ಕರ್ನಾಟಕ ಬಜೆಟ್: ಅದು ಸುಸ್ಥಿರ ಹಾದಿಯಲ್ಲಿದೆಯೆ?

ಗ್ಯಾರಂಟಿಗಳು ಮತ್ತು ಅಭಿವೃದ್ಧಿ ನಡುವಿನ ತಿಕ್ಕಾಟದ ನಡುವಿನಲ್ಲಿ ಕರ್ನಾಟಕ ಸರ್ಕಾರದ 2025-26 ಅವಧಿಯ ಬಜೆಟನ್ನು ವಿಶ್ಲೇಷಿಸುವುದು ಸೂಕ್ತ. ಅಭಿವೃದ್ಧಿಗೆ ಅಗತ್ಯವಾದ ಹಣವನ್ನು ಬಜೆಟಿನಲ್ಲಿ ನೀಡಿದ್ದಾರಾದರೂ, ಅದನ್ನು ಕಲೆಹಾಕುವಲ್ಲಿ/ಸಂಗ್ರಹಿಸುವಲ್ಲಿ ಸರ್ಕಾರ ಕ್ರಮಿಸುತ್ತಿರುವ ದಾರಿ ಸುಸ್ಥಿರವಾಗಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಅದು ಎತ್ತುತ್ತದೆ.

ನರೇಂದರ್ ಪಾಣಿ

-ಕನ್ನಡಕ್ಕೆ: ಟಿ.ಸುರೇಂದ್ರರಾವ್

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಗ್ಯಾರಂಟಿಗಳಿಗೆ ಅಗತ್ಯವಾದ ಮೊತ್ತವನ್ನು ಕಳೆದ ವರ್ಷದ ಮಟ್ಟದಲ್ಲೇ ಇಟ್ಟಿದ್ದಾರೆ. ಬಜೆಟಿನ ಗಾತ್ರವು ಹೆಚ್ಚಾಗಿರುವ ಕಾರಣ ಬಂಡವಾಳ ವೆಚ್ಚವನ್ನು (ಕ್ಯಾಪಿಟಲ್ ಎಕ್ಸ್ ಪೆಂಡಿಚರ್) ಶೇಕಡಾ 47.3 ರಷ್ಟು ಹೆಚ್ಚಿಸಲು ಈ ಬಜೆಟ್ಟಿನಲ್ಲಿ ಸಾಧ್ಯವಾಗಿದೆ. ಈ ಅಭಿವೃದ್ಧಿಯ ಮೇಲಿನ ಹೆಚ್ಚುವರಿಯ ಪರಿಣಾಮವನ್ನು ಊಹಿಸುವುದು ಕಷ್ಟವೇ ಸರಿ, ಏಕೆಂದರೆ ಕೊನೇಪಕ್ಷ ಮೂರು ವಿವಿಧ ರಾಜಕೀಯ ಪರಿಕಲ್ಪನೆಯನ್ನು ಈ ಬಜೆಟಿನಲ್ಲಿ ಹೇಳಲಾಗಿದೆ.

ಮೊದಲನೆಯದಾಗಿ, ಅಭಿವೃದ್ಧಿಯನ್ನು ಸಂಪೂರ್ಣವಾಗಿ ತಮ್ಮ ವಿಧಾನ ಸಭಾ ಕ್ಷೇತ್ರದ ಯೋಜನೆಗಾಗಿ ಬಳಸಬಹುದೆಂದು ಶಾಸಕರು ತಿಳಿಯುತ್ತಾರೆ. ಇದಕ್ಕಾಗಿಯೇ ಒಂದು ಸಮಿತಿಯನ್ನು – ಮುಖ್ಯಮಂತ್ರಿ ಯವರ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮ – ರಚಿಸಲಾಗುತ್ತಿದೆ. ಆ ಸಮಿತಿಯು ಪ್ರತಿಯೊಂದು ವಿಧಾನ ಸಭಾ ಕ್ಷೇತ್ರದ ಸಣ್ಣ ನೀರಾವರಿ, ರಸ್ತೆಗಳು ಮತ್ತು ಪಟ್ಟಣ ಮೂಲಸೌಕರ್ಯಗಳ ಬಗ್ಗೆ ಗಮನ ನೀಡುತ್ತದೆ.

