ಕಾರ್ನಾಡರ ನೆನಪು| ತುಘಲಕ್ 100ರ ಸಂಭ್ರಮ; ಎರಡು ದಿನಗಳ ರಂಗೋತ್ಸವ

ಬೆಂಗಳೂರು: ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ರಚಿಸಿದ ‘ತುಘಲಕ್’ ನಾಟಕದ ಪ್ರದರ್ಶನಕ್ಕೆ ಈಗ ನೂರರ ಸಂಭ್ರಮ. ಈ ಹಿನ್ನೆಲೆಯಲ್ಲಿ ‘ಸಮುದಾಯ ಬೆಂಗಳೂರು’ ತಂಡ (ಅಕ್ಟೋಬರ್- 28- 29) ಶನಿವಾರ ಮತ್ತು ಭಾನುವಾರ ಕಾರ್ನಾಡರ ನೆನಪು ತುಘಲಕ್ 100ರ ಸಂಭ್ರಮ ಎರಡು ದಿನಗಳ ರಂಗೋತ್ಸವ ಆಯೋಜಿಸಿದೆ.

ಇದನ್ನೂ ಓದಿ:ಜಯರಾಮ್‌ ರಾಯಪುರ ನಾಟಕೋತ್ಸವ; 3 ದಿನ 3 ನಾಟಕಗಳ ಪ್ರದರ್ಶನ

ಜೆ.ಸಿ. ರಸ್ತೆಯ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ರಂಗೋತ್ಸವದಲ್ಲಿ ‘ಕಾರ್ನಾಡರ ನೆನಪು’ ವಿಚಾರ ಸಂಕಿರಣ, ಸ್ಮರಣ ಸಂಚಿಕೆ ಬಿಡುಗಡೆ, ಕೆ.ಎಂ. ಚೈತನ್ಯ ನಿರ್ದೇಶನದ ಕಾರ್ನಾಡ್ ಸಾಕ್ಷ್ಯಚಿತ್ರ ಪ್ರದರ್ಶನ, ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ, ‘ಕಾರ್ನಾಡರ ಕೃತಿಗಳು- ಒಳನೋಟ’ ವಿಚಾರ ಸಂಕಿರಣ, ‘ರಂಗ ಚಿಂತನ’ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನಡೆಯಲಿವೆ.

ಕಾರ್ಯಕ್ರಮವನ್ನು ಅಕ್ಟೋಬರ್- 28ರಂದು ಮಧ್ಯಾಹ್ನ 3.00ಕ್ಕೆ ಡಾ.ವಿಜಯ, ಹಿರಿಯ ಚಿಂತಕರು ಅವರು ಉದ್ಘಾಟಿಸಲಿದ್ದು, ಸಿ.ಬಸವಲಿಂಗಯ್ಯ, ರಂಗ ತಜ್ಞರು ಹಾಗೂ ನಿರ್ದೇಶಕರು ಮತ್ತು ಡಾ.ನಟರಾಜ್‌ ಹುಳಿಯಾರ್‌ ಪ್ರಾಧ್ಯಾಪಕರು, ಬೆಂಗಳೂರು ವಿಶ್ವವಿದ್ಯಾಲಯ ಹಾಗೂ ನಾಟಕಾರರು ಭಾಗವಹಿಸಲಿದ್ದಾರೆ. ಅಗ್ರಹಾರ ಕೃಷ್ಣಮೂರ್ತಿ, ಹಿರಿಯ ಸಾಹಿತಿಗಳು ಅಧ್ಯಕ್ಷರು, ಸಮುದಾಯ ಬೆಂಗಳೂರು ಇವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಗಿರೀಶ್ ಕಾರ್ನಾಡರ ನೆನಪು ವಿಚಾರ ಸಂಕಿರಣ, ಸ್ಮರಣ ಸಂಚಿಕೆ ಬಿಡುಗಡೆ, ಕೆ.ಎಂ.ಚೈತನ್ಯ ನಿರ್ದೇಶನದ ಕಾರ್ನಾಡ್ ಸಾಕ್ಷ್ಯ ಚಿತ್ರ ಪ್ರದರ್ಶನ, ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ.

