ವಾಹನ ಚಾಲಕರನ್ನು ಅಪರಾಧಿಗಳಾಗಿಸುವ ಕ್ರೂರ- ಅಮಾನವೀಯ ತಿದ್ದುಪಡಿ ಕೈ ಬಿಡಿ- ಕೆ. ಪ್ರಕಾಶ್

ತುಮಕೂರು :ಕೇಂದ್ರ ಸರ್ಕಾರವು ಕಳೆದ ಲೊಕಸಭೆಯ ಆಧಿವೇಶನದಲ್ಲಿ ಭಾರತೀಯ ದಂಡ ಸಂಹಿತೆಯನ್ನು ಬದಲಿಸಿದೆ. ಅದರಲ್ಲಿ ಅಕಸ್ಮಿಕವಾಗಿ ಅಗುವ ಅಪಘಾತದಲ್ಲಿ ಎಲ್ಲಾ ವಾಹನ ಚಾಲಕರನ್ನು ಉದ್ದೇಶಪೂರಕವಾಗಿ ಅಪರಾಧಿಯಾಗಿಸುವ ಅಮಾನವೀಯ ಮತ್ತು ಕ್ರೂರವಾದ ತಿದ್ದುಪಡಿ ಮಾಡಿ ಸಂಕಷ್ಟಕ್ಕೆ ಸಿಲುಕಿಸುವ ಚಾಲಕ ವಿರೋಧಿ ಕ್ರಮವಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಡಾ. ಕೆ ಪ್ರಕಾಶ್‌ ಆರೋಪಿಸಿದರು.  ವಾಹನ

ಅವರು ತುಮಕೂರಿ ಜನಚಳುವಳಿ ಕೇಂದ್ರದಲ್ಲಿ ಸಾರಿಗೆ ನೌಕರರಿಗೆ ಹಮ್ಮಿಕೊಂಡಿದ್ದ ಎರಡು ದಿನಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಾ,  ವಾಹನ ಚಾಲಕರು ಯಾರು ಜೀವಗಳನ್ನು ಬಲಿ ಪಡಿಯುವ ಉದ್ದೆಶವನ್ನು ಹೊಂದಿರುವುದಿಲ್ಲ ಎಂದು ಅಭಿಪ್ರಾಯ ಪಟ್ಟಅವರು, ವಾಹನ ಚಾಲಕರನ್ನು ಉದ್ದೇಶಪೂಕರ ಅಪರಾಧಿಗಳಂತೆ ಮಾಡುವ ತಿದ್ದುಪಡಿಯನ್ನು ಕೈ ಬಿಡಬೇಕು, ಈ ಶಾಸನವನ್ನು ವಿರೋಧಿಸಿ ಸಾರಿಗೆ ನೌಕರರು ಫೆಬ್ರುವರಿ 12 ರಂದು ದೇಶವ್ಯಾಪಿ ಪ್ರತಿಭಟನೆ ನಡೆಸಲಿದ್ದಾರೆ ಎಂದು ತಿಳಿಸಿದರು. ವಾಹನ

ರಾಜ್ಯ ಸಾರಿಗೆ ನಿಗಮಗಳ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್. ಎಸ್. ಮಂಜುನಾಥ ಮಾತನಾಡಿ,  ಪರಿಸರ ರಕ್ಷಣೆಯ ಹೆಸರಲ್ಲಿ ಖಾಸಗಿ ವಿದ್ಯುತ್ ಕಂಪನಿಗಳ ಬಸ್‌ಗಳನ್ನು ನಿಗಮಗಳಿಗೆ ತಂದು ಹಾಕಿ ನೇರವಾಗಿ ಮಾಲಿಕರಿಗೆ ಹಣ ಸಂದಾಯ ಮಾಡುವ ಮೂಲಕ ಸರ್ವಾಜನಿಕ ರಂಗದಲ್ಲಿ ಇರುವ ರಾಜ್ಯದ ಸಾರಿಗೆ ನಿಗಮಗಳನ್ನು ಮತ್ತು ಅದರ ಕೋಟ್ಯಾಂತರ ರೂಪಾಯಿಗಳ ಅಸ್ತಿಯನ್ನು ಖಾಸಗಿ ಬಂಡವಾಳಗಾರರ ಕೈಗಿಡುವ ಹುನ್ನರಾವಾಗಿದೆ , ಈ ಖಾಸಗಿಕರಣವು ಸಾರ್ವಜನಿಕರಿಗೆ ಸಹ ಸಂಕಷ್ಟಕ್ಕೆ ದೂಡಲಿದೆ,  ಸರ್ವಾಜನಿಕ ರಂಗದ ಖಾಸಗಿಕರಣದ ವಿರುದ್ದ ಸಿಐಟಿಯು ನಿರಂತರವಾದ ಪ್ರತಿರೋಧ ಒಡ್ಡುತ್ತಿದೆ ಎಂದರು.

