ಗುರುರಾಜ ದೇಸಾಯಿ
ರಾಜ್ಯದಲ್ಲಿ ದರ ಏರಿಕೆಯದೇ ಸದ್ದು. ಪೆಟ್ರೋಲ್, ಅಗತ್ಯ ವಸ್ತುಗಳು, ಅಡುಗೆ ಅನಿಲ ಹೀಗೆ ಜನಸಾಮಾನ್ಯರ ದಿನಬಳಕೆಯ ಅಗತ್ಯ ವಸ್ತುಗಳ ದರ ಏರುತ್ತಲೇ ಇದೆ. ಈಗ ಆ ಸಾಲಿಗೆ ವಿದ್ಯತ್ ದರ ಹೆಚ್ಚಳ ಸೇರಿ ಕೊಳ್ಳುತ್ತಿದೆ. ರಾಜ್ಯ ಸರಕಾರ ನೀಡುತ್ತಿರುವ ದರ ಏರಿಕೆಯ ಶಾಕ್ ಗೆ ಜನ ಸಾಮಾನ್ಯವರು ಬವಣೆ ಪಡೆವಂತಾಗಿದೆ.
ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 1 ರೂ 35 ಪೈಸೆಯಷ್ಟು ವಿದ್ಯುತ್ ದರ ಹೆಚ್ಚಳ ಮಾಡಬೇಕು ಹಿಂದೆಯೇ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಶವಾಗಿ ಪರಿಶೀಲಿಸಿರುವ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.ಇದರ ಪರಿಣಾಮ ಗೃಹ ಬಳಕೆ ಗ್ರಾಹಕರಿಗೆ ಪ್ರತಿ ಯೂನಿಟ್’ಗೆ 10 ಪೈಸೆ ಹೆಚ್ಚಳವಾಗಲಿದೆ.
ಗೃಹ ಬಳಕೆದಾರರಿಗೆ ಮೊದಲ ಸ್ಲ್ಯಾಬ್ ಪರಿಷ್ಕರಣೆ ಮಾಡಲಾಗಿದ್ದು 1ರಿಂದ 30 ಯೂನಿಟ್ ವರೆಗೆ ಇದ್ದ ಮಿತಿಯನ್ನು 50 ಯೂನಿಟ್ ವರೆಗೆ ವಿಸ್ತರಿಸಲಾಗಿದೆ. ಜೊತೆಗೆ ನಿಗದಿತ ಶುಲ್ಕವನ್ನೂ ಹೆಚ್ಚಳ ಮಾಡಿದ್ದು ಪ್ರತಿ ಕಿಲೋ ವ್ಯಾಟ್’ಗೆ ರೂ.10 ಗಳಂತೆ ಪರಿಷ್ಕರಣೆ ಮಾಡಲಾಗಿದೆ. ಆರಂಭದ ರಿಯಾಯತಿ ಯೂನಿಟ್ ಗಳನ್ನು ಲೈಫ್‌ಲೈನ್ ಯೂನಿಟ್ ಅಂತ ಹೇಳಲಾಗುತ್ತೆ. ಈಗ ಅದನ್ನು 1 ದಿಂದ 30 ಬದಲಾಗಿ 1 ರಿಂದ 50 ಕ್ಕೆ ಏರಿಸಲಾಗಿದೆ.
