ದೇಶದ ಸುಸ್ಥಿರ ಅಭಿವೃದ್ಧಿ ಗುರಿ ಸೂಚ್ಯಂಕದಲ್ಲಿ ಕೇರಳ ಮೊದಲು

ಸಾಮಾಜಿಕ, ಆರ್ಥಿಕ ಬೆಳವಣಿಗೆಯಲ್ಲಿ ದೇಶದಲ್ಲೇ ಕೇರಳ ರಾಜ್ಯ ನಂಬರ್ ಒನ್

ನವದೆಹಲಿ: ಕೇಂದ್ರ ನೀತಿ ಆಯೋಗ ಎಸ್‌ಡಿಜಿ ಇಂಡಿಯಾ ಇಂಡೆಕ್ಸ್ 2020-21ರ ವರದಿ ಬಿಡುಗಡೆ ಮಾಡಿದ್ದು, ವರದಿಯಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದ್ದು ಅಂತಿಮ ಸ್ಥಾನದಲ್ಲಿ ಬಿಹಾರ ರಾಜ್ಯವಿದೆ.

ಸಾಮಾಜಿಕ, ಆರ್ಥಿಕ ಮತ್ತು ಪರಿಸರ ಅಭಿವೃದ್ಧಿ ನಿಯತಾಂಕಗಳಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಗತಿಯನ್ನು ಸುಸ್ಥಿರ ಅಭಿವೃದ್ಧಿ ಗುರಿಗಳ ಸೂಚ್ಯಂಕ (ಎಸ್‌ಡಿಜಿ) ಮೌಲ್ಯಮಾಪನ ಮಾಡಿದ್ದು, ಕೇರಳ ರಾಜ್ಯ 75 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದ್ದು, ಹಿಮಾಚಲ ಪ್ರದೇಶ ಮತ್ತು ತಮಿಳುನಾಡು ಎರಡೂ ರಾಜ್ಯಗಳು ತಲಾ 74 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿವೆ. 72 ಅಂಕಗಳೊಂದಿಗೆ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. ಇನ್ನು ಪಟ್ಟಿಯಲ್ಲಿ ಬಿಹಾರ, ಜಾರ್ಖಂಡ್ ಮತ್ತು ಅಸ್ಸಾಂ ಅತ್ಯಂತ ಕೆಟ್ಟ ಪ್ರದರ್ಶನದೊಂದಿಗೆ ಅಂತಿಮ ಸ್ಥಾನಗಳಲ್ಲಿವೆ.

ಕೇಂದ್ರಾಡಳಿತ ಪ್ರದೇಶಗಳ ಪೈಕಿ ಚಂಡೀಗಡ 79 ಅಂಕಗಳೊಂದಿಗೆ ಅಗ್ರಸ್ಥಾನ ಕಾಯ್ದುಕೊಂಡಿದ್ದು, ದೆಹಲಿ (68) ಎರಡನೇ ಸ್ಥಾನದಲ್ಲಿದೆ. ದೇಶದ ಒಟ್ಟಾರೆ ಎಸ್‌ಡಿಜಿ ಅಂಕಗಳಲ್ಲಿ 6 ಪಾಯಿಂಟ್‌ಗಳ ವರ್ಧನೆಯುಂಟಾಗಿದ್ದು, 2019ರಲ್ಲಿ 60ರಿಂದ 2020-21ರ ವೇಳೆಗೆ 66ಕ್ಕೆ ತಲುಪಿದೆ.

ಇದನ್ನೂ ಓದಿ  :ಕೋವಿಡ್‌ ಎರಡನೇ ಪ್ಯಾಕೇಜ್‌ ಘೋಷಣೆ : ಯಾರಿಗೆ ಎಷ್ಟೆಷ್ಟು ನೆರವು, ಇಲ್ಲಿದೆ ಸಂಪೂರ್ಣ ಮಾಹಿತಿ

2018 ರ ಡಿಸೆಂಬರ್ ನಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಈ ಸೂಚ್ಯಂಕವು ದೇಶದ ಎಸ್‌ಡಿಜಿಗಳ ಪ್ರಗತಿಯನ್ನು ಮೇಲ್ವಿಚಾರಣೆ ಮಾಡುವ ಪ್ರಾಥಮಿಕ ಸಾಧನವಾಗಿ ಮಾರ್ಪಟ್ಟಿದೆ. ಅಲ್ಲದೆ ಏಕಕಾಲದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ನಡುವೆ ಜಾಗತಿಕ ಗುರಿಗಳ ಮೇಲೆ ಸ್ಥಾನ ನೀಡುವ ಮೂಲಕ ಸ್ಪರ್ಧೆಯನ್ನು ಬೆಳೆಸಿದೆ. ಭಾರತದಲ್ಲಿನ ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದ ಸೂಚ್ಯಂಕವು ಜಾಗತಿಕ ಗುರಿಗಳು ಮತ್ತು ಗುರಿಗಳನ್ನು ಪೂರೈಸುವತ್ತ ದೇಶದ ಪ್ರಯಾಣದಲ್ಲಿ ರಾಷ್ಟ್ರೀಯ ಮತ್ತು ಉಪ-ರಾಷ್ಟ್ರೀಯ ಮಟ್ಟದಲ್ಲಿ ಪ್ರಗತಿಯನ್ನು ಈ ಸೂಚ್ಯಂಕವು ಅಳೆಯುತ್ತದೆ.

ಇನ್ನು 2018-19ರಲ್ಲಿ ಮೊದಲ ಆವೃತ್ತಿಯು 13 ಸವಾಲುಗಳು, 39 ಗುರಿಗಳು ಮತ್ತು 62 ಸೂಚಕಗಳನ್ನು ಒಳಗೊಂಡಿದ್ದರೆ, ಎರಡನೇ ಆವೃತ್ತಿಯು 17 ಸವಾಲುಗಳು, 54 ಗುರಿಗಳು ಮತ್ತು 100 ಸೂಚಕಗಳನ್ನು ಮತ್ತು ಈ ಮೂರನೇ ಆವೃತ್ತಿಯು 17 ಗೋಲುಗಳು, 70 ಗುರಿಗಳು ಮತ್ತು 115 ಸೂಚಕಗಳನ್ನು ಒಳಗೊಂಡಿದೆ.

2030 ರ ವೇಳೆಗೆ 1730 ಗುರಿಗಳನ್ನು ಮತ್ತು 169 ಸಂಬಂಧಿತ ಗುರಿಗಳನ್ನು ಸಾಧಿಸುವ ಗುರಿ ಹೊಂದಲಾಗಿದೆ.

ಎಸ್‌ಡಿಜಿಗಳು ವಿಶ್ವ ನಾಯಕರ ಮಹತ್ವಾಕಾಂಕ್ಷೆಯ ಬದ್ಧತೆಯಾಗಿದ್ದು ಅದು ಸಮಾಜಗಳ ಯೋಗಕ್ಷೇಮದ ಆರ್ಥಿಕ, ಪರಿಸರ ಮತ್ತು ಸಾಮಾಜಿಕ ಅಂಶಗಳನ್ನು ಅಳವಡಿಸಿಕೊಳ್ಳುವ ಸಾರ್ವತ್ರಿಕ ಮತ್ತು ಅಭೂತಪೂರ್ವ ಕಾರ್ಯಸೂಚಿಯನ್ನು ರೂಪಿಸುತ್ತದೆ.

ಗುರಿಗಳು ಯಾವುವು? ರಾಜ್ಯಗಳ ಸಾಧನೆಯೇನು?


ಗುರಿ 1: ಬಡತನ ನಿರ್ಮೂಲನೆ

ತಮಿಳುನಾಡು, ಕೇರಳ


ಗುರಿ 2: ಹಸಿವು ಮುಕ್ತ ರಾಜ್ಯ

ಕೇರಳ, ಚಂಡೀಗಢ


ಗುರಿ 3: ಉತ್ತಮ ಆರೋಗ್ಯ, ಯೋಗಕ್ಷೇಮ

ಗುಜರಾತ್‌, ದಿಲ್ಲಿ


ಗುರಿ 4: ಗುಣಮಟ್ಟದ ಶಿಕ್ಷಣ

ಕೇರಳ, ಚಂಡೀಗಢ


ಗುರಿ 5: ಲಿಂಗ ಸಮಾನತೆ

ಛತ್ತೀಸ್‌ಗಢ, ಅಂಡಮಾನ್‌-ನಿಕೋಬಾರ್‌


ಗುರಿ 6: ಸ್ವತ್ಛ ನೀರು, ನೈರ್ಮಲ್ಯ

ಗೋವಾ, ಲಕ್ಷದ್ವೀಪ


ಗುರಿ 7: ಕೈಗೆಟಕುವ ಬೆಲೆಯಲ್ಲಿ

ಪರಿಶುದ್ಧ ಇಂಧನ 

ಕರ್ನಾಟಕ, ಆಂಧ್ರಪ್ರದೇಶ, ಕೇರಳ, ಗೋವಾ, ಹರಿಯಾಣ, ಹಿಮಾಚಲ ಪ್ರದೇಶ, ಮಹಾರಾಷ್ಟ್ರ, ಮಿಜೋರಾಂ, ಪಂಜಾಬ್‌, ರಾಜಸ್ಥಾನ, ಸಿಕ್ಕಿಂ,ತಮಿಳುನಾಡು,ತೆಲಂಗಾಣ, ಉತ್ತರಾಖಂಡ, ಉ.ಪ್ರದೇಶ,ಅಂಡಮಾನ್‌-ನಿಕೋಬಾರ್‌, ಚಂಡೀಗಢ, ದಿಲ್ಲಿ, ಜಮ್ಮು-ಕಾಶ್ಮೀರ, ಲಡಾಖ್ ಹಿ,ಪ್ರದೇಶ, ಚಂಡೀಗಢ


ಗುರಿ 9: ಕೈಗಾರಿಕೆ, ಆವಿಷ್ಕಾರ, ಮೂಲಸೌಕರ್ಯ

ಗುಜರಾತ್‌, ದಿಲ್ಲಿ


ಗುರಿ 10: ಅಸಮಾನತೆ ನಿರ್ಮೂಲನೆ

ಮೇಘಾಲಯ, ಚಂಡೀಗಢ


ಗುರಿ 11: ಸುಸ್ಥಿರ ನಗರಗಳು ,ಸಮುದಾಯಗಳ ನಿರ್ಮಾಣ

ಪಂಜಾಬ್‌, ಚಂಡೀಗಢ


ಗುರಿ 12: ಜವಾಬ್ದಾರಿಯುತ ಬಳಕೆ ಹಾಗೂ ಸೃಷ್ಟಿ

ತ್ರಿಪುರಾ,ಜಮ್ಮು-ಕಾಶ್ಮೀರ, ಲಡಾಖ್‌


ಗುರಿ 13: ಹವಾಮಾನ ನಿರ್ವಹಣೆ

ಒಡಿಶಾ, ಅಂಡಮಾನ್‌- ನಿಕೋಬಾರ್‌


ಗುರಿ 14: ಕಡಲ ಜೀವಿಗಳ ಜೀವನ

ಒಡಿಶಾ


ಗುರಿ 15: ಜನ-ಜಾನುವಾರು ಜೀವನ

ಆಂಧ್ರಪ್ರದೇಶ, ಚಂಡೀಗಢ


ಗುರಿ 16: ಶಾಂತಿ, ನ್ಯಾಯ ವಿಲೇವಾರಿ, ಶಕ್ತಿಶಾಲಿ ಸಂಸ್ಥೆಗಳು

ಉತ್ತರಾಖಾಂಡ, ಪುದುಚೇರಿ


 

Donate Janashakthi Media

Leave a Reply

Your email address will not be published. Required fields are marked *