ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? : ಭಾಗ-2 ಲಸಿಕೆಯ ಲಭ್ಯತೆ, ಅಗತ್ಯ

ಬ್ರಿಟನಿನಲ್ಲಿ ಈಗಾಗಲೇ ಕೋವಿಡ್-19 ಲಸಿಕೆ ಒಂದರ ಬಳಕೆಗೆ ಅನುಮತಿಕೊಡಲಾಗಿದೆ. ಮುಂದಿನ ತಿಂಗಳೇ ಇನ್ನೂ ಹಲವು ಲಭ್ಯವಾಗುತ್ತದೆ ಎಂಬುದು ಸುದ್ದಿಯಲ್ಲಿದೆ. ಕೋವಿಡ್-19 ಕುರಿತು ವಾಸ್ತವಕ್ಕೆ ದೂರವಾದ ಅತಿರಂಜಿತ ನಿಲುವುಗಳನ್ನು ತಾಳಿರುವ ಸರಕಾರ ಮತ್ತು ಮಾಧ್ಯಮಗಳು ಲಸಿಕೆ  ಕುರಿತು ಸಹ ಎಲ್ಲ ಸಮಸ್ಯೆಗಳು ಪರಿಹಾರವಾದವು ಎಂಬಂತೆ ವರ್ತಿಸುತ್ತಿವೆ. ಆದರೆ ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತವೇ ಇದೆ. ಈ ಕುರಿತು ವಾಸ್ತವವನ್ನು ವಿಶ್ಲೇಷಿಸುವ ಲೇಖನ ಸರಣಿ ಇದು. ಲಸಿಕೆ ಎಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಕೋವಿಡ್ ಲಸಿಕಾ ಕಾರ್ಯಕ್ರಮದ ಸಮಸ್ಯೆಗಳೇನು? ಲಸಿಕೆ ಅಭಿವೃದ್ಧಿಯ ಈಗಿನ ಪರಿಸ್ಥಿತಿ ಏನು? ಭಾರತಕ್ಕೆ ಲಸಿಕೆಯ ಒಟ್ಟು ಅಗತ್ಯ ಎಷ್ಟು? ಲಸಿಕೆಯ ವೆಚ್ಚ ಎಷ್ಟು, ಸಾಗಾಣಿಕೆ ಹೇಗೆ? ಲಸಿಕೆ ಆದ್ಯತೆಯ ಸರಣಿ ಹೇಗಿರಬೇಕು? ಲಸಿಕೆಯನ್ನು ಆದ್ಯತೆಯ ಪ್ರಕಾರ ಹೇಗೆ ತಲುಪಿಸುವುದು? ಲಸಿಕೆ ಕಾರ್ಯಕ್ರಮಕ್ಕೆ ಎಷ್ಟು ಸಿಬ್ಬಂದಿ, ಮೂಲಸೌಕರ್ಯ ಬೇಕು? ಅದನ್ನು ಹೊಂದಿಸುವುದು ಹೇಗೆ? ಈ ಪ್ರಶ್ನೆಗಳಿಗೆ ವಾಸ್ತವ ನೆಲೆಯಲ್ಲಿ ಉತ್ತರಕೊಡುವ ಪ್ರಯತ್ನವಿದು. ಹಿಂದಿನ ಹಲವಾರು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅನುಭವವಿರುವ, ಆ ದೃಷ್ಟಿಯಿಂದ ಕೋವಿಡ್-19 ಲಸಿಕಾ ಕಾರ್ಯಕ್ರಮದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವ-ಡಾ| ಕೆ. ಸುಶೀಲಾ ಅವರು ಇದನ್ನು ಬರೆದಿದ್ದಾರೆ.

ಭಾಗ-1 ರಲ್ಲಿ ದೇಹರಕ್ಷಣಾ ವ್ಯವಸ್ಥೆಯ ಕುರಿತು ತಿಳಿಸಿ, ಅದರ ಆಧಾರದ ಮೇಲೆ ಲಸಿಕೆಯ ವಿಜ್ಞಾನವನ್ನು ಈಗಾಗಲೇ ವಿವರಿಸಿದ್ದಾರೆ.

