ಹಿರಿಯ ಚಿತ್ರನಟಿ ಜಯಂತಿ ನಿಧನ

ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಟಿ, ಅಭಿನಯ ಶಾರದೆ ಜಯಂತಿ ಅನಾರೋಗ್ಯದ ಕಾರಣದಿಂದ ಇಂದು ನಿಧನರಾಗಿದ್ದಾರೆ. 500 ಕ್ಕೂ ಹೆಚ್ಚು ಚಿತ್ರಗಳಲ್ಲಿ ಅವರು ಅಭಿನಯಿಸಿದ್ದಾರೆ.

1968 ರಲ್ಲಿ ಜೇನುಗೂಡು ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ಜಯಂತಿ ಡಾ. ರಾಜ್ ಕುಮಾರ್ ಸೇರಿದಂತೆ ಹಲವು ನಟರೊಂದಿಗೆ ಅಭಿನಯಿಸಿದ್ದಾರೆ. ಕನ್ನಡವಷ್ಟೆ ಅಲ್ಲದೆ ಇತರ 6 ಭಾಷೆಗಳಲ್ಲಿ ನಟಿಸಿದ್ದಾರೆ.

1945, ಜನವರಿ 6ರಂದು ಬಳ್ಳಾರಿ ಜಿಲ್ಲೆಯಲ್ಲಿ ಜನಿಸಿದ ಜಯಂತಿ ಅವರ ಮೂಲ ಹೆಸರು ಕಮಲಾ ಕುಮಾರಿ ಆಗಿತ್ತು. 25 ವರ್ಷಗಳ ಕಾಲ ನಾಯಕನಟಿಯಾಗಿ ತಮ್ಮ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದಿದ್ದ ಜಯಂತಿಯವರು ನಂತರದಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಜಯಂತಿ ಅವರು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ, ಹಿಂದಿ ಮತ್ತು ಮರಾಠಿ ಭಾಷೆಗಳಲ್ಲಿ 500ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ.

ಜೇನು ಗೂಡು, ಕಲಾವತಿ,ಮಿಸ್ ಲೀಲಾವತಿ, ಎಡಕಲ್ಲು ಗುಡ್ಡದ ಮೇಲೆ, ಕಲ್ಲು ಸಕ್ಕರೆ, ಮಿಸ್ ಬೆಂಗಳೂರು, ಇಮ್ಮಡಿ ಪುಲಿಕೇಶಿ, ರೌಡಿ ರಂಗಣ್ಣ, ಶ್ರೀ ಕೃಷ್ಣ ದೇವರಾಯ, ದೇವರ ಮಕ್ಕಳು, ಕುಲ ಗೌರವ, ಕಸ್ತೂರಿ ನಿವಾಸ ನಂದ ಗೋಕುಲ, ಚೂರಿ ಚಿಕ್ಕಣ್ಣ,  ಮರ್ಯಾದೆ ರಾಮಣ್ಣ, ನೀಲಾಂಬರಿ,ಮೊದಲಾದವರು ಅವರು ನಟಿಸಿದ ಕೆಲ ಪ್ರಮುಖ ಚಿತ್ರಗಳು.

ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಅವರ ಅದ್ಭುತ ಅಭಿನಯಕ್ಕೆ 1973-74ರಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಲಭಿಸಿತ್ತು. ಮನಸಿನಂತೆ ಮಾಂಗಲ್ಯ, ಧರ್ಮ ದಾರಿ ತಪ್ಪಿತು, ಮಸಣದ ಹೂವು ಚಿತ್ರದಲ್ಲೂ ಅತ್ಯುತ್ತಮ ನಟಿ ಎಂಬ ಪ್ರಶಸ್ತಿ ಬಂದಿವೆ. ಆನಂದ್, ಟುವ್ವಿ ಟುವ್ವಿ ಟುವ್ವಿ ಚಿತ್ರದಲ್ಲಿ ಪೋಷಕ ಪಾತ್ರಕ್ಕೆ ಪ್ರಶಸ್ತಿ ಬಂದಿದೆ. 2005ರಲ್ಲಿ ರಾಜಕುಮಾರ್ ಜೀವಿತಾವಧಿ ಸಾಧನೆ ಪ್ರಶಸ್ತಿ ಗೌರವ ಅವರಿಗೆ ಸಿಕ್ಕಿದೆ.

Donate Janashakthi Media

Leave a Reply

Your email address will not be published. Required fields are marked *