ಖಾಸಗೀಕರಣದಿಂದ ದಲಿತರ ಪರಿಸ್ಥಿತಿ ಮತ್ತಷ್ಟು ಶೋಷನೀಯವಾಗಲಿದೆ

ಬೆಂಗಳೂರು: ದೇಶದಲ್ಲಿ ಇಂದಿಗೂ ಪ್ರತಿನಿತ್ಯ ಶೇಕಡಾ 25ರಷ್ಟು ದಲಿತರ ಮೇಲೆ ನಿರಂತರವಾಗಿ ಜಾತಿ ತಾರತಮ್ಯ, ದೌರ್ಜನ್ಯ, ಶೋಷಣೆ ಅವ್ಯಾಹತವಾಗಿ ನಡೆಯುತ್ತಲೇ ಇದೆ ಎಂದು ದಲಿತ ಶೋಷಣ್ ಮುಕ್ತಿ ಮಂಚ್‌ನ ರಾಷ್ಟ್ರೀಯ  ಅಧ್ಯಕ್ಷರಾದ ಕೆ. ರಾಧಕೃಷ್ಣನ್ ರವರು ಹೇಳಿದರು.

ಅವರು ದಲಿತ ಹಕ್ಕುಗಳ ಸಮಿತಿ ಕರ್ನಾಟಕ(ಡಿಹೆಚ್‌ಎಸ್‌) ಏರ್ಪಡಿಸಿದ್ದ ರಾಜ್ಯ ಮಟ್ಟದ ದಲಿತರ ಹಕ್ಕುಗಳು ಮತ್ತು ಸಾಮಾಜಿಕ ನ್ಯಾಯ ಸಂರಕ್ಷಣಾ ಅಭಿಯಾನದ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದನ್ನು ಓದಿ: ದಲಿತರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ದಲಿತ ಹಕ್ಕುಗಳ ಸಮಿತಿ ಪ್ರತಿಭಟನೆ

ಮುಂದುವರೆದು ಮಾತನಾಡಿದ ಕೆ. ರಾಧಕೃಷ್ಣನ್‌ ಅವರು ʻʻಅಂಬೇಡ್ಕರ್ ರವರು ಸಂವಿಧಾನದಲ್ಲಿ ಹೇಳಿರುವ ಮಾನವ ಹಕ್ಕುಗಳ ಬಗ್ಗೆ ಎಷ್ಟೇ ಪ್ರತಿಪಾದಿಸಿದ್ದರು. ಜಾತಿಯಲ್ಲಿ ಅಸಮಾನತೆ ಕಾಣುತ್ತ, ಉದ್ಯೋಗ ಶಿಕ್ಷಣದಿಂದ ವಂಚನೆಗೊಳಗಾದ ಸಮುದಾಯ, ಜಾತಿ ವ್ಯವಸ್ಥೆಗೆ ದೊಡ್ಡ ಪೆಟ್ಟು ನೀಡುವ ಮೂಲಕ ರೈತ-ಕಾರ್ಮಿಕ ವರ್ಗದೊಂದಿಗೆ ಜೊತೆಗೂಡಿ ಶೋಷಣೆ ವಿರುದ್ಧ ಹೋರಾಟ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ತಿಳಿಸಿದರು.

ಕೇರಳದಲ್ಲಿ ಎಡರಂಗ ಸರ್ಕಾರ ಜಾರಿಗೆ ತಂದ ಹಲವು ದಲಿತ ಪರ ಕಾರ್ಯಕ್ರಮಗಳ ಫಲವಾಗಿ ಇಂದು ಭೂಸುಧಾರಣೆಯಿಂದಾಗಿ ಎಲ್ಲರಿಗೂ ಮನೆ, ಕುಡಿಯುವ ನೀರು ಸೇರಿದಂತೆ ಆದಿವಾಸಿ ಬುಡಕಟ್ಟು ದಲಿತರು  ಶಿಕ್ಷಣದಲ್ಲಿ ಸಾಧನೆ ಮಾಡುತ್ತಿರುವುದು. ಆನ್‌ಲೈನ್ ಮೂಲಕ ಅತ್ಯಂತ ದುರ್ಗಮ ಪ್ರದೇಶಗಳಿಗೂ ಶಿಕ್ಷಣ ಸೌಲಭ್ಯ ಒದಗಿಸಿ ಅಧಿಕಾರ ವಿಕೇಂದ್ರಿಕರಣ ಮತ್ತು ಸಂಪತ್ತಿನ ಹಂಚಿಕೆಯನ್ನು ಸಮಾನಗೊಳಿಸುವ ನೀತಿ ಅನುಸರಿಸಲಾಗುತ್ತಿದೆ ಎಂದು ತಿಳಿಸಿದರು.

