ಸಾರ್ವಜನಿಕ ಬಸ್‌ನಲ್ಲಿ ಜೋರಾಗಿ ಹಾಡು ಹಾಕಿದ್ರೆ ಬೀಳುತ್ತೆ ಕೇಸ್‌! ಹೊಸ ಸುತ್ತೋಲೆಯಲ್ಲಿ ಏನಿದೆ?

ಬೆಂಗಳೂರು : ಇನ್ನು ಮುಂದೆ ಸಾರ್ವಜನಿಕ ಬಸ್ ಗಳಲ್ಲಿ  ಪ್ರಯಾಣಿಸುವಾಗ ಜೋರಾಗಿ ಹಾಡು ಹಾಕಿದ್ರೆ, ವಿಡಿಯೊ ಹಾಕಿದ್ರೆ ಕೇಸು ಬೀಳಲಿದೆ. ಕೇವಲ ಹಾಡು ಮಾತ್ರವಲ್ಲದೆ ಮೊಬೈಲ್ ನಲ್ಲಿ ಲೌಡ್ ಸ್ಪೀಕರ್ ಇಟ್ಟು ಏನೇ ಮಾಡಿದ್ರು ಇನ್ನು ಮುಂದೆ ಅದು ದಂಡನಾರ್ಹ ಅಪರಾಧ ಅನ್ನಿಸಿಕೊಳ್ಳಲಿದೆ.

ಹೌದು ಇಂತಹದ್ದೊಂದು ಕ್ರಮಕ್ಕೆ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ಹೊಸ ನಿಯಮವೊಂದನ್ನು ಜಾರಿ ಮಾಡಿದೆ. ಬಸ್ ಪ್ರಯಾಣದ ವೇಳೆ ಹಾಡು ಕೇಳುವ ಅಭ್ಯಾಸ ಬಹು ಜನಕ್ಕೆ ಇರುತ್ತದೆ. ಇಯರ್ ಫೋನ್ ಅಥವಾ ಹೆಡ್ ಪೋನ್ ಹಾಕಿಕೊಂಡು ಹಾಡಿ ಕೇಳಿದರೆ ಯಾರಿಗೂ ಬೇಜಾರಿಲ್ಲ ಆದರೆ ಕೆಲವರು ಜೋರಾಗಿ ಕೇಳುವಂತೆ ಲೌಡ್ ಸ್ಪೀಕರ್ ಅಲ್ಲಿ ಹಾಡು ಹಾಕುತ್ತಾರೆ. ಇದು ಬಸ್ ನಲ್ಲಿರುವ ಇತರೆ ಪ್ರಯಾಣಿಕರಿಗೆ ಕಿರಿ ಉಂಟು ಮಾಡುತ್ತದೆ. ಬಸ್ ಪ್ರಯಾಣ ಅಂದ್ರೆ ಒಂದು ನಿರ್ಧಿಷ್ಟ ಸ್ಥಳದಲ್ಲಿ ಸುಮಾರು 50ಕ್ಕೂ ಹೆಚ್ಚು ಜನರು ಕುಳಿತಿರುತ್ತಾರೆ, ಮಕ್ಜಳು, ಹಿರಿಯರು, ವೃದ್ಧರು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲ ವರ್ಗದ ಪ್ರಯಾಣಿಕರು ಇರುತ್ತಾರೆ, ಆದ್ರೆ ಯಾರೋ ಓರ್ವ ಪ್ರಯಾಣಿಕ ಮೊಬೈಲ್ ಜೋರಾಗಿ ಶಬ್ಧ ಮಾಡಿಕೊಂಡು ಹಾಡು ಕೇಳೋದು ಮತ್ತೊಬ್ಬರಿಗೆ ಅಹಿತಕರವಾಗಿರುತ್ತದೆ.

ಈ ಹಿನ್ನೆಲೆ ಪ್ರಯಾಣಿಕರ ಹಿತ ಕಾಪಾಡುವ ನಿಟ್ಟಿನಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಮುಂದಾಗಿದೆ.  ಕರ್ನಾಟಕ ಮೋಟಾರು ವಾಹನಗಳ ಕಾಯ್ದೆ 1989ರ ನಿಯಮ 94(1)V ಪ್ರಕಾರ, ಬಸ್ ನಲ್ಲಿ ಜೋರಾಗಿ ಹಾಡು ಕೇಳುವುದು ಕಾನೂನು ಬಾಹಿರವಾಗಿದೆ. ಬಸ್ ಗಳಲ್ಲಿ ಜೋರಾಗಿ ಶಬ್ದ ಉಂಟು ಮಾಡಿ ಮೊಬೈಲ್ ಬಳಸುವುದಕ್ಕೆ ಸಂಪೂರ್ಣ ನಿರ್ಬಂಧ ಹಾಕಲಾಗಿದೆ.

ಒಂದು ವೇಳೆ ಹಾಕಿದರೆ ಮೊದಲು ಬಸ್ ನಿರ್ವಾಹಕ ಪ್ರಯಾಣಿಕನಲ್ಲಿ ಮನವಿ ಮಾಡಿಕೊಳ್ಳಬೇಕು. ಮನವಿ ಕಡೆಗಣಿಸಿದರೆ ಬಸ್ ಅರ್ಧಕ್ಕೆ ನಿಲ್ಲಿಸಿ ಪ್ರಯಾಣಿಕರನ್ನು ಅಲ್ಲೇ ಇಳಿಸಿ ಮುಂದುವರೆಯಬೇಕು. ಈ ಬಗ್ಗೆ ಏನಾದರು ಸಮಸ್ಯೆಗಳು ಎದುರಾದರೆ ತಕ್ಷಣವೇ ಸ್ಥಳೀಯ ಪೊಲೀಸ್ ಠಾಣೆಗೆ ವಿಷಯ ತಿಳಿಸಬೇಕು ಎಂದು ತಿಳಿಸಲಾಗಿದೆ.

ಜೋರಾಗಿ ಹಾಡು ಕೇಳುವದರಿಂದ ಶಬ್ಧ ಮಾಲಿನ್ಯ ಉಂಟಾಗುವುದಲ್ಲೆ ಸಹ ಪ್ರಯಾಣಿಕರಿಗೂ ಕಿರಿಕಿರಿ ಉಂಟಾಗುತ್ತದೆ. ಹೀಗಾಗಿ KKRTC ನಿನ್ನೆ ಈ ಬಗ್ಗೆ ಸುತ್ತೋಲೆ ಹೊರಡಿಸಿ ಆದೇಶಿಸಿದೆ. ಈ ಆದೇಶದ ಬಗ್ಗೆ ಪರ ವಿರೋಧದ ಚರ್ಚೆಗಳು ಕೇಳಿ ಬರುತ್ತಿವೆ. ನಿಗಮದ ಕ್ರಮವನ್ನು ಬಹಳಷ್ಟು ಜನ ಸ್ವಾಗತಿಸಿದ್ದು, ಕೆಲವರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಇದನ್ನೂ ಓದಿ : ಮುಷ್ಕರ ಸಂದರ್ಭ ಕಾರ್ಮಿಕರ ಮೇಲೆ ಹೂಡಲಾದ ಪ್ರಕರಣಗಳು ಕೈಬಿಡುವಂತೆ ಸಾರಿಗೆ ನೌಕರರ ಆಗ್ರಹ

 

Donate Janashakthi Media

Leave a Reply

Your email address will not be published. Required fields are marked *