ಹಳ್ಳಿಗಳಿಗೆ ಕೊರೊನಾ ಹಬ್ಬಲು ಸರಕಾರದ ಲಾಕ್‌ಡೌನ್‌ ಕಾರಣವೆ?

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಹೆಚ್ಚಾಗುವುದಕ್ಕ ಸರಕಾಗಳು ಕೊಡುತ್ತಿರುವ ಕಾರಣ ಏನು ಅಂದ್ರೆ  ನಗರ ಪ್ರದೇಶಕ್ಕೆ ದುಡಿಯುವುದಕ್ಕಾಗಿ ವಲಸೆ ಬಂದಿದ್ದ ಕಾರ್ಮಿಕರು ಹಳ್ಳಿಗಳಿಗೆ ಹೋದ್ರು, ಆ ಕಾರಣದಿಂದಾಗಿ ಕೋವಿಡ್‌ ಪ್ರಮಾಣ ಹೆಚ್ಚಾಗಿದೆ ಎಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಗಂಭೀರ ಆರೋಪವನ್ನು ಮಾಡುತ್ತಿದ್ದರೆ, ವಲಸೆ ಕಾರ್ಮಿಕರು  ಮಾತ್ರ ಸರಕಾರದತ್ತ ಬೊಟ್ಟುಮಾಡಿ ತೋರಸ್ತಿದ್ದಾರೆ. ಹಳ್ಳಿಗಳಿಗೆ ಕೋವಿಡ್‌ ಹರಡಲು ಸರಕಾರ ಹಾಗೂ ಸರಕಾರ ಜಾರಿ ಮಾಡಿದ ಲಾಕ್‌ಡೌನ್‌ ಕಾರಣ ಎಂದು ಆರೋಪಿಸಿದ್ದಾರೆ.

ಗುರುರಾಜ ದೇಸಾಯಿ

ಕೊರೊನಾದ ಎರಡನೇ ಅಲೆ ಈಗ ಸದ್ದಿಲ್ಲದೇ ಹಳ್ಳಿಗಳ ಕಡೆ ದಾಪುಗಾಲಿಡುತ್ತಿದೆ. ಕೊರೊನಾ  ಇನ್ನಷ್ಟು ಅನಾಹುತಗಳನ್ನು ಸೃಷ್ಟಿಸಬಹುದು ಎಂಬ ಭೀತಿ ಗ್ರಾಮೀಣ ಪ್ರದೇಶದ ಜನರನ್ನು ಕಾಡುತ್ತಿದೆ. ಇತ್ತ ಸರಕಾರದ ನಿರ್ಲಕ್ಷ್ಯ ಎಂದಿನಂತೆ ಮುಂದುವರೆದಿದೆ. ಸೌಲಭ್ಯಗಳಿದ್ದು ನಗರಗಳಲ್ಲಿ  ಹಾಹಾಕಾರ ನಿಂತಿರಲಿಲ್ಲ. ಸೌಲಭ್ಯಗಳಿಲ್ಲದ  ಹಳ್ಳಿಗಳ ಕಥೆ ಏನೂ ಎಂಬ ಪ್ರಶ್ನೆ ಈಗ ಸಹಜವಾಗಿ ಮೂಡುತ್ತಿದೆ.

ಗ್ರಾಮದ ಜನಸಂಖ್ಯೆ 4 ಸಾವಿರ ಇದ್ದರೆ ಅಲ್ಲಿ ಪ್ರತಿದಿನ ಒಬ್ಬರ ಸಾವು ಖಚಿತವಾಗುತ್ತಿದೆ.  ಅನೇಕ ಗ್ರಾಮಗಳಲ್ಲಿ ಪ್ರತಿದಿನದ ಸಾವಿನ ಸಂಖ್ಯೆ 5ಕ್ಕೆ ಏರಿಕೆಯಾಗಿದೆ. ಬಿಡದೇ ಕಾಡುತ್ತಿರುವ ಸತ್ತವರ ನೆರಳು ಒಂದುಕಡೆಯಾದ್ರೆ, ಮತ್ತೊಂದೆಡೆ  ಇತರೆ ರೋಗಗಳಿಗೆ ಸೂಕ್ತ ಚಿಕಿತ್ಸೆ ಸಿಗದೇ ಪರದಾಡುತ್ತಿರುವ ದೃಶ್ಯಗಳು , ಒಟ್ಟಿನಲ್ಲಿ ಹಳ್ಳಿಗಳು ಈಗ ಕೊರೋನಾ ಹಾಟ್‌ಸ್ಪಾಟ್ ಆಗಿವೆ.

