ಬದುಕಿದ್ದವರ ಹೆಸರೇ ಡಿಲೀಟ್‌: ಮತದಾನದಿಂದ ವಂಚಿತರಾದ 400 ಮಂದಿ

ಧಾರವಾಡ: ಹುಬ್ಬಳ್ಳಿ-ಧಾರವಾಡ ಮತದಾನ ಕೇಂದ್ರದಲ್ಲಿ, ಹಲವು ಮತದಾರರಿಗೆ ಶಾಕ್‌ ಎದುರಾಗಿದೆ. ಒಂದೇ ಮತ ಕೇಂದ್ರದಲ್ಲಿ ಸುಮಾರು 400 ಕ್ಕೂ ಹೆಚ್ಚು ಮತದಾರರ ಹೆಸರು ಡಿಲೀಟ್ ಆಗಿದ್ದು, ಜನರು ಚುನಾವಣಾ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾನ ಮಾಡಲು ಬೆಳ್ಳಂಬೆಳಗ್ಗೆ ಮತಗಟ್ಟೆಗೆ ಬಂದರೂ ಸಹ ನೂರಾರು ಮತದಾರರು ಮತದಾನದಿಂದ ವಂಚಿತರಾಗಿದ್ದಾರೆ. ವೋಟ್‌ ಮಾಡಲು ಬಂದವರ ಹೆಸರು ಮತದಾರರ ಪಟ್ಟಿಯಲ್ಲಿ ಇಲ್ಲ. ಪರಿಶೀಲನೆ ಮಾಡಿದ ಅಧಿಕಾರಿಗಳು ಹೆಸರು ಡಿಲೀಟ್ ಆಗಿರುವ ಬಗ್ಗೆ ಮತದಾರರಿಗೆ ತಿಳಿಸಿದ್ದಾರೆ.

ಇದನ್ನೂ ಓದಿ:- ಚಿಲುಮೆ ಆಯ್ತೂ, ಇದೀಗ ಬೆಂಗಳೂರಿನ ಖಾಸಗಿ ಸಂಸ್ಥೆಯಿಂದ 25 ಸಾವಿರ ರೂ.ಗಳಿಗೆ ಮತದಾರರ ಪಟ್ಟಿ ಸೋರಿಕೆಯ ಶಂಕೆ

ಹುಬ್ಬಳ್ಳಿ ಧಾರವಾಡ ಪಶ್ಚಿಮ ವಿಧಾನಸಭಾ ಕ್ಷೇತ್ರದ ಮತದಾರರಿಗೆ ಬಿಗ್ ಶಾಕ್ ಎದುರಾಗಿದ್ದು, ಮತ ಕೇಂದ್ರದಲ್ಲಿ ಗೊಂದಲ ಉಂಟಾಗಿದೆ. ಒಂದೇ ಮತ ಕೇಂದ್ರದಲ್ಲಿ 400ಕ್ಕೂ ಅಧಿಕ ಮತಗಳು ಡಿಲೀಟ್ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಗುರುನಾಥ ನಗರದಲ್ಲಿರುವ ಪ್ರಿಯದರ್ಶಿನಿ ಕಾಲೇಜಿನ ಮತಗಟ್ಟೆ ಮತಗಳು ಡಿಲೀಟ್‌ ಆಗಿದ್ದು, ಇಂದು ಮತದಾನ ಮಾಡಲು ಅವಕಾಶ ಸಿಗದೇ ಸಾರ್ವಜನಿಕರು ಕೇಂದ್ರ ಚುನಾವಣಾ ಆಯೋಗದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತದಾರರ ಪಟ್ಟಿಯಲ್ಲಿ ಬದುಕಿದ್ದವರ ಹೆಸರೇ ಡಿಲೀಟ್ ಆಗಿದ್ದು, ಬದುಕಿದ್ದವರನ್ನೇ ಪಟ್ಟಿಯಿಂದ ಹೇಗೆ ಡಿಲೀಟ್‌ ಮಾಡಿದ್ದಾರೆ ಎಂದು ಮತದಾನದಿಂದ ವಂಚಿತರಾದ 400ಕ್ಕೂ ಅಧಿಕ ಮತದಾರರು ಆಕ್ರೋಶ ವ್ಯಕ್ತಪಡಿಸಿದರು. ಚುನಾವಣಾ ಅಧಿಕಾರಿಗಳ ನಿರ್ಲಕ್ಷ್ಯವೇ ಮತದಾರರ ಹೆಸರು ಡಿಲೀಟ್‌ ಆಗಲು ಕಾರಣ ಎಂದು ಸಾರ್ವಜನಿಕರು ಕಿಡಿಕಾರಿದರು.

Donate Janashakthi Media

Leave a Reply

Your email address will not be published. Required fields are marked *