ತೈವಾನ್ : ತೈವಾನ್ನಲ್ಲಿ ನೆಲೆಸಿರುವ ಕನ್ನಡಿಗರು 66 ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವ ಮೂಲಕ ಕನ್ನಡದ ಕಂಪನ್ನು ವಿದೇಶದಲ್ಲೂ ಪಸರಿಸಿದ್ದಾರೆ.
ಕರ್ನಾಟಕದ ವಿವಿಧ ಭಾಗಗಳಿಂದ ಹೋಗಿ ತೈವಾನ್ ನಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ರಾಜ್ಯೋತ್ಸವ ವನ್ನು ಕಳೆದ ಭಾನುವಾರದಂದು ಆಚರಿಸಿದರು. ಅಲ್ಲಿ ರಚಿಸಿಕೊಂಡಿರುವ “ತೈವಾನ್ ಕನ್ನಡ ಬಳಗ” ದಿಂದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ʻಬಾರಿಸು ಕನ್ನಡ ಡಿಂಡಿಮವʼ ಘೋಷಣೆ ಮೂಲಕ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ನೆರದಿದ್ದ ಎಲ್ಲರೂ ಎದ್ದು ನಿಂತು ನಾಡಗೀತೆಯನ್ನು ಹಾಡುವ ಮೂಲಕ ಕನ್ನಡತನವನ್ನು ಮೆರೆದಿದ್ದಾರೆ.
ತುಂಗಾಯ್ ವಿಶ್ವ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕರಾದ ಡಾ.ಕಿರಣ್ .ಬಿ ಅವರು ಮಾತನಾಡಿ ಕನ್ನಡ ಹೆಚ್ಚು ಹೆಚ್ಚು ಬಳಸುವುದರ ಮುಖಾಂತರ ಕನ್ನಡವನ್ನು ಬೆಳೆಸಬೇಕಿದೆ ಎಂದು ಕಿವಿ ಮಾತು ಹೇಳಿದರು .ಇದೆ ಸಂರ್ಭದಲ್ಲಿ ಪ್ರಪಂಚದ ಪ್ರತಿಷ್ಠಿತ ಸೆಮಿಕಂಡಕ್ಟರ್ ಕಂಪನಿ ಟಿ ಎಸ್ ಎಂ ಸಿ ನಲ್ಲಿ ಮುಖ್ಯ ಅಭಿಯಂತರರಾಗಿರುವ ಶ್ರೀ ಶಂಕರ್ ಮಾತನಾಡಿ ಗೋಕಾಕ್ ಚಳುವಳಿಯ ಮಹತ್ವನ್ನು ತಿಳಿಸಿಕೊಟ್ಟರು. ಸುಮಾರು 40 ಕ್ಕೂ ಹೆಚ್ಚಿನ ಕನ್ನಡಿಗರು ಕನ್ನಡ ಹಬ್ಬವನ್ನು ಆಚರಿಸಿ, ಕನ್ನಡದ ಭಾಷೆ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸಿದ ಖುಷಿಯಲ್ಲಿ ಮಿಂದೆದ್ದರು.
ವರದಿ : ಲಿಂಗರಾಜ್ (ತೈವಾನ್)