ಬೆಂಗಳೂರು: ಮಹಿಳೆಯೊಬ್ಬರ ಬರ್ಬರ ಹತ್ಯೆ ಮಾಡಿರುವಂತಹ ಘಟನೆ ಬೆಂಗಳೂರಿನಲ್ಲಿ ಪಿ.ಜಿಯೊಂದರಲ್ಲಿ ನಡೆದ ಬೆನ್ನಲ್ಲೇ ಬಿಬಿಎಂಪಿ ಎಚ್ಚೆತ್ತುಕೊಂಡಿದ್ದು, ಬೆಂಗಳೂರು ನಗರ ಪೊಲೀಸರು ಹಾಗೂ ಬಿಬಿಎಂಪಿ ಕೆಲವು ನಿರ್ದಿಷ್ಟ ನಿಯಮಗಳನ್ನು ಪ್ರಕಟಿಸಿದೆ. ಪಿಜಿ
ಬೆಂಗಳೂರಿನಲ್ಲಿ ಪಿಜಿಗಳ ಸಂಖ್ಯೆ ಹೆಚ್ಚಾಗಿದ್ದು, ಇದೀಗ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು ಪಿಜಿಗಳಿಗೆ ಶಾಕಿಂಗ್ ಸುದ್ದಿಯೊಂದನ್ನು ಕೊಟ್ಟಿದೆ. ಬೆಂಗಳೂರಿನಲ್ಲಿ ಪಾಲಿಕೆ ಪಿ.ಜಿಗಳ ಚೆಕ್ಕಿಂಗ್‌ಗೆ ಮಾಡ್ತಿದೆ. ಈ ರೀತಿ ಚೆಕ್ ಮಾಡುವಾಗ ಬಿಬಿಎಂಪಿಯ ಯಾವುದಾದರೂ ನಿಯಮ ಪಾಲನೆ ಮಾಡದೆ ಇದ್ದರೆ ಬಿಬಿಎಂಪಿ ಕ್ಲೋಸ್ ಮಾಡ್ತಿದೆ. ಹಾಗಾದರೆ ಬಿಬಿಎಂಪಿ ಪಿ.ಜಿಗಳಿಗೆ ನೀಡಿರುವ ಮಾರ್ಗಸೂಚಿಗಳು ಏನು ಎನ್ನುವ ವಿವರ ಇಲ್ಲಿದೆ.
ಬೆಂಗಳೂರಿನಲ್ಲಿ ಬಿಬಿಎಂಪಿಯು ಅಧಿಕೃತವಾಗಿ ಗುರುತಿಸಿರುವ ಸಾವಿರಕ್ಕೂ ಹೆಚ್ಚು ಪಿ.ಜಿಗಳು ಇವೆ. ಅದೇ ರೀತಿ ಅನಧಿಕೃತ ಪಿ.ಜಿಗಳು ಸಹ ಇವೆ. ಸುಖ ಸಂಸಾರಕ್ಕೆ 12 ಸೂತ್ರಗಳು ಎನ್ನುವಂತೆ ಬೆಂಗಳೂರಿನ ಪಿ.ಜಿಗಳಿಗೆ ಬಿಬಿಎಂಪಿಯು ಪ್ರಮುಖ 10 ಸೂತ್ರಗಳನ್ನು ಅಂದರೆ 10 ಮಾರ್ಗಸೂಚಿಗಳನ್ನು ಪ್ರಕಟಿಸಿದೆ. ಪಿ.ಜಿಗಳಿಗೆ ಬಿಬಿಎಂಪಿ ಹೇಳಿದ ಕಂಡಿಷನ್ಸ್ ಡೀಟೆಲ್ಸ್‌ಗಳು ಇಲ್ಲಿವೆ.
ಬೆಂಗಳೂರಿನ ಪಾಲಿಕೆ ವ್ಯಾಪ್ತಿಯಲ್ಲಿರುವ ಪೇಯಿಂಗ್ ಗೆಸ್ಟ್‌ಗಳಿಗೆ ಉದ್ದಿಮೆ ಪರವಾನಗಿ ಪಡೆದಿರುವ ಪಿ.ಜಿಗಳು ಪ್ರಮುಖ ನಿಯಮ ಪಾಲಿಸುವಂತೆ ಹೇಳಲಾಗಿದೆ.
