ಜೂನ್ 25: ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಪ್ರತಿರೋಧದ ದಿನ

ಜೂನ್ 25, 1975, ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ ದಿನ. ಸರ್ಕಾರ ವಿರೋಧ ಪಕ್ಷಗಳ ನೂರಾರು ನಾಯಕರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ಹಾಕಿತು. ಸೆನ್ಸಾರ್ಶಿಪ್ ಹೇರುವ ಮೂಲಕ ಪತ್ರಿಕಾ ಮಾಧ್ಯಮವನ್ನು ಮೌನಗೊಳಿಸಿತು. ಮುಷ್ಕರಗಳನ್ನು ನಿಷೇಧಿಸಿತು. ನೂರಾರು ಕಾರ್ಮಿಕ ನಾಯಕರನ್ನು ಜೈಲಿಗೆ ಹಾಕಿತು. ಭಾರತೀಯ ಜನಸಂಘದ (ಬಿಜೆಪಿಯ ಪೂರ್ವ ರೂಪ) ಉನ್ನತ ನಾಯಕತ್ವವು ಅಂದಿನ ಸರ್ಕಾರದ ಮುಂದೆ ಶರಣಾಯಿತು. ಬಿಜೆಪಿ ಈಗ ಜೂನ್ 25 ಅನ್ನು ‘ಸಂವಿಧಾನ ಹತ್ಯೆ ದಿವಸ್’ ಎಂದು ಘೋಷಿಸುತ್ತಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಶರಣಾದವರು ಈಗ ತಮ್ಮನ್ನು ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ 21 ತಿಂಗಳುಗಳ ಕಾಲ ಮುಂದುವರೆಯಿತು. ಮೋದಿ ಅವರ ಅಘೋಷಿತ ತುರ್ತು ಪರಿಸ್ಥಿತಿ ಹನ್ನೊಂದನೇ ವರ್ಷವನ್ನು ಪ್ರವೇಶಿಸಿದೆ. ಅಂದಿನ ‘ಮಿಸಾ’ ಪಾತ್ರವನ್ನೇ ಇಂದಿನ ʼಉಪʼ ನಿರ್ವಹಿಸುತ್ತಿದೆ. ನೆನಪಿನಲ್ಲಿ

ಬಿ.ವಿ. ರಾಘವುಲು

-ಕನ್ನಡಕ್ಕೆ: ಸಿಚಿ

ಜೂನ್ 25/26, 1975 ನನಗೆ ಇನ್ನೂ ಚೆನ್ನಾಗಿ ನೆನಪಿದೆ. ಅದು ನನ್ನ ಪದವಿ ಪರೀಕ್ಷೆಗಳ ಕೊನೆಯ ದಿನವಾಗಿತ್ತು. ನಾನು ಮಾರ್ಕ್ಸ್ ದಿ ಪಕ್ಷದ ಪೂರ್ಣಾವಧಿಯ ಕಾರ್ಯಕರ್ತನಾಗಿ ಸೇರಿದ ದಿನ. ಆ ದಿನ ಸರ್ವಾಧಿಕಾರವು ದೇಶವನ್ನು ಅಂಧಕಾರದಲ್ಲಿ ಮುಳುಗಿಸಿದ ದಿನ. ಆ ದಿನವನ್ನು ನಾನು ಎಂದಿಗೂ ಮರೆಯುವುದಿಲ್ಲ. ನಮ್ಮಲ್ಲಿ ಯಾರೂ ಕೂಡ ಮರೆಯಬಾರದು.

ಶ್ರೀಮತಿ ಇಂದಿರಾ ಗಾಂಧಿ ಪ್ರಧಾನ ಮಂತ್ರಿಯಾಗಿದ್ದ ಅಂದಿನ ಕಾಂಗ್ರೆಸ್ ಕೇಂದ್ರ ಸರ್ಕಾರವು ಜೂನ್ 25 ರ ಮಧ್ಯರಾತ್ರಿ ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ವಿರೋಧ ಪಕ್ಷಗಳ ನೂರಾರು ನಾಯಕರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ಹಾಕಿತು. ಸೆನ್ಸಾರ್ಶಿಪ್ ಹೇರುವ ಮೂಲಕ ಪತ್ರಿಕಾ ಮಾಧ್ಯಮವನ್ನು ಮೌನಗೊಳಿಸಿತು. ಮುಷ್ಕರಗಳನ್ನು ನಿಷೇಧಿಸಿತು. ನೂರಾರು ಕಾರ್ಮಿಕ ನಾಯಕರನ್ನು ಜೈಲಿಗೆ ಹಾಕಿತು. ವಿದ್ಯಾರ್ಥಿ ನಾಯಕರನ್ನು ಬಂಧಿಸಿತು. ಪ್ರತಿಭಟಿಸುವ ಹಕ್ಕನ್ನು ಸಹ ತೆಗೆದುಹಾಕಿದರು. ಚುನಾವಣೆಗಳನ್ನು ರದ್ದುಗೊಳಿಸಿದರು. ವೇತನಗಳನ್ನು ಸ್ಥಗಿತಗೊಳಿಸಿದರು. ರಜಾದಿನಗಳನ್ನು ಕಡಿತಗೊಳಿಸಿದರು. ನೆನಪಿನಲ್ಲಿ