ಕೇವಲ ತಿಂಗಳಿಗೆ 50 ಯುನಿಟ್‌ಗಳನ್ನು ಬಳಸುವವರಿಗೆ ಮಾತ್ರ ಇದು ಲಾಭವಾಗುತ್ತೆ. ಉಳಿದವರಿಗೆ ಇದರಿಂದ ಯಾವುದೇ ಪ್ರಯೋಜನ ಸಿಗೋದಿಲ್ಲ, ಯಾಕೇ ಅಂದ್ರೆ ಸಾಮಾನ್ಯವಾಗಿ ದಿನಕ್ಕೆ ಕಡಿಮೆ ವಿದ್ಯುತ್ ಬಳಸುತ್ತೇವೆ ಅಂದ್ರೂ ದಿನಕ್ಕೆ ನಾಲ್ಕು ಯುನಿಟ್ ಆದ್ರೂ ನಾವು ಬಳಸ್ತೇವೆ. ದರ ಹೆಚ್ಚಳ ಮಾಡಿರುವುದು ಗೊತ್ತಾಗಭಾರ್ದು ಅಂತಾ ಮೊದಲ ಸ್ಲಾಬ್‌ನಲ್ಲಿ ರಿಯಾಯ್ತಿ ನೀಡಿ ಜನರನ್ನು ಮೂರ್ಖರನ್ನಾಗಿಸುವ ಕೆಲಸ ಮಾಡ್ತಾ ಇದೆ.
ಒಟ್ಟು ನಾಲ್ಕು ಸ್ಲ್ಯಾಬ್‌ಗಳಲ್ಲಿ ಮೀಟರ್ ರೀಡಿಂಗ್ ನಡೆಯುತ್ತೆ. 10 ಪೈಸೆ ದರ ಹೆಚ್ಚಳ ಆಗಿದ್ದರಿಂದ ಪ್ರತಿ ಸ್ಲ್ಯಾಬ್ ದರ ಎಷ್ಟಾಗುತ್ತೆ ಅಂತಾ ನಾವು ನೋಡೋಣ. 1 ರಿಂದ 50 ಯೂನಿಟ್ ಗೆ ಮುಂಚೆ ಇದ್ದ ದರ 4 ರೂ ಆದ್ರೆ, ದರ ಹೆಚ್ಚಳದಿಂದ 4 ರೂ 10 ಪೈಸೆ ಆಗಿದೆ. 50 ಕ್ಕೆ 4 ರೂ. 10 ಪೈಸೆ ಗೆ ಲೆಕ್ಕ ಹಾಕಿದ್ರೆ 205 ರೂ ಆಗುತ್ತೆ. 50 ರಿಂದ 100 ಯೂನಿಟ್ ನ ಎರಡನೇ ಸ್ಲ್ಯಾಬ್ ದರ ಮುಂಚೆ 5 ರೂ 45 ಪೈಸೆ ಇತ್ತು. ಈಗ ಅದು 5 ರೂ 55 ಪೈಸೆ ಆಗಿದೆ. 100ಕ್ಕೆ 5 ರೂ 55 ಪೈಸೆ ಲೆಕ್ಕ ಹಾಕಿದ್ರೆ 510 ರೂ ಆಗುತ್ತೆ. 101 ರಿಂದ 200 ರ ವರೆಗಿನ ಮೂರನೆ ಸ್ಲ್ಯಾಬ್ ಗೆ ಮುಂಚೆ 7 ರೂ ಕೊಡ್ತಾ ಇದ್ವಿ ಈಗ ಅದು 7 ರೂ 10 ಪೈಸೆ ಆಗಿದೆ. 100 ಕ್ಕೆ 7 ರೂ 10 ಪೈಸೆ ಲೆಕ್ಕ ಹಾಕಿದ್ರೆ 710 ರೂ ಆಗುತ್ತೆ. 200 ಯೂನಿಟ್ ಗಿಂತ ಹೆಚ್ಚಿಗೆ ಬಳಸಿದ್ರೆ ಈ ಹಿಂದೆ 8 ರೂ 5 ಪೈಸೆ ಕೊಡ್ತಾ ಇದ್ವಿ. ಈಗ 8 ರೂ 15 ಪೈಸೆ ಆಗಿದೆ. 100 ಕ್ಕೆ 8 ರೂ 15 ಪೈಸೆ ಗೆ ಲೆಕ್ಕ ಹಾಕಿದ್ರೆ 815 ರೂ ಆಗುತ್ತೆ. ಸಾಮಾನ್ಯವಾಗಿ ಬಹುತೇಕರು ಮೂರು ಸ್ಲ್ಯಾಬ್‌ವರೆಗೆ ವಿದ್ಯುತ್ ನ್ನು ಬಳಸುತ್ತಾರೆ.
