ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ : ಕಿಸಾನ್ ಸತ್ಯಾಗ್ರಹ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ

ಬೆಂಗಳೂರು : ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸದಲ್ಲಿ ದೆಹಲಿ ರೈತ ಹೋರಾಟದ ಕುರಿತ ‘ಕಿಸಾನ್ ಸತ್ಯಾಗ್ರಹ’ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ತಡೆ ಒಡ್ಡಿದೆ. ಕಿಸಾನ್ ಸತ್ಯಾಗ್ರಹ 

ಈ ಕುರಿತು ಸಾಕ್ಷ್ಯಚಿತ್ರ ನಿರ್ದೇಶಕ ಕೇಸರಿ ಹರವು, ಜನಶಕ್ತಿ ಮೀಡಿಯ ಜೊತೆ ಮಾತನಾಡುತ್ತಾ,  “ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯದಿಂದ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ನೀಡಲಾಗಿದೆ ಎಂದು ರಾಜ್ಯ ಸರ್ಕಾರದಿಂದ ಮಾಹಿತಿ ಬಂದಿದೆ. “ನಮ್ಮ ಸಾಕ್ಷ್ಯಚಿತ್ರದ ಜೊತೆಗೆ ಉಕ್ರೇನ್ ಮತ್ತು ಇಸ್ರೇಲ್‌ನ ಎರಡು ಸಿನಿಮಾಗಳ ಪ್ರದರ್ಶನಕ್ಕೆ ತಡೆ ಒಡ್ಡಲಾಗಿದೆ. ಅವುಗಳೂ ಕೂಡ ಯುದ್ಧಕ್ಕೆ ಸಂಬಂಧಿಸಿದ್ದಾಗಿವೆ” ಎಂದು ಹರವು ಹೇಳಿದ್ದಾರೆ.

ಸೆನ್ಸಾರ್ ಮಂಡಳಿಯ ಪ್ರಮಾಣ ಪತ್ರ ಪಡೆಯದ ಚಿತ್ರಗಳ ಪ್ರದರ್ಶನ ಚಲನಚಿತ್ರೋತ್ಸವದಲ್ಲಿ ಮಾಡುವಂತಿಲ್ಲ ಎಂಬ ನಿಯಮ ಇಲ್ಲ. ಆದರೆ, ಪ್ರಮಾಣ ಪತ್ರ ಪಡೆಯದ ಸಿನಿಮಾ, ಸಾಕ್ಷ್ಯಚಿತ್ರಗಳ ಪ್ರದರ್ಶನಕ್ಕೆ ಮುನ್ನ ಕೇಂದ್ರಕ್ಕೆ ಪಟ್ಟಿ ನೀಡಬೇಕಿದೆ. ಅದರಂತೆ ರಾಜ್ಯ ಸರ್ಕಾರ ಪಟ್ಟಿ ಕಳಿಸಿತ್ತು. ಪ್ರಮಾಣ ಪತ್ರ ಪಡೆದಿಲ್ಲ ಎಂಬ ಕಾರಣ ನೀಡಿ ಪ್ರದರ್ಶನಕ್ಕೆ ತಡೆ ನೀಡಿದ್ದಾರೆ ಎಂಬ ಮಾಹಿತಿ ದೊರೆತಿದೆ” ಇದು ತಾಂತ್ರಿಕ ಸಮಸ್ಯೆ ಅಷ್ಟೆ, ಸರ್ಕಾರದ ವಿರುದ್ಧ ಇರುವ ಕಾರಣಕ್ಕಾಗಿ ಕೇಂದ್ರ ಸರ್ಕಾರ ತಡೆ ಒಡ್ಡಿರಬಹುದು ಎಂದು ಕೇಸರಿ ಹರವು ತಿಳಿಸಿದರು.