ಕೆಲಸದಿಂದ ತೆಗೆದುಹಾಕುವುದನ್ನು ಕಾನೂನುಬದ್ಧಗೊಳಿಸಿದರು. ತುಟ್ಟಿಭತ್ಯೆಯನ್ನು ಅರ್ಧಕ್ಕೆ ಇಳಿಸಿದರು. ರಾತ್ರೋರಾತ್ರಿ ಮೂಲಭೂತ ಹಕ್ಕುಗಳನ್ನು ನಾಶಪಡಿಸಿದರು. ಕೊಳೆಗೇರಿಗಳನ್ನು, ಗುಡಿಸಲುಗಳನ್ನು ನೆಲಸಮ ಮಾಡಿದರು. ದೆಹಲಿ ನಗರವೊಂದರಲ್ಲೇ 1,50,105 ಮನೆಗಳನ್ನು ಕೆಡವಿಹಾಕಿದರು. ದೇಶಾದ್ಯಂತ ಬಲವಂತದ ಕುಟುಂಬ ನಿಯಂತ್ರಣ ಶಸ್ತ್ರಚಿಕಿತ್ಸೆ ನಡೆದವು. ಒಂದು ಲಕ್ಷಕ್ಕೂ ಹೆಚ್ಚು ಜನರನ್ನು, ವಿರೋಧ ಪಕ್ಷದ ನಾಯಕರು ಮತ್ತು ಕಾಂಗ್ರೆಸ್‌ ನಲ್ಲಿನ ಭಿನ್ನಮತೀಯರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗೆ ಹಾಕಿದರು. ನೂರಾರು ಪತ್ರಕರ್ತರು, ಕಾರ್ಮಿಕ ಸಂಘಟನೆಗಳ ಮುಖಂಡರು, ವಿದ್ಯಾರ್ಥಿ ಮುಖಂಡರು ಮತ್ತು ರಾಜಕೀಯ ಪಕ್ಷದ ಕಾರ್ಯಕರ್ತರನ್ನು ಬಂಧಿಸಿದರು. ನೆನಪಿನಲ್ಲಿ

ವಿಚಾರಣೆಯಿಲ್ಲದೆ ಜೈಲಿಗೆ

ಜನರನ್ನು ವಿಚಾರಣೆಯಿಲ್ಲದೆ ಜೈಲಿಗೆ ಹಾಕಲು MISA, DISIR, COFEPOSA ನಂತಹ ಕ್ರೂರವಾದ ಕಾನೂನುಗಳನ್ನು ಬಳಸಿಕೊಳ್ಳಲಾಯಿತು. MISA ಅಡಿಯಲ್ಲಿ 34,988 ಜನರನ್ನು ಮತ್ತು DISIR ಅಡಿಯಲ್ಲಿ 75,818 ಜನರನ್ನು ಬಂಧಿಸಲಾಯಿತು ಎಂದು ಸರ್ಕಾರಿ ಅಂಕಿಅಂಶಗಳು ಬಹಿರಂಗಪಡಿಸುತ್ತವೆ. ಹಲವರನ್ನು ಕಸ್ಟಡಿಯಲ್ಲಿ ಹಿಂಸಿಸಿದರು. ನೆನಪಿನಲ್ಲಿ

ಇದನ್ನೂ ಓದಿ: ಹಾವೇರಿ| ಮಾರಕಾಸ್ತ್ರಗಳಿಂದ ಕೊಚ್ಚಿ ಗುತ್ತಿಗೆದಾರನ ಕೊಲೆ

ಕೆಲವರನ್ನು ಕೊಂದರೂ ಕೂಡ! 1976 ಮಾರ್ಚ್ 1ರಂದು ಕ್ಯಾಲಿಕಟ್‌ನ ಪ್ರಾದೇಶಿಕ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಪಿ. ರಾಜನ್ ಅವರ ಕಸ್ಟಡಿ ಹತ್ಯೆಯು ಅಂದಿನ ಕ್ರೌರ್ಯಕ್ಕೆ ಒಂದು ಚುಕ್ಕೆಯಾಗಿದೆ. ನನ್ನ ವಿದ್ಯಾರ್ಥಿ ಚಳವಳಿಯ ಸಂಗಾತಿ, ರೂಮ್‌ ಮೇಟ್ ಆಗಿದ್ದ ನಾಯಕರೊಬ್ಬರನ್ನು ಹಾಗೂ ಅವರೊಂದಿಗೆ ಕೋಣೆಯಲ್ಲಿ ನಿದ್ರಿಸುತ್ತಿದ್ದ ಅತಿಥಿಯನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಿದರು. ಆ ಅತಿಥಿಯ ಅನುಕೂಲಕ್ಕಾಗಿ ಮಲಗಲು ನಾನು ಮತ್ತೊಂದು ಕೋಣೆಗೆ ಹೋಗಿದ್ದೆ. ಇದರಿಂದಾಗಿ ನಾನು ಬಂಧನದಿಂದ ತಪ್ಪಿಸಿಕೊಂಡೆ.

