ನವದೆಹಲಿ: ದೇಶದಲ್ಲಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಮೀಸಲಾದ ಸೀಟುಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಸದ್ಯ ಈ ವರ್ಷ 23.28 ಲಕ್ಷಕ್ಕೆ ಸೀಮಿತಗೊಂಡಿದೆ. ಕಳೆದ ಒಂದು ದಶಕದಲ್ಲಿ ಸುಮಾರು 400ಕ್ಕೂ ಹೆಚ್ಚು ಕಾಲೇಜುಗಳು ಮುಚ್ಚಲ್ಪಟ್ಟಿವೆ.
ಇಂಜಿನಿಯರಿಂಗ್ ಪದವಿ, ಸ್ನಾತ್ತಕೋತ್ತರ ಮತ್ತು ಡಿಪ್ಲೋಮಾ ಸೀಟುಗಳ ಸಂಖ್ಯೆಯಲ್ಲಿ ಭಾರೀ ಕುಸಿಯುತ್ತಿವೆ. 2015-16ರಿಂದ ಎಂಜಿನಿಯರಿಂಗ್ ಪ್ರವೇಶ ಪಡೆಯುವವರ ಸಂಖ್ಯೆಯಲ್ಲಿ ಭಾರೀ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ಕಂಡು ಬಂದಿದೆ.
2021-2022ರ ಅವಧಿಯ ಶೈಕ್ಷಣಿಕ ವರ್ಷದಲ್ಲಿ ಸೀಟುಗಳ ಸಂಖ್ಯೆ 23.28 ಲಕ್ಷಕ್ಕೆ ಇಳಿದಿದ್ದು ಇದು ಕಳೆದ 10 ವರ್ಷಗಳಲ್ಲಿಯೇ ಕನಿಷ್ಠ ಮಟ್ಟದ್ದು ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿಯ ಅಂಕಿಅಂಶಗಳಾಗಿವೆ.
ಇದನ್ನು ಓದಿ: ರಾಜ್ಯದಲ್ಲಿ 14 ಲಕ್ಷ ಮಕ್ಕಳ ಬಳಿ ಮೊಬೈಲ್ ಸೌಲಭ್ಯವಿಲ್ಲ- ಶೇಕಡಾ 40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ದೂರ
2021-2022ರ ಸಾಲಿನ ಶೈಕ್ಷಣಿಕ ವರ್ಷದಲ್ಲಿ 63 ಕಾಲೇಜುಗಳನ್ನು ಮುಚ್ಚಲು ಅನುಮತಿ ಪಡೆದುಕೊಂಡಿವೆ. ಆದರೆ, ಇದೇ ಅವಧಿಯಲ್ಲಿ ಎಐಸಿಟಿಇ 54 ಹೊಸ ಸಂಸ್ಥೆಗಳಿಗೆ ಅನುಮೋದನೆ ನೀಡಿದೆ. ಹಿಂದುಳಿದ ಜಿಲ್ಲೆಗಳಲ್ಲಿ ಎಂಜಿನಿಯರಿಂಗ್ ಕಾಲೇಜುಗಳನ್ನು ಸ್ಥಾಪಿಸಲು ಸಹಾಯವಾಗಿದೆ.
ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊಸ ಸಂಸ್ಥೆಗಳಿಗೆ ಅನುಮೋದನೆ ನೀಡುವ ಪ್ರಕ್ರಿಯೆಯಲ್ಲಿ 2017-18 ರಲ್ಲಿ 143 ಕಾಲೇಜುಗಳು, 2018-19ರಲ್ಲಿ 458 ಕಾಲೇಜುಗಳು ಮತ್ತು 2019-20ರಲ್ಲಿ 153 ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಎಐಸಿಟಿಇ ಅನುಮೋದಿತ ಸಂಸ್ಥೆಗಳಲ್ಲಿ 2014-15ರಲ್ಲಿ ಅವಧಿಯಲ್ಲಿ ಗರಿಷ್ಠ 32 ಲಕ್ಷ ಸೀಟುಗಳು ಲಭ್ಯವಿತ್ತು.
2016-17ರಲ್ಲಿ 3,291 ಕಾಲೇಜುಗಳಲ್ಲಿ ಶೇ.51ರಷ್ಟು ಎಂಜಿನಿಯರಿಂಗ್ ಸೀಟುಗಳು ಖಾಲಿ ಇದ್ದವು. ನಂತರದ ವರ್ಷಗಳಲ್ಲಿ ಸೀಟುಗಳ ಲಭ್ಯತೆಯಲ್ಲಿ ಕಡಿಮೆಯಾಗುತ್ತ ಬಂದವು. ಇದರಿಂದ ವರ್ಷದಿಂದ ವರ್ಷಕ್ಕೆ ಕಾಲೇಜುಗಳ ಮುಚ್ಚುವಿಕೆಯ ಪ್ರಮಾಣವೂ ಏರಿಕೆ ಕಂಡಿದೆ.
ಅತಿ ಕಡಿಮೆ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಪ್ರವೇಶ ಪಡೆಯುತ್ತಿರುವ ಹಿನ್ನೆಲೆಯಲ್ಲಿ ಹಲವು ಎಂಜಿನಿಯರಿಂಗ್ ಕಾಲೇಜುಗಳನ್ನು ಮುಚ್ಚಲು ಅರ್ಜಿ ಸಲ್ಲಿಸುತ್ತಿದ್ದಾರೆ.