ರಾಷ್ಟ್ರಕವಿ ಕುವೆಂಪು, ಕೆಂಪೆಗೌಡರನ್ನು ಅವಮಾನಿಸಿದ ಆರೋಪ : ಕಾಳಿಸ್ವಾಮಿ ಮುಖಕ್ಕೆ ಮಸಿ

ಬೆಂಗಳೂರು : ಕಾಳಿ ಸ್ವಾಮಿ ಎಂದೇ ಗುರುತಿಸಿಕೊಂಡಿರುವ ಋಷಿ ಕುಮಾರ ಸ್ವಾಮಿಜೀಯ ಮೇಲೆ ಶಿವರಾಮೇಗೌಡ ಬಣದ ಕನ್ನಡ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಸಿ ಬಳಿದಿದ್ದಾರೆ.

ಋಷಿ ಕುಮಾರ ಸ್ವಾಮಿಜೀ ರಾಷ್ಟ್ರಕವಿ ಕುವೆಂಪು ಮತ್ತು ನಾಡಪ್ರಭು ಕೆಂಪೇಗೌಡರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಮಲ್ಲೇಶ್ವರದ ಗಂಗಮ್ಮ ದೇವಾಲಯಕ್ಕೆ ಋಷಿಕುಮಾರ ಸ್ವಾಮಿ ಬಂದಿದ್ದ ವೇಳೆ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಋಷಿಕುಮಾರ ಸ್ವಾಮೀಜಿಗೆ ದಿಕ್ಕಾರವನ್ನು ಕೂಗಿ ಮುಖಕ್ಕೆ ಕಪ್ಪು ಬಣ್ಣವನ್ನು ಬಳಿಯಲಾಗಿದೆ.

ರಾಷ್ಟ್ರಕವಿ ಕುವೆಂಪು, ಕೆಂಪೆಗೌಡ ಹಾಗೂ ಕನ್ನಡಪರ ಸಂಘಟನೆಗಳ ಬಗ್ಗೆ ಕಾಳಿ ಸ್ವಾಮಿ ಅವಹೇಳನ‌ಕಾರಿ ಮಾತುಗಳನ್ನಾಡಿದ್ದೆ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ನಾಡಗೀತೆಯನ್ನು ಹಾಗೂ ಕನ್ನಡಪರ ಸಂಘಟನೆಗಳ ಕೆಲಸವನ್ನು ಮಾಡಿದ್ದಕ್ಕಾಗಿ ಸ್ವಾಮೀಜಿಗೆ ಮಸಿ ಹಾಕಿದ್ದನ್ನು ಶಿವರಾಮೇಗೌಡ ಬಣದ ಕರವೇ ಸಂಘಟನೆ ಸಮರ್ಥಿಸಿಕೊಂಡಿದೆ.

ಘಟನೆ ಕುರಿತು ಕಾಳಿ ಸ್ವಾಮೀ ಪ್ರತಿಕ್ರಿಯೆ ನೀಡಿದ್ದು, ನಾನು ಯಾರನ್ನು ಅವಮಾನಿಸಿಲ್ಲ. ದಾಖಲೆಗಳಿದ್ದರೆ ಕೋರ್ಟ್‌ನಲ್ಲಿ ದಾವೆ ಹೂಡಲಿ. ಇದರಿಂದ ನಾನೇನು ವಿಚಲಿತನಾಗಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಕಾಳಿಸ್ವಾಮಿ ಸಮಾಜದ ಸಾಮರಸ್ಯ ಕದಡುವ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದಾರೆ. ಆದರೂ ಅವರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳುತ್ತಿಲ್ಲ. ಅವರ ಆವೇಶದ ಹೇಳಿಕೆಗಳು ಇಂತಹ ಘಟನೆಗಳಿಗೆ ಕಾರಣವಾಗುತ್ತಿವೆ. ಜನರನ್ನು ಪ್ರಚೋದಿಸುತ್ತಿರುವ ಕಾಳಿಸ್ವಾಮಿ ಮೇಲೆ ಕ್ರಮ ಕೈಗೊಳ್ಳಬೇಕು ಎಂಬ‌ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

Donate Janashakthi Media

Leave a Reply

Your email address will not be published. Required fields are marked *