ಸಿಪಿಐ(ಎಂ) ಬಹಳ ಹಿಂದೆಯೇ ಎಚ್ಚರಿಸಿತ್ತು

ಮಧ್ಯರಾತ್ರಿಯಲ್ಲಿ ಹಠಾತ್ತನೆ ತುರ್ತು ಪರಿಸ್ಥಿತಿ ಹೇರಿಕೆಯು ರಾಷ್ಟ್ರವನ್ನು ಬೆಚ್ಚಿಬೀಳಿಸಿತು. ಆದರೆ, ಹೆಚ್ಚುತ್ತಿರುವ ನಿರಂಕುಶಾಧಿಕಾರದ ಬೆದರಿಕೆಯ ಬಗ್ಗೆ ಸಿಪಿಐ(ಎಂ) ಬಹಳ ಹಿಂದೆಯೇ ಎಚ್ಚರಿಸಿತ್ತು. 1972 ರಲ್ಲಿ ಮಧುರೈ ಮಹಾಧಿವೇಶನದಲ್ಲಿ ʼಭಾರತ ಏಕಪಕ್ಷೀಯ ನಿರಂಕುಶ ಪ್ರಭುತ್ವದತ್ತ ಸಾಗುತ್ತಿದೆ, ದಮನಕ್ಕೆ ಸಿಪಿಐ(ಎಂ) ಪ್ರಮುಖ ಗುರಿಯಾಗಲಿದೆʼ ಎಂದಿರುವ ಪಕ್ಷವು ಮುಂದಿನ ದಿನಗಳಲ್ಲಿ ಈ ನಿರ್ಬಂಧ ಎಲ್ಲರಿಗೂ ಬರಲಿದೆ ಎಂದು ಎಚ್ಚರಿಸಿತ್ತು. ನೆನಪಿನಲ್ಲಿ

ಆ ಅವಧಿಯಲ್ಲಿ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಗುಂಪುಗಳು, ರಾಜ್ಯ ಸರ್ಕಾರಿ ಯಂತ್ರದ ಸಹಾಯದಿಂದ, ಅರೆ-ಫ್ಯಾಸಿಸ್ಟ್ ದಬ್ಬಾಳಿಕೆಗೆ ಮುಂದಾದವು. ನಮ್ಮ ಸಂಗಾತಿಗಳಲ್ಲಿ ಹಲವರನ್ನು ಹತ್ಯೆ ಮಾಡಿದರು. ಕೇರಳದಲ್ಲಿಯೂ ಸಹ, ಅದೇ ಕಾಂಗ್ರೆಸ್ ಆಡಳಿತದಲ್ಲಿ, ನಮ್ಮ ಹಲವು ಕಾರ್ಯಕರ್ತರಲ್ಲಿ ಜನರು ಹತ್ಯೆಗೆ ಗುರಿಯಾದರು. ಕಾಂಗ್ರೆಸ್‌ನ ಜನವಿರೋಧಿ ನೀತಿಗಳ ವಿರುದ್ಧದ ಜನರ ಹೋರಾಟಗಳಲ್ಲಿ ಸಿಪಿಐ(ಎಂ) ಮುಂಚೂಣಿಯಲ್ಲಿದ್ದ ಕಾರಣದಿಂದ, ಅದನ್ನು ಗುರಿಯಾಗಿಸಲಾಯಿತು. ಈ ನಿರಂಕುಶಾಧಿಕಾರವು ದೇಶದ ಇತರ ಭಾಗಗಳಿಗೆ ಹರಡಿತು ಮತ್ತು ತುರ್ತು ಪರಿಸ್ಥಿತಿಯ ರೂಪದಲ್ಲಿ ಪ್ರಜಾಪ್ರಭುತ್ವವನ್ನು ನಾಶಪಡಿಸಿತು. ನೆನಪಿನಲ್ಲಿ

ಸಂಸತ್ತಿನಲ್ಲಿ ಪ್ರತಿಭಟನೆಯ ದ್ವನಿ

ನಿರ್ಬಂಧದೊಂದಿಗೆ, ದಬ್ಬಾಳಿಕೆಯಿಂದ ಅಧಿಕಾರವನ್ನು ಉಳಿಸಿಕೊಳ್ಳಬಹುದು ಎಂದು ಶ್ರೀಮತಿ ಇಂದಿರಾ ಗಾಂಧಿ ನಂಬಿದ್ದರು. ಆದರೆ ಜನರು ಪ್ರಜಾಪ್ರಭುತ್ವವನ್ನು ರಕ್ಷಿಸಲು ಸಿದ್ಧರಾಗಿದ್ದರು. ತುರ್ತು ಪರಿಸ್ಥಿತಿಗೆ ಅಧಿಕಾರ ಮುದ್ರೆ ಒತ್ತಲು ಸಭೆ ಸೇರಿದ ಸಂಸತ್ತಿನಲ್ಲಿ ಸಿಪಿಐ(ಎಂ) ನಾಯಕ ಕಾಮ್ರೇಡ್ ಎ.ಕೆ. ಗೋಪಾಲನ್ ಪ್ರತಿಭಟನೆಯ ದ್ವನಿ ಎತ್ತಿದರು. ತುರ್ತು ಪರಿಸ್ಥಿತಿಯ ವಿರುದ್ಧದ ಅವರ ಭಾಷಣವನ್ನು ಮುದ್ರಿಸಿ ವಿದ್ಯಾರ್ಥಿಗಳಲ್ಲಿ ರಹಸ್ಯವಾಗಿ ವಿತರಿಸಲಾಗಿತ್ತು ಎಂದು ನನಗೆ ಇನ್ನೂ ನೆನಪಿದೆ. ನೆನಪಿನಲ್ಲಿ

