ಕರ್ನಾಟಕ ಹೈಕೋರ್ಟ್‌: ಅರ್ಜಿ ವಿಚಾರಣೆ ವೇಳೆ ʻಬುಲ್ ಬುಲ್ ಹಕ್ಕಿಗಳ ಮೇಲೆ ಹಾರುವ ಸಾವರ್ಕರ್ʼ ಪಠ್ಯ ಪ್ರಸ್ತಾಪ

ಬೆಂಗಳೂರು: ಕರ್ನಾಟಕ ಹೈಕೋರ್ಟ್‌ನಲ್ಲಿ ಕರ್ನಾಟಕ ಅನುದಾನರಹಿತ ಶಾಲೆಗಳ ನಿರ್ವಹಣೆಗಳ ಸಂಘ ಸಂಘಟನೆಯು “ಸ್ವಾತಂತ್ರ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ಅವರನ್ನು ಬ್ರಿಟಿಷರು ಬಂಧಿಸಿಟ್ಟಿದ್ದ ಅಂಡಮಾನ್ ಜೈಲಿನ ಕೋಣೆಗೆ ಬುಲ್‌ಬುಲ್‌ ಹಕ್ಕಿಗಳು ಬರುತ್ತಿದ್ದವು. ಅವುಗಳ ಮೇಲೆ ಕುಳಿತು ಸಾವರ್ಕರ್ ಪ್ರತಿ ದಿನ ತಾಯ್ನಾಡಿನ ನೆಲವನ್ನು ಸಂಪರ್ಕಿಸಿ ಬರುತ್ತಿದ್ದರು” ಎಂಬ ವಿಷಯದ ಬಗ್ಗೆ ಆಕ್ಷೇಪಣೆ  ಸಲ್ಲಿಸಿತ್ತು.

ನಿಗದಿಪಡಿಸಿದ ಪಠ್ಯಕ್ರಮಕ್ಕಿಂತ ಹೆಚ್ಚೇನೂ ಮಕ್ಕಳಿಗೆ ಕಲಿಸಬಾರದು ಎಂದು ನಿರ್ದೇಶಿಸುವ ನಿಬಂಧನೆ ಎಂಬ ವಿಚಾರದ ಬಗ್ಗೆ ಆಕ್ಷೇಪಣೆ ಸಲ್ಲಿಸಿದ ಕುಸ್ಮಾ ಸಂಘಟನೆಯು ಹೈಕೋರ್ಟ್‌ನಲ್ಲಿ ಪ್ರಶ್ನೆ ಮಾಡಿತ್ತು. ಹೈಕೋರ್ಟ್‌ ನ್ಯಾಯಮೂರ್ತಿ ಅಲೋಕ್ ಆರಾಧೆ ಮತ್ತು ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ನ್ಯಾಯಪೀಠ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಪೀಠ ತೀರ್ಪು ಕಾಯ್ದಿರಿಸಿದೆ.

ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ರಾಜ್ಯದಲ್ಲಿ ಸಾಕಷ್ಟು ವಿವಾದಗಳು ಎದ್ದು, ಶಾಲಾ ಪಠ್ಯಪುಸ್ತಕದಲ್ಲಿ ಸಾಕಷ್ಟು ತಪ್ಪು ಮಾಹಿತಿಗಳು ಒಳಗೊಂಡಿವೆ. ಇವುಗಳನ್ನು ಸರಿಪಡಿಸಬೇಕೆಂದು ಒತ್ತಾಯಿಸಲಾಗುತ್ತಿದೆ. ಇದರ ಪಠ್ಯಪುಸ್ತಕದಲ್ಲಿ ಮತ್ತೊಂದು ಪ್ರಮಾದವೊಂದು ನಡೆದಿದ್ದು, 8ನೇ ತರಗತಿಗೆ ಕನ್ನಡ ಭಾಷೆಯ ಪಠ್ಯಪುಸ್ತಕದಲ್ಲಿ ಪರಿಚಯಿಸಲಾದ ಅಧ್ಯಾಯವೊಂದರಲ್ಲಿ ಲೇಖಕ ಕೆ.ಟಿ.ಗಟ್ಟಿ ಅವರ ಪ್ರವಾಸ ಕಥನದ ಆಯ್ದ ಭಾಗಗಳನ್ನು ಒಳಗೊಂಡು, ಸಾವರ್ಕರ್‌ ಮತ್ತು ಬುಲ್‌ಬುಲ್‌ ಹಕ್ಕಿ ವಿವಾದ ಬಗ್ಗೆ ಕುಸ್ಮಾ ತೀವ್ರ ಆಕ್ಷೇಪವನ್ನು ಎತ್ತಿತು.

