ಕಲಬುರಗಿ: ಬೇಸಿಗೆ ರಜೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿವಾರಿಸಲು ಹಾಗೂ ಪ್ರಯಾಣಿಕರ ಬೇಡಿಕೆಯ ಮೇರೆಗೆ ಭಾರತೀಯ ರೈಲ್ವೆ ಕಲಬುರಗಿ-ಬೆಂಗಳೂರು ನಡುವೆ 60 ಬೇಸಿಗೆ ವಿಶೇಷ ರೈಲು ಸೇವೆಗಳನ್ನು ಓಡಿಸಲಿರುವ ಕುರಿತು ಕೇಂದ್ರ ರೈಲ್ವೆ ಸೋಲಾಪುರ ವಿಭಾಗದ ಸಾರ್ವಜನಿಕ ಸಂಪರ್ಕ ಇಲಾಖೆಯು ಈ ಕೆಳಕಂಡಂತೆ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.
ಇದನ್ನು ಓದಿ :-ಹಿಂಗಾರು ಬೆಳೆಗೆ ನೀರು ಬಿಡಲು ಆಗ್ರಹ: ಶಾಸಕಿ ಕರೆಮ್ಮ ನಾಯಕ್ ಪಾದಯಾತ್ರೆ
ರೈಲು ಸಂಖ್ಯೆ 06519 ವಿಶೇಷ ರೈಲು ಪ್ರತಿ ಶುಕ್ರವಾರ, ಶನಿವಾರ ಮತ್ತು ಭಾನುವಾರದಂದು 04-04-2025 ರಿಂದ 15-06-2025 ರವರೆಗೆ (ದಿನಾಂಕ: 30-05-2025, 31-05-2025 ಮತ್ತು 01-06-2025 ಹೊರತುಪಡಿಸಿ) SMVT ಬೆಂಗಳೂರಿನಿಂದ ರಾತ್ರಿ 21.15ಕ್ಕೆ ಹೊರಟು ಮರುದಿನ ಬೆಳಿಗ್ಗೆ 07.40 ಕ್ಕೆ ಕಲಬುರಗಿಗೆ ಆಗಮಿಸಲಿದೆ.
ರೈಲು ಸಂಖ್ಯೆ 06520 ವಿಶೇಷ ರೈಲು ಪ್ರತಿ ಶನಿವಾರ, ಭಾನುವಾರ ಮತ್ತು ಸೋಮವಾರದಂದು 05-04-2025 ರಿಂದ 16-06-2025 ರವರೆಗೆ (ದಿನಾಂಕ: 31-05-2025, 01-06-2025 ಮತ್ತು 02-06-2025 ಹೊರತುಪಡಿಸಿ) ಕಲಬುರಗಿಯಿಂದ ಬೆಳಿಗ್ಗೆ 09.35ಕ್ಕೆ ಹೊರಟು ಅದೇ ದಿನ ರಾತ್ರಿ 20.00 ಕ್ಕೆ SMVT ಬೆಂಗಳೂರಿಗೆ ತಲುಪಲಿದೆ.
ಇದನ್ನು ಓದಿ :-ಮನುಧರ್ಮದ ಹಾದಿಯಲ್ಲಿ ದೇಶವನ್ನು ಹಿಂದಕ್ಕೆ ಕೊಂಡೊಯ್ಯಲು ನಾವು ಬಿಡುವುದಿಲ್ಲ -ಬೃಂದಾ ಕಾರಟ್
ಶಹಾಬಾದ, ಯಾದಗಿರ, ಕೃಷ್ಣಾ, ರಾಯಚೂರು, ಮಂತ್ರಾಲಯ ರಸ್ತೆ, ಅದೋನಿ, ಗುಂತಕಲ್, ಅನಂತಪುರ, ಧರ್ಮಾವರಂ ಹಾಗೂ ಯಲಹಂಕ ಮೂಲಕ ಸಂಚರಿಸಲಿದೆ.
ಈ ವಿಶೇಷ (06519/06520) ರೈಲು ಸಂಖ್ಯೆ ಟಿಕೇಟ್‍ಗಳಿಗಾಗಿ ಕುರಿತು www.irctc.co.in ವೆಬ್‍ಸೈಟ್‍ನ್ನು ಸಂಪರ್ಕಿಸಲು ಅಥವಾ ವಿಶೇಷ ರೈಲುಗಳ ಸಮಯ ಮತ್ತು ನಿಲುಗಡೆ ವಿವರ ಕುರಿತು ಹೆಚ್ಚಿನ ಮಾಹಿತಿಗಾಗಿ www.enquiry.indianrail.gov.in ಗೆ ಭೇಟಿ ನೀಡಿ ಅಥವಾ ಎನ್.ಟಿ.ಇ.ಎಸ್. (NTES) ಅಪ್ಲಿಕೇಶನ್ ಡೌನ್‍ಲೋಡ್ ಮಾಡಿಕೊಳ್ಳಬಹುದಾಗಿದೆ