ಸಾಂಕೇತಿಕ ಕ್ರಿಯೆಗಳ ಮೂಲಕ ವಾರ್ತಾ ಪತ್ರಿಕೆಗಳ ಪ್ರತಿಭಟನೆ

ಕೆಲವು ವಾರ್ತಾ ಪತ್ರಿಕೆಗಳು ಸಹಾ ತಮ್ಮ ಸಾಂಕೇತಿಕ ಕ್ರಿಯೆಗಳ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದವು. ಜೂನ್ 26 ರಂದು, ಟೈಮ್ಸ್ ಆಫ್ ಇಂಡಿಯಾ “ಪ್ರಜಾಪ್ರಭುತ್ವ, ಸತ್ಯದ ಪ್ರೀತಿಯ ಪತಿ, ಸ್ವಾತಂತ್ರ್ಯದ ಪ್ರೀತಿಯ ಪಿತಾಮಹ, ನಂಬಿಕೆ, ಭರವಸೆ ಮತ್ತು ನ್ಯಾಯದ ಸಹೋದರ ಜೂನ್ 26 ರಂದು ನಿಧನರಾದರು” (‘Democracy, Beloved Husband of Truth, Loving Father of Liberty, Brother of Faith, Hope and Justice Expired on June 26ʼ) ಎಂಬ ಶೀರ್ಷಿಕೆಯ ಮರಣದಂಡನೆಯನ್ನು ಪ್ರಕಟಿಸಿತು. ನೆನಪಿನಲ್ಲಿ

ಜೂನ್ 28 ರಂದು, ದಿ ಇಂಡಿಯನ್ ಎಕ್ಸ್‌ಪ್ರೆಸ್ ಖಾಲಿ ಸಂಪಾದಕೀಯವನ್ನು ಪ್ರಕಟಿಸಿತು. ಫೈನಾನ್ಷಿಯಲ್ ಎಕ್ಸ್‌ಪ್ರೆಸ್ ರವೀಂದ್ರನಾಥ ಟ್ಯಾಗೋರ್ ಬರೆದ ‘ವೇರ್ ದಿ ಮೈಂಡ್ ಈಸ್ ವಿಥೌಟ್ ಫಿಯರ್’ ಕವಿತೆಯನ್ನು ಮರುಮುದ್ರಣ ಮಾಡಿತು. ಸಿಪಿಐ(ಎಂ)ಗೆ ಸೇರಿದ ವಿವಿಧ ಪ್ರಕಟಣೆಗಳು ತಮ್ಮ ಅಂಕಣಗಳ ಮೂಲಕ ಸೆನ್ಸಾರ್‌ ಶಿಪ್ ಅನ್ನು ಮತ್ತು ಪ್ರಭುತ್ವದ ದಮನಕಾರಿ ಕ್ರಮಗಳನ್ನು ತೀವ್ರವಾಗಿ ಪ್ರತಿಭಟಿಸುವುದನ್ನು ಮುಂದುವರೆಸಿದವು. ನೆನಪಿನಲ್ಲಿ

ಪ್ರತಿಭಟನೆಗಳಲ್ಲಿ ಅಗ್ರಸ್ಥಾನದಲ್ಲಿ ಕೇರಳ

ಸ್ವಾಭಾವಿಕವಾಗಿಯೇ ಪ್ರತಿಭಟನೆಗಳಲ್ಲಿ ಕೇರಳವು ಅಗ್ರಸ್ಥಾನದಲ್ಲಿತ್ತು. ಜನರು ಬೀದಿಗಿಳಿದು ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸಿಪಿಐ(ಎಂ) ಪಕ್ಷದ ಮೇಲೆ ಮತ್ತು ಜನರ ಚಳುವಳಿಗಳ ಮೇಲೆ ತೀವ್ರ ನಿರ್ಬಂಧಗಳನ್ನು ಹೇರಿತು. ಅಚ್ಯುತಾನಂದನ್, ಪಿಣರಾಯಿ ವಿಜಯನ್ ಸೇರಿದಂತೆ ಪಕ್ಷದ ಅನೇಕ ನಾಯಕರನ್ನು ಮತ್ತು ಕಾರ್ಯಕರ್ತರನ್ನು ಬಂಧಿಸಿದರು. ಪಿಣರಾಯಿ ಅವರನ್ನು ಕ್ರೂರವಾದ ಥರ್ಡ್‌ ಡಿಗ್ರಿ ಹಿಂಸೆಗೆ ಗುರಿಮಾಡಿದರು.

