ಬೆಂಗಳೂರು,ಫೆ.16 : ಕೊರೋನಾ ಸಂದರ್ಭದಲ್ಲಿ ಉಂಟಾದ “ಆನ್ಲೈನ್ ತರಗತಿ” ಹೆಸರಿನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಪೊಷಕರಿಂದ ಸಾಕಷ್ಟು ಹಣ ವಸೂಲಿ ಮಾಡುತ್ತಿದ್ದವು. ಇದಕ್ಕೆ ಕಡಿವಾಣ ಹಾಕಬೇಕು ಎಂದು ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಸಂಘಟನೆಗಳು ನಡೆಸಿದ ಹೋರಾಟದ ಪ್ರಭಾವದಿಂದ ರಾಜ್ಯ ಸರ್ಕಾರ ಸುಧಾರಣಾ ಕ್ರಮ ಕೈಗೊಂಡಿದ್ದು ಖಾಸಗಿ ಶಾಲಾ ಶುಲ್ಕವನ್ನು ಶೇ.25 ರಿಂದ 30 ರಷ್ಟು ಕಡಿತ ಮಾಡಲು ಆದೇಶ ಹೊರಡಿಸಿ.
ಖಾಸಗಿ ಶಾಲೆಗಳ ಶುಲ್ಕ ಕಡಿತ ಆದೇಶ ಬರುತ್ತಿದ್ದಂತೆ ಪರ ವಿರೋಧದ ಚರ್ಚೆಗಳು ಎದ್ದಿವೆ. ಶುಲ್ಕ ಕಡಿತವನ್ನು ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಸ್ವಾಗತಿಸಿದರೆ, ಇತ್ತ ಖಾಸಗಿ ಶಾಲೆಗಳು ವಿರೋಧವನ್ನು ವ್ಯಕ್ತಪಡಿಸಿದ್ದು ಸರಕಾರದ ಕ್ರಮದ ವಿರುದ್ಧ ಪ್ರತಿಭಟನೆ ನಡೆಸಲು ಮುಂದಾಗಿವೆ.
ಇದನ್ನು ಓದಿ :ಕೆರಿಮತ್ತಿಹಳ್ಳಿ ಸ್ನಾತಕೋತ್ತರ ಕೇಂದ್ರಕ್ಕೆ ಮೂಲಭೂತ ಸೌಲಭ್ಯಕ್ಕಾಗಿ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ಈಗಾಗಲೇ ಕೋರೊನಾ ಮಹಾಮಾರಿಯಿಂದಾಗಿ ಶೈಕ್ಷಣಿಕ ಕ್ಷೇತ್ರವು ಸಂಕಷ್ಟದಿಂದ ಬಳಲುತ್ತಿದ್ದು, ಅದರಲ್ಲಿಯೂ ಬಡ ವಿದ್ಯಾರ್ಥಿಗಳು ಆನ್ ಲೈನ್ ಶಿಕ್ಷಣದಂತಹ ತರಗತಿಗಳನ್ನು ಪಡೆಯುವಲ್ಲಿಯೂ ವಿಫಲರಾಗಿದ್ದಾರೆ. ಇನ್ನೂ ಶಾಲೆಗಳು ಆರಂಭವಾಗಿವೆ ಎಂದರೆ ಶುಲ್ಕ ಹೆಚ್ಚಳದ ಬರೆಯನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಎದುರಿಸಬೇಕಾದಂತಹ ಪರಿಸ್ಥಿತಿ ಉಂಟಾಗಿದೆ. ರಾಜ್ಯ ಸರ್ಕಾರ 30% ಶುಲ್ಕ ಕಡಿತ ಮಾಡಿದ್ದರೂ ಕೂಡ ಖಾಸಗಿ ಶಾಲೆಗಳು ದುಬಾರಿ ಶುಲ್ಕ ವಸೂಲಾತಿಗೆ ಸಿದ್ದತೆ ನಡೆಸಿವೆ. ಇದಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಎಸ್ಎಫ್ಐ ಆಗ್ರಹಿಸಿದೆ.
