ಬೆಂಗಳೂರು: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಒಡೆದ ಜಾಗದಲ್ಲಿ ರಾಮಮಂದಿರ ಕಟ್ಟಡದ ಉದ್ಘಾಟನೆ ವೇಳೆ ಇತ್ತ ರಾಜ್ಯ ರಾಜಧಾನಿಯ ಜಯನಗರದ ಬೀದಿಗಳಲ್ಲಿ ‘ಕಾಶಿ ಮಥುರಾ ಬಾಕಿ ಹೈ’ (ಕಾಶಿ ಮತ್ತು ಮಥುರಾ ಉಳಿದಿದೆ) ಎಂದು ಕಾಶಿ ಮತ್ತು ಮಥುರಾದ ಮಸೀದಿಗಳನ್ನು ಒಡೆಯಲಿದ್ದೇವೆ ಎಂದು ದ್ವೇಷ ಹರಡುವ ಘೋಷಣೆ ಕೂಗಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಮಾಡಿದೆ.
ಬಾಬರಿ ಮಸೀದಿ ಒಡೆದು ನಿರ್ಮಿಸಲಾಗಿರುವ ಕಟ್ಟಡದ ಉದ್ಘಾಟನೆ ಇದ್ದ ಕಾರಣಕ್ಕೆ ಬೆಂಗಳೂರಿನ ಕೆಲವು ದೇವಸ್ಥಾನಗಳಲ್ಲಿ ಮತ್ತು ನಗರದ ಜೆಪಿ ನಗರ, ಬನಶಂಕರಿ ಮತ್ತು ಜಯನಗರ ಪ್ರದೇಶಗಳಲ್ಲಿ ಸಣ್ಣ ಟೆಂಟ್‌ಗಳನ್ನು ಹಾಕಲಾಗಿತ್ತು. ಅಲ್ಲಿ ವಿಶೇಷ ಪ್ರಾರ್ಥನೆಗಳು ಮತ್ತು ಭಕ್ತಿಗೀತೆಗಳನ್ನು ನುಡಿಸಲಾಗಿತ್ತು. ಬೆಂಗಳೂರು
ಇದನ್ನೂ ಓದಿ: ಆಂಧ್ರಪ್ರದೇಶ | 42 ದಿನಗಳ ಹೋರಾಟ ಗೆದ್ದ ಅಂಗನವಾಡಿ ಅಮ್ಮಂದಿರು; ಕೊನೆಗೂ ಮಂಡಿಯೂರಿದ ಜಗನ್ ಸರ್ಕಾರ
ಅದರಂತೆ ಜಯನಗರ ಪೊಲೀಸ್ ಠಾಣೆ ಎದುರಿನ ವಿನಾಯಕ ದೇವಸ್ಥಾನದ ಹೊರಗೆ ಕಟ್ಟಡದ ಉದ್ಘಾಟನೆಯ ನೇರಪ್ರಸಾರ ಕೂಡಾ ನಡೆದಿದೆ ಎಂದು ವರದಿಯಾಗಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ನಟಿ ತಾರಾ ಉಪಸ್ಥಿತರಿದ್ದರು ಎಂದು ವರದಿಯಾಗಿದೆ. ಈ ವೇಳೆ ಕಾಶಿ ಮತ್ತು ಮಥುರಾದ ಮಸೀದಿ ದ್ವಂಸ ಮಾಡಲಿದ್ದೇವೆ ಎಂದು ಘೋಷಣೆ ಕೂಗಲಾಗಿದೆ ಎಂದು ದಿ ನ್ಯೂಸ್ ಮಿನಿಟ್ ವರದಿ ಹೇಳಿದೆ. ಬೆಂಗಳೂರು
ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಕೇಸರಿ ಶಾಲು ಧರಿಸಿದ ವ್ಯಕ್ತಿಯೊಬ್ಬರು, “ಇದು ಕೇವಲ ಆರಂಭ. ಅವರು ಅನೇಕ ದೇವಾಲಯಗಳನ್ನು ನಾಶಪಡಿಸಿದರು. ಅಯೋಧ್ಯೆಯು ನಾವು ಅವುಗಳನ್ನು ಮರಳಿ ಪಡೆದ ಒಂದು ಉದಾಹರಣೆಯಾಗಿದೆ. ಆದರೆ ಇದೀಗ ಈ ಕ್ಷಣವನ್ನು ಆನಂದಿಸುವ ಸಮಯ” ಎಂದು ಹೇಳಿದ್ದಾಗಿ ವರದಿಯಾಗಿದೆ.
ಈ ಬಗ್ಗೆ ಜನಶಕ್ತಿ ಮೀಡಿಯಾ ಜೊತೆಗೆ ಮಾತನಾಡಿದ ಜಯನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್‌ಟೇಬಲ್ ಮಹೇಶ್, “ಈ ರೀತಿ ಘೋಷಣೆ ಕೂಗಿರುವ ಬಗ್ಗೆ ನಮಗೆ ಯಾವುದೆ ಮಾಹಿತಿ ಇಲ್ಲ. ಜೊತೆಗೆ ಯಾವುದೆ ದೂರು ಕೂಡಾ ಬಂದಿಲ್ಲ” ಎಂದು ಹೇಳಿದ್ದಾರೆ.
ವಾರಣಾಸಿಯ ಜ್ಞಾನವಾಪಿ ಮಸೀದಿಯು ಕಾಶಿ ವಿಶ್ವನಾಥ ದೇವಾಲಯದ ಸಮೀಪದಲ್ಲಿದೆ. ಈ ಮಸೀದಿಯನ್ನು ಧ್ವಂಸ ಮಾಡಬೇಕು ಎಂದು ಬಿಜೆಪಿ ಪರ ಕಾರ್ಯಕರ್ತರು ಆಗ್ರಹಿಸುತ್ತಿದ್ದಾರೆ. ಮಸೀದಿಯನ್ನು ದೇವಾಲಯದ ಅವಶೇಷಗಳ ಮೇಲೆ ನಿರ್ಮಿಸಲಾಗಿದೆ ಎಂಬುವುದು ಅವರ ಆರೋಪವಾಗಿದೆ. ಬೆಂಗಳೂರು
ಮಥುರಾದಲ್ಲಿರುವ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ನಿರ್ಮಿಸಲಾದ ಶಾಹಿ ಈದ್ಗಾ ಮಸೀದಿಯು ಕೃಷ್ಣ ಜನ್ಮಸ್ಥಾನದ ದೇವಸ್ಥಾನದ ಪಕ್ಕದಲ್ಲಿರುವ ಕೃಷ್ಣನ ಜನ್ಮಸ್ಥಳದಲ್ಲಿದೆ ಎಂದು ಸಂಘಪರಿವಾರದ ಕಾರ್ಯಕರ್ತರ ಆರೋಪವಾಗಿದೆ. ಕಳೆದ ವರ್ಷ ಅಲಹಾಬಾದ್ ಹೈಕೋರ್ಟ್ ಕೃಷ್ಣ ಜನ್ಮಭೂಮಿ ಮತ್ತು ಈದ್ಗಾ ವಿವಾದಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಆಲಿಸುತ್ತಿದೆ.
ವಿಡಿಯೊ ನೋಡಿ: ದೇಶವೆಂದರೆ “ಅಂಕಿ – ಅಂಶಗಳ ಆಟವಲ್ಲ”, – ಎಸ್ ವರಲಕ್ಷ್ಮಿ Janashakthi Media