ಇನ್ನೂ ಫಿಕ್ಸ್ ಚಾರ್ಜ್ ಅಂತಾ 150 ರೂ ಕೊಡ್ತಾ ಇದ್ವಿ. ಅಂದ್ರೆ ಮಿನಿಮಮ್ ರ್ಜ್ ಅಂತಾ ಕೂಡಾ ನಾವು ಕರೀತೆವೆ. ಈಗ 10 ರೂ ಹೆಚ್ಚಳದೊಂದಿಗೆ ಅದು 160 ರೂ ಗೆ ಏರಿಕೆ ಯಾಗಿದೆ. ಸಾಮಾನ್ಯವಾಗಿ ನಮಗೆ 1000 ರೂ ಕರೆಂಟ್ ಇಲ್ಲ ಬರ್ತಾ ಇದ್ರೆ , ಈಗ ದರ ಹೆಚ್ಚಳದಿಂದ 35 ರೂ ನಿಂದ 45 ರೂ ಹೆಚ್ಚಳವಾಗಲಿದೆ. ಅಂದ್ರೆ 1035 ರೂ ಮತ್ತು ಇದಕ್ಕೆ 60 ರಿಂದ 65 ರೂ ಟ್ಯಾಕ್ಸ್ ಸೇರಿ ಒಟ್ಟು 1100 ರೂ ಹೆಚ್ಚಳವಾಗಲಿದೆ. ಗ್ರಾಮೀಣ ಪ್ರದೇಶಕ್ಕೆ ಲೆಕ್ಕ ಹಾಕಿದ್ರೆ 300 ರೂ ಬರ್ತಾ ಇದ್ದ ಕರೆಂಟ್ ಬಿಲ್ಲ, ಸರಕಾರ ಹೆಚ್ಚಿಸಿರುವ ದರದ ಪರಿಣಾಮ 400 ರೂ ಕರೆಂಟ್ ಬಿಲ್ಲ ಕಟ್ಟ ಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಇದನ್ನೂ ಓದಿ : ತೈಲ ದರ ಹೆಚ್ಚಳಕ್ಕೆ ಬೆಚ್ಚಿಬಿದ್ದ ಜನ! : ಟ್ಯಾಕ್ಸ್ ಹೆಸರಲ್ಲಿ ಜನರ ಹೊಟ್ಟೆ ಹೊಡೆಯುತ್ತಿದೆ ಸರಕಾರ!!
ಐದು ತಿಂಗಳಲ್ಲಿ ಮೂರಿ ಬಾರಿ ವಿದ್ಯುತ್ ದರ ಏರಿಕೆಯಾಗಿದೆ. ನವೆಂಬರ್ ತಿಂಗಳಲ್ಲಿ ಪ್ರತೀ ಯೂನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿದ್ರೆ, ಡಿಸೆಂಬರ್‌ನಲ್ಲಿ 8 ಪೈಸೆ ಹೆಚ್ಚಳ ಮಾಡಲಾಗಿತ್ತು. ಈಗ 10 ಪೈಸೆ ಹೆಚ್ಚಳ ಮಾಡಲಾಗಿದೆ. ವಿದ್ಯತ್ ದರ ಹೆಚ್ಚಳ ಮಾಡಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಹೆಚ್ಚಳ ಮಾಡಿರುವ ದರವನ್ನು ವಾಪಸ್ಸ ಪಡೆಯುವಂತೆ ಆಗ್ರಹಿಸ್ತಾ ಇದ್ದಾರೆ. ಸರಕಾರದ ಈ ದರ ಏರಿಕೆ ಸಾಮಾನ್ಯ ಜನರ ಜೊತೆ ರೈತರಿಗೂ ಹೊರೆಯಾಗಲಿದೆ. ದರ ಏರಿಕೆಗೆ ಸರಕಾರದ ಖಾಸಗೀಕರಣ ನೀತಿಯೇ ಕಾರಣ ಅಂತ ಕರ್ನಾಟಕ ಪ್ರಾಂತರೈತ ಸಂಘದ ರಾಜ್ಯಾಧ್ಯಕ್ಷ ಜಿಸಿ ಬಯ್ಯಾರೆಡ್ಡಿ ಆರೋಪಿಸಿದ್ದಾರೆ.