 

ಎರಡನೇ ದಿನ (ಅ.29), ಕರ್ನಾಡರ ಕೃತಿಗಳಲ್ಲಿನ ಒಳನೋಟಗಳ ಕುರಿತು ರಂಗ ತಜ್ಞ ನಟರಾಜ್ ಹೊನ್ನವಳ್ಳಿ, ಡಾ. ಎಚ್‌.ಎಲ್ ಪುಷ್ಟ, ಕೆ.ವೈ ನಾರಾಯಣಸ್ವಾಮಿ, ಅಗ್ರಹಾರ ಕೃಷ್ಣಮೂರ್ತಿ, ಡಾ. ಕೆ ಮರುಳಸಿದ್ದಪ್ಪ ಮಾತನಾಡಲಿದ್ದಾರೆ. ರಂಗ ತಜ್ಞ ಡಾ. ಶ್ರೀಪಾದ್ ಭಟ್, ಸಿ.ಕೆ ಗುಂಡಣ್ಣ ಹಗೂ ಕೀರ್ತಿ ತೊಂಡಗೆರೆ ಅವರು ‘ರಂಗ ಚಿಂತನ’ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಅಂದು ರಾತ್ರಿ 7:30ಕ್ಕೆ ‘ತುಘಲಕ್’ ನಾಟಕ ಪ್ರದರ್ಶನ ಇರಲಿದೆ.

ತುಘಲಕ್ ನಾಟಕದ 100 ನೇ ಪ್ರದರ್ಶನ

ತುಘಲಕ್ ನಾಟಕದ 100 ನೇ ಪ್ರದರ್ಶನ : ಗಿರೀಶ್ ಕಾರ್ನಾಡರ ತುಘಲಕ್ ಭಾರತದ ಶ್ರೇಷ್ಠ ನಾಟಕಗಳಲ್ಲೊಂದು. ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಗಳನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಯನ್ನು ತನ್ನ ಒಡಲೊಳಗಿರಿಸಿಕೊಂಡಿದೆ. ಈ ನಾಟಕದ ಮಹತ್ವಾಕಾಂಕ್ಷೆಯ ಪ್ರಯೋಗಗಳನ್ನು ಕನ್ನಡವೂ ಸೇರಿದಂತೆ ನಾಡಿನ ಅನೇಕ ಭಾಷೆಗಳು ಕಂಡಿದೆ.ತನ್ನ ರಾಜ್ಯದ ಉಜ್ವಲ ಭವಿಷ್ಯದ ಕನಸು ಕಂಡ ತುಘಲಕ್‌ನ ಸಾಮ್ರಾಜ್ಯದ ಅವನತಿಯ ರಾಜಕಾರಣ ಮತ್ತು ಧರ್ಮಕಾರಣಗಳನ್ನು ಎತ್ತಿ ಹಿಡಿವ ಈ ನಾಟಕ ಒಂದು ಅಪ್ಪಟ ರಾಜಕೀಯ ನಾಟಕವಾಗಿ ರೂಪುಗೊಡಿದೆ. ಮೇಲ್ನೋಟಕ್ಕೆ ತುಘಲಕ್ ಐತಿಹಾಸಿಕ ನಾಟಕವೆನಿಸಿದರೂ ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆʼ ಇಂತಹ ನಾಟಕ 100 ನೇ ಪ್ರದರ್ಶನ ಕಾಣುತ್ತಿರುವುದು ಖುಷಿಯ ಸಂತಸ, ಜನರ ಪ್ರೋತ್ಸಾಹ ಸಿಕ್ಕಲ್ಲಿ ಪ್ರದರ್ಶನ ಮುಂದುವರೆಯಲಿದೆ ಎಂದು ಸಮುದಾಯ, ಬೆಂಗಳೂರು ತಿಳಿಸಿದೆ.

 

ಟಿಕೆಟ್‌ಗಾಗಿ ಇಲ್ಲಿ ಸಂಪರ್ಕಿಸಿ: ರವೀಂದ್ರ ಕಲಾಕ್ಷೇತ್ರದ ಪದ್ದಣ್ಣ ತಾಲೀಮು ಕೊಠಡಿಯಲ್ಲಿ ಅ. 27ರವರೆಗೆ ನಿತ್ಯ ಸಂಜೆ 6 ರಿಂದ 9ರವರೆಗೆ ಉತ್ಸವದ ಪಾಸ್ ಹಾಗೂ ಟಿಕೆಟ್‌ಗಳು ಲಭ್ಯವಿದೆ.

ವಿಡಿಯೋ ನೋಡಿ:ವೃತ್ತಿ ರಂಗಭೂಮಿ ಉಳಿಯಬೇಕು, ಕಲಾವಿದರ ಗೋಳನ್ನು ಸರ್ಕಾರ ಕೇಳಬೇಕು Janashakthi Media

Donate Janashakthi Media

Leave a Reply

Your email address will not be published. Required fields are marked *