ಇದನ್ನು ಓದಿ : ಬೈಕ್‌ಗೆ ಗುದ್ದಿ ಪರಾರಿಯಾಗಲು ಯತ್ನಿಸಿದ ಲಾರಿಚಾಲಕ: 70 ಕಿಮೀ ದೂರ ಬೆನ್ನಟ್ಟಿ ಹಿಡಿದು ಧರ್ಮದೇಟು ನೀಡಿದ ಗ್ರಾಮಸ್ಥರು
ಬಿಬಿಎಂಪಿ ತಂದಿರುವ ನಿಯಯಗಳು
- ಪಿ.ಜಿಗಳಲ್ಲಿ ಇರುವ ಪೇಯಿಂಗ್ ಗೆಸ್ಟ್‌ಗಳು ಬರುವುದು, ಹೋಗುವುದು ಹಾಗೂ ಪಿ.ಜಿ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕು. ಸಿ.ಸಿ ಟಿ.ವಿ ವೀಡಿಯೋ ಮತ್ತು ಫೋಟೇಜ್‌ಗಳನ್ನು 30 ದಿನಗಳ ಬ್ಯಾಕಪ್ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
- ಪಿ.ಜಿಗಳಲ್ಲಿ ವಾಸಿಸುವವರಿಗೆ ಕನಿಷ್ಠ ಜಾಗ ಬಿಡುತ್ತಿಲ್ಲ ಎನ್ನುವ ಆರೋಪ ಮೊದಲಿನಿಂದಲೂ ಇದೆ. ಈ ಬಗ್ಗೆಯೂ ಬಿಬಿಎಂಪಿ ಕೆಲವು ಇಂಟ್ರೆಕ್ಷನ್‌ಗಳನ್ನು ನೀಡಿದೆ. ವಾಸಯೋಗ್ಯ ಕಟ್ಟಡದ ನಿಯಮಗಳ ಪ್ರಕಾರ, ಪ್ರತಿಯೊಬ್ಬರಿಗೂ ತಲಾ 70 ಚದರ ಅಡಿಗಳಿಗಿಂತ ಕನಿಷ್ಠ ಜಾಗವನ್ನು ಬಿಟ್ಟರಬೇಕು ಎಂದಿ ಬಿಬಿಎಂಪಿ ಹೇಳಿದೆ. ಒಂದೇ ರೂಮ್‌ನಲ್ಲಿ ಹಲವರನ್ನು ಕುರಿಗಳಂತೆ ಕೂಡಿಹಾಕುವಂತಿಲ್ಲ. ಕಟ್ಟಡದಲ್ಲಿ ಎಷ್ಟು ಜನ ಇರಬೇಕೋ ಅಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು. ನಿಗದಿಗಿಂತ ಹೆಚ್ಚು ಜನ ಇದ್ದರೂ ನಿಯಮ ಉಲ್ಲಂಘನೆಯಗುತ್ತದೆ.
- ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸವಿರುವವರಿಗೆ ಸ್ವಚ್ಛವಾಗಿರುವ ಸ್ನಾನಗೃಹ (ಬಚ್ಚಲು ಮನೆ ವ್ಯವಸ್ಥೆ)ಗಳು ಮತ್ತು ಶೌಚಾಲಯ ಇರಬೇಕು. ಅವುಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಎಂದು ಬಿಬಿಎಂಪಿಯ ಅಧಿಕಾರಿಗಳು ಹೇಳಿದ್ದಾರೆ.
- ಪೇಯಿಂಗ್ ಗೆಸ್ಟ್‌ಗಳಲ್ಲಿ ಕಡ್ಡಾಯವಾಗಿ ಶುದ್ಧ ಕುಡಿಯುವ ನೀರಿನ ಸೌಲಭ್ಯವಿರಬೇಕು. ನೀರಿನ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು.