ಹಿಂಸೆಯು ದಬ್ಬಾಳಿಕೆಯ ಒಂದು ಸಾಧಾರಣ ಸಾಧನದಂತೆ ಬದಲಾಯಿತು. ಆದರೆ, ಕೇರಳದಿಂದ ಬಂದ ಈ ಪ್ರತಿರೋಧ ಚಳುವಳಿ ದೇಶಕ್ಕೆ ಉತ್ತೇಜನ ನೀಡಿತು. ಜನರ ಚಳುವಳಿಗಳು ಮತ್ತು ಜನರ ಒತ್ತಡಕ್ಕೆ ಇಂದಿರಾ ಗಾಂಧಿಯವರು ಮಣಿಯಬೇಕಾಯಿತು. 1977 ಮಾರ್ಚ್ 21 ರಂದು ಅವರು ತುರ್ತು ಪರಿಸ್ಥಿತಿಯನ್ನು ತೆಗೆದುಹಾಕಿದರು. ತೀವ್ರವಾದ ಜನತೆಯ ಆಕ್ರೋಶವನ್ನು ಎದುರಿಸಿದ ಅವರು ಆ ನಂತರ ನಡೆದ ಚುನಾವಣೆಯಲ್ಲಿ ಸೋಲನ್ನು ಅಭವಿಸಿದರು.

ಸರ್ಕಾರದ ಮುಂದೆ ಶರಣಾದ ಜನಸಂಘದ ನಾಯಕತ್ವ

ಆದರೆ, ಎಲ್ಲಾ ರಾಜಕೀಯ ಶಕ್ತಿಗಳು ತುರ್ತು ಪರಿಸ್ಥಿತಿಯನ್ನು ವಿರೋಧಿಸಲಿಲ್ಲ. ಭಾರತೀಯ ಜನಸಂಘದ (ಬಿಜೆಪಿಯ ಪೂರ್ವ ರೂಪ) ಉನ್ನತ ನಾಯಕತ್ವವು ಅಂದಿನ ಸರ್ಕಾರದ ಮುಂದೆ ಶರಣಾಯಿತು. ದಿ ಹಿಂದೂ ಪತ್ರಿಕೆಯಲ್ಲಿ ಪ್ರಕಟವಾದ ತಮ್ಮ 2,000ನೇ ಲೇಖನ ‘ಅನ್‌ಲರ್ನ್ಡ್ ಲೆಸನ್ಸ್ ಆಫ್ ದಿ ಎಮರ್ಜೆನ್ಸಿ’ಯಲ್ಲಿ ಡಾ. ಸುಬ್ರಮಣಿಯನ್ ಸ್ವಾಮಿ ಅವರು, ಆರ್‌ಎಸ್‌ಎಸ್ ಮತ್ತು ಭಾರತೀಯ ಜನಸಂಘಕ್ಕೆ ಸೇರಿದ ಯಾರೆಲ್ಲಾ ನಾಯಕರು ಇಂದಿರಾ ಗಾಂಧಿಯವರೊಂದಿಗೆ ರಹಸ್ಯ ಮಾತುಕತೆ ನಡೆಸಿದರು ಎಂಬ ಬಗ್ಗೆ ಸವಿವರವಾಗಿ ಬರೆದಿದ್ದಾರೆ. ಆಡಳಿತಗಾರರೊಂದಿಗೆ, ಆಡಳಿತ ಯಂತ್ರದೊಂದಿಗೆ ಆರ್‌ಎಸ್‌ಎಸ್ ತುಂಬಾ ತ್ವರಿತವಾಗಿ ಸೌಹಾರ್ದಯುತ ಸಂಬಂಧಗಳನ್ನು ಇಟ್ಟುಕೊಂಡಿತು. ನೆನಪಿನಲ್ಲಿ

ಆರ್‌ಎಸ್‌ಎಸ್ ಮುಖ್ಯಸ್ಥ ಬಾಳಾಸಾಹೇಬ್ ದೇವರಸ್ ಅವರು ಇಂದಿರಾ ಗಾಂಧಿಯವರನ್ನು ಬೆಂಬಲಿಸಿ ಬರೆದ ಪತ್ರಗಳು ಸಾರ್ವಜನಿಕ ವಲಯದಲ್ಲಿವೆ. ಎಡಪಂಥೀಯರು ಮತ್ತು ಇತರ ವಿರೋಧ ಪಕ್ಷಗಳ ಸಾವಿರಾರು ಕಾರ್ಯಕರ್ತರು ಜೈಲು ಸೇರಿ ಚಿತ್ರಹಿಂಸೆಗೆ ಗುರಿಯಾದರು. ಅದೇ ಸಮಯದಲ್ಲಿ, ಸಂಘದ ಉನ್ನತ ನಾಯಕರು ಮಾತ್ರ ತಪ್ಪಿಸಿಕೊಂಡರು. ತುರ್ತು ಪರಿಸ್ಥಿತಿಯನ್ನು ಪ್ರತಿರೋಧಿಸುವಲ್ಲಿ ತಾವೂ ಭಾಗಿಗಳಾಗಿದ್ದೇವೆ ಎಂದು ಹೇಳಿಕೊಳ್ಳುವ ನೈತಿಕ ಹಕ್ಕು ಬಿಜೆಪಿಗೆ ಇಂದು ಇಲ್ಲ. ನೆನಪಿನಲ್ಲಿ