ವಿದ್ಯುತ್ ದರ ಹೆಚ್ಚಳಕ್ಕೆ ಸರಕಾರ ಕೊಡ್ತಾ ಇರುವ ಕಾರಣಗಳತ್ತ ನಾವು ಕಣ್ಣು ಹಾಯಿಸೋಣ, ಅದಕ್ಕೆ ಅವರು ಕೋಡ್ತಾ ಇರುವ ಕಾರಣ ಏನು ಅಂದ್ರೆ ವಿದ್ಯುತ್ ಖರೀದಿ ದರ ಏರಿಕೆ ಹೆಚ್ಚಾಗಿದೆ. ಹಾಗಾಗಿ ದರ ಹೆಚ್ಚಳ ಮಾಡ್ತಾ ಇದ್ದೀವಿ ಅಂತ ಸರಕಾರ ಹೇಳ್ತಾ ಇದೆ. ಒಟ್ಟು ರಾಜ್ಯದಲ್ಲಿ 11 ಉದ್ದಿಮೆಗಳು ವಿದ್ಯುತ್‌ನ್ನು ಉತ್ಪಾದನೆ ಮಾಡ್ತಾ ಇವೆ. ನಮ್ಮ ರಾಜ್ಯದಲ್ಲಿ ಉತ್ಪಾದನೆಯಾಗುವ ವಿದ್ಯುತ್ ಪ್ರಮಾಣ 30,000 ಮೆಗಾವ್ಯಾಟ್, ನಮ್ಮಲ್ಲಿರುವ ಬೇಡಿಕೆ ಪ್ರಮಾಣ 8000 ದಿಂದ 10,500 ಮೆಗಾವ್ಯಾಟ್ ಇದೆ. ನಾವೇ ವಿದ್ಯುತ್ ಅನ್ನು ಮಾರುವಂತಹ ಸದೃಢ ಸ್ಥಿತಿಯಲ್ಲಿ ಇದ್ದೇವೆ, ಹೀಗಿದ್ದಾಗ ನಷ್ಟ ಆಗೋಕೆ ಹೇಗೆ ಸಾಧ್ಯ? ಇವರು ಎಲ್ಲಿಂದ ಖರೀಧಿ ಮಾಡ್ತಾರೆ? ಗೊತ್ತಿಲ್ಲ ಸರಕಾರವೇ ಅದಕ್ಕೆ ಉತ್ತರವನ್ನು ಕೊಡಬೇಕಿದೆ. ಉದ್ದಿಮೆಗಳು ನಷ್ಟವನ್ನು ಅನುಭವಿಸಿದ್ದರೆ ಅದಕ್ಕೆ ಸರಕಾರದ ನಿರ್ಲಕ್ಷ್ಯವೇ ಕಾರಣವಾಗಿದೆ.