ಹೌದು. ಕೊರೊನಾ 1ನೇ ಅಲೆಯಲ್ಲಿ ಸುರಕ್ಷಿತವಾಗಿದ್ದ ಹಳ್ಳಿಗಳಲ್ಲಿ ಇದೀಗ ಕೋವಿಡ್‌-19 ಎರಡನೇ ಅಲೆ ಸಾವುನೋವುಗಳನ್ನು ತಂದೊಡ್ಡಿದೆ.  ಗ್ರಾಮಗಳಲ್ಲಿನ  ಮುಗ್ದ ಜೀವಗಳು ಸದ್ದಿಲ್ಲದೇ ಮಣ್ಣು ಸೇರುತ್ತಿವೆ. ಸದಾ ಹಸನ್ಮುಖೀಗಳಾಗಿ ಆರೋಗ್ಯವಂತ ಜೀವನ ನಡೆಸಿದ್ದ ಹಳ್ಳಿಗರಲ್ಲಿ ಸೂತಕದ ಛಾಯೆ ಅವರಿಸಿದ್ದು, ಎಲ್ಲೆಡೆ ಸ್ಮಶಾನ ಮೌನ ಆವರಿಸಿದೆ. ಒಂದು ಕಡೆ ಲಾಕ್‌ಡೌನ್‌ನಿಂದ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡು, ಬೆಳೆದ ಬೆಳೆಗಳಿಗೂ ಸೂಕ್ತ ಬೆಲೆ ಸಿಕ್ಕದೇ ಒದ್ದಾಡುತ್ತಿದ್ದರೆ, ಇನ್ನೊಂದೆಡೆ ಮನೆಗೊಬ್ಬರಿಗೆ ಕೊರೊನಾ ವಕ್ಕರಿಸಿಕೊಂಡಿದ್ದು, ಚಿಕಿತ್ಸೆ ಪಡೆಯಲು ಪರದಾಟ ನಡೆಸುವ ಸ್ಥಿತಿ ಹಳ್ಳಿಗಳದ್ದಾಗಿದೆ. 60% ರಷ್ಟು ಹೊಸ ಪ್ರಕರಣಗಳು ಹಳ್ಳಿಗಾಡಿನಲ್ಲಿ ಪತ್ತೆಯಾಗುತ್ತಿರುವುದು ಆತಂಕದ ವಿಚಾರವಾಗಿದೆ.

ಇದನ್ನೂ ಓದಿ : ಕೋವಿಡ್ ಪ್ರಕರಣ ಇಳಿಮುಖ : ಅಸಲಿ ಕಾರಣವೇನು? ರಾಜ್ಯದಲ್ಲಿ 82% ಮಂದಿ ಲಸಿಕೆಗಾಗಿ ಕಾಯುತ್ತಿದ್ದಾರೆ.

ಹಳ್ಳಿಗಳಲ್ಲಿನ ಕೋವಿಡ್‌ ಪ್ರಮಾಣ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿ ಇದೆ. ಉತ್ತರ ಪ್ರದೇಶದಲ್ಲಿ ನಿರಂತರವಾಗಿ ಏರಿಕೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಜನವರಿಯಲ್ಲಿ 69.01 ರಷ್ಟು ಇದ್ದದ್ದು . ಫೆಬ್ರವರಿಯಲ್ಲಿ 70.04, ಮಾರ್ಚ್‌ನಲ್ಲಿ 58.09, ಏಪ್ರಿಲ್‌ನಲ್ಲಿ 69.09 ಇದ್ದರೆ.  ಮೇ ನಲ್ಲಿ 78.04 ಕ್ಕೆ ಹೆಚ್ಚಳವಾಗಿದೆ. ರಾಜಸ್ಥಾನದಲ್ಲಿ  ಜನವರಿಯಲ್ಲಿ 69.04 ಫೆಬ್ರವರಿಯಲ್ಲಿ 64, ಮಾರ್ಚ್‌ ನಲ್ಲಿ 72.03 ಏಪ್ರಿಲ್‌ ನಲ್ಲಿ 73.8 ಮೇ ನಲ್ಲಿ 74.03. ಹೆಚ್ಚಳವಾಗಿದೆ.

ಮಹಾರಾಷ್ಟ್ರದಲ್ಲಿ  ಜನವರಿಯಲ್ಲಿ 40.07,  ಪೆಬ್ರವರಿಯಲ್ಲಿ 48.9 ಮಾರ್ಚ್‌ ನಲ್ಲಿ 46.04, ಏಪ್ರಿಲ್‌ ನಲ್ಲಿ 49.05 ಮೇ ನಲ್ಲಿ 65.9 ರಷ್ಟು ಏರಿಕೆಯಾಗಿದೆ. ಕರ್ನಾಟಕದಲ್ಲಿ ಜನವರಿಯಲ್ಲಿ 45.07 ರಷ್ಟು ಇದ್ದದ್ದು ಫೆಬ್ರವರಿಯಲ್ಲಿ 41.07, ಮಾರ್ಚ್‌ನಲ್ಲಿ 34.08 ಏಪ್ರಿಲ್‌ ನಲ್ಲಿ 37.04 ಇದ್ದದ್ದು ಈಗ 54.08 ಕ್ಕೆ ಏರಿಕೆಯಗಿರುವುದು ಆತಂಕವನ್ನು ಸೃಷ್ಟಿಸುತ್ತಿದೆ.