ಬಿಜೆಪಿಯಿಂದ ‘ಸಂವಿಧಾನ ಹತ್ಯೆ ದಿವಸ್’ ದೊಡ್ಡ ತಮಾಷೆ

ಆದರೂ, ಅದೇ ಬಿಜೆಪಿ ಈಗ ಜೂನ್ 25 ಅನ್ನು ‘ಸಂವಿಧಾನ ಹತ್ಯೆ ದಿವಸ್’ ಎಂದು ಘೋಷಿಸುತ್ತಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಈ ದಿನದ ಗುರುತಾಗಿ ವರ್ಷವಿಡೀ ಪ್ರಚಾರ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಆದೇಶಿಸಿದೆ. ತುರ್ತು ಪರಿಸ್ಥಿತಿಯನ್ನು ವಿರೋಧಿಸಿದವರನ್ನು ಗೌರವಿಸಲು ಮತ್ತು ಸಂವಿಧಾನವನ್ನು ದುರ್ಬಲಗೊಳಿಸುವ ಅಪಾಯಗಳನ್ನು ಎತ್ತಿ ತೋರಿಸಲು ಈ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಅದು ಸೂಚಿಸಿದೆ. ನೆನಪಿನಲ್ಲಿ

ಆದರೆ ಇದೊಂದು ದೊಡ್ಡ ತಮಾಷೆಯಾಗಿದೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ಶರಣಾದವರು ಈಗ ತಮ್ಮನ್ನು ಪ್ರಜಾಪ್ರಭುತ್ವದ ರಕ್ಷಕರು ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾರೋ ಸರಿಯಾಗಿಯೇ ಹೇಳಿದಂತೆ, “ಸಂವಿಧಾನವನ್ನು ಕೊಂದವರೇ ಈಗ ಅದರ ಗುಣಗಾನ ಮಾಡುತ್ತಿದ್ದಾರೆ. ಅದರ ರಕ್ಷಕರಂತೆ ನಟಿಸುತ್ತಿದ್ದಾರೆ.” ವಾಸ್ತವವಾಗಿ, ಮೋದಿ ಆಳ್ವಿಕೆಯಲ್ಲಿ ಇಂದು ನಾವು ನೋಡುತ್ತಿರುವುದು ‘ತುರ್ತು ಪರಿಸ್ಥಿತಿ ಕಾಲದ ನಿರಂಕುಶಾಧಿಕಾರದ ಪುನರುಜ್ಜೀವನ’. ಆದರೂ, ಈ ಬಾರಿ ಅದನ್ನು ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ, 1975 ರ ತುರ್ತು ಪರಿಸ್ಥಿತಿ ಸಮಯದ ಭಯಾನಕ ಕ್ಷಣ ಈಗ ಪುನರಾವರ್ತಿತವಾಗುತ್ತಿದೆ. ವರ್ಧಿಸಲಾಗುತ್ತಿದೆ! ವಿಸ್ತೃತವಾಗುತ್ತಿದೆ! ನೆನಪಿನಲ್ಲಿ

ಅಂದಿನ MISA ಪಾತ್ರವನ್ನೇ ಇಂದಿನ UAPA ನಿರ್ವಹಿಸುತ್ತಿದೆ

ವಾಸ್ತವವಾಗಿ, ಕಳೆದ ಹನ್ನೊಂದು ವರ್ಷಗಳಲ್ಲಿ ಒಂದು ವ್ಯವಸ್ಥಿತವಾಗಿ ನಡೆದ ಮಾನವ ಹಕ್ಕುಗಳ ಉಲ್ಲಂಘನೆಯು ತುರ್ತು ಪರಿಸ್ಥಿತಿಯನ್ನು ಪ್ರತಿಯೊಂದು ವಿಷಯದಲ್ಲೂ ಪ್ರತಿಬಿಂಬಿಸುತ್ತವೆ. ಅಂದಿನ ‘ಮಿಸಾ’ (MISA – Maintenance of Internal Security Act) ನಿರ್ವಹಿಸಿದ ಪಾತ್ರವನ್ನೇ ಇಂದಿನ ‘ಉಪ’ (UAPA-Unlawful Activities (Prevention) Act ) ನಿರ್ವಹಿಸುತ್ತಿದೆ. ಮೊದಲಿನಂತೆ, ಬರಹಗಾರರು, ಪತ್ರಕರ್ತರು, ವಿದ್ಯಾರ್ಥಿಗಳು, ರಾಜಕೀಯ ವಿರೋಧಿಗಳು ಮತ್ತು ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸುವ ಧ್ವನಿಗಳನ್ನು ಹತ್ತಿಕ್ಕುತ್ತಿದ್ದಾರೆ. ಪ್ರಬೀರ್ ಪುರ್ಕಾಯಸ್ಥ ಅವರು 1975ರಲ್ಲಿ ಮತ್ತು 2023 ರಲ್ಲಿ ಬಂಧಿತರಾಗಿ, ಭಾರತದ ಪ್ರಜಾಪ್ರಭುತ್ವದಲ್ಲಿ ಎರಡು ಕರಾಳ ಅಧ್ಯಾಯಕ್ಕೆ (1975-77 ಮತ್ತು 2014-2025) ಜೀವಂತ ಸಂಕೇತವಾಗಿ ನಿಂತಿದ್ದಾರೆ. ನೆನಪಿನಲ್ಲಿ

