ಕಡ್ಡಾಯ ಮಾಸ್ಕ್‌ ಧರಿಸಿ-3ನೇ ಲಸಿಕೆ ಪಡೆದುಕೊಳ್ಳಿ; ಆರೋಗ್ಯ ಸಚಿವ ಸುಧಾಕರ್

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೋವಿಡ್‌ ಪ್ರಕರಣಗಳು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಮತ್ತೆ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಮಹತ್ವದ ಸಭೆ ನಡೆಸಿದ ಆರೋಗ್ಯ ಸಚಿವ ಡಾ. ಸುಧಾಕರ್‌ ಕೆ. ಅವರು, ರಾಜ್ಯದಲ್ಲಿ ಇಂದಿನಿಂದ ಎಲ್ಲರೂ ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮಾಸ್ಕ್‌ ಕಡ್ಡಯಗೊಳಿಸಲಾಗಿದೆ. ಅದೇ ರೀತಿಯಲ್ಲಿ ರಾಜ್ಯದಲ್ಲೂ ಮಾಸ್ಕ್‌ ಕಡ್ಡಾಯಗೊಳಿಸಲಾಗುತ್ತಿದ್ದು, ಈ ಬಗ್ಗೆ ಅಧಿಕಾರಿಗಳಿಗೆ ನಿರ್ದೇಶನ ಕೊಟ್ಟಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.

ಕೋವಿಡ್‌ ಸಾಂಕ್ರಾಮಿಕತೆ ವಿಚಾರದಲ್ಲಿ ಜನರು ಉದಾಸೀನತೆ ನಡೆಸದೆ, ಮುಂಜಾಗ್ರತೆಯನ್ನು ವಹಿಸಬೇಕು. ಕೋವಿಡ್‌ ಸಾವಿನ ಪ್ರಕರಣದಲ್ಲಿ 17, 18, 21 ವರ್ಷದ ಯುವಕರು ಹೆಚ್ಚಾಗಿ ಸಾವಿಗೀಡಾಗಿದ್ದಾರೆ 60 ವರ್ಷ ಮೇಲ್ಪಟ್ಟವರು ಅತೀ ಜರೂರಾಗಿ ಮೂರನೇ ಲಸಿಕೆಯನ್ನು ತೆಗೆದುಕೊಳ್ಳಬೇಕು. ಮಾಸ್ಕ್​ ಹಾಕದಿದ್ದರೆ ಯಾವುದೇ ದಂಡ ವಿಧಿಸುವುದಿಲ್ಲ. ಆದರೆ ಕಡ್ಡಾಯವಾಗಿ ಎಲ್ಲರೂ ಮಾಸ್ಕ್ ಧರಿಸಬೇಕು. ಮುಂದಿನ ದಿನಗಳಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳು ಏರಿಕೆಯಾದಲ್ಲಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದರು.

15 ದಿನಗಳಿಗೊಮ್ಮೆ ಸಭೆ ನಡೆಸಲಾಗುತ್ತದೆ. ಎಂದಿರುವ ಸಚಿವ ಸುಧಾಕರ್, ಸದ್ಯ, ಸಭೆ ಸಮಾರಂಭಗಳನ್ನು ನಿರ್ಬಂಧಿಸಬೇಕೆಂದು ತಜ್ಞರು ಹೇಳಿಲ್ಲ. ಆದರೆ, ಜನರು ನಿಯಮಗಳನ್ನು ಪಾಲನೆ ಮಾಡಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಸದ್ಯ ಮುಂದಿನ ದಿನಗಳಲ್ಲಿ ಸಾಲು ಸಾಲು ಹಬ್ಬಗಳು ಬರುತ್ತಿವೆ. ಹಬ್ಬಕ್ಕೆ ಯಾವುದೇ ಪ್ರತ್ಯೇಕ ನಿಯಮಾವಳಿಗಳು ಇರುವುದಿಲ್ಲ. ಆದರೆ, ಜನರು ಎಚ್ಚರಿಕೆಯಿಂದ ಇರಬೇಕು, ಕೋವಿಡ್ – 19 ಪರೀಕ್ಷೆಗಳನ್ನು ಹೆಚ್ಚಿಸಲಾಗಿದೆ. 36 ಸಾವಿರ ಪರೀಕ್ಷೆಗಳನ್ನು ಮಾಡಲಾಗುತ್ತಿದೆ. ಹಾಗೆ, ಕೋವಿಡ್ – 19 ವಿರುದ್ಧದ ಲಸಿಕೆ ತೆಗೆದುಕೊಂಡರೆ ಸಾವು ಬರಲ್ಲ, ಜತೆಗೆ ಕೊರೊನಾ ಸೋಂಕನ್ನು ತಡೆಯಬಹುದು ಎಂದರು.

ಮಂಕಿಪಾಕ್ಸ್‌ ಬಗ್ಗೆ ಚರ್ಚೆ

ಮಂಕಿಪಾಕ್ಸ್ ಬಗ್ಗೆಯೂ ಚರ್ಚೆ ಮಾಡಲಾಗಿದೆ. ದೇಶದಲ್ಲಿ ಒಂಬತ್ತು ಪ್ರಕರಣ ದಾಖಲಾಗಿವೆ. ಕೇರಳದಲ್ಲಿ ಐದು, ದೆಹಲಿಯಲ್ಲಿ ನಾಲ್ಕು ಪ್ರಕರಣ ಪತ್ತೆಯಾಗಿದ್ದು, ಕರ್ನಾಟಕದಲ್ಲಿ ಮಂಕಿಪಾಕ್ಸ್ ಪತ್ತೆ ಆಗಿಲ್ಲ. ಗಡಿ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಮಲೇರಿಯ, ಡೆಂಘೀ, ಹೆಚ್ 1 ಎನ್ 1 ಬಗ್ಗೆಯೂ ಅಧ್ಯಯನ ಆಗಿದೆ. ಕಳೆದ ವರ್ಷಕ್ಕಿಂತ ಈ ಬಾರಿ ಹೆಚ್ಚಾಗಿದೆ. ಮಲೇರಿಯಾ 114 ಪಕ್ರರಣ ಇದೆ. ಡೆಂಘೀ 4415 ಮಂದಿಗೆ ಬಂದಿದ್ದು, ಚಿಕೂನ್ ಗುನ್ಯಾ 978, ಹೆಚ್ 1ಎನ್ 1 303 ಪ್ರಕರಣ ದಾಖಲಾಗಿದೆ. ಇದರ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಹೇಳಿದರು.

Donate Janashakthi Media

Leave a Reply

Your email address will not be published. Required fields are marked *