾಟಕದ ಮುಖಂಡರು ಹಾಗೂ ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಸಾವಿರಾರು ಜನ ಕೋರಮಂಗಲದಲ್ಲಿರುವ ಸಿ ಆರ್ ಮೈದಾನಕ್ಕೆ ಕರೆತಂದಿರುತ್ತಾರೆ.

ಮಧ್ಯಾಹ್ನ 2 ಗಂಟೆಯಾದರೂ ಇನ್ನೂ ಬಿಡುಗಡೆ ಮಾಡಿರುವುದಿಲ್ಲ. ಕೇಂದ್ರ ಸರ್ಕಾರ ಲೇಬರ್ ಕೋಡ್ ಇಂಪಡೆಬೇಕು ನರೇಗಾ ಬದಲಾವಣೆ ಬೇಡ ಮತ್ತು ರಾಜ್ಯ ಸರ್ಕಾರ ಕೋಡ್ ಗಳಿಗೆ ನೇಮ ರೂಪಿಸಬಾರದು ಎನ್ನುವ ಬೇಡಿಕೆಗಳೊಂದಿಗೆ ಹೋರಾಟವನ್ನು ಮುನ್ನಡೆಸಲು ತೀರ್ಮಾನಿಸಲಾಯಿತು.

ಇದನ್ನೂ ನೋಡಿ: “ಮ್ಯಾಗ್ನೆಟ್ ಯೋಜನೆಗೆ ವಿರೋಧ – ಆಂದೋಲನವಾಗುತ್ತಿರುವ ಸರ್ಕಾರಿ ಶಾಲೆ ಉಳಿಸಿ ಹೋರಾಟ” Janashakthi Media

Donate Janashakthi Media

Leave a Reply

Your email address will not be published. Required fields are marked *