ಈ ಭಾಗ 2 ರಲ್ಲಿ ಲಸಿಕೆಯ ಅಭಿವೃದ್ಧಿಯ ಪ್ರಸಕ್ತ ಸ್ಥಿತಿ, ಲಸಿಕೆಯ ಒಟ್ಟು ಅಗತ್ಯ ಎಷ್ಟು?, ಸದ್ಯಕ್ಕೆ ಲಭ್ಯವಾಗಬಹುದಾದ ಲಸಿಕೆ ಎಷ್ಟು -ಎಂಬುದರ ಬಗ್ಗೆ ವಿವರಿಸಿದ್ದಾರೆ.

-ಡಾ| ಕೆ. ಸುಶೀಲಾ

ಭಾಗ-2 ಲಸಿಕೆಯ ಲಭ್ಯತೆ, ಅಗತ್ಯ,

ಲಸಿಕೆಯ ಅಭಿವೃದ್ಧಿಯ ಪ್ರಸಕ್ತ ಸ್ಥಿತಿ

ಏಳು ಕಂಪನಿಗಳು ಅದಾಗಲೇ ಲಸಿಕೆ ತಯಾರಿಸುವ ಈ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.ಈ ಕಾರ್ಯದಲ್ಲಿ ಕೆಲವು ಕಂಪನಿಗಳು ಕೆಲವು ಲಸಿಕೆ ತಯಾರಿಕೆಯಲ್ಲಿ ಸಫಲವಾಗಿವೆ. ಇವುಗಳು 1) ಮೊಡರ್ನದ (Moderna) ಎಂಆರ್‌ಎನ್‌ಎ-1273. 2) ಬಯೋಎನ್‌ಟೆಕ್(Biontech)/ಫೈಝರ್((Pfizer) ಸಹಯೋಗದಲ್ಲಿತಯಾರಾದ – ಬಿಎನ್‌ಟಿ 162ಬಿ2 (BNT162b2). ೩) ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನೆಕಾ(Oxford University and Astrazeneca)ದ AZD122. ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಹಯೋಗದೊಂದಿಗೆ ಸೀರಂ ಇನ್‌ಸ್ಟಿಇಟ್ಯೂಟ್ ಆಫ್‌ಇಂಡಿಯಾ (ಎಸ್.ಐ.ಐ.) ಪೂನಾ-ದಿಂದ ತಯಾರಾದ ಕೊವಿಶೀಲ್ಡ್ (Covishield).

ಒಂದು ಉತ್ತಮ ಲಸಿಕೆಗಿರುವ ಗುಣಲಕ್ಷಣಗಳೆಂದರೆ:-

  1. ಅದು ಉಪಯೋಗಿಸುವವರಿಗೆ ಸುರಕ್ಷಿತವಾಗಿರಬೇಕು.
  2. ಬೆಲೆ ದುಬಾರಿಯಾಗಿರಬಾರದು.
  3. ಪ್ರತಿಶತ 50 ಕ್ಕೂ ಹೆಚ್ಚು ಯಶಸ್ಸಿನ ಸಾಮರ್ಥ್ಯವನ್ನು ಹೊಂದಿರಬೇಕು.
  4. ದೀರ್ಘಾವಧಿ ರೋಗನಿರೋಧಕ ಸಾಮಥ್ಯವನ್ನು ಫಲಾನುಭವಿಗಳ ದೇಹಕ್ಕೆ ನೀಡಬೇಕು.
  5. ಯಾವುದೇ ಉಷ್ಣತೆಯಲ್ಲಿ ತಮ್ಮ ಗುಣಲಕ್ಷಣ ಕಾಪಾಡಿಕೊಂಡಿರಬೇಕು.
  6. ವಿವಿಧೆಡೆ ಸಾಗಿಸಲು, ಉಪಯೋಗಿಸಲು ಸುಲಭವಾಗಿರಬೇಕು.

ಹಾಗಾದರೆ ಈಗ ತಯಾರಾಗಿ ಜನಸಾಮಾನ್ಯರಲ್ಲಿ ಉಪಯೋಗಿಸುವ ಪರವಾನಿಗೆ ಪಡೆದ ಅಥವಾ ತುರ್ತು ಅನುಮತಿಗೆ ಕಾಯುತ್ತಿರುವ ಮೇಲೆ ಹೇಳಿದ ಲಸಿಕೆಗಳ ಗುಣಾವಗುಣಗಳನ್ನು ಪರಿಶೀಲಿಸೋಣ.

