ಖಾದ್ಯ ತೈಲ ಅಮದು ನಿಯಂತ್ರಿಸಿ, ಕೊಬ್ಬರಿ ,ಶೇಂಗಾ ದರ ಕುಸಿತದಿಂದ ರಾಜ್ಯದ ರೈತರನ್ನು ರಕ್ಷಿಸಲು KPRS ಆಗ್ರಹ

ಬೆಂಗಳೂರು : ಕೇಂದ್ರ ಸರ್ಕಾರ ಕೂಡಲೇ ಖಾದ್ಯ ತೈಲ ಅಮದು ನಿಯಂತ್ರಿಸಿ, ರಾಜ್ಯದ ಶೇಂಗಾ, ಕೊಬ್ಬರಿ ಮುಂತಾದ ಎಣ್ಣೆ ಬೀಜಗಳ ರೈತರನ್ನು ರಕ್ಷಿಸಬೇಕೇಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS) ಕರ್ನಾಟಕ ರಾಜ್ಯ ಸಮಿತಿ ಆಗ್ರಹಿಸುತ್ತದೆ.

ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಅಧ್ಯಕ್ಷ ಜಿಸಿ ಬಯ್ಯಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ. ಯಶವಂತ್‌ ಜಂಟಿ ಹೇಳಿಕೆ ನೀಡಿದ್ದು, ಭೀಕರ ಬರಗಾಲದ ನಡುವೆಯೂ ಶೇಂಗಾ ಬೆಳೆದಿರುವ ರೈತರು, ತೀವ್ರ ಬೆಲೆ ಕುಸಿತಕ್ಕೆ ಒಳಗಾಗಿದ್ದಾರೆ. ಒಂದು ಕ್ವಿಂಟಾಲ್ ಹಸಿ ಶೇಂಗಾ ದರ 6000 ರೂ ನಿಂದ 3000 ರೂಗೆ ,ಒಣ ಶೇಂಗಾ 9000 ರೂ ನಿಂದ 6000 ರೂ ಗೆ ಕುಸಿದಿದೆ. ಅದೇ ರೀತಿ ಕೊಬ್ಬರಿ ಬೆಳೆಗಾರರ ಬೆಲೆ ಕುಸಿತವು ಕೂಡ ಮುಂದುವರೆದಿದೆ. ಬಹುತೇಕ ಸುಂಕ ರಹಿತವಾಗಿ ಖಾದ್ಯ ತೈಲ ಅಮದನ್ನು ಪ್ರೊತ್ಸಾಹಿಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ನೀತಿಯಿಂದಾಗಿ ರಾಜ್ಯದ ಶೇಂಗಾ, ಕೊಬ್ಬರಿ ಮುಂತಾದ ಎಣ್ಣೆ ಬೀಜಗಳ ರೈತರು ಬೆಲೆ ಕುಸಿತ ಅನುಭವಿಸುವಂತಾಗಿದೆ ಎಂದು ಅಪಾದಿಸಿದ್ದಾರೆ.

ಇದನ್ನು ಓದಿ : ಬಾಬರಿ ಮಸೀದಿ ಪ್ರಕರಣದ ತೀರ್ಪು ನೀಡಿದ್ದ 5 ನ್ಯಾಯಮೂರ್ತಿಗಳಿಗೆ ರಾಮಮಂದಿರ ಉದ್ಘಾಟನೆಗೆ ಆಹ್ವಾನ!