ಕೇರಳ ರಾಜ್ಯದಲ್ಲಿ ಮಾತ್ರ ಗ್ರಾಮೀಣ ಭಾಗದಲ್ಲಿ ನಿಯಂತ್ರಣಕ್ಕೆ ತರುವು ಪ್ರಯತ್ನ ನಡೆಯುತ್ತಿದೆ. ಜನವರಿಯಲ್ಲಿ 49.0 ಇದ್ದದ್ದು ಫೆಭ್ರವರಿಯಲ್ಲಿ 48.07, ಮಾರ್ಚ್‌ನಲ್ಲಿ 44.06, ಏಪ್ರಿಲ್‌ನಲ್ಲಿ 41.04  ಮೇ ನಲ್ಲಿ 43.05 ರಷ್ಟಿದೆ. ಕೇರಳದಲ್ಲಿ ಆಸ್ಪತ್ರೆಗಳಲ್ಲಿ ಸೂಕ್ತ ಸೌಲಭ್ಯ ಇರುವಂತದ್ದು ವಿಶೇಷವಾಗಿ ಗ್ರಾಮೀಣ ಪ್ರದೇಶದ ಆರೋಗ್ಯ ಕೇಂದ್ರಗಳಲ್ಲಿ ಆರೈಕೆಯನ್ನು ಮುತುವರ್ಜಿಯಿಂದ ಮಾಡಲಾಗುತ್ತಿದೆ. ಆಕ್ಸಿಜನ್‌, ಬೆಡ್‌, ಲಸಿಕೆ ವಿಚಾರದಲ್ಲಿ ಕೇರಳ ರಾಜ್ಯ ನಿರ್ಲಕ್ಷ್ಯವನ್ನು ಮಾಡದೆ. ನಿರಂತರವಾಗಿ ವಿತರಣೆ ಮಾಡುತ್ತಿದೆ.

ಈ ರಾಜ್ಯಗಳಲ್ಲಿ ಒಂದೊಂದು ಪ್ರದೇಶದಲ್ಲಿ ಭಿನ್ನವಾಗಿ ಕಂಡರೂ ಹಳ್ಳಿಗಳಲ್ಲಿ ಕೋವಿಡ್‌ ಹೆಚ್ಚಾಗುತ್ತಿರುವುದು ಅಪಾಯದ ಸಂಕೇತವಾಗಿದೆ.  ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ಹೆಚ್ಚಾಗುವುದಕ್ಕ ಸರಕಾಗಳು ಕೊಡುತ್ತಿರುವ ಕಾರಣ ಏನು ಅಂದ್ರೆ  ನಗರ ಪ್ರದೇಶಕ್ಕೆ ದುಡಿಯುವುದಕ್ಕಾಗಿ ವಲಸೆ ಬಂದಿದ್ದ ಕಾರ್ಮಿಕರು ಹಳ್ಳಿಗಳಿಗೆ ಹೋದ್ರು, ಆ ಕಾರಣದಿಂದಾಗಿ ಕೋವಿಡ್‌ ಪ್ರಮಾಣ ಹೆಚ್ಚಾಗಿದೆ ಎಂದು ಕರ್ನಾಟಕ ಸೇರಿದಂತೆ ಇತರೆ ರಾಜ್ಯಗಳು ಗಂಭೀರ ಆರೋಪವನ್ನು ಮಾಡುತ್ತಿದ್ದರೆ, ವಲಸೆ ಕಾರ್ಮಿಕರು  ಮಾತ್ರ ಸರಕಾರದತ್ತ ಬೊಟ್ಟುಮಾಡಿ ತೋರಸ್ತಿದ್ದಾರೆ. ಹಳ್ಳಿಗಳಿಗೆ ಕೋವಿಡ್‌ ಹರಡಲು ಸರಕಾರ ಹಾಗೂ ಸರಕಾರ ಜಾರಿ ಮಾಡಿದ ಲಾಕ್‌ಡೌನ್‌ ಕಾರಣ ಎಂದು ಆರೋಪಿಸಿದ್ದಾರೆ.

ನೆಮ್ಮದಿಯಾಗಿದ್ದ ಹಳ್ಳಿಗಳಿಗೆ ಕೋವಿಡ್‌ ಅಂತೂ ಬಂದಾಗಿದೆ. ಆದರೆ ಅದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರಕಾರಗಳು ಇನ್ನು ಮುತುರ್ಜಿ ತೋರುತ್ತಿಲ್ಲ. ಮೊದಲೆ ಹಳ್ಳಿಗಳೆಂದೆರೆ ಮೂಗು ಮುರಿಯುವ ಸರಕಾರ ಇಂತಹ ಸಂದರ್ಭದಲ್ಲಾದರೂ ಎಚ್ಚೆತ್ತುಕೊಂಡು ಹಳ್ಳಿಗಳಿಗೆ ರಕ್ಷಣೆ ನೀಡಬೇಕಿತ್ತು ಆದರೆ ಎಲ್ಲಾ ವಿಚಾರದಲ್ಲೂ ಹಳ್ಳಿಗಳಿಗೆ ಸರಕಾರ ತಾರತಮ್ಯ ಮಾಡುತ್ತಿದೆ ಎಂಬುದಕ್ಕೆ ಇಲ್ಲೊಂದು ರಿಪೋರ್ಟ್‌ ಇದೆ ನೋಡೋಣ ಬನ್ನಿ.

