ಮಂಗಳೂರು: ಯೂರೋಪಿಯನ್ ಒಕ್ಕೂಟದ ಷರತ್ತುಗಳನ್ನು ಪಾಲಿಸಲು ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಯ ಜಿಯೋ ಮ್ಯಾಪಿಂಗ್ ಗೆ ಸಿದ್ದತೆ ನಡೆಸುತ್ತಿದ್ದು ,ಈ ಪ್ರಕ್ರಿಯೆಯ ಯಾವುದೇ ವೆಚ್ಚವನ್ನು ರಬ್ಬರ್ ಬೆಳೆಗಾರರಿಂದ ಸಂಗ್ರಹಿಸಬಾರದು ಎಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ರಬ್ಬರ್ ಮಂಡಳಿ ಹಾಗೂ ಕೇಂದ್ರ, ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.
ಇದನ್ನೂ ಓದಿ:-ರಾಯಚೂರು| ಸಿಡಿಲು ಬಡಿದ ಪರಿಣಾಮ ಟೀನ್ ಶೆಡ್ ಮನೆ ಭಸ್ಮ
ಈಗಾಗಲೇ ರಬ್ಬರ್ ಬೆಳೆಗಾರರು ಉತ್ಪಾದನಾ ವೆಚ್ಚ ಹೆಚ್ಚಳ ಹಾಗೂ ರಬ್ಬರ್ ಬೆಲೆ ಕುಸಿತದಿಂದ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಯೂರೋಪಿಯನ್ ಒಕ್ಕೂಟವು ಭಾರತದಿಂದ ರಬ್ಬರ್ ಆಮದಿಗೆ ಅರಣ್ಯ ನಾಶ ಮಾಡಿ ರಬ್ಬರ್ ಬೆಳೆದಿಲ್ಲ ಎಂಬ ಸರ್ಟಿಫಿಕೇಟ್ ಒದಗಿಸುವ ಷರತ್ತು ವಿಧಿಸಿವೆ ಎಂದು ಪತ್ರದಲ್ಲಿ ತಿಳಿಸಿವೆ.
ಅಮೇರಿಕಾ ಹಾಗೂ ಯೂರೋಪಿಯನ್ ದೇಶಗಳು ಭಾರತದ ಮೇಲೆ ಸುಂಕ ರಹಿತ ಮುಕ್ತ ವ್ಯಾಪಾರದ ಒತ್ತಡ ಹಾಕುತ್ತಲೇ ,ತಮ್ಮ ದೇಶಗಳಿಗೆ ಭಾರತದ ಉತ್ಪನ್ನಗಳು ಬರದಂತೆ ಸುಂಕಯೇತರ ಅಡೆತಡೆಗಳನ್ನು ಸೃಷ್ಟಿಸಿಕೊಂಡಿವೆ. ಇಂತಹ ಅಡೆತಡೆಗಳನ್ನು ವಿರೋಧಿಸಿ ಸೆಡ್ಡು ಹೊಡೆದು ನಮ್ಮ ರಾಜ್ಯದ ಹಾಗೂ ದೇಶದ ರಬ್ಬರ್ ಬೆಳೆಗಾರರಿಗೆ ವೈಜ್ಞಾನಿಕ ಬೆಲೆ ದೊರಕಿಸಿಕೊಡುವ ಬದಲು ಸಾಮ್ರಾಜ್ಯಶಾಹಿ ದೇಶಗಳ ಅಸಮಾನ ಷರತ್ತುಗಳನ್ನು ಪಾಲಿಸುವಂತೆ ನಮ್ಮ ರೈತರನ್ನು ಒತ್ತಾಯಿಸಲಾಗುತ್ತಿದೆ.
ಇದನ್ನೂ ಓದಿ:-ಭಾರತದ ಜೊತೆ ಯುದ್ಧ ಬೇಡ: ಪಾಕಿಸ್ತಾನ ಪ್ರಧಾನಿ ನವಾಜ್ ಶರೀಫ್
ಕುಮ್ಕಿ ಭೂಮಿಯ ರಬ್ಬರ್ ಬೆಳೆ ಪ್ರದೇಶದ ರೈತರಿಗೆ ಯಾವುದೇ ಕಿರುಕುಳ ಆಗದಂತೆ ಜೀಯೋ ಮ್ಯಾಪಿಂಗ್ ಸಂದರ್ಭದಲ್ಲಿ ರಬ್ಬರ್ ಮಂಡಳಿ ಕ್ರಮ ವಹಿಸಬೇಕು. ರಬ್ಬರ್ ಮಡಳಿಯಿಂದ ಜೀಯೋ ಮ್ಯಾಪಿಂಗ್ ಮಾಡಲು ಅನುಮೋದನೆ ಪಡೆದಿರುವ ಟಿಆರ್ ಎಸ್ ಟಿಒಐ ನಿಂದ ರೈತರಿಗೆ ಯಾವುದೇ ವೆಚ್ಚ ಆಗದಂತೆ ನಿಗಾ ವಹಿಸಬೇಕು ಮತ್ತು ಪ್ರತಿ ರಬ್ಬರ್ ಬೆಳೆಗಾರರಿಗೆ ಜೀಯೋ ಮ್ಯಾಪಿಂಗ್ ಸಹಕರಿಸುವ ಕಾರಣ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಬ್ಸಿಡಿ ಒದಗಿಸಬೇಕು ಎಂದಿದೆ