ಇದನ್ನೂ ಓದಿ: ಮೇಣದ ಬತ್ತಿ ಬೆಳಗಿ ಸ್ವಾತಿ ಕೊಲೆ ಘಟನೆ ಖಂಡನೆ; ಅಪರಾಧಿಗಳಿಗೆ ಕಠಿಣ ಶಿಕ್ಷೆಗೊಳಪಡಿಸಲು ಎಸ್ಎಫ್ಐ-ಡಿವೈಎಫ್ಐ ಆಗ್ರಹ

ಎರಡನೆಯದಾಗಿ, ಶಾಸಕರ ವೈಯಕ್ತಿಕ ಹಿತಾಸಕ್ತಿಗಿಂತ ರಾಜಕೀಯ ಹಿತಾಸಕ್ತಿ ಮುಖ್ಯವಾಗುತ್ತದೆ. ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರತಿನಿಧಿಸುವ ಕಲ್ಯಾಣ ಕರ್ನಾಟಕವು ಈ ಬಜೆಟಿನ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತದೆ. ಭೌಗೋಳಿಕ ಪ್ರಾಮುಖ್ಯತೆಯ ದ್ವಿದಳ ಧಾನ್ಯವೆಂದು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಕ್ಯುಟಿಒ) ಯಿಂದ ಮಾನ್ಯತೆ ಪಡೆದಿರುವ ತೊಗರಿ ಬೇಳೆಯು ಉತ್ತಮ ಸಂಗ್ರಹ ಬೆಲೆಯನ್ನು ಪಡೆಯುತ್ತದೆ. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವ್ಯಾಪ್ತಿಯ ಯೋಜನೆಗಳಿಗೆ ಬಜೆಟಿನಲ್ಲಿ ತೆಗೆದಿರಿಸಿರುವ ರೂ.5,000 ಕೋಟಿಯಲ್ಲದೆ ಇತರ ಹಲವಾರು ಯೋಜನೆಗಳನ್ನು ಆ ಪ್ರದೇಶಕ್ಕಾಗಿ ಪ್ರಸ್ತಾಪಿಸಲಾಗಿದೆ.

ಮೂರನೆಯದಾಗಿ, ಬೆಂಗಳೂರು ಕೇಂದ್ರಿತ ಬೆಳವಣಿಗೆಗಳಲ್ಲದೇ ಅತ್ಯಂತ ದುಬಾರಿಯ ಯೋಜನೆಗಳನ್ನು ಕೈಗೊಳ್ಳಬೇಕಾಗುತ್ತದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಒತ್ತಡಕ್ಜೆ ಒಳಗಾಗುವುದು ಇನ್ನೊಂದು ರಾಜಕೀಯ ಅಗತ್ಯವಾಗುತ್ತದೆ. ಬೆಂಗಳೂರು ಸುರಂಗಮಾರ್ಗ ರಸ್ತೆಗಳಿಗೆ ತಗುಲುವ ನಿರೀಕ್ಷಿತ ವೆಚ್ಚವಾದ ರೂ.40,000 ಕೋಟಿಯಲ್ಲಿ ರೂ.19,000 ಕೋಟಿ ಸಾಲಕ್ಕೆ ಬಿಬಿಎಂಪಿಯು ಗ್ಯಾರಂಟಿ ನಿಲ್ಲಬೇಕಾಗುತ್ತದೆ.

