ಕಲಬುರಗಿ: ಅಂತರ ಕಾಲೇಜುಗಳ ಯುವಜನೋತ್ಸವದ ಎರಡನೇ ದಿನವೂ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಸಡಗರ ಮನೆ ಮಾಡಿತ್ತು.
ಜ್ಞಾನಗಂಗಾ ಆವರಣದ ಕಾರ್ಯಸೌಧದಲ್ಲಿರುವ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗಾಯನ, ಕ್ಲಾಸಿಕ್ ಇನ್ಸ್ಟ್ರುಮೆಂಟ್ ವಾದನ, ಏಕವ್ಯಕ್ತಿ ಲಘು ಸಂಗೀತ ರಂಗು ತುಂಬಿತ್ತು.
ಇದನ್ನೂ ಓದಿ : ಮುಡಾ ಹಗರಣ: ಡಿ. 23ರಂದು ಕೇಸ್ ಡೈರಿಯನ್ನು ಸಲ್ಲಸಿ: ವಿಶೇಷ ನ್ಯಾಯಾಲಯ
ಭಾಸ್ಕರ್ ಸಭಾಂಗಣದಲ್ಲಿ ಬುದ್ಧಿಶಕ್ತಿ ಒರೆಗೆ ಹಚ್ಚುವ ರಸಪ್ರಶ್ನೆ ಸ್ಪರ್ಧೆ ಜರುಗಿದವು. ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏಕಾಂಕ ನಾಟಕ, ಮಿಮಿಕ್ರಿ, ಮೈಮ್, ಜನಪದ ಬುಡಕಟ್ಟು ನೃತ್ಯದ ಝಲಕ್ ಕಂಡುಬಂತು.
ಇದರೊಂದಿಗೆ ವಾಕ್ಪಟುತ್ವ ಸ್ಪರ್ಧೆ, ಚರ್ಚಾ ಸ್ಪರ್ಧೆ, ಅಂತಿಮಮಟ್ಟದ ರಸಪ್ರಶ್ನೆ ಹಾಗೂ ಹಿಂದಿ ಚರ್ಚಾ ಸ್ಪರ್ಧೆಗಳು ಜರುಗಿದವು. ಎಲ್ಲ ಬಗೆಯ ಸ್ಪರ್ಧೆಗಳಲ್ಲಿ ಯುವ ಪ್ರತಿಭೆಗಳು ಉತ್ಸಾಹದಿಂದ ಭಾಗವಹಿಸಿ, ಯುವಜನೋತ್ಸವಕ್ಕೆ ಮೆರುಗು ತಂದರು.
ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರು ಶಿಳ್ಳೆ, ಕೂಗಾಟ, ಹಾಗೂ ಚಪ್ಪಾಳೆ ನಡುವೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಬೇರೆ ಸಭಾಂಗಣದಲ್ಲಿ ನಿಗದಿತ ಸಮಯಕ್ಕೆ ಸ್ಪರ್ಧೆಗಳು ಮುಗಿಯುತ್ತಿದ್ದಂತೆ ಯುವ ಸಮೂಹ ಡಾ.ಬಿ.ಆರ್.ಅಂಬೇಡ್ಕರ್ ಭವನಕ್ಕೆ ಧಾವಿಸಿದರು.
ಗಮನಸೆಳೆದ ‘ದಲಿತ ಭಾರತ’ ನಾಟಕ: ಯುವಜನೋತ್ಸವದಲ್ಲಿ ಕಲಬುರಗಿಯ ಪೀಪಲ್ಸ್ ಎಜುಕೇಷನ್ ಸೊಸೈಟಿಯ ಡಾ.ಅಂಬೇಡ್ಕರ್ ಕಲಾ ವಾಣಿಜ್ಯ ಪದವಿ ಮತ್ತು ಸ್ನಾತಕೋತ್ತರ ಕೇಂದ್ರದ ವಿದ್ಯಾರ್ಥಿಗಳು ಅಭಿನಯಿಸಿದ ‘ದಲಿತ ಭಾರತ’ ನಾಟಕ ಎಲ್ಲರ ಮೆಚ್ಚುಗೆ ಪಡೆಯಿತು. ನಾಟಕಕ್ಕೆ ರಂಗಕರ್ಮಿ ವಿಶ್ವರಾಜ ಪಾಟೀಲ ನಿರ್ದೇಶನವಿತ್ತು.
ಇದನ್ನೂ ನೋಡಿ : ’ಕಸ ನಿರ್ವಹಣೆ–ಜನರಿಗೂ ಇದೆ ಹೊಣೆ’ Janashakthi Media