ಕಳೆದ ವರ್ಷದ ಚಲನಚಿತ್ರೋತ್ಸವದಲ್ಲಿ ಈ ಸಾಕ್ಯಚಿತ್ರ ಪ್ರದರ್ಶನಗೋಳ್ಳಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರವಿದ್ದ ಕಾರಣ ಪಟ್ಟಿಯಲ್ಲಿ ಈ ಚಿತ್ರವನ್ನು ಸೇರಿಸಿರಲಿಲ್ಲ. ಈ ವರ್ಷ ಪ್ರದರ್ಶನವಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಈಗಲೂ ಕಡೆ ತಡೆ ಬಂದಿರುವುದು ಜನಪರ ಸಂಘಟನೆ ಹಾಗೂ ಸಿನಿ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ : ರಾಷ್ಟ್ರೀಯ ರೈತ ಚಳವಳಿಯನ್ನು ದಾಖಲಿಸುವ ಕೇಸರಿ ಹರವು ಅವರ ಸಾಕ್ಷ್ಯ ಚಿತ್ರಕ್ಕೆ ದೇಣಿಗೆಗೆ ಮನವಿ

ಸಾಕ್ಷ್ಯಚಿತ್ರದಲ್ಲಿ ಏನಿದೆ? 

‘ಕಿಸಾನ್‌ ಸತ್ಯಾಗ್ರಹ’ ದೇಶದಲ್ಲಿ ಇತ್ತೀಚೆಗೆ ನಡೆದ ಬೃಹತ್‌ ರೈತ ಹೋರಾಟವನ್ನು ದಾಖಲಿಸುವ ಕನ್ನಡ ಮತ್ತು ಆಂಗ್ಲಭಾಷೆಯ ಸಾಕ್ಷ್ಯಚಿತ್ರ. 90 ನಿಮಿಷ ಅವಧಿಯ ಈ ಚಿತ್ರದಲ್ಲಿ 2020ರ ನವೆಂಬರ್‌ 26ರಿಂದ ದೆಹಲಿಯಲ್ಲಿ ಪ್ರಾರಂಭವಾದ ರೈತ ಹೋರಾಟದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಕಿಸಾನ್ ಸತ್ಯಾಗ್ರಹ 