ಕೊಬ್ಬರಿ ಬೆಂಬಲ ಬೆಲೆಯನ್ನು ರಾಜ್ಯ ಸರ್ಕಾರ ಶಿಪಾರಸ್ಸಿನ ದರವಾದ ಕ್ವಿಂಟಾಲ್ ಗೆ 16730 ರೂ ನಷ್ಟಾದರೂ ಹೆಚ್ಚಿಸಬೇಕು ಮತ್ತು ರಾಜ್ಯದಲ್ಲಿ ಉತ್ಪಾದನೆ ಯಾಗುವ ಎಲ್ಲಾ ಕೊಬ್ಬರಿಯನ್ನು ಖರೀದಿ ಕೇಂದ್ರದ ಮೂಲಕ ಕಡ್ಡಾಯವಾಗಿ ಖರೀದಿ ಮಾಡಬೇಕು ಎಂದು ರೈತರು ಹೋರಾಟ ನಡೆಸಿದ್ದರೂ ಮೋದಿ ಸರ್ಕಾರದ ನಿರ್ಲಕ್ಷ್ಯ ಮುಂದುವರೆದಿದೆ. ರಾಜ್ಯದ ಕೊಬ್ಬರಿ ವಾರ್ಷಿಕ ಉತ್ಪಾದನೆ ಸುಮಾರು ಎರಡೂವರೆ ಲಕ್ಷ ಕ್ವಿಂಟಾಲ್ ಇದ್ದರೆ ಕೇವಲ 60 ಸಾವಿರ ಕ್ವಿಂಟಾಲ್ ನಷ್ಟಕ್ಕೆ ಮಾತ್ರ ಬೆಂಬಲ ಬೆಲೆ ಖರೀದಿಗೆ ಒಪ್ಪಿಗೆ ಸೂಚಿಸಿದೆ ಹಾಗೂ ಕೇವಲ 250 ರೂ ನಷ್ಟು ಮಾತ್ರ ಬೆಂಬಲ ಬೆಲೆ ಹೆಚ್ವಳ ಮಾಡಿದೆ. ಆದರೆ ಅದೇ ಸಂದರ್ಭದಲ್ಲಿ ಖಾದ್ಯ ತೈಲದ ಅಮದು ಪ್ರಮಾಣವನ್ನು ಶೇ 50 ರಷ್ಟು ಹೆಚ್ಚಿಸಿರುವ ಕೇಂದ್ರ ಸರ್ಕಾರವು ,ಖಾದ್ಯ ತೈಲ ಅಮದು ಸುಂಕ ವಿನಾಯಿತಿಯನ್ನು 31 ಮಾರ್ಚ್ 2025 ರ ತನಕ ವಿಸ್ತರಿಸಿದೆ. ಹೀಗೆ ಅಧಾನಿ ಮುಂತಾದ ಕಾರ್ಪೊರೇಟ್ ಖಾದ್ಯ ತೈಲ ವ್ಯಾಪಾರಿ ಸಂಸ್ಥೆಗಳ ಲಾಭಿಗೆ ರಾಜ್ಯದ ರೈತರನ್ನು ಬಲಿ ಮಾಡಲಾಗುತ್ತಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘ  (KPRS)  ಮೋದಿ ಸರ್ಕಾರವನ್ನು ಕಟುವಾಗಿ ಟೀಕಿಸಿದೆ

ರಾಮ ಜಪದಲ್ಲಿ ತೊಡಗಿರುವ ಕೇಂದ್ರದ ಬಿಜೆಪಿ ಸರ್ಕಾರ ಕಣ್ತೆರೆದು ಈ ಕೂಡಲೇ ಖಾದ್ಯ ತೈಲ ಅಮದನ್ನು ನಿಯಂತ್ರಿಸಬೇಕು ,ಶೇಂಗಾ, ಕೊಬ್ಬರಿ ಮುಂತಾದ ಎಣ್ಣೆ ಬೀಜಗಳ ರೈತರನ್ನು ರಕ್ಷಿಸಲು ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಬೇಕು. ಸುಂಕ ವಿನಾಯಿತಿ ಅಮದು ವಿಸ್ತರಣೆಯನ್ನು ಕೂಡಲೇ ರದ್ದು ಪಡಿಸಬೇಕು. ಕಚ್ಚಾ ಹಾಗೂ ಸಂಸ್ಕರಿತ ಖಾದ್ಯ ತೈಲಗಳ ಮೇಲೆ ಈ ಹಿಂದೆ ಇದ್ದ ಅಮದು ತೆರಿಗೆ ಕೂಡಲೇ ಜಾರಿಗೆ ತರಬೇಕು ಎಂದು ಕರ್ನಾಟಕ ಪ್ರಾಂತ ರೈತ ಸಂಘ ( KPRS)  ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ಇದನ್ನು ನೋಡಿ : ಸಂಯುಕ್ತ ಹೋರಾಟ ಕರ್ನಾಟಕ ನಾಯಕರ ಜೊತೆ ಸಿಎಂ ಮಾತುಕತೆ : ಸಿಎಂ ನೀಡಿದ ಭರವಸೆಗಳೇನು? Janashakthi Media

Donate Janashakthi Media

Leave a Reply

Your email address will not be published. Required fields are marked *