ಕಾಡಾನೆ ದಾಳಿ ಪ್ರಕರಣ: ನ್ಯಾಯ ಕೇಳಿದ್ದಕ್ಕೆ ಪ್ರಕರಣ ದಾಖಲಿಸಿದ ಪೊಲೀಸರು!

ಹಾಸನ : ಸಕಲೇಶಪುರ ತಾಲೂಕು ವಡೂರು ಗ್ರಾಮದ ಕವಿತಾ ಎಂಬುವರು ಕಾಡಾನೆ ದಾಳಿಗೆ (ಆಗಸ್ಟ್‌-18) ರಂದು ಒಳಗಾಗಿದ್ದರು. ನಂತರ ಅವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವ ಮಹಿಳೆಯ ಸಾವು ಪ್ರಕರಣ ವಿಚಾರವಾಗಿ, ಮೃತಪಟ್ಟು ಆರು ಗಂಟೆಯಾದರೂ ಮರಣೋತ್ತರ ಪರೀಕ್ಷೆ ನಡೆಸಿಲ್ಲ ಎಂದು ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಹಾಗೂ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಹಾಸನ ಜಿಲ್ಲೆಯ ವಡೂರು ಗ್ರಾಮದಲ್ಲಿ ಮತ್ತೆ ಮುಂದುವರೆದ ಕಾಡಾನೆ ದಾಳಿ ಮಹಿಳೆ ಸಾವು

ಹಾಸನ ಜಿಲ್ಲೆ ಸಕಲೇಶಪುರ ತಾಲ್ಲೂಕಿನ ವಡೂರು ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಕಾಡಾನೆ ದಾಳಿಗೆ ಬಲಿಯಾದ ಮಹಿಳೆ ಕವಿತಾ 36 ವರ್ಷ. ಶವಾಗಾರದ ಮುಂದೆ ಮೌನ ಧರಣಿ ಕುಳಿತ ಕನ್ನಡಪರ ಸಂಘಟನೆ ಕಾರ್ಯಕರ್ತರು ಮಾತನಾಡಿ, ಪ್ರತಿಬಾರಿ ಆನೆ ದಾಳಿಗೆ ಜನರು ಬಲಿಯಾಗುತ್ತಿದ್ದಾರೆ. ಆದರೇ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ ಎಂದು ಸಿಡಿಮಿಡಿಗೊಂಡರು. ಉದ್ದೇಶಪೂರ್ವಕವಾಗಿ ಮರಣೋತ್ತರ ಪರೀಕ್ಷೆ ವಿಳಂಬ ಮಾಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಯಿ ನೋಡಲೆಂದು ವಡೂರು ಗ್ರಾಮಕ್ಕೆ ಮಗಳು ಕವಿತ ಬಂದಿದ್ದಳು. ಬೆಳಿಗ್ಗೆ ಬಹಿರ್ದೆಸೆಗೆ ತೆರಳಿದ್ದ ವೇಳೆ ಕಾಡಾನೆ ದಾಳಿ ನಡೆಸಿದೆ. ಮಹಿಳೆ ಸಾವನ್ನಪ್ಪಿದ್ದು, ತಾಲೂಕು ಆಸ್ಪತ್ರೆಯಲ್ಲಿ ಇನ್ನೂ ಮರಣೋತ್ತರ ಪರೀಕ್ಷೆ ಮಾಡದೆ ಇರುವುದಕ್ಕೆ ಮಹಿಳೆ ಶವ ಇಟ್ಟು ಪ್ರತಿಭಟನೆ ನಡೆಸಲು ಮುಂದಾಗಿದ್ದರು.  ಸರ್ಕಾರಿ ಅಧಿಕಾರಿಗಳಿಗೆ ಕರ್ತವ್ಯದ ಸಮಯದಲ್ಲಿ ತೊಂದರೆಯುಂಟು ಮಾಡಿದ್ದಾರೆ ಮತ್ತು ಸರ್ಕಾರಿ ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

ಹಾಸನದ ವೈದ್ಯಕೀಯ ಬೋದಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಪ್ರತಿಭಟನೆ, ಸಕಲೇಶಪುರದ ಅಂಬೇಡ್ಕರ್ ಪ್ರತಿಮೆ ಎದುರು ಮೃತದೇಹ ಇಟ್ಟು ಧರಣಿ ಮಾಡೋ ಎಚ್ಚರಿಕೆ ನೀಡಿದ್ದ ಹೋರಾಟಗಾರರ ವಿಚಾರಕ್ಕೆ ಪೊಲೀಸರ ನಡುವೆ ಸಂಘರ್ಷ ನಡೆದಿದೆ.

ಪ್ರತಿಭಟನೆ ನಡೆಸಿದ ಪ್ರಗತಿಪರ  ಸಂಘಟನೆ ಕಾರ್ಯಕರ್ತರು ಮರಣೋತ್ತರ ಪರೀಕ್ಷೆ ತಡವಾಗಿದೆ ಎಂದು ಆರೋಪಿಸಿ ಶವಾಗಾರದ ಎದುರು ಧರಣಿ ಮಾಡಿದ್ದರು  ಪ್ರತಿಭಟನೆಗೆ ಮಣಿದ ನಂತರ ಮರಣೋತ್ತರ ಪರೀಕ್ಷೆ ಬಳಿಕ ಶವ ಸಾಗಿಸೊ ವೇಳೆ ಮೃತದೇಹವನ್ನು ತಮಗೆ ಹಸ್ತಾಂತರ ಮಾಡಿ ಎಂದು ಆಂಬುಲನ್ಸ್ ತಡೆದು ಹೋರಾಟ ತೀವ್ರಗೊಳಿಸಿದ್ದರು.  ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿ, ಮೃತರ ಕುಟುಂಬಕ್ಕೆ ಪ್ರಚೋದನೆ ನೀಡಿದ ಆರೋಪದಲ್ಲಿ  ಸಾಗರ್, ಆರ್. ಮಂಜುನಾಥ, ತೇಜಸ್ ಕರುಣಾಕರ, ದರ್ಶನ್, ಭಾರತ್, ಶಿವಪ್ಪ, ರತೀಶ್, ಶೇಖರ್, ಕಿರಣ್, ರತೀಶ್ ಸೇರಿದಂತೆ 11 ಜನರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.‌

ನ್ಯಾಯ ಕೇಳಿದ ಹೋರಾಟಗಾರರ ಮೇಲೆ ಪ್ರಕರಣ ದಾಖಲಿಸುವ ಮೂಲಕ ಪೊಲೀಸರು ಮತ್ತು ಸ್ಥಳೀಯ ಶಾಸಕರು ಜನವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಹೋರಾಟ ಹತ್ತಿಕ್ಕುವ ಈ ಪ್ರಯತ್ನಕ್ಕೆ ಯಾರೂ ಮಣೆಯುವುದಿಲ್ಲ, ಹೋರಾಟ ಬಲಗೊಳ್ಳಲಿದೆ ಎಂದು ಸಿಐಟಿಯುನ ಸೌಮ್ಯ ಬಿಎಂ ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *