ಯಾದಗಿರಿ: ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ(ಎಐಎಡಬ್ಲ್ಯೂಎ), ಶಹಾಪೂರ ತಾಲೂಕ 5ನೇ ಸಮ್ಮೇಳನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಅಕ್ಟೋಬರ್ 20ರಂದು ಜರುಗಿತು.
ಸಮ್ಮೇಳನವನ್ನು ಕೃಷಿ ಕೂಲಿಕಾರ ಸಂಘದ ರಾಜ್ಯ ಜಂಟಿ ಕಾರ್ಯದರ್ಶಿ ಮಲ್ಲಮ್ಮ ಕೊಡ್ಲಿ ಉದ್ಘಾಟಿಸಿ ಮಾತನಾಡಿ, ಜೀವನಾವಶ್ಯಕ ವಸ್ತುಗಳ ಬೆಲೆಗಳು ಶರವೇಗದಲ್ಲಿ ಗಗನಕ್ಕೆ ಏರುತ್ತಿರುವುದು, ಇದರಿಂದಾಗಿ ಬಡಕೂಲಿಕಾರರಿಗೆ ಕೊಂಡುಕೊಳ್ಳುವ ಶಕ್ತಿ ಇಲ್ಲದೆ ಅಪೌಷ್ಠಿಕತೆಯಿಂದ ಬಳಲುತ್ತಿರುವ ಪರಿಸ್ಥಿತಿ ಎದುರಾಗಿದೆ. ಜಗತ್ತಿನಲ್ಲಿಯೇ ಅತಿ ಹೆಚ್ಚು ಹಸಿವಿನಿಂದ ಸಾವುಗಳು ಸಂಭವಿಸುತ್ತಿರುವುದು ಭಾರತದಲ್ಲಿಯೇ ಎಂದು ಆತಂಕ ವ್ಯಕ್ತಪಡಿಸಿದರು.
ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದು, ಜನವಿರೋಧಿ ಕೆಲಸದಲ್ಲಿ ತೊಡಗಿಸಿಕೊಂಡಿದೆ. ಅಲ್ಲದೆ, 40% ಕಮಿಷನ್ ದಂಧೆಯ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ. ಇಂತಹ ಸರ್ಕಾರ ಕಿತ್ತೋಗೆಯಲು ಪಣ ತೊಡಬೇಕೆಂದು ಕರೆ ನೀಡಿದರು.
ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ದಾವಲ್‌ಸಾಬ್ ನದಾಫ್ ಅವರು, ಬಡ ಕೂಲಿಕಾರರಿಗೆ ಗ್ರಾಮದ ಸುತ್ತಲು ಇರುವ ಬಲಾಢ್ಯರ ಭೂಮಿಯನ್ನು ಸರ್ಕಾರ ಖರೀದಿಸಿ ಕೂಲಿಕಾರರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಸಮ್ಮೇಳನವು 21 ಜನರ ನೂತನ ಶಹಾಪೂರ ತಾಲೂಕ ಸಮಿತಿಯನ್ನು ಆಯ್ಕೆ ಮಾಡಿತು. ಸಮಿತಿ ಅಧ್ಯಕ್ಷರಾಗಿ, ರಂಗಮ್ಮ ಕಟ್ಟಿಮನಿ, ಉಪಾಧ್ಯಕ್ಷರಾಗಿ ಭೀಮಣ್ಣ ನಾಯ್ಕೋಡಿ, ಶಿವಣ್ಣ ಮುದ್ದಾ, ಕಾರ್ಯದರ್ಶಿಯಾಗಿ ಸಿದ್ದಯ್ಯ ಪೂಜಾರಿ ಗುಂಡಹಳ್ಳಿ, ಸಹಕಾರ್ಯದರ್ಶಿಯಾಗಿ ಸಾಬಣ್ಣ ತಂಗಡಗಿ, ಮಲ್ಲಿಕಾರ್ಜುನ ಕರಣಗಿ ಆಯ್ಕೆಯಾಗಿದ್ದಾರೆ.
ಸಮಿತಿ ಸದಸ್ಯರುಗಳಾಗಿ, ಭೀಮರಾಯ, ನಿಂಗಣ್ಣ ಬೋನಾಳ, ಗಂಗಮ್ಮ ದಿಗ್ಗಿ, ಶಿವರಾಯ ಯಳವಾರ, ಶಿವಪ್ಪ ವಿಭೂತಿಹಳ್ಳಿ, ನಾಗಮ್ಮ, ಅಯ್ಯಪ್ಪ ಕೊಂಬಿನ, ಮಲಿಕಾರ್ಜುನ ಕೊಳ್ಳೂರ, ಹೊನ್ನಪ್ಪ ತಡಬಿಡಿ, ಭೀಮಬಾಯಿ ಹವಲ್ದಾರ, ದೇವಪ್ಪ ಹಳ್ಳಿ, ಶರಣಮ್ಮ, ಸವೀತಾ ಪೂಜಾರಿ ಸಮಿತಿಗೆ ಆಯ್ಕೆಯಾಗಿದ್ದಾರೆ.
ಸಮ್ಮೇಳನದ ಅಧ್ಯಕ್ಷತೆಯನ್ನು ರಂಗಮ್ಮ ಕಟ್ಟಿಮನಿ ವಹಿಸಿ ನಡೆಸಿಕೊಟ್ಟರು. ಸವೀತಾ ಪೂಜಾರಿ ನಿರೂಪಣೆ ಮಾಡಿದರು.