ಬಜೆಟ್ ಮಂಡನೆಯಲ್ಲಿ ಖ್ಯಾತ ಸಾಹಿತಿ ಗಿರೀಶ್ ಕಾರ್ನಾಡ್ ಹೇಳಿಕೆ ಉಲ್ಲೇಖಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು : ನೂತನ ಕಾಂಗ್ರೆಸ್ ಸರ್ಕಾರದ ಮೊದಲನೆ ಬಜೆಟ್ (Karnataka Budget 2023-24) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಮಂಡಿಸಿದರು. ಇದು ಅವರ 14ನೇ ಬಜೆಟ್ ಆಗಿದ್ದು, ಮುಖ್ಯಮಂತ್ರಿಯಾಗಿ ಏಳನೇ ಬಜೆಟ್ ಆಗಿದೆ. “ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಕರ್ನಾಟಕವು ಬಸವಣ್ಣನ ಕಾಲದಿಂದಲೂ ಶ್ರಮಿಸುತ್ತಿದೆ. ನಾನು ಈ ಸಂಪ್ರದಾಯವನ್ನು ಮುಂದುವರಿಸಲು ಪ್ರಯತ್ನಿಸುತ್ತಿದ್ದೇನೆ” ಎಂದು ಅವರು ಹೇಳಿದರು.
ಬಜೆಟ್ ಮಂಡನೆಗೆ ಮುನ್ನ ಮಾತನಾಡಿದ ಸಿದ್ದರಾಮಯ್ಯ, “ಕಾಂಗ್ರೆಸ್ ಸರ್ಕಾರದ ಗ್ಯಾರೆಂಟಿ ಯೋಜನೆಯನ್ನು ಕೇವಲ ಬಿಟ್ಟಿ ಯೋಜನೆ ಎಂದು ಆಡಿಕೊಳ್ಳುವವರು ನಮ್ಮ ರಾಜ್ಯದ ಬಡವರ, ಶ್ರಮಿಕರ ಬದುಕನ್ನು ಗಮನಿಸಬೇಕಾಗಿದೆ” ಎಂದು ವಿರೋಧ ಪಕ್ಷವನ್ನು ಉಲ್ಲೇಖಿಸಿ ಹೇಳಿದರು.
“ತಾವು ವಿರೋಧ ಪಕ್ಷದ ಜವಾಬ್ದಾರಿಯನ್ನು ನಿರ್ವಹಿಸಿ ಆದರೆ ಶ್ರೀಸಾಮಾನ್ಯರ ವಿವೇಚನೆಗೆ ಅಪಮಾನ ಮಾಡಬೇಡಿ. ಜನರು ಬುದ್ದಿವಂತರು, ಪ್ರಜ್ಞಾವಂತರಾಗಿದ್ದು, ಇಂತಹ ತರ್ಕರಹಿತ ಆಲೋಚನೆಗಳನ್ನು ನಂಬುವುದಿಲ್ಲ. ವಾಸ್ತವವೆಂದರೆ, ಜನ ನಿಮ್ಮಿಂದ ಬೇಸೆತ್ತು ಭಾರಿ ಬಹುಮತದಿಂದ ನಮ್ಮನ್ನು ಗೆಲ್ಲಿಸಿ ಕಳುಹಿಸಿದ್ದಾರೆ” ಎಂದರು.
ಒಟ್ಟು 3 ಲಕ್ಷ 27 ಸಾವಿರ ಕೋಟಿ ಗಾತ್ರದ ಬಜೆಟ್ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಲಿದ್ದಾರೆ. ಮುಖ್ಯವಾಗಿ ಅಬಕಾರಿ ತೆರಿಗೆ ಶೇಕಡಾ 20 ರಷ್ಟು ಹೆಚ್ಚಳವಾಗಲಿದ್ದು, ಬಿಯರ್ ಮೇಲಿನ ಅಬಕಾರಿ ಸುಂಕ ಶೇಕಡಾ 10 ರಷ್ಟು ಹೆಚ್ಚಳವಾಗಲಿದೆ.
ಪರಿಸರ ರಕ್ಷಣೆಗೆ ಆದ್ಯತೆಯಿಂದ ಕೆಲಸ ಮಾಡುವುದಾಗಿ ಸಿದ್ದರಾಮಯ್ಯ ಹೇಳಿದ್ದು, ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಹೇಳಿದರು. “ಕಾಂಗ್ರೆಸ್ ಸರ್ಕಾರವೂ ಜನರ ಕನಸಿಗೆ ರೆಕ್ಕೆ ಮೂಡಿಸುವ ಕೆಲಸ ಮಾಡುತ್ತಿದೆ. ಆಗಸ್ಟ್ನಲ್ಲಿ ಗೃಹ ಜ್ಯೋತಿ ಯೋಜನೆ ಜಾರಿಗೆ ಬರಲಿದೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಹಾಗೂ ಗೃಹ ಜ್ಯೋತಿ ಬೆಲೆ ಏರಿಕೆಯಿಂದ ಕಂಗಾಲದ ಜನರಿಗೆ ನಿರಾಳತೆ ತಂದುಕೊಡುತ್ತವೆ ಎಂದು ಹೇಳಿದ ಸಿದ್ದರಾಮಯ್ಯ, ತಮ್ಮ ಸರ್ಕಾರದ ಮತ್ತೊಂದು ಘೋಷಣೆಯಾದ ಯುವ ನಿಧಿ ಯುವಕರ ಆತ್ಮವಿಶ್ವಾಸ ಹೆಚ್ಚಿಸುತ್ತೆ ಎಂದರು.
ಇದನ್ನೂ ಓದಿ: ಕೆಎಸ್ಆರ್ಟಿಸಿ ಸಿಬ್ಬಂದಿ ಆತ್ಮಹತ್ಯೆ ಯತ್ನ ಪ್ರಕರಣ: ಸದನದಲ್ಲಿ ಗದ್ದಲ ,ಬಿಜೆಪಿ ಜೆಡಿಎಸ್ ಧರಣಿ