ಕೊಪ್ಪಳ: ಅಮಿತ್ ಶಾ ಸಂಸತ್ ನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರ ಕುರಿತು ಅವಮಾನಕಾರ ಹೇಳಿಕೆ ನೀಡಿರುವುದನ್ನು ಖಂಡಿಸಿ ಮತ್ತು ಅಮಿತ್ ಶಾ ರಾಜೀನಾಮೆಗೆ ಆಗ್ರಹಿಸಿ ದಲಿತ ಸಂಘಟನೆಗಳು ಹಾಗೂ ಪ್ರಗತಿಪರ ಸಂಘಟನೆಗಳು ಇಂದು ಕೊಪ್ಪಳ ಬಂದ್ ಕರೆ ನೀಡಿದ್ದು, ಪೂರಕ ಸ್ಪಂದನ ವ್ಯಕ್ತವಾಗಿದೆ.
ಕೊಪ್ಪಳದಲ್ಲಿ ಎಲ್ಲಾ ಅಂಗಡಿ ಮುಂಗಟ್ಟುಗಳು ಬೆಳಗ್ಗೆಯಿಂದಲೇ ಸ್ವಯಂಪ್ರೇರಿತವಾಗಿ ಮುಚ್ಚಿವೆ. ಬಂದ್ ಕರೆಯ ಹಿನ್ನೆಲೆಯಲ್ಲಿ ಈಗಾಗಲೇ ನಗರದ ಎಲ್ಲಾ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ದಲಿತ ಮುಖಂಡರು ಸೇರಿ ಬೈಕ್ ರ್ಯಾಲಿ ನಡೆಸಿ ತೆರೆದಿರುವ ಅಂಗಡಿಗಳನ್ನು ಮುಚ್ಚಿಸಿದರು.
ಇದನ್ನೂ ಓದಿ: ಸಚಿವ ಕುಮಾರಸ್ವಾಮಿ ಆರೋಪ ಗಾಳಿಲಿ ಗುಂಡು ಹಾರಿಸಿದಂತಿದೆ: ಸಿಎಂ ಸಿದ್ದರಾಮಯ್ಯ
ಕೊಪ್ಪಳ ಬಂದ್ ನಿಂದ ಬಸ್ ಸಂಚಾರ ಸಂಪೂರ್ಣ ಅಸ್ತ ವ್ಯಸ್ತ ವಾಗಿದ್ದು, ಇದರ ಜೊತೆ ನಗರದಲ್ಲಿ ಆಟೋ ಸಂಚಾರ ಕೂಡ ಸ್ತಬ್ಬ ವಾಗಿದ್ದು, ಬಂದ್ ಬಗ್ಗೆ ತಿಳಿಯದೆ ನಗರಕ್ಕೆ ಆಗಮಿಸಿದ ಜನರು ಮತ್ತು ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ಉಂಟಾಗಿದೆ. ನಗರದೆಲ್ಲೆಡೆ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಇದನ್ನೂ ನೋಡಿ: ಅಕ್ಷರದವ್ವ ಸಾವಿತ್ರಿಬಾಯಿ ಫುಲೆ | ಮಂಜುಳಾ ಹುಲಿಕುಂಟೆ Janashakthi Media