ನಿವೃತ್ತ ಉಚ್ಛ ನ್ಯಾಯಾಧೀಶರಾದ ಹೆಚ್.ಎನ್. ನಾಗ್‌ಮೋಹನ್ ದಾಸ್‌ರವರು ಮಾತನಾಡಿ ʻʻಸರ್ಕಾರದ ಯೋಜನೆಗಳು ದಲಿತರಿಗೆ ತಲುಪುವಲ್ಲಿ ಎದುರಾಗುತ್ತಿರುವ ವೈಫಲ್ಯಗಳ ವಿರುದ್ಧ ಜಾಗೃತಿ ಅರಿವು ಮೂಡಿಸಿ ಕಾನೂನಾತ್ಮಕ ಹೋರಾಟ ನಡೆಸುವ, ಶಿಕ್ಷಣ ಮತ್ತು ಉದ್ಯೋಗಕ್ಕೆ ಯುವಜನರಿಗೆ ಕೌಶಲ್ಯ ತರಬೇತಿ ನೀಡಿ ಅವರನ್ನು ಸಕ್ರಿಯವಾಗಿ ಪಾಲ್ಗೊಳುವಂತೆ ಮಾಡುವುದು ನಮ್ಮ ಆದ್ಯತೆಯಾಗಿದೆ. ಅಮೇರಿಕಾದ ನಿಗ್ರೋ ಜನರು ಅಲ್ಲಿನ ವರ್ಣಬೇದ ನೀತಿಯ ವಿರುದ್ಧ ಹೋರಾಟ ಮಾಡಿ ಎಲ್ಲ ಟೆಂಡರ್ ಹಂತದ ಕೆಲಸಗಳಲ್ಲಿಯೂ ಶೇಕಡಾ 12ರಷ್ಟು ಮೀಸಲಾತಿ ಜಾರಿಗೆ ಕಾನೂನಾತ್ಮಕ ಹೋರಾಟ ಮಾಡಿದ ನಿದರ್ಶನಗಳು ನಮ್ಮ ಮುಂದಿವೆ. ನಾವು ಸಹ ಸಾರ್ವಜನಿಕ ಹಿತ್ತಾಸಕ್ತಿಯ ಹಲವು ಹೋರಾಟವನ್ನು ಕೈಗೊಳ್ಳಬೇಕೆಂದು ವಿವರಿಸಿದರು.