ಈ ಮೂರು ದಾರಿಗಳಲ್ಲಿ ಯಾವುದು ಹೆಚ್ಚು ಪ್ರಭಾವಶಾಲಿಯಾದುದು ಎಂದು ಹೇಳುವುದು ಕಷ್ಟವಲ್ಲ. ಉಳಿದೆರಡು ಹಾದಿಗಳಿಗಿಂತ ಬೆಂಗಳೂರಿಗೆ ತೆಗೆದಿಟ್ಟ ಹಣದ ಪ್ರಮಾಣ ಹೆಚ್ಚಿದೆ. ಇತರ ಪ್ರಮುಖ ವೈಯಕ್ತಿಕ ಯೋಜನೆಗಳ ಹೊರತಾಗಿ ಬೆಂಗಳೂರು ನಗರಕ್ಕೆ ನೀಡುವ ಅನುದಾನದ ಮೊತ್ತವನ್ನು ರೂ.3,000 ಕೋಟಿಯಿಂದ ರೂ.7,000 ಕೋಟಿಗೆ ಏರಿಸಲಾಗಿದೆ. ವೆಚ್ಚದ ಗಾತ್ರವು ಎಷ್ಟು ನಾಗರಿಕರಿಗೆ ಪ್ರಯೋಜನ ಆಗುತ್ತದೆ ಎನ್ನುವುದರ ಆಧಾರದಲ್ಲಿ ನೇರವಾಗಿ ತಳಕುಹಾಕಿಕೊಂಡಿರುವುದಿಲ್ಲ. ಕರ್ನಾಟಕದ ಇತರ ಭಾಗಗಳಿಂದ, ಅಷ್ಟೇ ಅಲ್ಲ ಇತರ ರಾಜ್ಯಗಳಿಂದ ಕೂಡ, ಬೆಂಗಳೂರು ನಗರದತ್ತ ಕಾರ್ಮಿಕರು ಉದ್ಯೋಗಕ್ಕಾಗಿ ಧಾವಿಸಲು ಅದು ಸಂದೇಶ ನೀಡುತ್ತದೆ.

ಈ ಸಂದೇಶವು ಬಜೆಟಿನಲ್ಲಿನ ಇನ್ನೂ ಧನಾತ್ಮಕ ಉಪಕ್ರಮಗಳ ಮೇಲೆ ಪರಿಣಾಮ ಬೀರುತ್ತದೆ. ಆರೋಗ್ಯ ಹಾಗೂ ಶಾಲಾ ಶಿಕ್ಷಣಕ್ಕೆ ಒತ್ತು ಕೊಟ್ಟಿರುವುದು ಗ್ರಾಮೀಣ ಕರ್ನಾಟಕದ ವಿಶಾಲ ವಿಬಾಗದ ಯುವಜನರ ಉದ್ಯೋಗಾವಕಾಶಗಳನ್ನು ಸುಧಾರಿಸುತ್ತದೆ. ಬೆಂಗಳೂರು ಹೊರತಾದ ಇತರ ನಗರಗಳಲ್ಲಿ ಹಣ ಹೂಡಲು ಜಾಗತಿಕ ಹೂಡಿಕೆದಾರರನ್ನು ಆಕರ್ಷಿಸುವ ಮೂಲಕ ಈ ನವಯುವಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಹುದು ಎನ್ನುವುದು ಸರ್ಕಾರದ ಆಶಯವಾಗಿದೆ.

ಆದರೆ ಈ ಕಾರ್ಯತಂತ್ರವು ಎಷ್ಟರ ಮಟ್ಟಿಗೆ ಸಫಲವಾಗುತ್ತದೆ ಎಂದು ಹೇಳುವುದು ಕಷ್ಟವೇ ಸರಿ. ಎರಡನೇ ಹಂತದ ನಗರಗಳಲ್ಲಿ ಜಾಗತಿಕ ಹೂಡಿಕೆದಾರರು ಹಣ ಹೂಡುವುದನ್ನು ಬಯಸುವುದಿಲ್ಲ. ಒಂದೊಮ್ಮೆ ಹೂಡಿದರೂ, ಅದು ಹೆಚ್ಚಿನ ಮಟ್ಟಿಗೆ ದು ಬಂಡವಾಳ ಕೇಂದ್ರಿತ ಹೂಡಿಕೆಯಾಗಿರುತ್ತದೆಯೇ ವಿನಃ ಕಾರ್ಮಿಕ ಕೇಂದ್ರಿತ ಹೂಡಿಕೆಯಾಗಿರುವುದಿಲ್ಲ‌. ಇತ್ತೀಚೆಗೆ ಕರ್ನಾಟಕ ಸರ್ಕಾರ ಆಯೋಜಿಸಿದ್ದ ‘ಹೂಡಿಕೆದಾರರ ಕರ್ನಾಟಕ 2025’ ಸಭೆಯಲ್ಲಿ ಸಹಿಮಾಡಿದ ಒಪ್ಪಂದಗಳನ್ನು ಪರಿಶೀಲಿಸಿದರೆ, ರೂ.1.7 ಕೋಟಿ ಹೂಡಿಕೆಗೆ ಒಂದು ಉದ್ಯೋಗ ಮಾತ್ರ ಸೃಷ್ಟಿಯಾಗುತ್ತದೆ ಎಂಬ ಸತ್ಯ ಸಂಗತಿಯ ಅರಿವಾಗುತ್ತದೆ.

