ರಾಜ್ಯದ ಇಬ್ಬರು ಸದಸ್ಯರು ಮುಸುಕಿನ ಗುದ್ದಾಟ ಕೊನೆಗೂ ಅವರ ಖಾತೆಗಳನ್ನೆ ಬದಲಾಯಿಸುವ ಮಟ್ಟಕ್ಕೆ ಬಂದು ನಿಂತಿದೆ. ಹೌದು ಆರೋಗ್ಯ ಇಲಾಖೆ ಖಾತೆಯನ್ನು ಸಚಿವ ಡಾ.ಸುಧಾಕರ್ ಹಾಗೂ ಆರೋಗ್ಯಇಲಾಖೆ ಬದಲಾಗಿ ಸಚಿವ ಶ್ರೀರಾಮುಲುಗೆ ಸಮಾಜಕಲ್ಯಾಣ ಇಲಾಖೆಯನ್ನು ನೀಡಿ ರಾಜ್ಯಪಾಲರು ಅಧಿಕೃತ ಆದೇಶ ಹೊರಡಿಸಿದ್ದಾರೆ. ಅಧಿಕೃತ ಆದೇಶದಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಿಗೆ ಆರೋಗ್ಯ ಇಲಾಖೆಯನ್ನು ಸಚಿವ ಶ್ರೀರಾಮುಲುಗೆ ಸಮಾಜ ಕಲ್ಯಾಣ ಇಲಾಖೆಯನ್ನು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಮಾಜ ಕಲ್ಯಾಣ ಇಲಾಖೆಯ ಜವಬ್ದಾರಿ ಹೊತ್ತಿದ್ದ ಡಿಸಿಎಂ ಗೋವಿಂದ ಕಾರಜೋಳ ಅವರಿಗೆ ಹಾಲಿ ಲೋಕೋಪಯೋಗಿ ಇಲಾಖೆಯಲ್ಲಿ ಮುಂದುವರೆಯಲಿದ್ದಾರೆ. ವಿಪರ್ಯಾಸವೆಂದರೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಜೊತೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಜವಾಬ್ದಾರಿಯೂ ಸಚಿವ ರಾಮುಲುಗೆ ಹಿಂದೆ ನೀಡಲಾಗಿತ್ತು. ಈಗ ರಾಮುಲು ಅವರಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯನ್ನು ಮುಖ್ಯಮಂತ್ರಿಯಡಿಯೂರಪ್ಪ ವಹಿಸಿಕೊಂಡು ಕೇವಲ ಸಮಾಜಕಲ್ಯಾಣ ಇಲಾಖೆಯನ್ನು ನೀಡುವ ಮೂಲಕ ರಾಮುಲುಗೆ ಮತ್ತೊಂದು ಹೊಡೆತ ನೀಡಿದ್ದಾರೆ.
ಮಾರ್ಚ್ ತಿಂಗಳಿಂದಲೂ ಶ್ರೀರಾಮಲೂ ಮತ್ತು ಸುಧಾಕರ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿತು. ಹಲವಾರು ಬಾರಿ ಅದು ಕಿತ್ತಾಡಿಕೊಳ್ಳುವ ಮೂಲಕ ಬಹಿರಂಗಗೊಂಡಿತ್ತು. ಯಡಿಯೂರಪ್ಪ ಮದ್ಯಸ್ಥಿಕೆಯಿಂದ ತಿಳಿಗೊಂಡಿತ್ತು. ಯಡಿಯೂರಪ್ಪ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದ ಶ್ರೀ ರಾಮಲೂ ಉಪ ಚುನಾವಣೆ ವೇಳೆ ಯಡಿಯೂರಪ್ಪನವರ ಜೊತೆಗಿನ ಸ್ನೇಹ ಬಿರುಕು ಮೂಡುತ್ತು. ರಾಮುಲುರವರ ಕೆಲ ನಡೆಗಳಿಗೆ ಯಡಿಯೂರಪ್ಪ ಅಸಮಾಧಾನಗೊಂಡಿದ್ದರು ಎಂದು ರಾಮಲು ಆಪ್ತರೊಬ್ಬರು ಹೆಸರನ್ನು ಬಹಿರಂಗಪಡಿಸದೆ ಜನಶಕ್ತಿ ಮೀಡಿಯಾಗೆ ಹಂಚಿಕೊಂಡಿದ್ದಾರೆ.
ಡಾ. ಸುಧಾಕರ್ ರವರಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಆರೋಗ್ಯ ಕುಟುಂಬ ಕಲ್ಯಾಣವನ್ನು ಹೆಚ್ಚುವರಿಯಾಗಿ ನೀಡಿದರೆ .ರಾಮುಲುಗೆ ಎರಡು ಖಾತೆಗಳನ್ನು ತೆಗದು ಒಂದೇ ಖಾತೆಗೆ ಸೀಮಿತಗೊಳಿಸಿರುವುದು ರಾಮುಲುರವರು ಸಿಡಿದೇಳುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತೊಮ್ಮೆ ರಾಮುಲು ಮತ್ತಷ್ಟು ಸಿಡಿದೇಳುವಂತೆ ಮಾಡಿದ್ದಾರೆ. ಇದರಲ್ಲಿ ಸಚಿವ ರಮೇಶ್ ಜಾರಕಿಹೊಳಿ, ಸುಧಾಕರ್ ಹಾಗೂ ಎಸ್.ಟಿ.ಸೋಮಶೇಖರ್ ಹಾಗೂ ಆಪರೇಷನ್ ಕಮಲಕ್ಕೆ ಬಳಗಾದ ಶಾಸಕರ ಲಾಭಿಯೂ ಅಡಗಿದೆ ಎಂದು ವಿಧಾನಸೌಧದಲ್ಲಿ ಗುಸು ಗುಸು ಮಾತುಗಳು ಕೇಳಿಬರುತ್ತಿವೆ.
ಕೋವಿಡ್ ನಿರ್ವಹಣೆಯಲ್ಲಿ ರಾಮುಲು ವಿಫಲರಾಗಿದ್ದು, ಇಲಾಖೆಯಲ್ಲಿ ಔಷಧಿ, ಉಪಕರಣ ಖರೀದಿಯಲ್ಲಿ ಅವ್ಯವಹಾರ ಆರೋಪವೂ ಕೇಳಿ ಬಂದಿತ್ತು. ವಿಧಾನ ಮಂಡಲ ಅಧಿವೇಶನದಲ್ಲಿ ವಿಪಕ್ಷಗಳ ಆರೋಪಕ್ಕೆ ಸಚಿವ ಸುಧಾಕರ್ ಸಮರ್ಥವಾಗಿ ಉತ್ತರ ನೀಡುವ ಮೂಲಕ ಅವರ ಬಾಯಿ ಮುಚ್ಚಿಸಿದರು. ಆದರೆ ವಿಧಾನ ಪರಿಷತ್ ನಲ್ಲಿ ಸಚಿವ ರಾಮುಲು ಸಮರ್ಥವಾಗಿ ಉತ್ತರ ನೀಡಲಾಗದೆಪಲಾಯನ ಗೈದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಖಾತೆಗಳ ಬದಲಾವಣೆ ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸುತ್ತಾ, ರಾಮಲೂ ಸಿಟ್ಟು ಬಂಡಾಯದ ಮೂಲಕ ಹೊರಹಾಕಬಹುದಾ? ಕಾದು ನೋಡಬೇಕಿದೆ.