ಇದನ್ನೂ ಓದಿ : ಕೋವಿಡ್‌ ನಿರ್ವಹಣೆ : ಮೃತರ ವಿಚಾರದಲ್ಲಿ ಸುಳ್ಳು ಹೇಳಿ, ತನ್ನದೆ ಇಲಾಖೆಯ ಅಂಕಿ ಅಂಶಗಳಿಂದ ಬೆತ್ತಲಾದ ಗುಜರಾತ್‌ ಮಾಡೆಲ್

ಸರಕಾರ ಲಸಿಕೆ ವಿತರಣೆಯಲ್ಲಿ ಗ್ರಾಮೀಣ ಪ್ರದಶಕ್ಕೊಂದು, ನಗರಪ್ರದೇಶಕ್ಕೊಂದು ತಾರತ್ಮುವನ್ನು ಮಾಡಿದಂತೆ ಕಾಣುತ್ತಿದೆ. ನಗರ ಪ್ರದೇಶಕ್ಕೂ, ಗ್ರಾಮೀಣ ಪ್ರದೇಶಕ್ಕೂ  ದೊಡ್ಡ ಪ್ರಮಾಣದಲ್ಲಿ ಲಸಿಕೆ ವಿತರಣೆಯಲ್ಲಿ ಅಸಮಾನತೆ ಕಂಡು ಬರುತ್ತಿದೆ.  ಲಸಿಕೆ ವಿತರಣೆಯಲ್ಲಿ  ಮೊದಲ ಡೋಸ್‌ ನ್ನು ಪಡೆದ ರಾಜ್ಯಗಳಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ವ್ಯತ್ಯಾಸ ಇದೆ.  ಮಹಾರಾಷ್ರ್ಟದಲ್ಲಿ ನಗರ ಪ್ರದೇಶದಲ್ಲಿ  100  ಜನರಲ್ಲಿ ಮೊದಲ ಡೋಸ್‌ ನ್ನು 32.14 ರಷ್ಟು ಜನ ಪಡೆದಿದ್ದಾರೆ.  ಗ್ರಾಮೀಣ ಪ್ರದೇಶದಲ್ಲಿ 14.71 ರಷ್ಟು ಜನ ಪಡೆದುಕೊಂಡಿದ್ದಾರೆ.   ಮದ್ಯಪ್ರದೇಶದಲ್ಲಿ  ನಗರ ಪ್ರದೇಶದಲ್ಲಿ  100  ಜನರಲ್ಲಿ ಮೊದಲ ಡೋಸ್‌ ನ್ನು 23.18 ರಷ್ಟು ಜನ ಪಡೆದಿದ್ದಾರೆ.  ಗ್ರಾಮೀಣ ಪ್ರದೇಶದಲ್ಲಿ 10.86 ರಷ್ಟು ಜನ ಪಡೆದುಕೊಂಡಿದ್ದಾರೆ. ಕರ್ನಾಟಕದಲ್ಲಿ ನಗರ ಪ್ರದೇಶದಲ್ಲಿ  100  ಜನರಲ್ಲಿ ಮೊದಲ ಡೋಸ್‌ ನ್ನು 23.44 ರಷ್ಟು ಜನ ಪಡೆದಿದ್ದಾರೆ.  ಗ್ರಾಮೀಣ ಪ್ರದೇಶದಲ್ಲಿ 17.17 ರಷ್ಟು ಜನ ಪಡೆದುಕೊಂಡಿದ್ದಾರೆ. ಹೀಗೆ ಗ್ರಾಮೀಣ ಮತ್ತು ನಗರ ಪ್ರದೇಶದಲ್ಲಿ ಲಸಿಕೆಯ ವ್ಯತ್ಯಾಸವನ್ನು ನಾವು ತಿಳಿಯಬಹುದು.

ಎರಡು ಡೋಸ್‌ ನ್ನು ನೀಡುತ್ತಿರುವ ರಾಜ್ಯಗಳಲ್ಲಿ ಮಹಾರಾಷ್ಟ್ರದಲ್ಲಿ  ಗ್ರಾಮೀಣ ಪ್ರದೇಶದಲ್ಲಿ 2.86 ನಷ್ಟು ಲಸಿಕೆ ನೀಡಿದ್ದರೆ. ನಗರ ಪ್ರದೇಶದಲ್ಲಿ 7.25 ಪ್ರತಿಶತ ಜನರಿಗೆ ಲಸಿಕೆ ನೀಡಲಾಗಿದೆ. ಅಂದರೆ ಗ್ರಾಮಣ ಭಾಗದಲ್ಲಿ 100 ಜನರಿಲ್ಲಿ ಇಬ್ಬರಿಂದ ಮೂರು ಜನರಿಗೆ. ನಗರ ಪ್ರದೇಶದಲ್ಲಿ  7 ರಿಂದ 8 ಜನರಿಗೆ ವಿತರಣೆ ಮಾಡಲಾಗುತ್ತಿದೆ. ಮಧ್ಯಪ್ರದೇಶದಲ್ಲಿ ನಗರ ಪ್ರದೇಶದಲ್ಲಿ  4.96, ಗ್ರಾಮೀಣ ಪ್ರದೇಶದಲ್ಲಿ 1.84ರಷ್ಟು ಜನರಿಗೆ ಲಸಿಕೆ ನೀಡಿದ್ರೆ.  ಕರ್ನಾಟಕದಲ್ಲಿ ನಗರ ಪ್ರದೇಶದಲ್ಲಿ 5.82 ರಷ್ಟು, ಗ್ರಾಮೀಣ ಭಾಗದಲ್ಲಿ 3.4 ರಷ್ಟು ಜನರಿಗೆ ಲಸಿಕೆ ಹಾಕಿಸಿಕೊಂಡಿದ್ದಾರೆ.