ಜೂ ನ್‌ 5, 2020–ಕೃಷಿ ಉತ್ಪನ್ನಗಳನ್ನು ಎಪಿಎಂಸಿ ಮಾರುಕಟ್ಟೆಯ ಹೊರಗೂ ಮಾರಾಟ ಮಾಡಲು ಅವಕಾಶ ನೀಡುವ, ಕೃಷಿಯಲ್ಲಿ ಕಾರ್ಪೊರೇಟ್ ಕಂಪನಿಗಳ ಹೂಡಿಕೆಗೂ ಅವಕಾಶ ನೀಡುವ ನೂತನ ಕೃಷಿ ನೀತಿಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದ ದಿನ. ಅಲ್ಲಿಂದಲೇ ದೇಶದಲ್ಲಿ ದೊಡ್ಡ ರೈತ ಹೋರಾಟದ ಕಿಡಿಯೊಂದು ಹೊತ್ತಿಕೊಂಡಿದ್ದು. 2020ರ ಸೆಪ್ಟೆಂಬರ್‌ನಲ್ಲಿ ಈ ಸುಗ್ರೀವಾಜ್ಞೆಗಳಿಗೆ ಸಂಸತ್ತಿನ ಅನುಮೋದನೆ ದೊರೆತು, ರಾಷ್ಟ್ರಪತಿಗಳ ಅಂಕಿತವೂ ಸಿಕ್ಕಿತು. ಈ ಕಾಯ್ದೆಗಳು ಕೃಷಿಗೆ, ರೈತರಿಗೆ ಮಾರಕ ಮತ್ತು ಕಾರ್ಪೊರೇಟ್‌ ಕಂಪನಿಗಳ ಪರವಾಗಿವೆ ಎಂದು ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಆದರೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈ ಯಾವ ಆಕ್ಷೇಪಕ್ಕೂ ತಲೆಕೆಡಿಸಿಕೊಳ್ಳದೇ ನೂತನ ಕೃಷಿ ನೀತಿ ಜಾರಿಗೆ ತರಲು ಹೆಜ್ಜೆ ಇಟ್ಟಿತು. ಇದರ ಪರಿಣಾಮವೇ ಬಳಿಕ ಪಂಜಾಬ್‌ನಿಂದ ಪ್ರಾರಂಭಿಸಿ ರಾಷ್ಟ್ರ ರಾಜಧಾನಿವರೆಗೆ ಹಬ್ಬಿದ ರೈತ ಹೋರಾಟ. ಇದರ ಹೆಜ್ಜೆಗುರುತನ್ನು ದಾಖಲಿಸುವ ಯತ್ನವೇ ಕೇಸರಿ ಹರವೂ ಅವರ ‘ಕಿಸಾನ್‌ ಸತ್ಯಾಗ್ರಹ’ ಸಾಕ್ಷ್ಯಚಿತ್ರ. ‘ಹಲವು ದಶಕಗಳಿಂದ ಪರಿಸರ ಮತ್ತು ಸುಸ್ಥಿರ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡು, ಅಧ್ಯಯನ ಮಾಡುತ್ತ ಬಂದಿರುವೆ. ನನ್ನ ಸುಸ್ಥಿರ ಕೃಷಿ ಮತ್ತು ಪರಿಸರದ ಅಧ್ಯಯನ ಭಾಗವಾಗಿ ಕೃಷಿ ಕಾಯ್ದೆಯ ವಿಷಯ ಗಮನ ಸೆಳೆಯಿತು. ಕಾಯ್ದೆ ಏನು ಹೇಳಲು ಹೊರಟಿದೆ? ಇದರ ಸಾಧಕ–ಬಾಧಕಗಳೇನು? ಎಂದು ಹುಡುಕುತ್ತ ಹೊರಟೆ. ಪಂಜಾಬ್‌ನಲ್ಲಿ ಒಂದಷ್ಟು ಸಂಘಟನೆಗಳು ಇದರ ಕುರಿತು ಜಾಗೃತವಾಗಿದ್ದು ಕಣ್ಣಿಗೆ ಬಿತ್ತು. ಅಲ್ಲಿನ 30–40 ಸಂಘಟನೆಗಳು ಒಟ್ಟಾಗಿ ಹೋರಾಡಲು ನಿರ್ಧರಿಸಿದವು. ಕಾಯ್ದೆ ಏನು ಹೇಳುತ್ತದೆ ಎಂಬುದನ್ನು ಪಂಜಾಬಿ ಭಾಷೆಗೆ ತರ್ಜುಮೆ ಮಾಡಿಕೊಂಡು, ಅಲ್ಲಿನ ರೈತ ಸಂಘಟನೆಗಳು ವಿಚಾರವನ್ನು ಪ್ರತಿ ಹಳ್ಳಿಗೂ ತೆಗೆದುಕೊಂಡು ಹೋದರು.

