ಕೆಎಐಡಿಬಿ ಭೂ ಸ್ವಾಧೀನಕ್ಕೆ ರೈತರ ಪ್ರಬಲ ವಿರೋಧ-ಜಿಲ್ಲಾಧಿಕಾರಿ ಸಭೆ ಬರ್ಖಾಸ್ತು

ಮಂಡ್ಯ : ಮದ್ದೂರು ತಾಲ್ಲೂಕು ಕುದುರುಗುಂಡಿ ಗ್ರಾಮದ ಸರ್ವೆ ನಂಬರ್ 245 ರ 109 ಎಕರೆ ಭೂಮಿ ಸ್ವಾಧೀನದ ಕೆಎಐಡಿಬಿ ಪ್ರಯತ್ನವನ್ನು ಜಿಲ್ಲಾಧಿಕಾರಿಗಳು ಕರೆದಿದ್ದ ಸಭೆಯಲ್ಲಿ ಕುದುರುಗುಂಡಿ ಗ್ರಾಮದ ಭೂ ಮಾಲೀಕರು ಪ್ರಬಲವಾಗಿ ವಿರೋಧಿಸಿದ್ದರಿಂದ ಜಿಲ್ಲಾಧಿಕಾರಿ ಗಳು ಸಭೆ ಬರ್ಖಾಸ್ತುಗೊಳಿಸಿದರು.

ಸಭೆಯಲ್ಲಿ ಭಾಗವಹಿಸಿ ಮಾತಾನಾಡಿದ ಕರ್ನಾಟಕ ಪ್ರಾಂತ ರೈತ ಸಂಘ ದ ಜಿಲ್ಲಾ ಮುಖಂಡ ಟಿ ಯಶವಂತ ರವರು ಕೆಎಐಡಿಬಿ ಯ ಭೂ ಸ್ವಾಧೀನ ಕಾನೂನು ಬಾಹಿರ. ಪ್ರಾಥಮಿಕ ಅಧಿಸೂಚನೆ ಹೊರಡಿಸಿದ ಇಪ್ಪತ್ತು ವರ್ಷಗಳ ನಂತರ ಅಂತಿಮ ಅಧಿಸೂಚನೆ ಹೊರಡಿಸಿರುವುದು ಭೂ ಸ್ವಾಧೀನ ಕಾಯ್ದೆ 2013 ರ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಸಂಬಂಧಿಸಿದ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ತೀರ್ಪುಗಳು ಕೂಡ ಇಂತಹ ಅಕ್ರಮ ಭೂ ಸ್ವಾಧೀನವನ್ನು ನಿರ್ಭಂದಿಸಿವೆ. ಕೂಡಲೇ ಕೆಎಐಡಿಬಿ ಅಕ್ರಮ ಭೂ ಸ್ವಾಧೀನವನ್ನು ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.

ಪರಿಶಿಷ್ಟ ಜಾತಿ ಸಮುದಾಯದ ಕುಟಂಬಗಳೇ ಹೆಚ್ಚು ಇರುವ ಈ ರೈತರ ಹಿತರಕ್ಷಣೆಗೆ ಮಾರಕವಾಗಿರುವ ಹಾಗೂ ದಲಿತ ರ ಕಲ್ಯಾಣದ ಘನ ಉದ್ದೇಶಕ್ಕೆ ವಿರುದ್ಧ ವಾಗಿರುವ ಕೆಎಐಡಿಬಿ ಭೂ ಸ್ವಾಧೀನ ದ ವಿರುದ್ಧ ಜಿಲ್ಲಾಧಿಕಾರಿ ಗಳ ರೈತರಿಗೆ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿದರು.

ಕುದುರುಗುಂಡಿ ಗ್ರಾಮದ ರೈತರಾದ ಸಿದ್ದಯ್ಯ, ಶಿವಣ್ಣ, ಶಿವಲಿಂಗಯ್ಯ, ಶ್ರೀನಿವಾಸ್, ಪುಟ್ಟಸ್ವಾಮಿಗೌಡ, ಮಾದಪ್ಪ, ಸ್ವಾಮಿ, ಸಿದ್ದರಾಮು, ಮಹದೇವಯ್ಯ, ಪ್ರಕಾಶ್, ಬಿ.ಸಿದ್ದಯ್ಯ,ಸಂಜೀವಮ್ಮ, ಸಣ್ಣತಾಯಮ್ಮ, ಸಿ ಬೆಟ್ಟಯ್ಯ, ಶ್ರೀನಿವಾಸ, ರಾಮಲಿಂಗಯ್ಯ, ಸುದರ್ಶನ್ ಮುಂತಾದವರು ಯಾವುದೇ ಕಾರಣಕ್ಕೂ ಭೂಮಿ ಬಿಡುವುದಿಲ್ಲ ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.

ಈ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ಭೂ ಸ್ವಾಧೀನಕ್ಕೆ ವಿರೋಧ ಬಂದ ಹಿನ್ನೆಲೆಯಲ್ಲಿ ಸಭೆ ಬರ್ಖಾಸ್ತುಗೊಳಿಸಿದರು. ಸಭೆಯಲ್ಲಿ ಕೆಎಐಡಿಬಿ ಅಧಿಕಾರಿಗಳಾದ ಸುರೇಶ್ ಕುಮಾರ್ ಮತ್ತಿತರರು ಹಾಜರಿದ್ದರು. ನಂತರ ಸಭೆ ನಡೆಸಿದ ರೈತರು ಕೆಎಐಡಿಬಿ ಭೂ ಸ್ವಾಧೀನ ದ ವಿರುದ್ಧ ಹೋರಾಟ ನಡೆಸಲು ತೀರ್ಮಾನಿಸಿದರು.

Donate Janashakthi Media

Leave a Reply

Your email address will not be published. Required fields are marked *