- ಪೇಯಿಂಗ್ ಗೆಸ್ಟ್ ನಡೆಸುತ್ತಿರುವವರು ಅವರದೇ ಅಡುಗೆಮನೆ ಹೊಂದಿದ್ದಲ್ಲಿ (ಅಲ್ಲೇ ಅಡುಗೆ ಮಾಡುತ್ತಿದ್ದರೆ) ಪಾಲಿಕೆಯಿಂದ ಉದ್ದಿಮೆ ಪರವಾನಗಿ ನೀಡಿದ 3 ತಿಂಗಳ ಒಳಗಾಳಗಿ FSSAI ಇಲಾಖೆಯಿಂದ ಲೈಸೆನ್ಸ ಪಡೆದುಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
- ಇನ್ನು ಪಿ.ಜಿಗಳ ಉದ್ದಿಮೆದಾರರು / ಮಾಲೀಕರು ಪೇಯಿಂಗ್ ಗೆಸ್ಟ್‌ಗಳಲ್ಲಿ ವಾಸಿಸುವ ನಿವಾಸಿಗಳ ಸುರಕ್ಷತಾ ದೃಷ್ಟಿಯಿಂದ ಕನಿಷ್ಠ ಪಕ್ಷ ಒಬ್ಬರನ್ನಾದರೂ, ಕಡ್ಡಾಯವಾಗಿ 24*7 ಸೇವೆಗೆ (ವಾಚ್‌ಮ್ಯಾನ್ ಇರಬೇಕು).
- ಪೇಯಿಂಗ್ ಗೆಸ್ಟ್ ಗಳಲ್ಲಿ ಪಾಲಿಕೆಯಿಂದ ವಾಣಿಜ್ಯ ಪರವಾನಿಗೆ ಪತ್ರ ವಿತರಿಸುವ ಮುನ್ನ ಉದ್ದೇಶಿತ ಕಟ್ಟಡದಲ್ಲಿ ಮಾಲೀಕರು ಅಗ್ನಿ ಸುರಕ್ಷತಾ ಕ್ರಮಗಳನ್ನು ಅಳವಡಿಸಲಾಗಿದೆಯೇ ಎಂದು ಹಾಗೂ ಪ್ರಾಧಿಕಾರದಿಂದ ಅಧಿಕೃತ ಪ್ರಮಾಣ ಪತ್ರ ಇದೆಯೇ ಎಂದೂ ಸಹ ಪರಿಶೀಲನೆ ನಡೆಸಲಾಗುತ್ತಿದೆ. ಈ ನಿಟ್ಟಿನಲ್ಲಿ ಮುಂಜಾಗ್ರತೆ ವಹಿಸುವಂತೆ ಬಿಬಿಎಂಪಿಯ ಅಧಿಕಾರಿಗಳಿಗೆ ತಿಳಿಸಲಾಗಿದೆ.
- ಇನ್ನು ತುರ್ತು ಸಂದರ್ಭಗಳಲ್ಲಿ ತುರ್ತು ಸೇವೆಗಳಿಗೆ ಸಂಬಂಧಿಸಿದಂತೆ, ಪೇಯಿಂಗ್ ಗೆಸ್ಟ್ ಕಟ್ಟಡಗಳಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಸಹಾಯವಾಣಿ ಸಂಖ್ಯೆ 1533 ಮತ್ತು ಪೋಲೀಸ್ ಇಲಾಖೆಯ ಸಹಾಯವಾಣಿ ಸಂಖ್ಯೆ 101 ಕಾಣಿಸುವಂತೆ ಪ್ರದರ್ಶಿಸುವ ಫಲಕವನ್ನು ಅಳವಡಿಸಿರಬೇಕು ಎಂದು ಹೇಳಲಾಗಿದೆ.
- ಪಿಜಿಗಳಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ (First Aid Kits) ಗಳನ್ನು ಕಡ್ಡಾಯವಾಗಿ ಅಳವಡಿಸಿರಬೇಕು.
- ಇನ್ನು ಕೊನೆಯದಾಗಿ ಬೆಂಗಳೂರಿನಲ್ಲಿರುವ ಪಿ.ಜಿಗಳಲ್ಲಿ ಕಸ ವಿಲೇವಾರಿಯನ್ನು ಸರಿಯಾಗಿ ಮಾಡಬೇಕು. ಹಸಿಕಸ ಹಾಗೂ ಒಣಕಸವನ್ನು ವಿಂಗಡಿಸಬೇಕು ಎಂದು ಬಿಬಿಂಎಂಪಿ ಖಡಕ್ ವಾರ್ನಿಂಗ್ ಕೊಟ್ಟಿದೆ.
ಇದನ್ನು ನೋಡಿ : ಜೀವ ತೆಗೆದವನು ತಾನೂ ಸತ್ತ…ಸಿಕ್ಕೀತೆ ನ್ಯಾಯ…? – ಕೆ.ಎಸ್ ವಿಮಲಾ Janashakthi Media