ವಿವಿಧ ವರ್ಗದ ಫಲಾನುಭವಿಗಳಿಗೆ ಇದುವರೆಗೆ ಒಂದು ಕೋಟಿಗಿಂತ ಹೆಚ್ಚು ಪ್ರಮಾಣದ ಲಸಿಕೆಗಳನ್ನು ನೀಡಿದ ಕೆಲವೇ ರಾಜ್ಯಗಳಲ್ಲಿ ಕರ್ನಾಟಕವು ಒಂದು ಆದರೂ, ನಗರ ಮತ್ತು ಗ್ರಾಮೀಣ ಪ್ರದೇಶಗಳ ನಡುವೆ ಸಾಕಷ್ಟು ಅಂತರವಿದೆ. ಮೇ 20  ರವರೆಗೆ ರಾಜ್ಯದಲ್ಲಿ 1,17,94,907 ಜನರಿಗೆ ಲಸಿಕೆ ನೀಡಲಾಗಿದೆ.  ಇದರಲ್ಲಿ 92,23,948  ಜನ ಮೊದಲ ಲಸಿಕೆ ಪಡೆದಿದ್ದರೆ.  25,70,959  ಜನ ಎರಡನೇ ಲಸಿಕೆ ಪಡೆದಿದ್ದಾರೆ.  ರಾಜುಕ್ಕೆ ಬಂದ ಲಸಿಕೆಯಲ್ಲಿ  20% ಕ್ಕಿಂತ ಹೆಚ್ಚು ಲಸಿಕೆಯನ್ನು ಬೆಂಗಳೂರಿನಲ್ಲಿ ನೀಡಲಾಗಿದೆ.  ಇದು ಬಿಬಿಎಂಪಿ ಪ್ರದೇಶಗಳಲ್ಲಿ 18.73%  ಆಗಿದ್ದರೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ 2.75%  ಆಗಿದೆ.  ಮೈಸೂರಿನಲ್ಲಿ  ಒಟ್ಟು ಡೋಸೇಜ್‌ಗಳಲ್ಲಿ 7.05% ಅನ್ನು ನೀಡಲಾಗಿದೆ. ಯಾದಗಿರಿ ಮತ್ತು ಕೊಡುಗಿನಲ್ಲಿ 1% ಡೋಸ್‌ ಗಳನ್ನು ನೀಡಲಾಗಿದೆ. ಲಸಿಕೆಯ ಕೊರತೆ,  ಆ ಜಿಲ್ಲೆಗಳಿಗೆ ಸರಿಯಾಗಿ ಹಂಚದಿರುವ ಅಸಮಾನತೆಯನ್ನು ಇದು ತೋರುತ್ತಿದೆ.

ಒಟ್ಟಾರೆ ಈ ಅಂಕಿ ಅಂಶದ ಪ್ರಕಾರ ಬೆಂಗಳೂರು ನಗರವು ಮೇ 20 ರವರೆಗೆ 100 ಜನರಲ್ಲಿ 26 ಜನರಿಗೆ ಲಸಿಕೆ ನೀಡಿದ್ದರೆ.  ಕರ್ನಾಟಕದ ಉಳಿದ ಜಿಲ್ಲೆಗಳು 100 ಜನರಲ್ಲಿ 18 ಜನರಿಗೆ ಲಸಿಕೆ ನೀಡಲಾಗಿದೆ..  ಎರಡನೆಯ ಲಸಿಕೆ ನೀಡುವಲ್ಲಿ ಈ ಅಸಮಾನತೆಯು ಹೆಚ್ಚು ಸ್ಪಷ್ಟವಾಗಿರುತ್ತದೆ. ಬೆಂಗಳೂರು ನಗರದಲ್ಲಿ 100 ಜನರಲ್ಲಿ 7 ಜನರಿಗೆ ಲಸಿಕೆ ನೀಡಿದರೆ,  ಡೋಸ್‌ಗಳನ್ನು ಇತರ ಜಿಲ್ಲೆಗಳಲ್ಲಿ 3 ಜನರಿಗೆ ಮಾತ್ರ ಸಲಿಕೆ ನೀಡಲಾಗುತ್ತಿದೆ.  ಲಸಿಕೆಯನ್ನು ನೀಡುವುದಕ್ಕೆ ಗ್ರಾಮೀಣ ಭಾಗದಲ್ಲಿ ಸೌಲಭ್ಯಗಳಲ್ಲಿಲ್ಲ ಅಂತಾ ಅಲ್ಲ. ಅಲ್ಲೂ ಸೌಲಭ್ಯಗಳಿವೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ಹಾಕುವ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ. ಲಸಿಕೆಯ ಕೊರತೆ ಇದಕ್ಕೆ ಮುಖ್ಯ ಕಾರಣ ಆಗಿದೆ. ನಗರ ಪ್ರದೇಶದಲ್ಲಿ ಒಂದಿಷ್ಟು ಜನ ಲಸಿಕೆ ವಿತರಣೆಗೆ ಪ್ರತಿರೋಧ ತೋರಿದ್ದಾಗಿ ಲಸಿಕೆ ಅಭಿಯಾನ ನಗರ ಪ್ರದೇಶಕ್ಕೆ ತಿರುಗಿ ಗ್ರಾಮೀಣ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಲಾಯಿತು.

