7 Minute Challenge ಸ್ಪರ್ಧೆಗೆ ಬಂದ ಕಿರುಚಿತ್ರಗಳ ಪ್ರದರ್ಶನ, ಪ್ರೇಕ್ಷಕ ಬಹುಮಾನ ಆಯ್ಕೆ

7 Minute Challenge : Super Short Film Contest ಎಂಬ ಕಿರುಚಿತ್ರ ಸ್ಪರ್ಧೆಗೆ ಬಂದ ಚಿತ್ರಗಳ ಪ್ರದರ್ಶನ ನವೆಂಬರ್ 14ರಂದು ಬೆಂಗಳೂರಿನಲ್ಲಿ ನಡೆಯಿತು. ಸ್ಪರ್ಧೆಯ ಮಾನದಂಡಗಳನ್ನು ಪಾಲಿಸಿದ 9 ಕಿರುಚಿತ್ರಗಳನ್ನು ಬಸವನಗುಡಿಯ ನ್ಯಾಶನಲ್ ಕಾಲೇಜಿನ ‘ಎಚ್.ಎನ್.ಮಲ್ಟಿಮೀಡಿಯಾ ಹಾಲ್ ನಲ್ಲಿ ಪ್ರದರ್ಶಿಸಲಾಯಿತು. ಕಿರುಚಿತ್ರದ ಅವಧಿ 7 ಮಿನಿಟು ಮೀರಬಾರದು ಎಂಬುದು ಮುಖ್ಯ ಮಾನದಂಡವಾಗಿತ್ತು. ಕಮರ್ಶಿಯಲ್ ಫಿಲಂ ನ ಅವಧಿ ಸಾಮಾನ್ಯವಾಗಿ 1.5ರಿಂದ 3 ಗಂಟೆ ಇರುವುದರಿಂದ 1 ಗಂಟೆಯ ವರೆಗಿನ ಅವಧಿಯ ಚಿತ್ರಗಳನ್ನೂ ಕಿರುಚಿತ್ರಗಳೆಂದು ಕರೆಯಲಾಗುತ್ತದೆ. ಹಾಗಾಗಿ ಈ ಕಿರುಚಿತ್ರ ಸ್ಪರ್ಧೆಯನ್ನು Super Short Film Contest ಎಂದು ಕರೆಯಲಾಗಿತ್ತು. ಈ ಕಿರುಚಿತ್ರ ಸ್ಪರ್ಧೆಯನ್ನು ಸಿಐಟಿಯು 17ನೆಯ ಅಖಿಲ ಭಾರತ ಸಮ್ಮೇಳನದ ಭಾಗವಾಗಿ ಅದರ ಸಾಂಸ್ಕೃತಿಕ ಸಮಿತಿ ಏರ್ಪಡಿಸಿತ್ತು.

ಇದನ್ನು ಓದಿ: ಜನಪರ ನೀತಿಗಳಿಗಾಗಿ ಆಗ್ರಹಿಸಿ ಕಾರ್ಮಿಕರ ಅಖಿಲ ಭಾರತ ಸಮ್ಮೇಳನ

ಸ್ಪರ್ಧಗೆ ಬಂದ ಚಿತ್ರಗಳ ನಿರ್ಮಾಣದಲ್ಲಿ ಭಾಗವಹಿಸಿದವರನ್ನು ಹೊರತು ಪಡಿಸಿ ಉಳಿದ ಪ್ರೇಕ್ಷಕರು ಪ್ರೇಕ್ಷಕ ಬಹುಮಾನಕ್ಕೆ ತಮ್ಮ ಆಯ್ಕೆಯನ್ನು ಗುಪ್ತಮತದಾನದ ಮೂಲಕ ಮಾಡಿದರು. ಕಿರುಚಿತ್ರಗಳಿಗೆ ಮೂರು ಬಹುಮಾನಗಳಿವೆ. ಮೊದಲ ಎರಡು ಬಹುಮಾನಗಳನ್ನು ಈ ಚಿತ್ರೋತ್ಸವದ ಜ್ಯೂರಿ ತಂಡ ನಿರ್ಧರಿಸುತ್ತದೆ. ಮೂರನೇಯ ಬಹುಮಾನವನ್ನು ಪ್ರೇಕ್ಷಕರ ಮತದಾನದ ಮೂಲಕ ನಿರ್ಧರಿಸಲಾಗುತ್ತದೆ.