2024 ರ ಚುನಾವಣೆಯ ಸಮಯದಲ್ಲಿ, ಮೋದಿ ಆಡಳಿತವು ಇಬ್ಬರು ಸಿಟ್ಟಿಂಗ್‌ ಮುಖ್ಯಮಂತ್ರಿಗಳನ್ನು ಬಂಧನ ಮಾಡಿತು. ವಿರೋಧ ಪಕ್ಷದ ನಾಯಕರನ್ನು ಬೆದರಿಸಲು, ಒತ್ತಡಕ್ಕೆ ಸಿಲುಕಿಸಲು ತನಿಖಾ ಸಂಸ್ಥೆಗಳನ್ನು ಬಳಸಿಕೊಂಡಿತು. ಇತರೆ ಪಕ್ಷಗಳಿಂದ ತಮ್ಮ ಪಕ್ಷಕ್ಕೆ ಪಕ್ಷಾಂತರ ಮಾಡುವಂತೆ ಮಾಡಲು ಅಥವಾ ಶರಣಾಗುವಂತೆ ಒತ್ತಾಯಿಸುವ ಗುರಿಯೊಂದಿಗೆ ಈ ಕಿರುಕುಳ ಮುಂದುವರೆಯಿತು. ಗುಂಪು ಹತ್ಯೆಗಳು, ದ್ವೇಷಪೂರಿತ ಪ್ರಚಾರಗಳು, ಅಲ್ಪಸಂಖ್ಯಾತರ ಮನೆಗಳನ್ನು ಬುಲ್ಡೋಜರ್‌ ನಿಂದ ಧ್ವಂಸ ಮಾಡುವುದು, ರಾಜ್ಯ ಪ್ರಾಯೋಜಿತ ಕಣ್ಗಾವಲು ಮತ್ತು ಹಿಂಸೆ ಮೋದಿ ಆಡಳಿತದ ಸಾಮಾನ್ಯ ಅಂಶಗಳು ಎಂಬಂತೆ ಮಾರ್ಪಟ್ಟಿವೆ. ವಿಶ್ವವಿದ್ಯಾಲಯಗಳಿಂದ ಕೊಳೆಗೇರಿಗಳವರೆಗೆ ಎಲ್ಲಾ ಪ್ರದೇಶಗಳಲ್ಲೂ ಪ್ರತಿಭಟನೆಗಳನ್ನು, ಭಿನ್ನಾಭಿಪ್ರಾಯವನ್ನು ದಮನಮಾಡುತ್ತಿದ್ದಾರೆ.

ಇಂದು ಅಘೋಷಿತ ತುರ್ತು ಪರಿಸ್ಥಿತಿ

ಇಂದಿರಾ ಗಾಂಧಿಯವರ ತುರ್ತು ಪರಿಸ್ಥಿತಿ 21 ತಿಂಗಳುಗಳ ಕಾಲ ಮುಂದುವರೆಯಿತು. ಮೋದಿ ಅವರ ಅಘೋಷಿತ ತುರ್ತು ಪರಿಸ್ಥಿತಿ ಹನ್ನೊಂದನೇ ವರ್ಷವನ್ನು ಪ್ರವೇಶಿಸಿದೆ. ಮುಖ್ಯವಾಹಿನಿಯ ಮಾಧ್ಯಮಗಳು ಮೋದಿಯವರ ಪ್ರಚಾರ ಸಾಧನವಾಗಿ ಬದಲಾಗಿವೆ. ಚಳುವಳಿಗಳನ್ನು ಹತ್ತಿಕ್ಕುವುದು, ವಿಮರ್ಶಕರನ್ನು ನಿಗ್ರಹಿಸುವುದು, ಪ್ರಜಾಪ್ರಭುತ್ವ ಸಂಸ್ಥೆಗಳನ್ನು ದುರ್ಬಲಗೊಳಿಸುವುದು, ನಿರಂತರ ಕಣ್ಗಾವಲಿನಂತಹ ಹೊಸ ಫ್ಯಾಸಿಸ್ಟ್ ಸ್ಥಿತಿಯನ್ನು ಪ್ರಸ್ತುತ ವ್ಯವಸ್ಥಿತವಾಗಿ ಜಾರಿಗೆ ತರಲಾಗುತ್ತಿದೆ. ವಿಶೇಷವಾಗಿ ಕಮ್ಯುನಿಸ್ಟರು, ಅಲ್ಪಸಂಖ್ಯಾತರು ಮತ್ತು ಜಾತ್ಯತೀತ ಶಕ್ತಿಗಳನ್ನು ಈ ದಮನಕ್ಕೆ ಗುರಿಯಾಗಿ ಮಾಡಿಕೊಂಡಿದ್ದಾರೆ.