ವಿದ್ಯಾರ್ಥಿ ಸಂಘಟನೆಗಳು, ಪೋಷಕರ ಹೋರಾಟದ ಪ್ರಭಾವದಿಂದ ಈ ಬಾರಿ ಖಾಸಗಿ ಶಾಲೆಗಳಲ್ಲಿ ಹೆಚ್ಚು ಶುಲ್ಕ ವಸೂಲು ಮಾಡಬಾರದು ಎಂದು ರಾಜ್ಯ ಸರ್ಕಾರದ ಆದೇಶ ಮಾಡಿದೆ. ಆದೇಶದ ಪ್ರಕಾರ ಖಾಸಗಿ ಶಾಲೆಗಳು ಈ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಹಾಗೂ ಕಳೆದ ವರ್ಷದ ಶುಲ್ಕದ ಶೇಖಡ 70 ಮೊತ್ತವನ್ನು ಮಾತ್ರ ಪಡೆಯಬೇಕು. ಆದರೆ ಸರ್ಕಾರದ ಆದೇಶ ಕೇವಲ ಕಾಗದ ಪತ್ರಕ್ಕೆ ಸೀಮಿತವಾಗಿದ್ದು. ಬಹುತೇಕ ಖಾಸಗಿ ಶಾಲೆಗಳು ಈ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಎಸ್ಎಫ್ ಐ ಸಂಘಟನೆ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಇದನ್ನು ಓದಿ : ಶುಲ್ಕ ಕಟ್ಟದಿದ್ದಕ್ಕೆ ವಿದ್ಯಾರ್ಥಿ- ಪೋಷಕರ ಮೇಲೆ ಹಲ್ಲೆ ನಡೆಸಿದ ಖಾಸಗಿ ಶಿಕ್ಷಣ ಸಂಸ್ಥೆ
ಆದರೆ ಇದೀಗ ಖಾಸಗಿ ಶಾಲೆಗಳು ಈ ವರ್ಷ ಶುಲ್ಕ ಹೆಚ್ಚಳ ಮಾಡುವಂತಿಲ್ಲ. ಹಾಗೂ ಕಳೆದ ವರ್ಷದ ಶುಲ್ಕದ ಶೇ 70 ಮೊತ್ತವನ್ನು ಮಾತ್ರ ಪಡೆಯಬೇಕೆಂಬ ಸರ್ಕಾರದ ಆದೇಶವನ್ನು ವಾಪಸ್ ಪಡೆಯಬೇಕೆಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟಗಳು ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿ ಒತ್ತಡ ಹಾಕಲು ಯೋಚಿಸಿವೆ. ಇಂತಹ ಯಾವುದೇ ಒತ್ತಡಗಳಿಗೆ ಸರ್ಕಾರ ಮಣಿಯದೆ ಸರ್ಕಾರ ದೃಢವಾಗಿ ತನ್ನ ಆದೇಶವನ್ನು ಜಾರಿಗೆ ತರಬೇಕೆಂದು ಎಸ್ಎಫ್ಐ ನ ರಾಜ್ಯಾಧ್ಯಕ್ಷರಾದ ಅಮರೇಶ ಕಡಗದ ಆಗ್ರಹಿಸಿದ್ದಾರೆ.
ಜನಶಕ್ತಿ ಮೀಡಿಯಾ ವಾಟ್ಸಪ್ ಸೇರಿಕೊಳ್ಳಲು ಈ ಲಿಂಕ್ ಕ್ಲಿಕ್ ಮಾಡಿ
ಮನಸೋಇಚ್ಛೆ ಖಾಸಗಿ ಶಾಲೆಗಳು ಶುಲ್ಕ ಪಾವತಿಸಲು ಪೋಷಕರಿಗೆ ಒತ್ತಡ ಹಾಕುತ್ತಿವೆ. ಈ ಕೊವೀಡ್ ಲಾಕ್ ಡೌನ್ ನಿಂದ ಉದ್ಯೋಗ, ಆದಾಯ ಇಲ್ಲದೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡವರು, ಅಸಂಘಟಿತ ಕಾರ್ಮಿಕರು, ರೈತರು, ದುಡಿಯುವ ವರ್ಗದ ಜನರು ಈ ಖಾಸಗಿ ಶಾಲೆಗಳ ಶುಲ್ಕ ವಸೂಲಾತಿಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರತಿಯೊಂದು ಖಾಸಗಿ ಶಾಲೆಗಳು ಎಷ್ಟು ಶುಲ್ಕ ಪಡೆಯುತ್ತಿವೆ ಎಂದು ಬಹಿರಂಗವಾಗಿ ಫಲಕದಲ್ಲಿ ಶುಲ್ಕ ವಿವರಣೆ ಮಾಹಿತಿಯನ್ನು ಸಾರ್ವಜನಿಕರಿಗೆ ಪ್ರದರ್ಶನ ಮಾಡಬೇಕೆಂಬ ಆದೇಶವನ್ನು ಪಾಲಿಸುತ್ತಿಲ್ಲ. ಎಲ್ಲಾ ಶಾಲೆಗಳು ಈ ನಿಯಮವನ್ನು ಪಾಲಿಸದೇ ಇರುವುದನ್ನು ಖಂಡನೀಯ ಎಂದು ಸಂಘಟನೆಯ ರಾಜ್ಯ ಕಾರ್ಯದರ್ಶಿ ವಾಸುದೇವರೆಡ್ಡಿ ತಿಳಿಸಿದ್ದಾರೆ.
ಇದನ್ನು ಓದಿ :ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಲು ಆಗ್ರಹಿಸಿ ಪೋಸ್ಟರ್ ಪ್ರದರ್ಶನ ಮತ್ತು ಪ್ರತಿಭಟನೆ
ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿರುವ ಜಿಲ್ಲಾ ಶಿಕ್ಷಣ ರೆಗ್ಯೂಲೆಟಿಂಗ್ ಪ್ರಾಧಿಕಾರ (District Education Regulatory Authority (DERA) ಸಮಿತಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು. ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಸರ್ಕಾರದ ಆದೇಶ ಪಾಲಿಸದೆ ಇರುವ ಶಾಲೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಆ ಮೂಲಕ ಕೊರೋನಾ ಸಂದರ್ಭದಲ್ಲಿ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಂದ ದುಬಾರಿ ಶುಲ್ಕ ವಸೂಲಿ ಮಾಡುವುದನ್ನು ಕಡಿವಾಣ ಹಾಕಬೇಕೆಂದು ಎಸ್ಎಫ್ಐ ರಾಜ್ಯ ಸಮಿತಿ ಒತ್ತಾಯಿಸಿದೆ.