ಈಗ ಲಭ್ಯವಾಗಿರುವ ಗುಣಗಳ ಲಸಿಕೆಗಳ ಹೋಲಿಕೆ

ಗುಣಗಳು ಮೊಡರ್ನಾ (ಎಂಆರ್ಎನ್1273)                ಫೈಝರ್ (ಬಿಎನ್ಟಿ 16೨ಬಿ2) ಆಕ್ಸ್ಫರ್ಡ್ಆಸ್ಟ್ರಾಜೆನೆಕಾ(AZD122, ಕೊವಿಶೀಲ್ಡ್)             
ಗುಣಮಟ್ಟ ಕಾಪಾಡಲು ಬೇಕಾಗುವ ಉಷ್ಣತೆ 20 ಡಿಗ್ರಿ ಸೆಂ. (ಶೂನ್ಯಕ್ಕಿಂತ 20 ಡಿಗ್ರಿ ಸೆ. ಕೆಳಗೆ) 70 ಡಿಗ್ರಿ ಸೆಂ. (ಶೂನ್ಯಕ್ಕಿಂತ 70 ಡಿಗ್ರಿ ಸೆಂ. ಕೆಳಗಿನ ತಾಪಮಾನ) 2 ಡಿಗ್ರಿ ಯಿಂದ 8 ಸೆಂ. ತಾಪಮಾನದಲ್ಲಿ ಸಾಧಿಸಬಹುದು, ಕಾಪಾಡಬಹುದು              
ಸುರಕ್ಷತೆ ಕೆಲವರಲ್ಲಿಚಿಕ್ಕ ಪುಟ್ಟ ತೊಂದರೆಗಳಾದ ಇಂಜಕ್ಸ್ನ್ ನೀಡಿದಲ್ಲಿ ನೋವು, ಮೈಕೈನೋವು, ಚಿಕ್ಕಜ್ವರ, ಅಲ್ಪಾವಧಿಕಾಲ ಕಾಣಿಸಿಕೊಳ್ಳಬಹುದು. ಗಂಭೀರ ತೊಂದರೆಗಳಿಲ್ಲ. ಸುರಕ್ಷಿತ. ಸುರಕ್ಷಿತಚಿಕ್ಕಪುಟ್ಟ ತೊಂದರೆಗಳು ದೊಡ್ಡದಾದ ಲಸಿಕೆ ನೀಡಿದಾಗ ಕಾಣಿಸಿಕೊಂಡಂತೆ ಕಾಣಿಸಿಕೊಳ್ಳಬಹುದು. ಉಳಿದೆರಡು ಲಸಿಕೆಗಳು ತೋರಿಸಿದ ಚಿಕ್ಕಪುಟ್ಟತೊಂದರೆ ಕೆಲವರಲ್ಲಿ ಕಾಣಿಸಿಕೊಳ್ಳಬಹುದು.               

 