ಇಂತಹ ಮಹತ್ವದ ಹೋರಾಟವನ್ನು ದಾಖಲಿಸು ಆಲೋಚನೆಯನ್ನು ಮಾಡಿಕೊಂಡು, ‘ಕಿಸಾನ್‌ ಸತ್ಯಾಗ್ರಹ’ ದೇಶದಲ್ಲಿ ಇತ್ತೀಚೆಗೆ ನಡೆದ ಬೃಹತ್‌ ರೈತ ಹೋರಾಟವನ್ನು ದಾಖಲಿಸುವ ಕನ್ನಡ ಮತ್ತು ಆಂಗ್ಲಭಾಷೆಯ ಸಾಕ್ಷ್ಯಚಿತ್ರ. 90 ನಿಮಿಷ ಅವಧಿಯ ಈ ಚಿತ್ರದಲ್ಲಿ 2020ರ ನವೆಂಬರ್‌ 26ರಿಂದ ದೆಹಲಿಯಲ್ಲಿ ಪ್ರಾರಂಭವಾದ ರೈತ ಹೋರಾಟದ ದೃಶ್ಯಗಳನ್ನು ಸೆರೆಹಿಡಿಯಲಾಗಿದೆ. ಜತೆಗೆ ಕೃಷಿ ಕಾಯ್ದೆಯ ಸಾಧಕ–ಬಾಧಕಗಳನ್ನು ಅವಲೋಕಿಸುವ, ಈ ಬಗ್ಗೆ ರೈತರ ಪ್ರತಿಕ್ರಿಯೆ ಪಡೆಯುವ ಯತ್ನವಿದೆ. ದೃಶ್ಯಗಳಿಗೆ ಅಲ್ಲಲ್ಲಿ ವಾಯ್ಸ್‌ ಓವರ್‌ ಬಳಸಲಾಗಿದೆ. ನಿರೂಪಣೆ ಶೈಲಿಯ ಸಾಕ್ಷ್ಯಚಿತ್ರವಿದು. ‘ಬಿಜೆಪಿ ವಿರುದ್ಧದ ಅಥವಾ ಕಾಂಗ್ರೆಸ್‌ ಪರವಾದ ಸಾಕ್ಷ್ಯಚಿತ್ರ ಇದಲ್ಲ. ಕೃಷಿಯನ್ನು ಕಾರ್ಪೊರೇಟ್‌ ಜಗತ್ತಿನ ಕೈಗೆ ಕೊಡುವುದು ಅಪಾಯಕಾರಿ. ಯುಪಿಎ ಆಡಳಿತವಿದ್ದಾಗ ಈ ನಿಟ್ಟಿನಲ್ಲಿ ಮಾಡಿರುವ ತಪ್ಪನ್ನೂ ಇದರಲ್ಲಿ ಉಲ್ಲೇಖಿಸಲಾಗಿದೆ. ಮಾಜಿ ಪ್ರಧಾನಿ ದಿವಂಗತ ಪಿ.ವಿ.ನರಸಿಂಹರಾವ್‌ ಗ್ಯಾಟ್‌ ಒಪ್ಪಂದಕ್ಕೆ ಸಹಿ ಹಾಕಿದಾಗಲೇ ಕೃಷಿ ಕ್ಷೇತ್ರಕ್ಕೆ ದೊಡ್ಡ ಏಟು ಬಿದ್ದಿರುವುದನ್ನು ಹೇಳಲಾಗಿದೆ. ಸುಸ್ಥಿರ ಕೃಷಿ ಎಂದಿಗೂ ಪರಿಸರಕ್ಕೆ ಪೂರಕ. ಕೃಷಿ ಚಟುವಟಿಕೆ ಉದ್ಯಮವಾದರೆ ಭೂಮಿಯನ್ನು ಶೋಷಿಸಿ ವಹಿವಾಟು ನಡೆಸಿದಂತಾಗುತ್ತದೆ. ಗುತ್ತಿಗೆ ಆಧಾರಿತ ಕೃಷಿಯಲ್ಲಿ ರೈತ ಮಾಲೀಕನಾದರೂ, ಗುತ್ತಿಗೆ ನೀಡುವ ಕಂಪನಿ ಹೇಳಿದ ರೀತಿಯಲ್ಲೇ ಉತ್ತಬೇಕು. ಕಂಪನಿ ಹೇಳಿದ ಬೀಜವನ್ನೇ ಬಿತ್ತಬೇಕು. ನಾವು ಬೆಳೆಯುವ ಸ್ವಾತಂತ್ರ್ಯವನ್ನು ಕಳೆದುಕೊಳ್ಳುತ್ತೇವೆ. ರೈತರು ಹೋರಾಟವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸರಬಹುದು. ಆದರೆ ಕಾಯ್ದೆ ಹಿಂದಿನ ವಿಷಯ ಎಂದಿಗೂ ಪ್ರಸ್ತುತ ಮತ್ತು ಅಧ್ಯಯನಯೋಗ್ಯ. ಹೀಗಾಗಿ ಇಡೀ ಹೋರಾಟವನ್ನು ದಾಖಲಿಸಿದ ಸಾಕ್ಷ್ಯಚಿತ್ರ ಇದಾಗಿದೆ. ಕಿಸಾನ್ ಸತ್ಯಾಗ್ರಹ 

ವಿಡಿಯೋ ನೋಡಿ : ಕೆಂಪುಕೋಟೆಯ ಮೇಲೆ ಸಿಖ್ ಧ್ವಜ ಹಾರಿಸಿದ್ದು ಯಾರು?!ಗೋದಿ ಮೀಡಿಯಾಗಳೇಕೆ ದಾರಿ ತಪ್ಪಿಸುತ್ತಿವೆ?!

Donate Janashakthi Media

Leave a Reply

Your email address will not be published. Required fields are marked *