ಅರ್ಜಿದಾರರ ಪರವಾದ ವಕೀಲ ಕೆ.ವಿ.ಧನಂಜಯ ವಾದ ಮಂಡಿಸಿದರು. ಪಠ್ಯಕ್ರಮದಲ್ಲಿ ಅಳವಡಿಸಲಾಗಿರುವ ಸಾವರ್ಕರ್ ಬಗೆಗಿನ ಕೆಲ ಸಾಲುಗಳು ಮತ್ತು 1984ರ ದೆಹಲಿ ಸಿಖ್ ಹತ್ಯಾಕಾಂಡದ ಕುರಿತ ಮಾಹಿತಿಗಳನ್ನು ಪ್ರಸ್ತಾಪಿಸಿ; “ನಿಗದಿಪಡಿಸಿದ ಪಠ್ಯಕ್ರಮಕ್ಕಿಂತ ಹೆಚ್ಚೇನೂ ಮಕ್ಕಳಿಗೆ ಕಲಿಸಬಾರದು ಎಂದು ನಿರ್ದೇಶಿಸುವ ನಿಬಂಧನೆಗಳಿಗೆ ಈ ಅಳವಡಿಕೆ ವಿರುದ್ಧವಾಗಿವೆ” ಎಂದರು.

“ಸರ್ಕಾರವು ಶಾಲಾ ಮಕ್ಕಳನ್ನು ರಾಜಕೀಯ ಪಕ್ಷಗಳಿಗೆ ಭವಿಷ್ಯದ ಮತದಾರರನ್ನಾಗಿ ರೂಪಿಸಲು ಪ್ರಯತ್ನಿಸುತ್ತದೆ. ಇಂತಹ ತಪ್ಪುಗಳನ್ನು ಎತ್ತಿ ತೋರಿಸುವ ಅಧಿಕಾರ ಕುಸ್ಮಾಗೆ ಇದೆ. ಮುಕ್ತ ಮಾರುಕಟ್ಟೆಯು ಸರ್ಕಾರದ ಪ್ರಕಟಣೆಗಳಿಗಿಂತ ಹೆಚ್ಚು ಮಕ್ಕಳ ಸ್ನೇಹಿಯಾಗಿದೆ” ಎಂದು ಅವರು ಪ್ರತಿಪಾದಿಸಿದರು.

ನಿಗದಿತ ಪಠ್ಯಕ್ರಮಕ್ಕಿಂತ ಹೆಚ್ಚಿನದನ್ನು ಶಾಲಾ ಮಕ್ಕಳಿಗೆ ಕಲಿಸಬಾರದು ಎಂದು ಹೇಳಲು ಸಂವಿಧಾನದ ಅಡಿಯಲ್ಲಿ ಸರ್ಕಾರಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ಧನಂಜಯ್ ಅವರು 2002 ರ ಟಿಎಂಎ ಪೈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 11 ನ್ಯಾಯಾಧೀಶರ ತೀರ್ಪನ್ನು ಉಲ್ಲೇಖಿಸಿ ವಾದಿಸಿದರು. ಶಾಲೆಯು ಸರ್ಕಾರದಿಂದ ನೆರವು ಪಡೆಯದಿದ್ದಾಗ ಶಾಲಾ ಶಿಕ್ಷಣದಲ್ಲಿ ನಿಯಂತ್ರಣವು ಕನಿಷ್ಠವಾಗಿರಬೇಕು ಎಂದು ಹೇಳಿದರು.

“ಕರ್ನಾಟಕ ಶಿಕ್ಷಣ ಕಾಯ್ದೆ-1983ರ ವಿವಿಧ ನಿಬಂಧನೆಗಳನ್ನು ಖಾಸಗಿ ಅನುದಾನರಹಿತ ಶಾಲೆಗಳಿಗೂ ಅಳವಡಿಕೆ ಮಾಡಿರುವುದು ಅಸಮಂಜಸ ಮತ್ತು ಅಸಾಂವಿಧಾನಿಕ” ಎಂದು ಆಕ್ಷೇಪಿಸಲಾದ ತಿದ್ದುಪಡಿ ಅರ್ಜಿಯ ವಿಚಾರಣೆಯನ್ನು ನ್ಯಾಯಪೀಠ ನಡೆಸಿತು.

ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿ ವಿಷಯದಲ್ಲಿ ಮೀಸಲಾತಿ ಸೂಚಿಸುವ ಕಲಂ 41(3)ರ ಜೊತೆಗೆ ಓದಲಾದ ಕಲಂ 5 ಸೇರಿದಂತೆ ಕರ್ನಾಟಕ ಶಿಕ್ಷಣ ಕಾಯ್ದೆಯ ಹಲವು ನಿಬಂಧನೆಗಳನ್ನು ಕುಸ್ಮಾ ಪ್ರಶ್ನಿಸಿದೆ. 1995ರ ಜನವರಿ 1ರಲ್ಲೇ ಈ ಅರ್ಜಿ ದಾಖಲಿಸಿದ್ದು ಹಲವು ಸುತ್ತಿನ ಕಾನೂನು ಹೋರಾಟ ಮುಂದುವರೆದಿದೆ.

Donate Janashakthi Media

Leave a Reply

Your email address will not be published. Required fields are marked *