ಕಲಬುರಗಿ : ವಕೀಲ ಈರಣ್ಣ ಪಾಟೀಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ವಿಶ್ವ ವಿದ್ಯಾಲಯ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಮಲ್ಲಿನಾಥ್ ಬಸಣ್ಣ (45), ಭಾಗಣ್ಣ ಭಗವಾನ್ ಅವಣಪ್ಪ (20) ಹಾಗೂ ಅವಣಪ್ಪ ಭಾಗವಂತರಾವ್ (48) ಬಂಧಿತ ಆರೋಪಿಗಳು. ಬಂಧಿತರೆಲ್ಲರೂ ಕಲಬುರಗಿ ತಾಲ್ಲೂಕಿನ ಉದನೂರ್ ನಿವಾಸಿಗಳಾಗಿದ್ದಾರೆ.
ಇದನ್ನೂ ಓದಿ:lawyer Murder| ಕಲಬುರಗಿಯಲ್ಲಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ
ಡಿ7 ಗುರುವಾರ ನಗರದ ರಾಮ ಮಂದಿರ ಪ್ರದೇಶದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ನ್ಯಾಯವಾದಿಯೊಬ್ಬರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು, ಪ್ರಕರಣ ಸಂಬಂಧ ಆರು ಮಂದಿಯ ವಿರುದ್ಧ ನಗರದ ವಿಶ್ವ ವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿಗಳ ಬಂಧನಕ್ಕಾಗಿ ಪೊಲೀಸ್ ಇಲಾಖೆಯಿಂದ ಎರಡು ವಿಶೇಷ ತಂಡ ರಚನೆ ಮಾಡಿ, ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಏನಿದು ಘಟನೆ?
ಗುರುವಾರ ಕಲಬುರಗಿ ನಗರದ ಸಾಯಿ ಮಂದಿರ ಹತ್ತಿರದ ಅಪಾರ್ಟ್ಮೆಂಟ್ ಬಳಿ ಹಾಡಹಗಲೇ ವಕೀಲನ ಬರ್ಬರ ಹತ್ಯೆ ಆಗಿತ್ತು. ಈರಣ್ಣಗೌಡ ಪಾಟೀಲ್ (40) ಹತ್ಯೆಯಾದ ವಕೀಲ.
ಈರಣ್ಣಗೌಡ ಕೋಟ್೯ಗೆ ತೆರುಳುವಾಗ ಇಬ್ಬರು ದುಷ್ಕರ್ಮಿಗಳು ಅಡ್ಡಗಟ್ಟಿದ್ದು, ಏಕಾಏಕಿ ಮಚ್ಚು, ಲಾಂಗ್‌ಗಳಿಂದ ಹಲ್ಲೆಗೆ ಮುಂದಾಗಿ ಹಲ್ಲೆ ನಡೆಸಿದ್ದರು. ಈ ವೇಳೆ ವಕೀಲ ಈರಣ್ಣಗೌಡ ಬೈಕ್ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಓಡಿದ್ದಾರೆ. ಆದರೂ ಬಿಡದೆ ಹಂತಕರಿಬ್ಬರು ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಬರೋಬ್ಬರಿ ಅರ್ಧ ಕಿಲೋ ಮೀಟರ್ ಅಟ್ಟಾಡಿಸಿಕೊಂಡು ಹೋಗಿ ಹತ್ಯೆ ಮಾಡಿದ್ದರು.
ಅವರಿಂದ ತಪ್ಪಿಸಿಕೊಂಡು ವಕೀಲ ಈರಣ್ಣಗೌಡ ಅಪಾರ್ಟ್‌ಮೆಂಟ್ ಕಡೆಗೆ ನುಗ್ಗಿದ್ದರು. ವಕೀಲ ಈರಣ್ಣಗೌಡ ಓಡುತ್ತಲೇ ತಮ್ಮ ರಕ್ಷಣೆಗಾಗಿ ಇಟ್ಟುಕೊಂಡಿದ್ದ ರಿವಾಲ್ವಾರ್ ತೆಗೆಯಲು ಮುಂದಾಗಿದ್ದಾರೆ. ಅಷ್ಟರಲ್ಲಿ ಹಂತಕರು ಕೊಚ್ಚಿ ಕೊಲೆಗೈದಿದ್ದರು. ಹಂತಕ ಸಿಟ್ಟು ಎಷ್ಟು ಇತ್ತು ಎಂದರೆ ವಕೀಲ ಸತ್ತಿದ್ದರೂ ದೊಡ್ಡ ಕಲ್ಲನ್ನು ತಲೆ ಮೇಲೆ ಎತ್ತಿ ಹಾಕಿದ್ದಾರೆ. ಆತ ಉಸಿರು ಚೆಲ್ಲಿದ್ದಾನೆ ಎಂಬುದನ್ನು ಖಚಿತಪಡಿಸಿಕೊಂಡು ಪರಾರಿ ಆಗಿದ್ದರು. ವಕೀಲನನ್ನು ಅಟ್ಟಾಡಿಸಿ ಕೊಲೆಗೈದ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು.
ವಿಡಿಯೋ ನೋಡಿ:ಚಳಿಗಾಲದ ಅಧಿವೇಶನ ಬೆಳಗಾವಿ 2023| ಡಿಸೆಂಬರ್ 08 | ಭಾಗ 01 Live