ನೀಡುವ ವಿಧಾನ ಚುಚ್ಚು ಮದ್ದು ಚುಚ್ಚು ಮದ್ದು ಚುಚ್ಚು ಮದ್ದು
ರೋಗತಡೆಗಟ್ಟುವ ಸಾಮರ್ಥ್ಯದ ಪ್ರಮಾಣ 95%         90% 62% ತಿಂಗಳ ಅಂತರದಲ್ಲಿ 1 ಎಂ.ಎಲ್. 2 ಇಂಜಕ್ಸ್ನ್ ನೀಡಿದಾಗ 90%ಮೊದಲು 1/2 ಎಂ.ಎಲ್ ನೀಡಿ ತಿಂಗಳ ನಂತರ 1 ಎಂ.ಎಲ್. ನೀಡಿದಾಗ
ಲಸಿಕೆ ನೀಡುವ ಪ್ರಮಾಣ ಒಂದು ತಿಂಗಳ ಅಂತರದಲ್ಲಿ 1ಎಮ್.ಎಲ್. ಎರಡುಇಂಜಕ್ಸ್ನ್ ಒಂದು ತಿಂಗಳ ಅಂತರದಲ್ಲಿ 1 ಎಮ್.ಎಲ್. ಎರಡುಇಂಜಕ್ಸ್ನ್ ಒಂದು ತಿಂಗಳ ಅಂತರದಲ್ಲಿ 1 ಎಮ್.ಎಲ್. ಎರಡು ಇಂಜಕ್ಸ್ನ್ ಪ್ರಥಮಳಿ ಪ್ರಮಾಣ ಹಾಗೂ ತಿಂಗಳ ನಂತರ ಪೂರ್ಣ ಪ್ರಮಾಣದ ಇನ್ನೊಂದು ಇಂಜಕ್ಷನ್
ಬೆಲೆ 25 ಡಾಲರ್ ಪ್ರತೀ ಇಂಜಕ್ಸ್ನ್ಗೆ (ಒಟ್ಟು 50 ಡಾಲರ್ ) 20 ಡಾಲರ್ / ಪ್ರತೀ ಇಂಜಕ್ಸ್ನ್ಗೆ (ಒಟ್ಟು 40 ಡಾಲರ್)                2.5 ಡಾಲರ್/ ಇಂಜಕ್ಸ್ನ್ಗೆ (ಒಟ್ಟು 5 ಡಾಲರ್) ಪೂನಾದಕೊವಿರೇಲ್ಡ್ಸರ್ಕಾರಕ್ಕೆ 2 ಇಂಜೆಕ್ಸ್ನ್ಗೆ 250 ರೂ. ಗೆ ಪೂರೈಕೆ. ಖಾಸಗಿಯವರಿಗೆ 2 ಇಂಜಕ್ಸ್ನ್ಗೆ 1000 ಗೆ ಪೂರೈಸುವುದಾಗಿ ಹೇಳಿದೆ.  
ಲಸಿಕೆಯ ಉತ್ಪಾದನೆಯ ಉದ್ದೇಶ ವ್ಯಾಪಾರಕ್ಕಾಗಿ ಲಾಭಕ್ಕಾಗಿ ಲಾಭಕ್ಕಾಗಿಅಲ್ಲ
ಈಗ ತಿಳಿದಂತೆ ಪಡೆದ ವ್ಯಕ್ತಿಗಳಲ್ಲಿ ರೋಗ ತಡೆಗಟ್ಟುವ ಕಾಲಾವಧಿ ಸಾಧಾರಣ 9 ರಿಂದ 12 ತಿಂಗಳು ಸಾಧಾರಣ 9 ರಿಂದ 12 ತಿಂಗಳು ಸಾಧಾರಣ 9 ರಿಂದ 12 ತಿಂಗಳು 

ಮೊಡರ್ನಾ ಮತ್ತು ಫೈಝರ್ ಕಂಪನಿಗಳ ಲಸಿಕೆ ಆಕ್ಸ್‌ಫರ್ಡ್ ಲಸಿಕೆಗಿಂತಲೂ ಹೆಚ್ಚು ಪ್ರಮಾಣದಲ್ಲಿ ರೋಗತಡೆಗಟ್ಟುವ ಸಾಮರ್ಥ್ಯವನ್ನು ತೋರಿಸುತ್ತಿದ್ದರೂ ಇವುಗಳ ಬೆಲೆ ದುಬಾರಿ ಹಾಗೂ ಇವುಗಳ ಗುಣಮಟ್ಟ ಕಾಪಾಡಲು ಬೇಕಾದ ಉಷ್ಣತೆ ಅತೀ ಕನಿಷ್ಠ. ಹೀಗಾಗಿ ಪ್ರಪಂಚದ ವಿವಿಧ ದೇಶಗಳಿಗೆ ಇವುಗಳ ಸಾಗಾಣಿಕೆ ಹಾಗೂ ಅಲ್ಲಿ ಅವುಗಳ ಗುಣಮಟ್ಟಕಾಪಾಡುವಿಕೆಅತ್ಯಂತಕಷ್ಟಕರವಾದಕಾರ್ಯ. ಹಾಗೂ ಇವುಗಳ ಗಗನಕ್ಕೇರಿದ ಬೆಲೆ ವಿಶ್ವದ ಹೆಚ್ಚಿನ ದೇಶಗಳಿಗೆ ಕೈಗೆಟಕದ ಕುಸುಮ. ಅದರಲ್ಲೂ ಬಡದೇಶಗಳಿಗೆ ಇವುಗಳು ಅಪ್ರಯೋಜಕ.

