ಕೊಪ್ಪಳ: ಜಿಲ್ಲೆಯ ಗಂಗಾವತಿಯಿಂದ ಗುಜರಾತ್‍ಗೆ ಅನಧಿಕೃತವಾಗಿ ಸಾಗಣೆ ಆಗುತ್ತಿದ್ದ ಪಡಿತರ ಅಕ್ಕಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕುಷ್ಟಗಿ ತಾಲೂಕಿನ ವಣಗೇರಿ ಬಳಿಯ ಟೋಲ್ ಪ್ಲಾಜಾ ಬಳಿ, ಆಹಾರ ಇಲಾಖೆ ನಿರೀಕ್ಷಕ ನಿತೀನ್ ಅಗ್ನಿ ನೇತ್ರತ್ವದಲ್ಲಿ ದಾಳಿ ಮಾಡಿ, ಅಕ್ಕಿ ಸಮೇತ ಲಾರಿ ವಶಕ್ಕೆ ಪಡೆಯಲಾಗಿದೆ. ಲಾರಿ ಚಾಲಕ ಮದನಲಾಲ್ ಹಾಗೂ ಗಂಗಾವತಿಯ ಅಭಿಜಿತ್ ಟ್ರೇಡರ್ ವಿರುದ್ಧ ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗಂಗಾವತಿಯಿಂದ ಕುಷ್ಟಗಿ ಮೂಲಕ ಗುಜರಾತ್ ಗೆ ಅಕ್ರಮವಾಗಿ ಸಾಗಿಸುತ್ತಿದ್ದ 340 ಕ್ವಿಂಟಲ್ ಅನ್ನಭಾಗ್ಯ ಅಕ್ಕಿ ಯ ಲಾರಿಯನ್ನು ಹೆದ್ದಾರಿ ವಣಗೇರಾ ಟೋಲ್ ಪ್ಲಾಜಾ ಬಳಿ ಕುಷ್ಟಗಿಯ ಅಹಾರ ಇಲಾಖೆ ವಶಕ್ಕೆ ತೆಗೆದುಕೊಂಡಿದೆ.
ಗಂಗಾವತಿಯ ಅಭಿಜಿತ್ ಟ್ರೇಡರ್ಸ ನಿಂದ ಗುಜರಾತ್ ಜಟಿಲಪುರ ವಿನಲ್ ರೈಸ್ ಮಿಲ್ ಗೆ RJ-GA-118 ಲಾರಿಯಲ್ಲಿ 50 ಕೆ.ಜಿಯ 680 ಬ್ಯಾಗ್ ನಲ್ಲಿ 340 ಕ್ವಿಂಟಲ್ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು. ಪ್ರತಿ ಕ್ವಿಂಟಲ್ ಗೆ 2,383 ರೂ ನಂತೆ 8,10,220 ರೂ.ಅಂದಾಜು ಮೊತ್ತದ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸಲಾಗುತ್ತಿತ್ತು.
ಈ ಕುರಿತು ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದು, ತನಿಖೆ ಮುಂದುವರಿಸಿದ್ದಾರೆ. ದೂರದ ಗುಜರಾತ್ ಗೆ ಗಂಗಾವತಿಯಲ್ಲಿ ಪಡಿತರ ಅಕ್ಕಿಯನ್ನು ಸಾಗಿಸಲು ಸಾಧ್ಯವಾಗಿದ್ದು ಹೇಗೆ? ಇದೇ ರೀತಿ ಹಲವು ಬಾರಿ ನಡೆದಿರುವ ಸಾಧ್ಯತೆಗಳಿವೆ. ಟೋಲ್ ನಲ್ಲಿ ಅಥವಾ ಇತರೆ ಪ್ರದೇಶದಲ್ಲಿ ಈ ಲಾರಿಗಳನ್ನು ಯಾರೂ ಪರೀಕ್ಷಿಸುವುದಿಲ್ಲವೆ? ಇದರ ಹಿಂದೆ ರಾಜಕಾರಣಿಗಳ ಪ್ರಭಾವ ಜೋರಾಗಿ ಇದ್ದಂತೆ ಕಾಣುತ್ತಿದೆ. ತನಿಖೆಯಿಂದಷ್ಟೆ ಮಾಹಿತಿಗಳು ಹೊರ ಬೀಳಲಿವೆ.