ಸ್ಪರ್ಧೆಗೆ ಬಂದ ಕಿರುಚಿತ್ರಗಳಲ್ಲಿ  ವಿಷಯ, ಅಭಿವ್ಯಕ್ತಿಯಲ್ಲಿ ಭಾರೀ ವೈವಿಧ್ಯತೆಯಿತ್ತು. ಮಕ್ಕಳಿಂದ ಹಿಡಿದು ಪ್ರಾಯದವರೆಗಿನ ಮತ್ತು ಎಲ್ಲ ವರ್ಗಗಳ ಮಹಿಳೆಯರ ಮೇಲೆ ದೌರ್ಜನ್ಯ, ಅಭದ್ರತೆಯ ಸಮಸ್ಯೆಯಿಂದ ಹಿಡಿದು, ನ್ಯಾಯಪ್ರದಾನದಲ್ಲಿ ವಿಳಂಬ/ತಾರತಮ್ಯ, ನಿರುದ್ಯೋಗ, ವಲಸೆ ಹೋದ ಬಡವರ, ಬಡ ಕಾರ್ಮಿಕರ ಬದುಕಿನ ಅಭದ್ರತೆಯ ಸಮಸ್ಯೆ ಗಳ ಕುರಿತು ಅಭಿವ್ಯಕ್ತಿಯನ್ನು 7 ಮಿನಿಟುಗಳ ಒಳಗೆ ಮಾಡಬೇಕಾದ ‘ಚಲೇಂಜ್’ ಅನ್ನು ಈ ಕಿರುಚಿತ್ರಗಳು ಸಮರ್ಥವಾಗಿ ನಿಭಾಯಿಸಿದವು. ಕನ್ನಡ ಮತ್ತು ತಮಿಳಲ್ಲಿ ತಲಾ 4 ಮತ್ತು ತೆಲುಗು ನಲ್ಲಿ 1 ಕಿರುಚಿತ್ರಗಳು ಇದ್ದವು. ಸೆಂಕತೀರ್ (ಕೆಂಗಿರಣಗಳು), ‘ನಮ್ ಶೆಡ್ಡು ತಾತ್ಕಾಲಿಕ’, ಚಕ್ರವ್ಯೂಹ ವಿಶೇಷ ಗಮನ ಸೆಳೆದವು.

ಇದನ್ನು ಓದಿ: ಸಿಐಟಿಯು ಅಖಿಲ ಭಾರತ ಸಮ್ಮೇಳನ ಅಂಗವಾಗಿ ಕಲಾ ಜಾಥಾ, ಬಹುಭಾಷಾ ಕವಿಗೋಷ್ಟಿ, ಚಿತ್ರಕಲೆ ರಚನೆ-ಕಿರುಚಿತ್ರ ಸ್ಪರ್ಧೆ

ಚಿತ್ರಪ್ರದರ್ಶನದ ಮೊದಲು 7 Minute Challenge ಚಿತ್ರೋತ್ಸವದ ನಿರ್ದೇಶಕ ಮತ್ತು ಖ್ಯಾತ ಚಿತ್ರ ನಿರ್ದೇಶಕ ಕೇಸರಿ ಹರವು ಅವರು ಜ್ಯೂರಿ ತಂಡದ ಸದಸ್ಯರು ಮತ್ತು ಸ್ಪರ್ಧೆಯಲ್ಲಿ ಭಾಗವಹಿಸಿದ ಕಿರುಚಿತ್ರಗಳ ತಂಡದ (ನಿರ್ದೇಶಕರು, ಚಿತ್ರಗ್ರಾಹಕರು, ನಟ/ನಟಿಯರು ಇತ್ಯಾದಿ) ಸದಸ್ಯರನ್ನು ಪರಿಚಯಿಸಿ ಮಾತನಾಡಿದರು. ಸಮ್ಮೇಳನದ ಸಾಂಸ್ಕೃತಿಕ ಸಮಿತಿಯ ಸಂಚಾಲಕ ಮತ್ತು ಖ್ಯಾತ ರಂಗಕರ್ಮಿ ಸಿ.ಕೆ.ಗುಂಡಣ್ಣ ಅವರು ನಿರ್ವಹಣೆ ಮಾಡಿದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *