ತಿರುವನಂತಪುರಂ: ದೇಶದ ತೆರಿಗೆ ಆಡಳಿತಕ್ಕೆ ಐಟಿ ಇಲಾಖೆ ದಾಳಿ ವೇಳೆ ನಡೆದಿರುವ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ರ ‘ಅಸ್ವಾಭಾವಿಕ ಸಾವು’ ಕಳಂಕ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದೂ, ಘಟನೆ ಸಂಬಂಧ ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಅವರು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ರಿಗೆ ಪತ್ರ ಬರೆದಿದ್ದಾರೆ. ಅಧ್ಯಕ್ಷ
ಬರೆದ ಪತ್ರದಲ್ಲಿ, ಘಟನೆಯು ಗಂಭೀರ ಶ್ರದ್ಧೆಯ ಕೊರತೆಯನ್ನು ತೋರಿಸಿದೆ. ಐಟಿ ಶೋಧ ಕಾರ್ಯಾಚರಣೆ ವೇಳೆ ಮನೆಯಲ್ಲಿದ್ದ ವ್ಯಕ್ತಿಯು ಲೋಡ್ ಮಾಡಿದ ಬಂದೂಕು ತೆಗೆದುಕೊಂಡು ತನ್ನನ್ನು ತಾನೇ ಶೂಟ್ ಮಾಡಿಕೊಳ್ಳಬಹುದು ಎಂಬುದು ಆತಂಕಕಾರಿಯಾಗಿದೆ ಎಂದು ಎಂದಿದ್ದಾರೆ.
ರಾಯ್ ಅವರನ್ನು ಶೋಧದ ಸ್ಥಳದಲ್ಲಿ ಇರಿಸುವ ಬದಲು ಮತ್ತೊಂದು ಕೊಠಡಿಗೆ ಸ್ಥಳಾಂತರಿಸಲಾಗಿದೆ ಎನ್ನುವ ಇತ್ತೀಚಿನ ವರದಿಗಳನ್ನು ವಿಜಯನ್ ಉಲ್ಲೇಖಿಸಿದ್ದು, ಇದು ಗಂಭೀರವಾದ ಲೋಪ ಮತ್ತು ಅಗತ್ಯ ಶಿಷ್ಟಾಚಾರ ಅನುಸರಿಸದಿರುವುದಕ್ಕೆ ಸಾಕ್ಷಿ ಎಂದಿದ್ದಾರೆ.
ಇದನ್ನೂ ಓದಿ: ದ್ವೇಷ ಭಾಷಣ ಮಸೂದೆ ತಡೆಗಟ್ಟಲು ರಾಷ್ಟ್ರಪತಿಗಳಿಗೆ ಕಳಿಸಿದ್ದಾರೆ: ರಾಜ್ಯಪಾಲರ ವಿರುದ್ಧ ಪರಮೇಶ್ವರ್ ಆರೋಪ
ಬೆಂಗಳೂರು ಪೊಲೀಸರ ಪ್ರಕಾರ, ದಾಳಿಯ ಸಮಯದಲ್ಲಿ ರಾಯ್ ಮತ್ತೊಂದು ಕೋಣೆಗೆ ಹೋಗಿ ತನ್ನ ಪರವಾನಗಿ ಪಡೆದ ಪಿಸ್ತೂಲಿನಿಂದ ಎದೆಗೆ ಗುಂಡು ಹಾರಿಸಿಕೊಂಡರು. ಹತ್ತಿರದ ಖಾಸಗಿ ಆಸ್ಪತ್ರೆಯ ವೈದ್ಯರು ಅವರನ್ನು “ಸತ್ತಿದ್ದಾರೆ” ಎಂದು ಘೋಷಿಸಿದರು.
ಕೇಂದ್ರ ಸರ್ಕಾರ ವಿಳಂಬ ಮಾಡದೆ ಇಂತಹ ತನಿಖೆಗೆ ಆದೇಶಿಸಬೇಕು ಮತ್ತು ನಿಗದಿತ ಕಾಲಮಿತಿಯೊಳಗೆ ಸಮಗ್ರ ವರದಿಯನ್ನು ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಬೇಕು. ಭವಿಷ್ಯದಲ್ಲಿ ಇಂತಹ ದುರಂತ ಘಟನೆಗಳು ನಡೆಯದಂತೆ ನಿಷ್ಪಕ್ಷಪಾತ ತನಿಖೆ ಅತ್ಯಗತ್ಯ ಎಂದು ಅವರು ಒತ್ತಾಯಿಸಿದ್ದಾರೆ.
ಸುರಕ್ಷಿತ ಮತ್ತು ಮಾನವೀಯ ರೀತಿಯಲ್ಲಿ ಶೋಧಗಳನ್ನು ನಡೆಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಸಿಜೆ ರಾಯ್ ಅವರಂತೆ ಅಮೂಲ್ಯವಾದ ಮಾನವ ಜೀವವನ್ನು ಕಳೆದುಕೊಳ್ಳುವ ಯಾವುದೇ ಕ್ರಮವನ್ನು ನಾಗರಿಕ ಪ್ರಜಾಪ್ರಭುತ್ವ ಸಮಾಜದಲ್ಲಿ ಸಮರ್ಥಿಸಲಾಗುವುದಿಲ್ಲ ಎಂದು ವಿಜಯನ್ ಹೇಳಿದ್ದಾರೆ.
ಇದನ್ನೂ ನೋಡಿ: ಬೆಂಗಳೂರು ಚಲನಚಿತ್ರೋತ್ಸವ| ಪ್ಯಾಲೆಸ್ತೀನ್ ಸಿನಿಮಾಗಳಿಗೆ ನಿರ್ಬಂಧ -ಸಿನಿಮಾಸಕ್ತರ ಆಕ್ರೋಶ Janashakthi Media