ಇದನ್ನೂ ಓದಿ : ಹೊಸ ಕ್ರಿಮಿನಲ್ ಕಾನೂನು ವಿರೋಧಿಸಿ ಟ್ರಕ್ ಚಾಲಕರ ದೇಶವ್ಯಾಪಿ ಪ್ರತಿಭಟನೆ

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ರಾಜ್ಯ ಸಾರಿಗೆ ನಿಗಮಗಳ ಅಡಳಿತ ಮಂಡಳಿಗಳು ನೌಕರರ ಸ್ನೇಹಿ ನಡವಳಿಕೆ ಹೊಂದಿಲ್ಲ ,ನೌಕರರನ್ನು ಬಲಿಪಶು ಮಾಡುವ ಹುನ್ನಾರ ನಡೆಸುತ್ತಲೆ ಇವೆ. ಸೇಡಿನ ಕ್ರಮಗಳ ಮೂಲಕ ನೌಕರ ಜೊತೆ ಉತ್ತಮ ಭಾಂದವ್ಯವನ್ನು ಹೊಂದಿಲ್ಲ. ಇದು ಅನಾರೋಗ್ಯಕರವಾದ ನಡೆಯಾಗಿದೆ.  ನೌಕರರು ತಮ್ಮನ್ನು ಪ್ರತಿನಿಧಿಸಿ ಕೊಳ್ಳಲು ಸಂಘಗಳನ್ನು ಕಟ್ಟಿಕೊಳ್ಳುತ್ತಾರೆ, ಹಾಗಾಗಿ ತಕ್ಷಣ ಚುನಾವಣೆ ನಡೆಸಬೇಕು ಎಂದು ಅಗ್ರಹಿಸಿದರು.

ಸಮಾರೋಪದ ಅಧ್ಯಕ್ಷತೆ ಬಹಿಸಿದ್ದ  ಸಂಘದ ಗೌರವ ಅಧ್ಯಕ್ಷ  ಹೆಚ್.ಡಿ. ರೇವಪ್ಪ ವಹಿಸಿದ್ದರು.   ಸಂಘಟನೆ ರಾಜ್ಯ ಮುಖಂಡರಾದ ಕುಸುಮ,  ಸಂಘದ ಜಿಲ್ಲಾ ಅಧ್ಯಕ್ಷ ಎ. ದೇವರಾಜು ಉಪಾಧ್ಯಕ್ಷ ಸಮಿಉಲ್ಲಾ ಮೊಹನ್, ರಾಜಣ್ಣ ಸೇರಿದಂತೆ ಅನೇಕರಿದ್ದರು. ವಾಹನ

ಈ ವಿಡಿಯೋ ನೋಡಿಹಿಟ್ & ರನ್ ಪ್ರಕರಣಗಳ ಹೊಸ ಕಾನೂನಿಗೇಕೆ ಇಷ್ಟು ವಿರೋಧ? ಚಾಲಕರಿಗೆ ಇದು ತೂಗುಕತ್ತಿಯೇ? Janashakthi Media

 

 

Donate Janashakthi Media

Leave a Reply

Your email address will not be published. Required fields are marked *