– ಸಂಧ್ಯಾ ಸೊರಬ
ಹೆಣ್ಣು ಅಬಲೆಯಲ್ಲ, ಸಬಲೆ, ಹೆಣ್ಣು ಶಕ್ತಿ ಎಂದು ಇತ್ಯಾದಿಯಾಗಿ ಮಹಿಳೆಯನ್ನು ನಮ್ಮ ಕನ್ನಡ ಚಿತ್ರೋದ್ಯಮ ಸೇರಿದಂತೆ ಅನೇಕ ಭಾಷಾ ಚಿತ್ರೋದ್ಯಮದಲ್ಲಿ ಶ್ರೇಷ್ಠವಾಗಿ ತೋರಿಸಿರುವ ಅದೇಷ್ಟೋ ಉದಾಹರಣೆಯನ್ನು ನೀಡಬಲ್ಲ ಪ್ರೇರಕ ಚಿತ್ರಗಳಿವೆ.
ಆದರೆ ಇದೇ ನಮ್ಮ ಕನ್ನಡ ಚಿತ್ರೋದ್ಯಮ ಮಹಿಳೆಯರನ್ನೂ ಅವಮಾನಿಸಿರುವ ರೀತಿಯಲ್ಲಿ ಅದೂ ಫ್ಯಾನ್ಸ್ ವಾರ್ ಹೆಸರಿನಲ್ಲಿ ಆಗ್ತಾ ಇರೋದನ್ನ ನೋಡಿದ್ರೆ, ಅಸಹ್ಯ ಅನಿಸುತ್ತದೆ. ಇಂದಿನ ಆಧುನಿಕ ಯುಗದಲ್ಲೂ ಒಂದು ಕ್ರೀಡೆಗಾಗಿ ಹೆಣ್ಣಿನ ಬಗ್ಗೆ ತುಚ್ಯವಾಗಿ ಕಾಣುವ ಈ ಮನೋವ್ಯಾದಿ ಅಂಟಿರೋದು ಸಮಾಜಕ್ಕೆ ಒಂದು ರೀತಿಯ ಘಾತುಕವೇ ಸರಿ.
ನಿಮ್ಗೆಲ್ಲಾ ಬಹುತೇಕರಿಗೆ ತಿಳಿದೇ ಇರತ್ತೆ. ಇದು ಅಶ್ವಿನಿ ಪುನೀತ್ ರಾಜ್‌ಕುಮಾರ್ ಅವ್ರನ್ನ ಆರ್‌ಸಿಬಿಗಾಗಿ ಗಜಪಡೆ ಫ್ಯಾನ್ಸ್ . ಎನ್ನುವ ಹೆಸರಿನಲ್ಲಿ ಕಕ್ಕಿರುವ ಆ ಜಂತುವಿನ ಮನಸ್ಥಿತಿಗೆ ಜನ ಛೀ.ಥೂ…ಅನ್ನುತ್ತಿದ್ದಾರೆ. ಅದು ಆಗಲೇ ಬೇಕು. ಒಂದು ಆಟ ಗೆಲ್ಲೋಕೆ, ಸೋಲೋಕೆ ಇರುವುದು ಸ್ಪರ್ಧಾಮನೋಭಾವನೆಯೇ ಹೊರತೂ ಯಾವುದೇ ಮೌಢ್ಯವಲ್ಲ. ಕನ್ನಡ ಚಿತ್ರೋದ್ಯಮ
ಈ ಹುಳು ಚಿತ್ರರಂಗದ ಅದ್ಯಾರದ್ದೋ ಫ್ಯಾನೋ ಫ್ಯಾನ್ಸೋ ಆಗಿರಬಹುದಾದರೂ ಅವನ ಅಂತರಂಗದಲ್ಲಿರುವ ವಿಷ ವಾಂತಿಮಾಡಿದೆ. ಗಂಡ ಸತ್ತ ಅಥವಾ ಇಲ್ಲದ ಮಹಿಳೆಯರನ್ನು ಏನು ಬೇಕಾದರೂ ಅನ್ನಬಹುದು, ಅದೇ ಹೆಂಡತಿ ಸತ್ತ, ಹೆಂಡತಿ ಇಲ್ಲದ ಗಂಡಸು ಮೌಢ್ಯಕ್ಕೆ ಬರಲ್ವಾ. ಹೆಣ್ಣಿಗೊಂದು, ಗಂಡಿಗೊಂದು ಮಾತು, ನ್ಯಾಯನಾ? ಅಲ್ಲಾರಿ, ಈ ಹುಳುವಿನ ಆ ಪದಗಳು ಆಕೆಯ ಮನಸಿಗೆ ಎಷ್ಟು ಘಾಸಿ ಮಾಡಿರಬಹುದು ಎನ್ನುವುದೇನಾದರೂ ಅದಕ್ಕೆ ಅರಿವಿದಿದ್ದರೆ, ಅಥವಾ ಪದಗಳ ಸೂಕ್ಷ್ಮತೆಯ ಭಾವ ಅರಿತಿದ್ದರೆ ಹೀಗಾಗುತ್ತಿರಲಿಲ್ಲ. ಇದನ್ನು ಫ್ಯಾನ್ಸ್ ವಾರ್ ಅಂತ ಹೇಳಿದರೂ ಇಂತಹ ಕೊಳಕು ಮನಸ್ಥಿತಿಯ ಫ್ಯಾನ್ಸ್‌ಗಳು ಬೇಕಾ? ಇಂತವರಿಂದಲೇ ಎಂತವರಿಗೂ ಕೆಟ್ಟಹೆಸರು ಅಲ್ವಾ? ಈ ಅಕೌಂಟ್ ಫೇಕ್ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತರ ಕರ್ನಾಟಕ ಸಂಘದ ಹೆಸರು ಹೇಳಲಿಚ್ಛದ ವ್ಯಕ್ತಿಯೊಬ್ಬರು ಹೇಳಿದ್ದಾರೆ. ಕನ್ನಡ ಚಿತ್ರೋದ್ಯಮ
ಆದಷ್ಟು ಬೇಗ ದರ್ಶನ್ ಇದಕ್ಕೆಲ್ಲಾ ಬಹಿರಂಗವಾಗಿ ಉತ್ತರ ಕೊಡಬೇಕು ಎನ್ನುವ ಒತ್ತಾಯಗಳು ಕೇಳಿಬರುತ್ತಿವೆ. ಅದೇನೇ ಇರಲೀ, ಸೋಷಿಯಲ್ ಮೀಡಿಯಾ ನಮ್ಮ ಸ್ವಂತದ್ದು, ಏನು ಬೇಕಾದರೂ ಬರೆಯಬಹುದು, ಕಕ್ಕಬಹುದು, ಹೇಳಬಹುದು ಎಂಬುದಕ್ಕೆ ಸದ್ಯಕ್ಕೆ ಉತ್ತರ ಅವರವರ ಭಾವವೇ ಹೇಳಬೇಕು. ಮನಸೇ ಇದಕ್ಕೆಲ್ಲಾ ಉತ್ತರಿಸಬೇಕು. ಕನ್ನಡ ಚಿತ್ರೋದ್ಯಮ
ಇದು ಫ್ಯಾನ್ಸ್ ವಾರೋ ಫೇಕ್ ವಾರೋ ಗೊತ್ತಿಲ್ಲ. ಕನ್ನಡ ಚಿತ್ರರಂಗ, ಚಿತ್ರೋದ್ಯಮಕ್ಕೆ ಸಂಬಂಧಪಟ್ಟವರು ಈ ಫ್ಯಾನ್ಸ್ ವಾರ್ಗಂತೂ ಕಡಿವಾಣ ಹಾಕೋಕೆ ಬಹುಶಃ ಸಾಧ್ಯವಾಗಲ್ಲ. ಆದರೆ, ಇಂತಹ ಕೊಳಕು ಮನಸ್ಥಿತಿಗಳಿಗಾದ್ರೂ ಕಡಿವಾಣ ಹಾಕಲೇಬೇಕೆಂಬುದೇ ಆಶಯ.