ಬೆಂಗಳೂರು: ಜೂನ್ 14 ರಂದು ಬೆಂಗಳೂರಿನಲ್ಲಿ ನಡೆಯಲಿರುವ “ಅವಳ ಹೆಜ್ಜೆ ಕಿರುಚಿತ್ರೋತ್ಸವ-2025” ಕ್ಕೆ ಕಿರುಚಿತ್ರವನ್ನು ಸಲ್ಲಿಸಲು ಇನ್ನು ಕೆಲವೇ ದಿನಗಳ ಅವಕಾಶವಿದ್ದು, ಮಹಿಳೆಯರೇ ತಯಾರಿಸಿದ ಕಿರುಚಿತ್ರಗಳ ಸ್ಪರ್ಧೆಯನ್ನು ಮೊಟ್ಟ ಮೊದಲ ಬಾರಿಗೆ ಏರ್ಪಡಿಸಲಾಗಿದೆ. ಮಹಿಳಾ
ಅತ್ಯುತ್ತಮ ಕಿರುಚಿತ್ರಕ್ಕೆ ₹1,00,000 (ಒಂದು ಲಕ್ಷ) ನಗದು ಬಹುಮಾನ ಪಡೆಯುವ ಅವಕಾಶವಿದೆ. ಜೊತೆಗೆ, ಸಾಕ್ಷ್ಯಚಿತ್ರಗಳೂ ಸೇರಿದಂತೆ ಅನೇಕ ವಿಶೇಷ ವರ್ಗಗಳಲ್ಲಿ ತಲಾ ಒಂದು ಚಿತ್ರಕ್ಕೆ ಮೆಚ್ಚುಗೆಯ ಬಹುಮಾನ ನಗದು ₹10,000 (ಹತ್ತು ಸಾವಿರ) ಪಡೆಯುವ ಅವಕಾಶವಿದೆ.
ಏಪ್ರಿಲ್ 30, 2025 ರೊಳಗೆ ಕಿರುಚಿತ್ರದ ಗುಪ್ತ ಲಿಂಕ್ ಮತ್ತು ಪ್ರವೇಶ ಶುಲ್ಕ ₹1000 ಜೊತೆಗೆ ಅರ್ಜಿಯನ್ನು http://www.avalahejje.net ಮೂಲಕ ಸಲ್ಲಿಸಬೇಕು. ಕೆಲವು ವಿಶೇಷ ಸಂದರ್ಭಗಳಲ್ಲಿ ಪ್ರವೇಶ ಶುಲ್ಕಕ್ಕೆ ವಿನಾಯಿತಿ ಮತ್ತು ಕೆಲವು ದಿನಗಳ ಗಡುವು ವಿಸ್ತರಣೆ ನೀಡಲು ಸಾಧ್ಯವಿದೆಯಾದರೂ ಈ ಬಗ್ಗೆ ಮನವಿಯನ್ನು ವೆಬ್ಸೈಟ್ ಮೂಲಕ ಏಪ್ರಿಲ್ 30 ರೊಳಗೆ ಸಲ್ಲಿಸಿದಲ್ಲಿ ಮಾತ್ರ ಪರಿಗಣಿಸಲಾಗುವುದು. ಪ್ರಶ್ನೆಗಳಿದ್ದಲ್ಲಿ, 8867747236 ಗೆ ವಾಟ್ಸಾಪ್ ಅಥವಾ [email protected]ಗೆ ಈಮೇಲ್ ಮಾಡಿ.
ಇದನ್ನೂ ಓದಿ: ಎಸ್ಎಸ್ಎಲ್ಸಿ ಉತ್ತರ ಪತ್ರಿಕೆ ವಿಚಿತ್ರ ಬೇಡಿಕೆ ಇಟ್ಟ ವಿದ್ಯಾರ್ಥಿಗಳು
ಕ್ಯಾಮೆರಾದ ಹಿಂದೆ ಮಹಿಳೆ ಇಲ್ಲದಿದ್ದರೆ, ಸಿನಿಮಾ ಪರದೆಯ ಮೇಲಿನ ಮಹಿಳಾ ಪಾತ್ರಗಳು ಕೇವಲ ಗ್ಲಾಮರ್ ಗೆ ಸೀಮಿತವಾಗುವ ಅಪಾಯವಿದೆ. ಮಹತ್ವಾಕಾಂಕ್ಷಿ ಚಿತ್ರ ನಿರ್ದೇಶಕಿಯರು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು, ತಮ್ಮ ಗುರುತನ್ನು ಮೂಡಿಸಲು ಮತ್ತು ಲಿಂಗ ಸಮಾನತೆಯ ನಿಟ್ಟಿನಲ್ಲಿ ಕೊಡುಗೆ ನೀಡಲು ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ಅವಳ ಹೆಜ್ಜೆಯ ಸ್ಥಾಪಕಿ ಶಾಂತಲಾ ದಾಮ್ಲೆಯವರ ಆಶಯ.
“ಅವಳ ಹೆಜ್ಜೆ” ಬಗ್ಗೆ
“ಅವಳ ಹೆಜ್ಜೆ” – ಹೆಣ್ಣಿನ ಹೆಜ್ಜೆಗುರುತು ಆಟದ ಮೈದಾನದಿಂದ ಬೋರ್ಡ್ ರೂಂವರೆಗೂ ಎಲ್ಲೆಡೆ ಕಾಣುವ ಆಶಯದೊಂದಿಗೆ ಶಾಂತಲಾ ದಾಮ್ಲೆಯವರು ಆರಂಭಿಸಿದ ಸಾಮಾಜಿಕ ಸಂಕಲ್ಪ. ಕಳೆದ ಎಂಟು ವರ್ಷಗಳಲ್ಲಿ ಅವಳ ಹೆಜ್ಜೆ ಹಲವಾರು ವಿನೂತನ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಿ ಕಳೆದ ವರ್ಷ ಗುಬ್ಬಿವಾಣಿ ಟ್ರಸ್ಟ್ ನೊಂದಿಗೆ ವಿಲೀನವಾಗಿದೆ.
“ಅವಳ ಹೆಜ್ಜೆ ಕಿರುಚಿತ್ರೋತ್ಸವ” ಕೇವಲ ಕಿರುಚಿತ್ರ ಸ್ಪರ್ಧೆಯಲ್ಲ. ಮಹಿಳಾ ಮುಖ್ಯಪಾತ್ರಗಳಿಗೆ, ಮಹಿಳೆಯರ ಅನುಭವ ಮತ್ತು ದೃಷ್ಟಿಕೋನಗಳಿಗೆ ವೇದಿಕೆ ಸೃಷ್ಟಿಸುವುದರ ಮೂಲಕ ಸಮಾನತೆಯತ್ತ ಇಡುತ್ತಿರುವ ದಿಟ್ಟ ಹೆಜ್ಜೆ. ಸಲ್ಲಿಕೆ ಮಾರ್ಗಸೂಚಿಗಳಿಗಾಗಿ, http://www.avalahejje.net ಗೆ ಭೇಟಿ ನೀಡಿ.
ಪ್ರಶ್ನೆಗಳಿದ್ದಲ್ಲಿ, [email protected]ಗೆ ಈಮೇಲ್ ಅಥವಾ 8867747236 ಗೆ ವಾಟ್ಸಾಪ್ ಮಾಡಿ.
ಇದನ್ನೂ ನೋಡಿ: ಹಾಸನ | ಕೇಂದ್ರ- ರಾಜ್ಯ ಸರ್ಕಾರಗಳ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ Janashakthi Media