ಆಕ್ಸ್‌ಫರ್ಡ್ ಲಸಿಕೆ ಪೂರ್ಣ ಪ್ರಮಾಣದಲ್ಲಿ ಒಂದು ತಿಂಗಳ ಅಂತರದಲ್ಲಿ 2 ಬಾರಿ ನೀಡಿದಾಗ ಅದರ ರೋಗ ತಡೆಗಟ್ಟುವ ಪ್ರಮಾಣ 62% ಆದರೆ ಈ ಸಾಮರ್ಥ್ಯ ಪ್ರತಿಶತ 50% ಕ್ಕೂ ಅದಕ್ಕಿಂತ ಅಧಿಕವಿದ್ದರೆ ಆ ಲಸಿಕೆ ಫಲಪ್ರದ ಎಂದು ಭಾವಿಸಲಾಗಿದೆ. ಹಾಗಾಗಿ ಆಕ್ಸ್‌ಫರ್ಡ್ ಲಸಿಕೆ ಹಾಗೂ ಅದರ ಸಹಕಾರದೊಂದಿಗೆ ಪೂನಾದ ಸೀರಂ ಇನ್‌ಸ್ಟಿಟ್ಯೂಟ್ ತಯಾರಿಸಿದ ಕೋವಿಶೀಲ್ಡ್ ಉಪಯೋಗಕ್ಕೆ ಸಂಪೂರ್ಣಯೋಗ್ಯ.

ಆಕ್ಸ್‌ಫರ್ಡ್ ಲಸಿಕೆಯಲ್ಲಿ ತಿಂಗಳಂತರದಲ್ಲಿ ಕೊಟ್ಟ ಪ್ರಥಮ ಅರ್ಧಂಶ ಹಾಗೂ ದ್ವೀತಿಯ ಪೂರ್ಣಾಂಶ ಇಂಜಕ್ಸ್‌ನ್‌ನ ಸಫಲತೆ 90% ಎಂದು ಹೇಳಲಾಗಿತ್ತು. ಆದರೆ ತಪ್ಪಾಗಿ ಈ ಬಳಕೆ ಮಾಡಲಾಗಿತ್ತು.ಇದು ಕೇವಲ 55 ವಯಸ್ಸಿನ ಕೆಳಗಿನವರಿಗೆ ಹಾಗೂ ಕಡಿಮೆ ಸಂಖ್ಯೆಯ ವೊಲಂಟಿಯರ್ (ಸ್ವಯಂ ಸೇವಕ) ಗಳಿಗೆ ನೀಡಲಾಗಿತ್ತು. ಹಿರಿಯ ನಾಗರಿಕರಲ್ಲಿ ಇದರ ಪರಿಣಾಮ ಹಾಗೂ ಸಾಮರ್ಥ್ಯದ ಪ್ರಮಾಣ ಎಷ್ಟು ಎನ್ನುವುದು ತಿಳಿಯದೆನ್ನುವ ಮಾಹಿತಿ ನೀಡಲಾಗಿದೆ. ಹೀಗಾಗಿ ಈ ಕಡಿಮೆ ಪ್ರಮಾಣದ ಲಸಿಕಾ ಪ್ರಯೋಗ ಹೆಚ್ಚಿನ ವಯಸ್ಕರಲ್ಲಿ ಹಾಗೂ ಅಧಿಕ ಸಂಖ್ಯೆಯ ಸ್ವಯಂ ಸೇವಕರಲ್ಲಿ ಮುಂದುವರಿಸಲಾಗುತ್ತದೆ.

ಲಸಿಕೆಯ ಒಟ್ಟುಅಗತ್ಯ ಎಷ್ಟು?

130 ಕೋಟಿ ಜನಸಂಖ್ಯೆ ಇರುವ ನಮ್ಮ ದೇಶದಲ್ಲಿ ಎಲ್ಲರಿಗೂ 2 ಕೋವಿಡ್ ಲಸಿಕೆ ನೀಡಬೇಕಾದರೆ ಬೇಕಾಗುವ ಲಸಿಕೆಯ ಡೋಸಿನ ಸಂಖ್ಯೆ 260 ಕೋಟಿ. ಹಾಗೂ ಸಾಗಾಟದಲ್ಲಿ ಕಾಪಾಡುವಿಕೆಯಲ್ಲಿ, ವ್ಯಕ್ತಿಗಳಿಗೆ ನೀಡುವಾಗ ಸಹಜವಾಗಿಯೇ ವ್ಯರ್ಥವಾಗುವ ಸಂಖ್ಯೆಯನ್ನು ಸೇರಿಸಿದರೆ ಬೇಕಾಗುವ ಲಸಿಕೆ ಸಾಧಾರಣ 275 ಕೋಟಿ.