ಬೆಂಗಳೂರು ಕೇಂದ್ರಿತ ಬೆಳವಣಿಗೆಯನ್ನು ಮುಂದುವರಿಸುವುದು ಕರ್ನಾಟಕಕ್ಕೆ ಪರಿಣಾಮವನ್ನು ಉಂಟುಮಾಡುತ್ತದೆ. ರಾಜ್ಯ ಇತರ ನಗರಗಳಿಗಿಂತ ಹೆಚ್ಚಿನ ವೇಗದಲ್ಲಿ ಬೆಳೆಯುತ್ತಿರುವ ವಾಸ್ತವ ಸಂಗತಿಯು ಬೆಂಗಳೂರು ನಗರಕ್ಕೆ ದುಬಾರಿಯಾಗಲಿದೆ. ತಡೆದುಕೊಳ್ಳುವುದು ಕಷ್ಟವೇ ಸರಿ.

ಈ ಮಾದರಿಯು ರಾಜ್ಯದಲ್ಲಿ ಪ್ರಾದೇಶಿಕ ಅಸಮಾನತೆಯನ್ನು ಹೆಚ್ಚಿಸುತ್ತದೆ. ಮಹಾನಗರಗಳ ಹೆಚ್ಚಿನ ಬೆಳವಣಿಗೆಯು ದೇಶದಲ್ಲೇ ಅತ್ಯಂತ ಹೆಚ್ಚು ತಲಾದಾಯದ ಸ್ಥಿತಿಯನ್ನು ಉಂಟುಮಾಡಿದರೂ, ಇತರ ಪ್ರದೇಶಗಳ ತಲಾದಾಯ ಬಹಳ ಬಹಳ ಹಿಂದೆ ಉಳಿದಿದೆ ಎಂಬ ಸತ್ಯವನ್ನು ಕಣ್ಣಿಗೆ ರಾಚಿಸುತ್ತದೆ. ಈ ಪ್ರಾದೇಶಿಕ ಅಸಮಾನತೆಯ ರಾಜಕೀಯ ಪರಿಣಾಮಗಳನ್ನು ಚುನಾವಣೆಗಳ ಮಧ್ಯೆ ಮರೆಮಾಚಬಹುದು, ಆದರೆ ಅದು ಬಹುಬೇಗ ಗ್ಯಾರಂಟಿಗಳಂತಹ ಹಕ್ಕೊತ್ತಾಯಗಳಿಗೆ ದಾರಿ ಮಾಡಿಕೊಡುತ್ತವೆ. ಮಾನ್ಯ ಮುಖ್ಯಮಂತ್ರಿಗಳು ಒಂದು ಹಂತದ ಗ್ಯಾರಂಟಿಗಳಿಗೆ ಸಿದ್ಧತೆ ಮಾಡಿಕೊಂಡಿದ್ದಾರೆ, ಆದರೆ ಈ ಬಜೆಟ್ ಮುಂದೆ ಇಂತಹ ಹಲವಾರು ಗ್ಯಾರಂಟಿಗಳಿಗೆ ದಾರಿ ಮಾಡಿಕೊಡುವ ಅಪಾಯವನ್ನು ತಳ್ಳಿಹಾಕಲಾಗದು.

ಇದನ್ನೂ ನೋಡಿ: LIVE: ಜನಚಳುವಳಿಗಳ ಬಜೆಟ್‌ ಅಧಿವೇಶನ |2ನೇ ದಿನ

Donate Janashakthi Media

Leave a Reply

Your email address will not be published. Required fields are marked *