ʻಕಬಾಲಿʼ ಚಲನಚಿತ್ರ ನಿರ್ಮಾಪಕ ಕೆಪಿ ಚೌಧರಿ ಗೋವಾದಲ್ಲಿ ಆತ್ಮಹತ್ಯೆ 

ರಜನಿಕಾಂತ್ ಅಭಿನಯದ ʻಕಬಾಲಿʼ ಚಿತ್ರವನ್ನು ನಿರ್ಮಿಸಿದ್ದ, ತೆಲುಗು ಚಲನಚಿತ್ರ ನಿರ್ಮಾಪಕ ಕೆಪಿ ಚೌಧರಿ (44) ಸೋಮವಾರ ಗೋವಾದ ಹಳ್ಳಿಯೊಂದರ ಬಾಡಿಗೆ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಈ ಕುರಿತು ಮಾಹಿತಿ ನೀಡಿದ ಪೊಲೀಸರು ಆತ್ಮಹತ್ಯೆ ಎಂದು ಖಚಿತಪಡಿಸಿದ್ದಾರೆ.ಮೃತದೇಹವು ಸಿಯೋಲಿಮ್ ಗ್ರಾಮದ ಬಾಡಿಗೆ ಆವರಣದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದ್ದು, ನಂತರ ಮಾಹಿತಿ ಹಂಚಿಕೊಳ್ಳುತ್ತೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದರು.

ರಜನಿಕಾಂತ್ ಅಭಿನಯದ ʻಕಬಾಲಿʼ ಚಿತ್ರವನ್ನು ನಿರ್ಮಿಸಿ ಯಶ್ವಿಯಾಗಿದ್ದ ಚೌಧರಿ ಅವರನ್ನ 2023ರಲ್ಲಿ ಸೈಬರಾಬಾದ್ ವಿಶೇಷ ಕಾರ್ಯಾಚರಣೆ ತಂಡವು ಡ್ರಗ್ಸ್‌ ಕೇಸ್‌ನಲ್ಲಿ ಬಂಧಿಸಿದ್ದರು.

Donate Janashakthi Media

Leave a Reply

Your email address will not be published. Required fields are marked *