ಯಾವುದೇ ದೇಶದಲ್ಲಿ ಯಾವುದೇ ಕಾಲ ಸಂದರ್ಭದಲ್ಲಿ ಪ್ರತಿಶತ 100 ಲಸಿಕಾ ಪ್ರಯೋಗ ಕಷ್ಟಸಾಧ್ಯ. ಯಾವುದೇ ಸಾಂಕ್ರಾಮಿಕ ರೋಗತಡೆಗಟ್ಟುವ ಕ್ರಮಗಳೆಂದರೆ – ಸೊಂಕು ಹರಡುವ ಸರಪಳಿಯನ್ನು ತುಂಡರಿಸಿ ಸೋಂಕು ಹರಡುವ ಪ್ರಮಾಣವನ್ನು ಕಡಿತಗೊಳಿಸುವುದು ಮತ್ತು ಸೋಂಕು ತಗಲಿದವರಲ್ಲಿ ರೋಗಗಂಭೀರ ಸ್ಥಿತಿಗೆ ತಲಪಿ ಅಧಿಕ ನೋವು, ಸಾವು ಸಂಭವಿಸುವುದನ್ನು ತಡೆಗಟ್ಟುವುದು. ಹೀಗೆ ಈ ಸೋಂಕಿನಿಂದಾಗಿ ಸಮಾಜದಲ್ಲಿ ಜನರ ಸಹಜ ಜೀವನದಲ್ಲಿ ಕುಂದುಂಟಾಗದಂತೆ ಜಾಗ್ರತೆ ವಹಿಸುವುದು. ಇದನ್ನು ಸಾಧಿಸಲು ಸಮಾಜದಲ್ಲಿ ಅಧಿಕ ಪ್ರಮಾಣದ ಜನರಿಗೆ ಉತ್ತಮ ಲಸಿಕೆ ನೀಡಿ ಅವರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಬರುವಂತೆ ನೋಡಿಕೊಳ್ಳುವುದು ಅಗತ್ಯ. ಆದರೆ ಇದಕ್ಕಾಗಿ ಪ್ರತಿಶತ ನೂರುಜನರಿಗೆ ಲಸಿಕೆ ನೀಡುವಅಗತ್ಯವಿಲ್ಲ. ಅಂದರೆ ನಮಗೆ ಸಾಧಾರಣ 200 ಕೋಟಿ ಸಂಖ್ಯೆಯ ಲಸಿಕೆಗಳಾದರೂ ಬೇಕಾಗಬಹುದು.

ಸದ್ಯಕ್ಕೆಲಭ್ಯವಾಗಬಹುದಾದ ಲಸಿಕೆ ಎಷ್ಟು?

ಪೂನಾದಸೀರಂ ಇನ್ಸ್ಟಿಟ್ಯೂಟ್ (ಎಸ್.ಐ.ಐ) ನ 4 ಕೋಟಿ ಕೋವಿಶೀಲ್ಡ್ ಲಸಿಕೆ ಲಭ್ಯವಿದೆ. ಆದರೆ ಜನಸಾಮಾನ್ಯರ ಉಪಯೋಗಕ್ಕಾಗಿ ತುರ್ತು ಅನುಮತಿಗೆ ಕಾಯುತ್ತಿದೆ. ಮುಂದಿನ ವರ್ಷದ ಫೆಬ್ರವರಿ ತಿಂಗಳೊಳಗೆ ಪ್ರತೀ ತಿಂಗಳೂ 5 ರಿಂದ 10 ಕೋಟಿ ಲಸಿಕೆ ತಯಾರಿಸುವ ಭರವಸೆ ನೀಡಿದೆ. ಅಂದರೆ ಮುಂದಿನ ವರ್ಷದೊಳಗೆ 75 ರಿಂದ 80 ಕೋಟಿ ಲಸಿಕೆ ಸರಬರಾಜು ಮಾಡಬಹುದು. ಆದರೆ ಅದರಲ್ಲಿ ನಮ್ಮ ದೇಶದ ಪಾಲೆಷ್ಟು, ಬೇರೆ ದೇಶಕ್ಕೆ ರಫ್ತಾಗುವ ಪ್ರಮಾಣವೆಷ್ಟು?

