“ಕಡಲತೀರದ ಭಾರ್ಗವ’, ನಡೆದಾಡುವ ವಿಶ್ವಕೋಶ ಎಂದೇ ಖ್ಯಾತಿಯನ್ನು ಪಡೆದ ಡಾ. ಶಿವರಾಮ ಕಾರಂತರು ಉಡುಪಿ ಜಿಲ್ಲೆಯ ಕೋಟ ಎಂಬಲ್ಲಿ ಅಕ್ಟೋಬರ್ 10, 1902ರಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮೀ ಕಾರಂತರು.
ಬಹುಮುಖಿ ಪ್ರತಿಭೆಯುಳ್ಳ ಕಾರಂತರು ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಲೇಖಕರಾಗಿ ಕಾದಂಬರಿಗಳು, ಕವನ ಸಂಕಲನಗಳು, ಚಲನಚಿತ್ರ ಕಾದಂಬರಿಗಳು, ನಾಟಕ, ಸಣ್ಣ ಕತೆ, ಹರಟೆ/ವಿಡಂಬನೆ, ವೈಜ್ಷಾನಿಕ, ಪ್ರವಾಸ ಕಥನ, ಆತ್ಮ ಕಥನ, ಜೀವನ ಚರಿತ್ರೆ, ಕಲಾಪ್ರಬಂಧ, ಸಂಪಾದನೆ, ವಿಶ್ವಕೋಶ, ಅನುವಾದ, ಮಕ್ಕಳ ಪುಸ್ತಕ, ನಿಘಂಟು, ಶೈಕ್ಷಣಿಕ ಕೃತಿಗಳು ಸೇರಿದಂತೆ ಆಂಗ್ಲ ಭಾಷೆಯ ಸಾಹಿತ್ಯಗಳನ್ನು ರಚಿಸಿದ್ದಾರೆ.
ಇವರ ವೈವಿದ್ಯಮಯ್ಯ ಕೃತಿಗಳಲ್ಲಿ “ಮೂಕಜ್ಜಿಯ ಕನಸುಗಳು” ಈ ಕೃತಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ಲಭಿಸಿದೆ. “ಅಧ್ಭುತ ಜಗತ್ತು” “ಮತ್ತು ಬಾಲ ಪ್ರಪಂಚ” ಮಕ್ಕಳಿಗಾಗಿ ಪರಿಚಯಿಸಿದ ಜ್ಞಾನಕೋಶಗಳಾಗಿವೆ.
ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವ ಜೊತೆಗೆ ಯಕ್ಷಗಾನ ಸಾಮಾಜಿಕ ಸಕ್ರಿಯರಾಗಿದ್ದ ಇವರು ಯಕ್ಷಗಾನದಲ್ಲಿ ಪರಿಣಿತಿ ಹೊಂದಿದ್ದ ಇವರು ತಮ್ಮದೆಯಾದ ಅಚ್ಚಳಿಯದ ಚಾಪನ್ನು ಮೂಡಿಸಿದ್ದಾರೆ.
ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆಯದಿದ್ದರೂ, ಇವರ ಸಾಹಿತ್ಯ ಕೊಡುಗೆ ಅಪಾರವಾದುದು.ಜ್ಞಾನಪೀಠ, ಪದ್ಮಭೂಷಣ, ಪಂಪಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳು ಇವರಿಗೆ ಪುರಸ್ಕರಿಸಿವೆ.