ಬೆಂಗಳೂರು : ಕರ್ನಾಟಕದಲ್ಲಿ ಕೊರೋನಾ ಹಿಂದಿನ ಎಲ್ಲ ದಾಖಲೆಗಳನ್ನು ಮುರಿದು ಹಾಕಿದೆ. ಮಂಗಳವಾರ ಬರೋಬ್ಬರಿ ಒಂದೇ ದಿನ ಇಪ್ಪತ್ತು ಸಾವಿರ ಕೇಸ್ ಗಳು ದಾಖಲಾಗಿವೆ.
21794 ಕೊರೋನಾ ಪಾಸಿಟಿವ್ ಕೇಸ್‌ಗಳು ಪತ್ತೆಯಾಗಿದ್ದು, 149 ಸೋಂಕಿತರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಇದರಿಂದಾಗಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,98644 ಕ್ಕೆ ಏರಿಕೆಯಾಗಿದ್ರೆ, ಒಟ್ಟು ಮೃತರ ಸಂಖ್ಯೆ 13,646 ಕ್ಕೇರಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಇನ್ನು ಕಳೆದ 24 ಗಂಟೆಗಳಲ್ಲಿ 4571 ಜನರು ಸೇರಿದಂತೆ ಇದುವರೆಗೆ 10,25821 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಹೀಗಾಗಿ ರಾಜ್ಯದಲ್ಲಿ 159158 ಸಕ್ರಿಯ ಪ್ರಕರಣಗಳಿವೆ.
ವಾರಾಂತ್ಯದ ಕರ್ಫ್ಯೂಗೆ ನಿರ್ಧಾರ : ರಾಜ್ಯದಲ್ಲಿ ವ್ಯಾಪಕ ಪ್ರಮಾಣದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳ ಕಂಡು ಬಂದಿರುವ ಹಿನ್ನೆಲೆಯಲ್ಲಿ ಮಂಗಳವಾರದಂದು ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದು ವಾರಾಂತ್ಯದ ಕರ್ಪ್ಯೂ ಘೋಷನೆಯನ್ನು ಮಾಡಿದೆ.
ಈ ಮಾರ್ಗ ಸೂಚಿಯನ್ವಯ ಬುಧುವಾರದಿಂದ ಮೇ 4 ರವರೆಗೂ ಸರ್ಕಾರ ಈಗ ಕೊರೊನಾ ಹಿನ್ನಲೆಯಲ್ಲಿ ಕಠಿಣ ನಿಯಮಗಳನ್ನು ಜಾರಿ ಮಾಡಿದೆ. ರಾಜ್ಯದಲ್ಲಿ ಬೆಂಗಳೂರು ಈಗ ಕೊರೊನಾ ಪ್ರಕರಣಗಳ ಕೇಂದ್ರವಾಗಿ ಪರಿಣಮಿಸಿರುವುದು ನಿಜಕ್ಕೂ ತಲೆ ಬಿಸಿಯಾಗಿ ಪರಿಣಮಿಸಿದೆ.ಈ ಹಿನ್ನಲೆಯಲ್ಲಿ ಈಗ ಸರ್ಕಾರ ಕರ್ಪ್ಯೂಗೆ ಅನಿವಾರ್ಯವಾಗಿ ಮೊರೆಹೊಗಬೇಕಾಗಿದೆ.
ಸರ್ಕಾರ ಘೋಷಿಸಿರುವ ಮಾರ್ಗಸೂಚಿಗಳು:
- ಬೆಂಗಳೂರು ನಗರದ ಮಾರುಕಟ್ಟೆಗಳನ್ನು 14 ದಿನಗಳ ಕಾಲ ಬೇರೆ ಕಡೆಗೆ ಸ್ಥಳಾಂತರಿಸಲಾಗುವುದು.
- ಶನಿವಾರ ಮತ್ತು ಭಾನುವಾರದಂದು ತರಕಾರಿ, ಕಿರಾಣಿ, ಹಾಲು ಅಂಗಡಿಗಳನ್ನು 6 ರಿಂದ 10 ವರೆಗೆ ಮಾತ್ರ ತೆರೆಯಬಹುದಾಗಿದೆ.
- ಸಾರ್ವಜನಿಕ ಸ್ಥಳಗಳಾದ ಶಾಲೆ ಕಾಲೇಜು, ಸಿನಿಮಾ ಹಾಲ್,ಮಾಲ್ ಈಜುಕೊಳ,ಧಾರ್ಮಿಕ ಸ್ಥಳ,ಹೋಟೆಲ್ ಗಳು ಬಂದ್ ಆಗಿರುತ್ತವೆ.
- ಮಧ್ಯದ ಅಂಗಡಿಗಳಲ್ಲಿ ಪಾರ್ಸಲ್ ಗೆ ಮಾತ್ರ ಅವಕಾಶವಿರುತ್ತದೆ.
- ಕಟ್ಟಡ ನಿರ್ಮಾಣ ಕಾರ್ಯಗಳಿಗೆ ಅವಕಾಶ ನೀಡಲಾಗಿದೆ.
- ಮದುವೆ ಕಾರ್ಯಗಳಿಗೆ ಕೇವಲ 50 ಜನರವರೆಗೆ ಮಾತ್ರ ಅವಕಾಶವಿರುತ್ತದೆ.