ಇನ್ನು ಲಸಿಕಾ ತಯಾರಿಕೆ ಫಲಪ್ರದವಾದರೆ ‘ಭಾರತ್ ಬಯೋಟೆಕ್’ ಹಾಗೂ ‘ಕ್ಯಾಡಿಲ್ಲಾ’ ಕಂಪೆನಿಗಳು ಮುಂದಿನ ವರ್ಷದೊಳಗೆ 50 ಕೋಟಿ ಲಸಿಕೆ ಪೂರೈಸುವುದಾಗಿ ಹೇಳಿದೆ.

ಇತ್ತೀಚೆಗೆ ದೊರೆತ ಮಾಹಿತಿಯಂತೆ ರಷ್ಯ 10 ಕೋಟಿ ಹೈದಾರಬಾದಿನ್ ’ಹೆಟೆರೋ ಲ್ಯಾಬೊರೇಟರಿಗೆ’ ಮುಂದಿನ ವರ್ಷದಲ್ಲಿ ಹತ್ತುಕೋಟಿ ತನ್ನ ಸ್ಪುಟ್ನಿಕ್ ವಿವ್ಯಾಕ್ಸೀನ್‌ ತಯಾರಿಕೆಗೆ ಅನುಮತಿ ನೀಡಿದೆ. ಹಾಗೂ ಈಗಾಗಲೆ ತನ್ನ ಸ್ಪುಟ್ನಿಕ್ ವಿ ಲಸಿಕೆಯ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ಹಾಗೂ 10 ಕೋಟಿ ಲಸಿಕೆ ತಯಾರಿಸಲು ಭಾರತದಲ್ಲಿ ಮಾರಲುರೆಡ್ಡೀಸ್ ಲ್ಯಾಬ್‌ಗೆ ಅನುಮತಿ ನೀಡಿದೆ. ಅದುತನ್ನ ಲಸಿಕೆ 95% ಸಾಮರ್ಥ್ಯ ಹೊಂದಿರುವುದಾಗಿಯೂ ಪ್ರತೀ ಲಸಿಕೆಗೆ 10 ಡಾಲರ್ ಬೆಲೆಯಲ್ಲಿ ಮಾರುವುದಾಗಿಯೂ ಹೇಳಿಕೊಂಡಿದೆ. ಲಸಿಕೆಯ ತಯಾರಿಯ ಜೊತೆಗೆ ಈ ಲಸಿಕೆಗಳನ್ನು ತುಂಬಿಡುವ ಬಾಟ್ಲಿಗಳು, ಬಾಟ್ಲಿ ಮುಚ್ಚುವ ರಬ್ಬರ್ ಮುಚ್ಚಳ, ಆ ಮುಚ್ಚಳವನ್ನು ಭದ್ರವಾಗಿಡಲು ಅಲ್ಯುಮಿನಿಯಂ ಹಾಳೆಯ ಕವಚ ಹಾಗೂ ಬಾಟ್ಲಿಯ ಉಷ್ಣಾಂಶ ಸೂಚಿಸುವ ‘ವ್ಯಾಕ್ಸೀನ್ ವಯಲ್‌ಮೊನಿಟರ್ ಲೇಬಲ್‌ಗಳೂ ಸಾಕಷ್ಟು ಲಭ್ಯವಿರುವುದು ಅಗತ್ಯ.

 ಭಾಗ-1 ದೇಹ ರಕ್ಷಣಾ ವ್ಯೂಹ ಮತ್ತು ಲಸಿಕೆಯ ವಿಜ್ಞಾನ  

ಇದನ್ನು ಓದಿ : ಕೋವಿಡ್-19 ಲಸಿಕೆಯ ಸುತ್ತ ಪ್ರಶ್ನೆಗಳ ಹುತ್ತ ಏಕೆ? ಏನು? ಎಷ್ಟು? ಯಾವಾಗ? ಹೇಗೆ? ಭಾಗ-1 ದೇಹ ರಕ್ಷಣಾ ವ್ಯೂಹ ಮತ್ತು ಲಸಿಕೆಯ ವಿಜ್ಞಾನ

Donate Janashakthi Media

Leave a Reply

Your email address will not be published. Required fields are marked *