ಇದನ್ನೂ ಓದಿ : ರಾಜ್ಯದಲ್ಲಿ 70, ದೇಶದಲ್ಲಿ ಸಾವಿರ ವೈದ್ಯರು ಕೋವಿಡ್ ಗೆ ಬಲಿ

ಗ್ರಾಮೀಣ ಪ್ರದೇಶದಲ್ಲಿ ಕೋವಿಡ್‌ ವಾರಿಯರ್‌ ಆಗಿ ಕಾರ್ಯ ನಿರ್ವಹಿಸುತ್ತಿರುವ ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಸರಿಯಾದ ಸೌಲಭ್ಯಗಳನ್ನು ನೀಡುತ್ತಿಲ್ಲ. ಪಿಪಿಇ ಕಟ್ಟೆ ಕಥೆ ದೂರ ಇಳಿತು. ಕನಿಷ್ಟ ಗ್ಲೌಸ್‌, ಸ್ಯಾನೀಟೈಸರ್‌, ಟ್ಯಾಬ್ಲೆಟ್‌ ಗಳ ಕಿಟ್‌ ನೀಡುತ್ತಿಲ್ಲ.  ಇದು ಅವರ ಆರೋಗ್ಯದ ಮೇಲೆ ಸಮಸ್ಯೆ ಬೀರುವ ಜೊತೆಗೆ ಇತರರ ಮೇಲೂ ಪ್ರಭಾವ ಬೀರುತ್ತದೆ. ಕೋವಿಡ್‌ ವಾರಿಯರ್‌ಗಳು ಕೋವಿಡ್‌ ಪೀಡಿತರ ಮನೆಗೆ ಭೇಟಿ ಕೊಡಬೇಕಾಗುತ್ತೆ. ಅವರು ಆಸ್ಪತ್ರೆ ಸೇರುವಂತೆ ನೋಡಿಕೊಳ್ಳಬೇಕಾಗುತ್ತು. ಅದೇ ವೇಳೆ ಅವರು ಇತರರ ಮನೆಗೆ ಭೇಟಿ ಕೊಟ್ಟಾಗ ಅವರನ್ನು ಅನುಮಾನದಿಂದ ನೋಡುವುದು, ಅವಮಾನ ಮಾಡುತ್ತಿರುವುದು ಅನೇಕ ಕಡೆಗಳಲ್ಲಿ ಕಂಡು ಬುತ್ತಿದೆ.

ಮುಖ್ಯವಾಗಿ ಜನಜಾಗೃತಿ ಮೂಡಿಸುವಲ್ಲಿ ಸರಕಾರ ಮತ್ತು ಜಿಲ್ಲಾಡಳಿತಗಳು  ವಿಫಲವಾಗುತ್ತಿರುವುದನ್ನು ನೋಡುತ್ತಿದ್ದೇವೆ.  ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜ್ವರ, ಶೀತ, ಕೆಮ್ಮಿನ ಚಿಕಿತ್ಸೆಗಾಗಿ ಜನ ಕಿಕ್ಕಿರಿದು ಸೇರುತ್ತಿದ್ದಾರೆ. ಇವರ‍್ಯಾರಿಗೂ ಕೊರೊನಾ ಪರೀಕ್ಷೆ ನಡೆಯುತ್ತಿಲ್ಲ. ಮುನ್ನೆಚ್ಚರಿಕೆ ಕ್ರಮಗಳ ಕುರಿತು ಅರಿವು ಮೂಡಿಸುವವರಿಲ್ಲ. ಬೆಳಗ್ಗೆ ಎದ್ದ ತಕ್ಷಣ ಗುಟಕಾ, ಎಲೆ ಅಡಿಕೆ ಹಾಕಿಕೊಂಡು ಜಿಗಿಯುತ್ತಾ ಊರ ತುಂಬಾ ಓಡಾಡುವವರ ಸಂಖ್ಯೆ ಹೆಚ್ಚಿರುತ್ತದೆ.  ಇದರಲ್ಲಿ ಯಾರೊಬ್ಬರಿಗಾದರೂ ಕೊರೊನಾ ಬಂದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಕ್ವಾರಂಟೈನ್‌ ನಿಯಮಾವಳಿಯೇ ಪಾಲನೆಯಾಗುತ್ತಿಲ್ಲ. ಇನ್ನೂ ಜಿಲ್ಲಾಡಳಿತ, ತಾಲೂಕಾಡಳಿತ ಆಯಾ ಗ್ರಾಪಂಗಳು ಬರೀ ಧ್ವನಿವರ್ಧಕಗಳ ಮೂಲಕ ಟೆಸ್ಟ್‌ ಮಾಡಿಸಿಕೊಳ್ಳಿ, ಬೇರೆ ಊರಿಂದ ಬಂದವರು ಕ್ವಾರಂಟೈನ್‌ ಆಗಿ ಎಂದು ಹೇಳುತ್ತಿದೆ. ಕ್ವಾರಂಟೈನ್‌ ಆಗೋದಕ್ಕೆ ಹಳ್ಳಿಗಳಲ್ಲಿ ಬಹುತೇಕರು 20*30 ಜಾಗದಲ್ಲಿ ಜೀವನ ಮಾಡುತ್ತಿರುತ್ತಾರೆ. ಎಷ್ಟೋಜನ ಗುಡಿಸಲು ವಾಸಿಗಳಾಗಿದ್ದಾರೆ. ಊರಿಗೆ ಬಂದವರು ಪರೀಕ್ಷಿಸಿ ಕನಿಷ್ಟ 15 ದಿನಗಳ ಕಾಲ ತಾಲ್ಲೂಕಿಗೊಂದು ಕ್ವಾರಂಟೈನ್‌ ಕೇಂದ್ರ ತೆರೆದಿದ್ದರೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.  ಹೀಗಾಗಿ, ಗ್ರಾಮೀಣ ಪ್ರದೇಶಕ್ಕೆ ಮರಳಿ ಬಂದವರೆಲ್ಲರೂ ಬೇಕಾಬಿಟ್ಟಿಯಾಗಿ ಓಡಾಡಿದರು. ಇದರ ಪರಿಣಾಮ  ಕೋವಿಡ್‌ ಈಗ ಇಡೀ ಊರೆಲ್ಲ ಹಬ್ಬುತ್ತಿದೆ.

ಹೀಗೆ ಹಳ್ಳಿ ಹಳ್ಳಿಗಳಿಗೆ ಕೊರೋನಾ ಹಬ್ಬುತ್ತಿದ್ದರೂ ಗ್ರಾಮೀಣ ಪ್ರದೇಶದಲ್ಲಿ ತಾವಾಗಿಯೇ ಟೆಸ್ಟ್‌ ಮಾಡಿಸಿಕೊಳ್ಳಲು ಮಾತ್ರ ಜನತೆ ಮುಂದೆ ಬರುತ್ತಿಲ್ಲ. ನೆಗಡಿ, ಕೆಮ್ಮು, ಜ್ವರ, ಮೈ ಕೈ ನೋವು ಕಾಣಿಸಿಕೊಂಡರೂ ಇದು ಕೊರೋನಾ ಅಲ್ಲ ಎಂಬ ನಿರ್ಲಕ್ಷ್ಯ ಭಾವನೆ ತಾಳುತ್ತಿದ್ದಾರೆ.  ಟೆಸ್ಟ್‌ ಮಾಡಿಸಿಕೊಳ್ಳಲು ಹೋದರೆ ಕೊರೋನಾ ಪಾಸಿಟಿವ್‌ ಬಂದಿದೆ ಎಂದು ಹೇಳಿ ಬಿಡುತ್ತಾರೋ ಎಂಬ ಭೀತಿ ಎಲ್ಲರಲ್ಲೂ ಮನೆ ಮಾಡಿದೆ.  ಎಲ್ಲಿ ಸಾರ್‌, ಟೆಸ್ಟ್‌ ಮಾಡಿಸೋಕೆ ಹೋದರೆ ಕೊರೋನಾ ಪಾಸಿಟಿವ್‌ ಎಂದರೆ ಏನು ಮಾಡೋದು? ಮರಳಿ ವಾಪಸ್‌ ಬರುತ್ತೇವೆ ಎಂಬ ನಂಬಿಕೆ ಕೂಡ ಇಲ್ಲ. ಅದಕ್ಕೆ ಟೆಸ್ಟ್‌ ಮಾಡಿಸಿಕೊಳ್ಳೊಕೆ ಹೋಗುತ್ತಿಲ್ಲ ಎಂದು ಹೇಳುವುದು ಮಾಮೂಲಿಯಾಗಿದೆ.  ಇತ್ತೀಚೆಗೆ ಇಂತಹ ನಿರ್ಲಕ್ಷ್ಯದಿಂದಾಗಿ ಹಲವುಜನ ಸಾಯುತ್ತಿದ್ದಾರೆ.