ಇದನ್ನು ಓದಿ: ಠಾಣೆಯಲ್ಲಿ ದಲಿತ ಯುವಕನಿಗೆ ಮೂತ್ರ ಕುಡಿಸಿದ ಪಿಎಸ್‌ಐ

ಸಿಐಟಿಯು ರಾಜ್ಯ ಅಧ್ಯಕ್ಷರಾದ ಎಸ್. ವರಲಕ್ಷ್ಮಿರವರು ಮಾತನಾಡಿ ʻʻದೇಶದಲ್ಲಿ ಶೇಕಡಾ 70ರಷ್ಟು ಜನ ಸಾಮಾನ್ಯರು, ಶೇಕಡಾ 5ರಷ್ಟು ಶ್ರೀಮಂತರು, ಶೇಕಡಾ 25ರಷ್ಟು ಇರುವ ಮಧ್ಯಮದ ವಿಭಜನೆಯಿಂದಾಗಿ ಇಂದಿಗೂ ಬಡವರಿಗಾಗಿ ಉಚಿತ ಶಿಕ್ಷಣ-ಆರೋಗ್ಯದ ಬಗ್ಗೆ ಸರಕಾರದ ನೀತಿಗಳು ಇಲ್ಲದೆ ಎಲ್ಲವು ಖಾಸಗೀಕರಣಗೊಂಡು ಸಾರ್ವಜನಿಕ ನಾಗರೀಕ ಸೌಲಭ್ಯಗಳಿಂದ ಜನತೆ ವಂಚನೆಗೊಳಗಾಗಿದ್ದಾರೆ. ಮೀಸಲಾತಿ ಎಂಬುದು ಮರಿಚಿಕೆಯಾಗಿದೆ. ಕಾರ್ಪೊರೇಟ್ ಸಂಸ್ಥೆಗಳ ಬೆಳವಣಿಗೆಯ ಪರಿಣಾಮ ಗುತ್ತಿಗೆ ಹೊರಗುತ್ತಿಗೆ ಅಸಂಘಟಿತ ಕಾರ್ಮಿಕ ವರ್ಗವು ಅತೀಯಾದ ಶೋಷಣೆಗೆ ಒಳಗಾಗಿದ್ದಾರೆʼʼ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಡಿಹೆಚ್‌ಎಸ್‌ ರಾಜ್ಯ ಸಂಚಾಲಕ ಗೋಪಾಲಕೃಷ್ಣ ಹರಳಹಳ್ಳಿ ಅವರು ʻʻಈ ಉಪನ್ಯಾಸ ಕಾರ್ಯಕ್ರಮ ನಮಗೆ ಹೊಸ ದಾರಿಯನ್ನು ರೂಪಿಸಲು ಕಾರಣವಾಗಿದೆʼʼ ಎಂದರು. ಇದರೊಂದಿಗೆ ಸಂಘಟನೆ ವತಿಯಿಂದ ರಾಜ್ಯದಲ್ಲಿ ನಡೆಸಿರುವ ದೇವಾಲಯ ಪ್ರವೇಶ, ಅಸ್ಪೃಶ್ಯತೆ, ಜಾತಿ ತಾರತಮ್ಯದ ವಿರುದ್ಧ ಭೂಮಿ ಚಳುವಳಿ, ಬಡ್ತಿ ಮೀಸಲು, ಸರ್ಕಾರದ ದಲಿತ ಬಜೆಟ್ ಜಾರಿಗೆ ಒತ್ತಾಯಿಸಿ ನಡೆಸಿದ ಹೋರಾಟದ ಅನುಭವಗಳನ್ನು ಹಂಚಿಕೊಂಡರು. ರಾಜ್ಯದಲ್ಲಿ ಮತ್ತಷ್ಟು ಬಲಿಷ್ಠ ಚಳುವಳಿ ಕಟ್ಟಲು ಎಲ್ಲರೂ ಸೇರಿ ಐಕ್ಯ ಹೋರಾಟ ನಡೆಸಬೇಕಾಗಿದೆ ಎಂದು ಕರೆ ನೀಡಿದರು.

ಡಿಎಸ್‌ಎಂಎಂ ರಾಷ್ಟ್ರೀಯು ಸದಸ್ಯ ಹಾಗೂ ರಾಜ್ಯ ಸಹ ಸಂಚಾಲಕ ನಾಗರಾಜ ನಂಜುಂಡಯ್ಯ ಪ್ರಸ್ತಾವಿಕ ಮಾತಗಳನ್ನು ಆಡಿದರು. ಸಹ ಸಂಚಾಲಕರಾದ ಪೃಥ್ವಿ ಸ್ವಾಗತಿಸಿದರು, ಬಿ. ರಾಜಶೇಖರ ಮೂರ್ತಿ ನಿರೂಪಣೆ ಮಾಡಿದರು. ಬೆಂಗಳೂರು ಉತ್ತರ ಜಿಲ್ಲಾ ಸಂಚಾಲಕ ಹೆಚ್.ಜಿ.ನಾಗಣ್ಣ ವಂದನಾರ್ಪಣೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *