ಬೆಂಗಳೂರು;ಫೆ.03 : ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿರುವ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ನಿರ್ಲಕ್ಷ್ಯ ವಹಿಸಿರುವ ಕ್ರಮಕ್ಕೆ ಆಡಳಿತಾರೂಡ ಬಿಜೆಪಿ ಸದಸ್ಯ ಹೆಚ್ ವಿಶ್ವಾನಾಥ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಕೃಷಿ ಸಂಶೋಧನಾ ಕೇಂದ್ರಗಳು ಬೇಕು ಆದರೆ ಕೆಲವನ್ನು ಹರಾಜು ಮಾಡಿ ಗುತ್ತಿಗೆ ಆಧಾರದಲ್ಲಿ ನೀಡಬಹುದು ಎನ್ನುವುದಕ್ಕೆ ಕಾಂಗ್ರೆಸ್ ಸದಸ್ಯ ಸಿ.ಎಂ ಇಬ್ರಾಹಿಂ ಆಕ್ಷೇಪ ವ್ಯಕ್ತಪಡಿಸಿದರು. ಇಡಿ ದೇಶವನ್ನೇ ಮಾರಿದ್ದಾರೆ ಈಗ ನೀವು ಆಕ್ಷನ್ ಕೊಟ್ಟರೆ ಸಾಕು ಖುಷಿಯಿಂದ ಮಾರುತ್ತಾರೆ ಎಂದು ವ್ಯಂಗ್ಯಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಶಂಕರ್ ನಾವು ಯಾವುದನ್ನೂ ಮಾರಿಲ್ಲ ನಾವು ರೈತರ ಪರ ಇದ್ದೇವೆ ಎಂದು ಮಾತು ಕೊನೆಗೊಳಿಸಿದರು. ಆಗ ಮಧ್ಯಪ್ರವೇಶಿಸಿದ ಹಳ್ಳಿ ಹಕ್ಕಿ ಕೇವಲ ತೋಟಗಾರಿಕೆ ಅಲ್ಲ, ಎಲ್ಲಾ ಇಲಾಖೆಗಳ ಪರಿಸ್ಥಿತಿಯು ಇದೇ ಆಗಿದೆ. ಶೇ.55-60 ರಷ್ಟು ನೌಕರರು ಇಲ್ಲ.ಹೈದರಾಬಾದ್ ಕರ್ನಾಟಕದಲ್ಲಿ 22 ಹುದ್ದೆ ಮಂಜೂರಾತಿಯಾದರೆ 15 ಖಾಲಿ ಹುದ್ದೆ ಇವೆ. ಬೀದರ್ ನಲ್ಲಿ ಮಂಜೂರಾತಿ 56 ಖಾಲಿ, 54, ಕೊಪ್ಪಳದಲ್ಲಿ ಮಂಜೂರಾತಿ 22 ಖಾಲಿ 16, ಬಳ್ಳಾರಿಯಲ್ಲಿ ಮಂಜೂರಾತಿ 23 ಖಾಲಿ ಹುದ್ದೆ 17 ಇವೆ, ಹೈದರಾಬಾದ್ ಕರ್ನಾಟಕದಲ್ಲೇ ಹೀಗಿದೆ ಎಂದು ಟೀಕಿಸಿದರು.
371 ಜೆಗೆ ಸಾಕಷ್ಟು ಹೋರಾಟ ಮಾಡಿದ್ದು ಏನಾಯ್ತು ಎಂದು ಪ್ರಶ್ನಿಸಿದ್ದಾರೆ. 371 ಜಾರಿ ಆದರೆ ಆ ಭಾಗದವರಿ ಉದ್ಯೋಗ ಸಿಗುತ್ತೆ ಎಂದು ಕಾಯ್ತಾ ಇದ್ರೂ ಈಗ ವಿಶೇಷ ಮೀಸಲಾತಿ ಸಿಕ್ಕರೂ ಕಾಯುವ ಪರಿಸ್ಥಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಸರ್ಕಾರದ ಯಂತ್ರವೇ ಸಿಬ್ಬಂದಿ. ಇವರೆ ಇಲ್ಲದಿದ್ದರೆ ಯಂತ್ರವನ್ನು ಹೇಗೆ ನಡೆಸಲು ಸಾಧ್ಯ? ಆದ್ದರಿಂದ ಕೂಡಲೇ ಹುದ್ದೆ ಭರ್ತಿ ಮಾಡಬೇಕು ಎಂದು ಸರ್ಕಾರವನ್ನು ತರಾಟೆ ತೆಗೆದುಕೊಂಡರು.