ಹಾಗಾಗಿ ಸರಕಾರ ಜನಜಾಗೃತಿ ಮೂಡಿಸಲು ಪಂಚಾಯತ್‌ ಮಟ್ಟದಲ್ಲಿ ಯೋಜನೆಗಳನ್ನು ಹಾಕಿಕೊಳ್ಳಬೇಕಿದೆ. ವಿಶೇಷವಾಗಿ ಉತ್ತರ ಕರ್ನಾಟಕದ ಹಳ್ಳಿಗಳಲ್ಲಿ ಜನ ಕೋವಿಡ್‌ ಬಗ್ಗೆ ಅಷ್ಟಾಗಿ ತಲೆ ಕೆಡಸಿಕೊಂಡಿಲ್ಲ. ಅವರಿಗೆ ಇದರ ಬಗ್ಗೆ ಅರಿವು ಮೋಡಿಸಬೇಕಿದೆ. ಕಲ್ಯಾಣ ಕರ್ನಾಕದ ಕೆಕೆಆರ್‌ಡಿಬಿಯಲ್ಲಿ ಬಳಕೆ ಆಗದೆ ಬಿದ್ದರುವ ದುಡ್ಡಲ್ಲಿ ಕನಿಷ್ಟ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಬಲಪಡಿಸುವ ಕ್ರೀಯಾಯೋಜನೆ ಹಾಕಬೇಕಿದೆ. ಬೆಡ್‌, ಆಕ್ಸಿಜನ್‌ ಸೇರಿದಂತೆ ಮೂಲ ಸೌಲಭ್ಯಗಳ ಕಡೆ ಸರಕಾರ ಮತ್ತು ಜಿಲ್ಲಾಡಳಿತಗಳು ಹೆಚ್ಚು ಮುತುವರ್ಜಿ ವಹಿಸಬೇಕಿದೆ.

ಇನ್ನೂ ಸರಕಾರ ತನ್ನ ವೈಫಲ್ಯಗಳನ್ನು ಮರೆಮಾಚಿಕೊಳ್ಳಲು ಮತ್ತೆ 14 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಿಸಿದೆ. ಜೂನ್‌ 7 ರವರೆಗೆ ಕಟ್ಟುನಿಟ್ಟಿನ ನಿಯಮಗಳು ಜಾರಿಯಲ್ಲಿರುತ್ತವೆ ಅಂತಾ ಸಿಎಂ ಹೇಳಿದ್ದಾರೆ. ಅಗತ್ಯ ಕ್ರಮಗಳನ್ನು ಕೈಗೊಳ್ಳದೆ, ಮೂಲಸೌಲಭ್ಯಗಳನ್ನು ನೀಡಿದೆ, ವೈಧ್ಯಕೀಯ ವ್ಯವಸ್ಥೆಯನ್ನು ಬಲಪಡಿಸದೆ ಲಾಕ್‌ಡೌನ್‌ ನ್ನು ಇನ್ನೆರಡು ತಿಂಗಳು ವಿಸ್ತರಿಸಿದರೂ ಯಾವ ಪ್ರಯೋಜನ ಇಲ್ಲ. ಸರಕಾರಕ್ಕೆ ಇದು ಯಾಕೋ ಅರ್ಥವಾದಂತೆ ಕಾಣುತ್ತಿಲ್ಲ. ಇತ್ತ ಒತ್ತಾಯಪೂರ್ವಕ್‌ ಲಾಕ್‌ಡೌನ್‌ ಹೇರಿ, ಅತ್ತ ಮೂಗಿಗೆ ತುಪ್ಪ ಸವರುವ ಪ್ಯಾಕೇಜ್‌ ಘೋಷಣೆ ಮಾಡಿರುವುದು ಸಾರ್ವಜನಿಕರಿಗೆ ಯಾವುದೇ ಸಹಾಯವಾಗಿಲ್ಲ.

ಜನ ಸಾಯಲಿ, ಕೋವಿಡ್‌ ಸಂಖ್ಯೆ ಹೆಚ್ಚಾಗಲಿ ಬಿಡಲಿ ಲಾಕ್‌ಡೌನ್‌ ಜಾರಿಯಾಗಬೇಕು. ಯಾರೂ ಹೊರಗೆ ಬರಬಾರದು ಹೊರಗೆ ಬಂದ್ರೆ ಪೋಲೀಸರು ನೋಡ್ಕೋತಾರೆ ಅಂತ ಮೌನಕ್ಕೆ ಶರಣಾಗಿದ್ದಾರೆ. ಇನ್ನೂ ಪ್ರಧಾನಿ ಮೋದಿ ಸರಿಯಾದ ಲಸಿಕೆ, ಆಕ್ಸಿಜನ್‌ ವಿತರಿಸುವಲ್ಲಿ ಕೇಂದ್ರ ಸರಕಾರ ಸೋತಿದೆ ಎಂಬುದನ್ನು ಒಪ್ಪಿಕೊಳ್ಳುವ ಬದಲು ಕೋವಿಡ್‌ ನಿಂದ ಮಡಿದವರಿಗೆ ಶ್ರಧ್ದಾಂಜಲಿ ಎಂದು ಭಾವನಾತ್ಮಕವಾಗಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ.  ಸರಕಾರ ಇಂತಹ ಉದ್ಧಟತನಗಳನ್ನು ಬಿಟ್ಟು ಜನರ ಜೀವ ಉಳಿಸುವ ಕ್ರಮಗಳನ್ನು ಜಾರಿ ಮಾಡಿಬೇಕಿದೆ.

 

Donate Janashakthi Media

Leave a Reply

Your email address will not be published. Required fields are marked *