ಇನ್ನು ಸಾಮಾನ್ಯ ಜನ ಕರೆಂಟ್ ಬಿಲ್ ಕಟ್ಟದೆ ಹೋದ್ರೆ ಕಣ್ಣ ಮುಚ್ಚುವದರೊಳಗೆ ಕರೆಂಟ್ ಕಟ್ಟ ಮಾಡುವ ಸರಕಾರ ಯಾವತ್ತಾದರೂ ದೊಡ್ಡ ದೊಡ್ಡ ಕಂಪನಿಗಳ ಬಿಲ್ ಕಟ್ಟದೆ ಇದ್ದಗ ಕರೆಂಟ್ ಸ್ತಗಿತ ಗೊಳಿಸಿದ ಉದಾಹರಣೆ ಇದೆಯಾ? , ಶಾಸಕರ, ಸಚಿವರು, ಶ್ರೀಮಂತರ ಮನೆಯವರು ವರ್ಷಗಟ್ಟಲೆ ಕರೆಂಟ್ ಬಿಲ್ ಕಟ್ಟೋದಿಲ್ಲ, ಅವರಿಗ್ಯಾಕೆ ರಿಯಾಯ್ತಿ ಕೋಡ್ತೀರಿ. ಇದರಿಂದ ವಿದ್ಯುತ್ ಉತ್ಪಾದನಾ ಉದ್ದಿಮೆಗಳಿಗೆ ನಷ್ಟ ಆಗುತ್ತೆ ಅಂತಾ ನಿಮಗೆ ಅನ್ಸೋದೆ ಇಲ್ವಾ? ಈ ದೋಷವನ್ನು ಸರಿ ಪಡ್ಸೋದು ಯಾವಾಗ ಯಡಿಯೂರಪ್ಪನವರೆ?
ದರ ಹೆಚ್ಚಳ ಮಾಡಿದಷ್ಟೂ ನಿಮ್ಮ ಸರಕಾರದ ಖಜಾನೆ ತುಂಬುತ್ತೆ ಅಲ್ವಾ ಯಡಿಯೂರಪ್ಪವನವರೆ? ನಿಮ್ಮ ಸರಕಾರದ ಬೊಕ್ಕಸ ತುಂಬಿಸಿಕೊಲ್ಳೋಕೆ ಯಾಕೆ ಜನ ಸಾಮಾನ್ಯರಿಗೆ ಬರೆ ಹಾಕ್ತೀರಿ. ಕೋವಿಡ್ , ಕೋವಿಡ್ ನಿಂದ ಉಂಟಾದ ಲಾಕ್‌ಡೌನ್ ಗಳಿಂದಾಗಿ ಒಂದು ವರಷದಿಂದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ನೀವಿ ಇಂತಹ ಸಂಕಷ್ಟದ ಸಂದರ್ಬದಲ್ಲಿ ಜನರ ಕೂ ಹಿಡಿಬೇಕಿತ್ತು.
ಪಕ್ಕದ ರಾಜ್ಯವನ್ನು ನೋಡಿ ಕಲಿರಿ, ಕೇರಳ, ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳು ಎರಡುಮೂರು ತಿಂಗಳು ಕರೆಂಟ್ ಬಿಲ್ ಗಳಿಗೆ ರಿಯಾಯಿತಿಯನ್ನು ನೀಡಿದೆ. ನೀವು ರಿಯಾಯಿತಿಯನ್ನೂ ಕೊಡದೆ ಈಗ ದರಳ ಹೆಚ್ಚಳ ಮಾಡಿದ್ದೀರಲ್ಲ ಜನರ ಸಂಕಷ್ಟ ನಿಮ್ಮ ಕಣ್ಣಿಗೆ ಕಾಣ್ತಾ ಇಲ್ವಾ, ಈಗಲೂ ಕಾಲ ಮಿಂಚಿಲ್ಲ. ಹೆಚ್ಚಿಸಿದ ದರವನ್ನು ವಾಪಸ್ಸ ಪಡೆಯಿರಿ, ವಿದ್ಯುತ್ ಸಮಸ್ಯೆಯನ್ನು ನಿವಾರಿಸೋದಕ್ಕೆ ತಜ್ಙರು, ವಿರೋಧ ಪಕ್ಷಗಳ ಸಲಹೆಗಳನ್ನು ಕೇಳಲು ಮುಂದಾಗಬೇಕಿದೆ.