ಕೊಡಗು | ಪ್ರವಾಸಿಗರ ಮೇಲೆ ಹಲ್ಲೆ! ಬಿಜೆಪಿ ಮುಖಂಡನ ಅಬ್ಬರಕ್ಕೆ ತತ್ತರಿಸಿದ ಪ್ರವಾಸಿ ಕುಟುಂಬ

ಕೊಡಗು: ಪ್ರವಾಸಕ್ಕೆಂದು ಬೆಂಗಳೂರಿನಿಂದ ಕೊಡಗಿಗೆ ಹೋಗಿದ್ದ ಕುಟುಂಬವೊಂದರ ಮೇಲೆ ಪ್ರಭಾವಿ ಬಿಜೆಪಿ ನಾಯಕ ಮತ್ತು ಮಾಜಿ ಶಾಸಕ ಕೆ.ಜಿ.ಬೋಪಯ್ಯ ನವರ ಪರಮಾಪ್ತ ಮನು ಮುತ್ತಪ್ಪ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೋ ರೆಕಾರ್ಡ್ ಮಾಡಿಕೊಂಡಿರುವ ಪ್ರವಾಸಿಗರು ಸಾಕ್ಷಿ ಸಹಿತ ದೂರು ನೀಡಿದ್ದಾರೆ. ಕೊಡಗು

ಬಿಜೆಪಿ ಮುಖಂಡ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಒಡೆತನದ Sky larc ರೆಸಾರ್ಟ್ ನಲ್ಲಿ ಈ ಘಟನೆ ನಡೆದಿದೆ. ಬೆಂಗಳೂರಿನ ವಿನಲ್ ಜೈನ್, ಇತರ ಮೂವರು ದಂಪತಿಗಳು ಮತ್ತು ಐವರು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾರೆ.

ಸಂತ್ರಸ್ತರು ವೀಡಿಯೋ ಚಿತ್ರಣ ಸಮೇತ ಮನು ಮುತ್ತಪ್ಪ ಅವರ ಮೇಲೆ ಪೋಲೀಸ್ ವರಿಷ್ಠಾಧಿಕಾರಿಗಳು ಮತ್ತು ಉನ್ನತ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ದೈಹಿಕ ಹಲ್ಲೆ,ಕೊಲೆ ಬೆದರಿಕೆ ಮತ್ತು ಮಕ್ಕಳನ್ನು ಅಪಾಯಕ್ಕೆ ಒಳಪಡಿಸಿದ ಸೆಕ್ಷನ್ ನಡಿಯಲ್ಲಿ ದೂರು ದಾಖಲಾಗಿದೆ. ಇದೀಗ ಮನುಮುತ್ತಪ್ಪ ವಿರುದ್ದ FIR ಮತ್ತು ಬಂಧನದ ಸಾಧ್ಯತೆ ಇದೆ.

ಇದನ್ನೂ ಓದಿಕೊಡಗು ಭೀಕರ ಕೊಲೆ – ಅಖಿಲ ಭಾರತ ಜನವಾದಿ‌ ಮಹಿಳಾ ಸಂಘಟನೆ ಖಂಡಿನೆ

ಘಟನೆ ಕುರಿತು ಕೊಡಗಿನ ಜನರು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೊಡಗು ಸುರಕ್ಷಿತ ಪ್ರದೇಶವಲ್ಲ ಎಂಬ ಸಂದೇಶ ಹರಿದಾಡುತ್ತಿದೆ. ನಿಯಮಗಳನ್ನು ಮೀರಿ ರೆಸಾರ್ಟ್ ನಿರ್ಮಿಸಲಾಗಿದೆ ಎಂದು ಹಲವರ ಆರೋಪ ಮಾಡಿದ್ದಾರೆ.

ಪ್ರಕೃತಿ ಸೊಬಗನ್ನ ಕಣ್ತುಂಬಿಕೊಳ್ಳಲು ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುತ್ತಾರೆ. ಅದರಂತೆ ಕೊಡಗಿನ ಪ್ರಕೃತಿ ಸೌಂದರ್ಯ ಸವಿಯಲು ಹೋಗಿದ್ದ ಪ್ರವಾಸಿಗರ ಮೇಲೆ‌ ದುಷ್ಕರ್ಮಿಗಳು ಈ ರೀತಿ ಹಲ್ಲೆ ನಡೆಸುತ್ತಿರುವುದು ಇದು ಮೊದಲ ಸಲವೇನಲ್ಲ, ಜೂನ್‌ ತಿಂಗಳಲ್ಲೂ ಇಂತಹದ್ದೆ ಘಟನೆ ನಡೆದಿತ್ತು. ಪ್ರವಾಸಿಗರಿಗೆ ಸೂಕ್ತ ರಕ್ಷಣೆ, ಭದ್ರತೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಮಾಡಬೇಕಿದೆ.

ಈ ವಿಡಿಯೋ ನೋಡಿ : ಕೊಡಗು : ಹಾಡಿ ಜನರಿಗೆ ಬದುಕಿನ ಗ್ಯಾರಂಟಿ ಬೇಕಿದೆ

Donate Janashakthi Media

Leave a Reply

Your email address will not be published. Required fields are marked *