ತುರ್ತು ಪರಿಸ್ಥಿತಿಯನ್ನು ಸ್ವಾಗತಿಸಿದ ಟಾಟಾ

ದೊಡ್ಡ ಬಂಡವಾಳಶಾಹಿಗಳು ಮತ್ತು ಭೂಮಾಲೀಕರು ತಮ್ಮ ವರ್ಗ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದಕ್ಕಾಗಿ ನಿರಂಕುಶ ಶಕ್ತಿಗಳಿಗೆ ಬೆಂಬಲ ಕೊಡುತ್ತಾರೆ ಎಂದು ಸಿಪಿಐ(ಎಂ) ಸದಾ ಎಚ್ಚರಿಸುತ್ತಲೇ ಇದೆ. 1975 ರಲ್ಲಿ ಸಹ, ಏಕಸ್ವಾಮ್ಯ ಬಂಡವಾಳಶಾಹಿಗಳ ಒಂದು ವಿಭಾಗವು ತುರ್ತು ಪರಿಸ್ಥಿತಿಯನ್ನು ಸ್ವಾಗತಿಸಿತು. ‘ಸಂಸದೀಯ ವ್ಯವಸ್ಥೆ ನಮ್ಮ ಜನರಿಗೆ ಸೂಕ್ತವಲ್ಲ’ ಎಂದು ಟಾಟಾ ಹೇಳಿದರು. ಇಂದು, ಮೋದಿ ಆಡಳಿತದಲ್ಲಿ ಜಾತ್ಯತೀತತೆ, ಫೆಡರಲಿಸಂ, ಸಾಮಾಜಿಕ ನ್ಯಾಯ ಮತ್ತು ಪ್ರಜಾಪ್ರಭುತ್ವದ ಅಡಿಪಾಯವನ್ನು ನಾಶಮಾಡುವ ಯೋಜನೆಯಲ್ಲಿ ಕಾರ್ಪೊರೇಟ್ ಜಗತ್ತಿನ ದೊಡ್ಡ ಭಾಗವು ಧಾರ್ಮಿಕ ಶಕ್ತಿಗಳೊಂದಿಗೆ ಕೈಜೋಡಿಸಿವೆ.

ಅಂದು ತುರ್ತು ಪರಿಸ್ಥಿತಿಯನ್ನು ಹೋರಾಡಿ ಸೋಲಿಸಿದಂತೆಯೇ, ನಾವು ಮತ್ತೆ ಮುನ್ನಡೆಯಬೇಕು. ಸರ್ವಾಧಿಕಾರವನ್ನು ತಡೆಗಟ್ಟಲು ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಮೂಲಭೂತ ಮೌಲ್ಯಗಳನ್ನು ರಕ್ಷಿಸಲು ಸಿಪಿಐ(ಎಂ) ಮತ್ತೊಮ್ಮೆ ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಶಕ್ತಿಗಳನ್ನು ಸಜ್ಜುಗೊಳಿಸುತ್ತಿದೆ. 50 ವರ್ಷಗಳ ನಂತರ ತುರ್ತು ಪರಿಸ್ಥಿತಿಯನ್ನು ನೆನಪಿಸಿಕೊಳ್ಳುವುದು ಕೇವಲ ಇತಿಹಾಸವನ್ನು ನೆನಪಿಸಿಕೊಳ್ಳುವ ವಿಷಯವಲ್ಲ. ಹೆಚ್ಚುತ್ತಿರುವ ಕೋಮುವಾದಿ ಮತ್ತು ನವ-ಫ್ಯಾಸಿಸ್ಟ್ ಶಕ್ತಿಗಳಿಂದ ನಮ್ಮ ಗಣರಾಜ್ಯವನ್ನು ರಕ್ಷಿಸುವ ನಮ್ಮ ಸಂಕಲ್ಪವನ್ನು ಮತ್ತಷ್ಟು ಬಲಪಡಿಸಲು ಇದು ಒಂದು ಕ್ರಿಯಾಶೀಲ ಕರೆಯಾಗಿದೆ!

ಇದನ್ನೂ ನೋಡಿ: ತುರ್ತುಪರಿಸ್ಥಿತಿ | ಇತಿಹಾಸ ಮರೆತಿದ್ದೇ ದುರಂತ – ರಾಜೇಂದ್ರ ಚೆನ್ನಿ | Janashakthi Media

Donate Janashakthi Media

Leave a Reply

Your email address will not be published. Required fields are marked *